Asianet Suvarna News Asianet Suvarna News

ಯಾವ ಗ್ರಹದಿಂದ ಯಾವ ಕಾಯಿಲೆ, ಯಾವ ಗ್ರಹಕ್ಕೆ ಯಾವ ಶಾಂತಿಮಂತ್ರ?

ಕೆಲವೊಮ್ಮೆ ಗ್ರಹಗಳು ನಮ್ಮ ಮೇಲೆ ಮುನಿಸಿಕೊಂಡಾಗ ನಮಗೆ ಕಾಯಿಲೆ ಕಸಾಲೆ ಅನಾರೋಗ್ಯಗಳು ಕಾಡುತ್ತವೆ. ಅದು ಯಾವ ಗ್ರಹದ ದುಷ್ಪ್ರಭಾವ ಅಂತ ತಿಳಿದುಕೊಂಡು, ಆ ಗ್ರಹವನ್ನು ಶಾಂತಿಮಂತ್ರದ ಮೂಲಕ ಒಲಿಸಿಕೊಂಡರೆ ನೀವು ಸುಖಿಯಾಗಿ, ಯಾವುದೇ ಅನಾರೋಗ್ಯ ಇಲ್ಲದೆ ಇರಬಹುದು.

Which Mantra you have to utter to please your graha?
Author
Bengaluru, First Published Nov 18, 2020, 5:03 PM IST

ಗ್ರಹಗಳು ನಮ್ಮ‌ ಆರೋಗ್ಯದ ಉನ್ನತಿಗೂ ಕೆಡುಕಿಗೂ ಮೂಲ. ಗ್ರಹಗಳಿಂದಲೇ ನಮಗೆ ಹಲವು ಅನಾರೋಗ್ಯ ಬಾಧೆಗಳು ಕಾಡುತ್ತವೆ. ಯಾವ ಗ್ರಹ ಯಾವ ಕಾಯಿಲೆ ಉಂಟುಮಾಡುತ್ತದೆ ಹಾಗೂ ಆ ಗ್ರಹಕ್ಕೆ ಶಾಂತಿಮಂತ್ರ ಯಾವುದು ಅಂತ ತಿಳಿದುಕೊಳ್ಳಿ. ನಿಮಗೆ ಬರುವ ಕಾಯಿಲೆಯನ್ನನುಸರಿಸಿ ಈ ಶಾಂತಿಮಂತ್ರಗಳನ್ನು ಪಠಿಸಿದರೆ ಆರೋಗ್ಯ ಉಂಟಾಗುತ್ತದೆ. ಅದಲ್ಲದೆಯೂ ದಿನನಿತ್ಯ ನವಗ್ರಹ ಮಂತ್ರವನ್ನು ಪಠಿಸುವುದು ಒಳ್ಳೆಯದು.

ಸೂರ್ಯ

ಪಿತ್ತದಿಂದ ತೊಂದರೆ, ಜ್ವರ, ಫಿಟ್ಸ್, ಮೂಳೆಗೆ ಸಂಬಂಧಿಸಿದ ತೊಂದರೆಗಳು. ಹೃದಯ ಹಾಗೂ ಹೊಟ್ಟೆಗೆ ಸಂಬಂಧಿಸಿದ ತೊಂದರೆ, ಕಾಮಾಲೆ, ಚರ್ಮದ ತೊಂದರೆ.

ಮಂತ್ರ: 

ಗ್ರಹಾಣಾಮರಾದಿತ್ಯೋ ಲೋಕರಕ್ಷಣಕಾರಕಃ |

ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ ||

ಚಂದ್ರ

ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ, ವಾಂತಿ, ಭೇದಿ, ಮನೋರೋಗ, ಅಜೀರ್ಣ, ವಾಂತಿ, ಉದರಕ್ಕೆ ಸಂಬಂಧಿಸಿದ ತೊಂದರೆ, ಪಿತ್ತಕ್ಕೆ ಸಂಬಂಧಿಸಿದ ತೊಂದರೆ, ತಲೆಸುತ್ತು, ದೃಷ್ಟಿಯ ತೊಂದರೆ.

ಮಂತ್ರ: 

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ |

ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ || 

ಈ ನಾಲ್ಕು ರಾಶಿಯವರಿಗಿರುತ್ತೆ ಮಹಾಲಕ್ಷ್ಮಿಯ ಕೃಪೆ: ನಿಮ್ಮ ರಾಶಿನೂ ಇದೆಯಾ..? ...

ಕುಜ

ರಕ್ತದ ಒತ್ತಡ, ರಕ್ತಕ್ಕೆ ಸಂಬಂಧಿಸಿದ ತೊಂದರೆ, ದಣಿವು, ಬಾಯಿ ಒಣಗುವುದು, ಕುಷ್ಠ, ನರಗಳ ತೊಂದರೆ, ಅಪಸ್ಮಾರ, ಚರ್ಮ ತೊಂದರೆ, ಪಿತ್ತ.

ಮಂತ್ರ: 

ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ |

ವೃಷ್ಟಿಕೃತ್-ದೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ || 

Which Mantra you have to utter to please your graha?

ಬುಧ

ಕಣ್ಣು, ಮೂಗು, ಗಂಟಲು, ವಾತ, ಕಜ್ಜಿ, ತೊನ್ನು, ಪಾರ್ಶ್ವವಾಯು, ಚರ್ಮರೋಗ, ಬುದ್ಧಿವಿಕಲ್ಪ, ತುರಿಕೆ, ಮೂಳೆಗೆ ಸಂಬಂಧಿಸಿದ ತೊಂದರೆ.

ಮಂತ್ರ: 

ಉತ್ಪಾತರೂಪೋ ಜಗತಶ್ಚಂದ್ರಪುತ್ರೋ ಮಹಾದ್ಯುತಿಃ |

ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ || 

 

ಗುರು

ಚರ್ಮರೋಗ, ಹೊಟ್ಟೆಯ ತೊಂದರೆ, ಸಕ್ಕರೆ ಕಾಯಿಲೆ, ನೆನಪಿನ ಶಕ್ತಿ ಕಡಿಮೆ, ಜ್ವರ, ಕಿವಿಯ ತೊಂದರೆ, ಮೂಲವ್ಯಾಧಿ, ಕೀವಿನಿಂದ ಹುಣ್ಣು, ಕುರು, ಶ್ವಾಸಕೋಶದ ತೊಂದರೆ.

ಮಂತ್ರ: 

ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ |

ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ || 

 

ಶುಕ್ರ

ಗುಹ್ಯೇಂದ್ರಿಯ ಕಾಯಿಲೆಗಳು, ಸಕ್ಕರೆ ಕಾಯಿಲೆ, ಕಣ್ಣಿನ ತೊಂದರೆ, ಮೂತ್ರದ ಕಾಯಿಲೆ, ನಿಶಕ್ತಿ, ಹಲ್ಲುನೋವು.

ಮಂತ್ರ: 

ದೈತ್ಯಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ |

ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ || 

 

ಶನಿ

ಉದರ ಕೈಕಾಲು, ಪಾದ, ನರಗಳಿಂದ ತೊಂದರೆ, ಅಸ್ತಮ, ಪಾರ್ಶ್ವವಾಯು, ಮೂರ್ಛೆರೋಗ, ಕೆಮ್ಮು.

ಮಂತ್ರ: 

ಸೂರ್ಯಪುತ್ರೋ ದೀರ್ಘ ದೇಹೋ ವಿಶಾಲಾಕ್ಷಃ ಶಿವಪ್ರಿಯಃ |

ಮಂದಚಾರಃ (ದೀರ್ಘಚಾರಃ) ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ || 

ಗೋವಿನಲ್ಲೇಕೆ ಮೂವತ್ತಮೂರು ಕೋಟಿ ದೇವತೆಗಳು? ...

ರಾಹು

ತೊನ್ನು, ಚರ್ಮದ ಕಾಯಿಲೆ, ಕ್ಯಾನ್ಸರ್, ಕುಷ್ಠ, ಸಿಡುಬು, ಜ್ವರ, ಕೈಕಾಲು ನೋವು.

ಮಂತ್ರ:

ಮಹಾಶಿರಾ (ಮಹಾಶೀರ್ಷೋ) ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ |

ಅತನುಶ್ಚೋರ್ಧ್ವ-ಕೇಶಶ್ಚ ಪೀಡಾಂ ಹರತು ಮೇ ತಮಃ ||


ಕೇತು

ಮಾನಸಿಕ ತೊಂದರೆ, ಉದರ ತೊಂದರೆ, ವೃಣ, ಸುಟ್ಟಗಾಯಗಳಿಂದ ತೊಂದರೆ, ಉರಿಮೂತ್ರ, ವಾತ, ತೊಂದರೆ, ಬೆನ್ನಿಗೆ ಸಂಬಂಧಿಸಿದ ತೊಂದರೆ.

ಮಂತ್ರ: ಅನೇಕರೂಪವರ್ಣೈಶ್ಚ ಶತಶೋಥ ಸಹಸ್ರಶಃ |

ಉತ್ಪಾತರೂಪೋ ಜಗತಃ ಪೀಡಾಂ ಹರತು ಮೇ ಶಿಖೀ

ನಿಮ್ಮ ರಾಶಿಗೆ ಗುರು ಬಲ ಇದೆಯಾ? ಇಲ್ಲದಿದ್ದರೆ ಗುರು ಬಲ ಸಂಪಾದನೆ ಹೇಗೆ? ...

 

 

Follow Us:
Download App:
  • android
  • ios