ಗುರು ಗ್ರಹದ ಕೃಪೆಯ ಕಣ್ಣು ನಿಮ್ಮ ಮೇಲಿದ್ದರೆ ನೀವು ಬದುಕಿನಲ್ಲಿ, ವೃತ್ತಿಯಲ್ಲಿ, ಕುಟುಂಬದಲ್ಲಿ ಸದಾ ಕಾಲ ಮೇಲೆ ಮೇಲಕ್ಕೆ ಹೋಗುತ್ತಿರುವಿರಿ. ಗುರು ಬಲ ಇದ್ದಾಗ ಕೈಯಲ್ಲಿ ಹಿಡಿದ ಕೆಲಸಕಾರ್ಯಗಳೆಲ್ಲವೂ ಸುಸೂತ್ರವಾಗಿ ಅಗುತ್ತವೆ. ಇಲ್ಲದೆ ಹೋದರೆ ಎಷ್ಟು ಸಾಧನೆ ಮಾಡಿದರೂ ವೇಸ್ಟು. ಯಾಕೆಂದರೆ ಹಣ ಇದ್ದರೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಬಂಧುಗಳು ಇದ್ದರೂ ಕಿರಿಕಿರಿ. ಮಕ್ಕಳೂ ಇದ್ದರೂ ತಟವಟ. ಸಾಕಷ್ಟು ಸ್ಥಿತಿವಂತಿಕೆ ಇದ್ದರೂ ಮನಸ್ಸಿನಲ್ಲಿ ಸಮಾಧಾನವಿಲ್ಲ ಎಂಬಂತೆ ಇರುತ್ತೆ.

ನಿಮ್ಮ ಜನ್ಮ ರಾಶಿಯಿಂದ ಅಥವಾ ಕರೆಯುವ ಹೆಸರಿನ ರಾಶಿಯಿಂದ ಗೋಚಾರ ರಾಶಿಯಲ್ಲಿ ಗುರು ಇರುವ ರಾಶಿಯವರೆಗೂ ಎಣಿಸಿದಾಗ ಗುರುವು 2-5-7-9-11 ನೇ ಸ್ಥಾನಗಳಲ್ಲಿ ಇರುವಾಗ ಗುರುಬಲ ಇರುತ್ತದೆ. ಎಂದು ತಿಳಿಯಬಹುದು. ಇಲ್ಲಿ ನಮಗೆ ಗುರುವಿನ ಬಲ ಇರುವಾಗ ಮಾತ್ರ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರವೇರುವುದು. ನೀವು ಮನೆ ಕಟ್ಟಿಸುವ ಕಾರ್ಯವು ಸಹ ಬೇಗ ಪರಿಪೂರ್ಣಗೊಳ್ಳುತ್ತದೆ. ಇಲ್ಲಿ ನಿಮಗೆ ಯಾವುದೇ ರೀತಿಯ ಅಡಚಣೆಗಳು ಇದ್ದರು ಅವು ನಿವಾರಣೆಯಾಗಿ ನಿಮ್ಮ ಕಾರ್ಯವು ಸಂಪೂರ್ಣವಾಗುವುದು. ಆದ್ದರಿಂದ ನಮಗೆ ಯಾವುದೇ ವಿಶೇಷ ಕಾರ್ಯಗಳಿಗೆ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಗುರುಬಲ ಇಲ್ಲದೆ ಇರುವಾಗ ಯಾವುದೇ ವಿಶೇಷ ಕಾರ್ಯಗಳಿಗೆ ಕೈ ಹಾಕಬಾರದು.

ಎಲ್ಲರೂ ಪೂಜಿಸುವ ದೇವಿ ಲಕ್ಷ್ಮಿ ಗೂಬೆಯನ್ನೇಕೆ ವಾಹನ ಮಾಡಿಕೊಂಡಳು? ...

ನಿಮಗೆ ಗುರುಬಲ ಇದೆಯಾ?

ಮೇಷ- ರಾಶಿಯವರಿಗೆ ಗುರುವು ವೃಷಭ ರಾಶಿ, ಸಿಂಹರಾಶಿ, ತುಲಾರಾಶಿ, ಧನಸ್ಸು ರಾಶಿ ಮತ್ತು ಕುಂಭ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ವೃಷಭ- ರಾಶಿಯವರಿಗೆ ಗುರುವು ಮಿಥುನ ರಾಶಿ, ಕನ್ಯಾರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಮತ್ತು ಮೀನ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಮಿಥುನ- ರಾಶಿಯವರಿಗೆ ಗುರುವು ಕಟಕ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಕುಂಭ ರಾಶಿ ಮತ್ತು ಮೇಷ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಕಟಕ- ರಾಶಿಯವರಿಗೆ ಗುರುವು ಸಿಂಹ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಮೀನ ರಾಶಿ ಮತ್ತು ವೃಷಭ ರಾಶಿಯಲ್ಲಿ ಗುರು ಇರುವಾಗ ಗುರುಬಲ ಇರುತ್ತದೆ.

ಸಿಂಹ ರಾಶಿಯವರಿಗೆ ಗುರುವು ಕನ್ಯಾರಾಶಿ, ಧನಸ್ಸು ರಾಶಿ, ಕುಂಭ ರಾಶಿ, ಮೇಷ ರಾಶಿ ಮತ್ತು ಮಿಥುನ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಕನ್ಯಾ ರಾಶಿಯವರಿಗೆ ಗುರುವು ತುಲಾರಾಶಿ, ಮಕರ ರಾಶಿ, ಮೀನ ರಾಶಿ, ವೃಷಭ ರಾಶಿ ಮತ್ತು ಕಟಕ ರಾಶಿಯಲ್ಲಿ ಗುರು ಇರುವಾಗಗುರುವಿನ ಬಲ ಇರುತ್ತದೆ.

ಈ ನಾಲ್ಕು ರಾಶಿಯವರಿಗಿರುತ್ತೆ ಮಹಾಲಕ್ಷ್ಮಿಯ ಕೃಪೆ: ನಿಮ್ಮ ರಾಶಿನೂ ಇದೆಯಾ..? ...

ತುಲಾ ರಾಶಿಯವರಿಗೆ ಗುರುವು ವೃಶ್ಚಿಕ ರಾಶಿ, ಕುಂಭ ರಾಶಿ, ಮೇಷ ರಾಶಿ, ಮಿಥುನ ರಾಶಿ ಮತ್ತು ಸಿಂಹ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ವೃಶ್ಚಿಕ ರಾಶಿಯವರಿಗೆ ಗುರುವು ಧನಸ್ಸು ರಾಶಿ, ಮೀನ ರಾಶಿ, ವೃಷಭ ರಾಶಿ, ಕಟಕ ರಾಶಿ ಮತ್ತು ಕನ್ಯಾ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಧನು ರಾಶಿಯವರಿಗೆ ಗುರುವು ಮಕರ ರಾಶಿ, ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ ಮತ್ತು ತುಲಾ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಮಕರ ರಾಶಿಯವರಿಗೆ ಗುರುವು ಕುಂಭ ರಾಶಿ, ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಕುಂಭ ರಾಶಿಯವರಿಗೆ ಗುರುವು ಮೀನ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಮೀನ ರಾಶಿಯವರಿಗೆ ಗುರುವು ಮೇಷ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮಕರ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

ಯಾವುದೇ ರಾಶಿಯವರಿಗೆ ಆಗಲಿ ಗುರುವು ಮಕರ ರಾಶಿಯಲ್ಲಿ ಇರುವಾಗ ನೀಚ ನಾಗುವುದರಿಂದ ಹಾಗೂ ನಿರ್ಬಲನಾಗುವುದರಿಂದ ಗುರುವಿನ ಪೂರ್ಣಫಲ ದೊರೆಯುವುದಿಲ್ಲ. ಆದ್ದರಿಂದ ಗುರುವು ಈ ರಾಶಿಯಲ್ಲಿ ಇರುವಾಗ ನಿಮ್ಮ ಕೆಲಸ ಕಾರ್ಯಗಳ ಕಡೆ ತುಂಬಾ ಎಚ್ಚರಿಕೆ ವಹಿಸಬೇಕು. ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗುವ ಸಾಧ್ಯತೆ ಅಥವಾ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ.

ಗೋವಿನಲ್ಲೇಕೆ ಮೂವತ್ತಮೂರು ಕೋಟಿ ದೇವತೆಗಳು? ...
ಅದೇ ರೀತಿ ಗುರುವು ಉಚ್ಚಕ್ಷೇತ್ರವಾದ ಕಟಕ ರಾಶಿಯಲ್ಲಿ ಹಾಗೂ ತನ್ನ ಸ್ವಕ್ಷೇತ್ರಗಳಾದ ಧನಸ್ಸು, ಮೀನ ರಾಶಿಯಲ್ಲಿ ಬಲಿಷ್ಠನಾಗಿ ಇರುವುದರಿಂದ ಈ ಗುರುವು ಗೋಚರ ಫಲದಲ್ಲಿ ಯಾವುದೇ ಪಾಪ ಗ್ರಹಗಳಾದ ಶನಿ, ರಾಹು, ಕೇತು, ಕುಜ, ಇವರದೃಷ್ಟಿ ಗುರುವಿನ ಮೇಲೆ ಇಲ್ಲದೆ ಇದ್ದರೆ ನಿಮ್ಮ ಕೆಲಸ ಕಾರ್ಯಗಳು ಹಾಗೂ ನೀವು ಮಾಡ ಬೇಕೆಂದಿರುವ ಶುಭ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಈ ಸಮಯದಲ್ಲಿ ನಿಮ್ಮ ಯಾವುದೇ ಉದ್ಯೋಗ, ವ್ಯಾಪಾರ ವ್ಯವಹಾರಗಳು ಸಹ ಲಾಭ ತಂದು ಕೊಡುತ್ತವೆ. ಆದ್ದರಿಂದ ಯಾವುದೇ ಕೆಲಸ ಕಾರ್ಯಗಳು ಕೈಗೂಡಬೇಕೆಂದರೂ ನಮಗೆ ಗುರುಬಲ ಇದೆಯೆ ಇಲ್ಲವೆ ಎಂದು ತಿಳಿದುಕೊಂಡು ನಮಗೆ ಗುರುಬಲ ಇರುವಾಗ ಯಾವುದೇ ಕೆಲಸ ಕಾರ್ಯಗಳಿಗೂ ಪ್ರಯತ್ನಿಸಬೇಕು.

ಗುರು ಬಲ ಸಂಪಾದನೆ ಹೇಗೆ?

ಗುರು ಗ್ರಹ ಆಯಾಯ ರಾಶಿಯಲ್ಲಿ ಇರುತ್ತಾ ಅದದೇ ಫಲಗಳನ್ನು ಕೊಡುತ್ತಾನಾದರೂ, ದೈವಾರಾಧನೆಯಿಂದ ಆತನನ್ನು ಸಂಪ್ರೀತಗೊಳಿಸಬಹುದು. ಸಕಲ ದೈವಗಳ ದೈವವಾದ ಈಶ್ವರನನ್ನು ಭಜಿಸಿ, ಪೂಜಿಸುವುದರಿಂದ ಎಲ್ಲ ಗ್ರಹಗಳೂ ಸಂಪ್ರೀತವಾಗುತ್ತವೆ. ಗುರು ಗ್ರಹ ಸಹ. ಆದ್ದರಿಂದ ದಿನನಿತ್ಯ ಶಿವಪಂಚಾಕ್ಷರಿ- ಓಂ ನಮಶ್ಶಿವಾಯ- ಮಂತ್ರವವನ್ನು ಸಾವಿರ ಪಾರಿ ಜಪಿಸಿ. ಹಾಗೇ ನಿಮ್ಮ ಕುಲದೈವತಾರಾಧನೆಯನ್ನು ಮಾಡಿ. ಇದರಿಂದ ಗುರು ನಿಮ್ಮ ಮೇಲೆ ಪ್ರಸನ್ನಗೊಳ್ಳುತ್ತಾನೆ.