ನಮ್ಮ ಹಿರಿಯರಿಂದ(Elders) ಬಂದ ಕೆಲವು ಸಂಪ್ರದಾಯಗಳು(Culture) ಆಚರಿಸಿಕೊಂಡು ಬಂದಿರುತ್ತಾರೆ. ಈಗಿನ ಕಾಲದವರಿಗೆ ಅದೆಲ್ಲಾ ಸಿಲ್ಲಿ(Silly) ಎನ್ನಿಸಬಹುದು. ಆದರೆ ಕೆಲ ಸಂದರ್ಭಗಳಲ್ಲಿ ಅವರ ಆಚರಣೆ ಸರಿ ಎನಿಸುತ್ತದೆ. ಈ ವಿಚಾರದಲ್ಲಿ ನಮ್ಮ ಪಾದರಕ್ಷೆ(Slippers) ವಿಚಾರವೂ ಹೊರತಾಗಿಲ್ಲ. ಮನೆಯಿಂದ ಹೊರಗೆ ಇರುವ ಪಾದರಕ್ಷೆ ಬಗ್ಗೆ ಎಲ್ಲರೂ ನೆಗೆಟಿವ್(Negetive) ಮಾತನಾಡುವುದು ಸಾಮಾನ್ಯ. ಇದಕ್ಕೆ ಕಾರಣ ಏನು, ಶಾಸ್ತ್ರದಲ್ಲಿ ಏನು ಹೇಳಿದ್ದಾರೆ ಈ ಬಗ್ಗೆ ಇಲ್ಲಿದೆ ಡೀಟೇಲ್ಸ್.
ಪಾದರಕ್ಷೆ ಎಂದಾಕ್ಷಣ ನಮಗೆ ನೆಗೆಟಿವ್ ಫೀಲ್ (Negetive Feel) ಬರುವುದು ಸಾಮಾನ್ಯ. ಹಾಗಾಗಿ ಅದನ್ನು ಮನೆಯಿಂದ(Home) ಹೊರಗೆ ಬಿಟ್ಟುಬರುತ್ತೇವೆ. ಕಾರಣ ಪಾದರಕ್ಷೆಯನ್ನು ಹಾಕಿಕೊಂಡು ಹೊರಗಡೆಯಲ್ಲಾ(Outside) ಸುತ್ತಾಡಿರುತ್ತೇವೆ ಹಾಗಾಗಿ ಅದರಲ್ಲಿ ಗಲೀಜು, ಧೂಳು (Dust), ಬ್ಯಾಕ್ಟೀರಿಯಾಗಳು (Bacteria) ಇರುತ್ತವೆ ಎಂದು ಮನೆಯಲ್ಲಿ ದೂರ ಇರಿಸುತ್ತೇವೆ. ಉಪಯೋಗಿಸಿದ ಪಾದರಕ್ಷೆಗಳನ್ನು ಎಲ್ಲಿಬಿಡಬೇಕು ಎಂಬುದರ ಬಗ್ಗೆ ಆಗಾಗ್ಗೆ ಗಲಿಬಿಲಿ (Confusion) ಆಗುತ್ತೇವೆ. ಸಾಮಾನ್ಯವಾಗಿ ಪಾದರಕ್ಷೆಗಳನ್ನು ಸರಿಯಾದ ಜಾಗದಲ್ಲಿ ಬಿಡುವುದೇ ಇಲ್ಲ. ಅಷ್ಟೆ ಅಲ್ಲದೆ ಪಾದರಕ್ಷೆಗಳನ್ನು ಬಿಡುವ ದಿಕ್ಕು (Direction) ಸಹ ಸರಿ ಇರುವುದಿಲ್ಲ. ಈ ಬಗ್ಗೆ ವಾಸ್ತು(Vastu) ಶಾಸ್ತçದಲ್ಲಿ ತಿಳಿಸಿದ್ದಾರೆ.
Vastu Tips: ಉದ್ಯೋಗಿಗಳು ಈ ರೀತಿ ಚಪ್ಪಲಿ ಹಾಕ್ಕೊಂಡರೆ ಧನ ಪ್ರಾಪ್ತಿ!
ಪಾದರಕ್ಷೆಗೂ ಗ್ರಹಗಳ ಪರಿಣಾಮ
ದೈನಂದಿನ ಜೀವನದಲ್ಲಿ ನಮ್ಮ ಪಾದರಕ್ಷೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅದಿಲ್ಲದೆ ಮನೆಯಿಮದ ಕಾಲಿಡಲೂ ಸಾಧ್ಯವಿಲ್ಲ. ಪಾದಕ್ಕೆ ರಕ್ಷಣೆ ನೀಡುವುದರ ಜೊತೆಗೆ ಇನ್ಫೆಕ್ಷನ್(Infection), ಕೀಟಾಣು(Insects), ಧೂಳಿನಿಂದ(Dust) ರಕ್ಷಿಸುತ್ತದೆ. ಉಪಯೋಗಿಸಿದ ಪಾದರಕ್ಷೆಗಳನ್ನು ಯಾವ ಜಾಗದಲ್ಲಿ ಬಿಟ್ಟರೆ ಉತ್ತಮ ಎಂದು ತಿಳಿಯುವ ಮೊದಲು, ಯಾವ ಗ್ರಹಗಳನ್ನು(Planet) ಅದು ಸೂಚಿಸುತ್ತದೆ ಎಂಬುದು ಬಹಳ ಮುಖ್ಯ.
ಕೀಟಾಣುಗಳು ಹಾಗೂ ಧೂಳು ಶೂ ಜೊತೆ ಅಂಟಿಕೊAಡಿರುವ ಕಾರಣ ನೆಗೆಟಿವ್ ಎನರ್ಜಿ(Negetive Energy) ಜಾಸ್ತಿ. ಹಾಗಾಗಿ ನಮ್ಮ ಆರೋಗ್ಯ(Health), ಮನಸ್ಸು(Mind), ಮನೆಯಲ್ಲಿನ ಧನಾತ್ಮಕ ಶಕ್ತಿಗಳಿಂದ(Positive Energy) ದೂರ ಇರುವಂತಹ ಸ್ಥಳದಲ್ಲಿ ಪಾದರಕ್ಷೆಗಳನ್ನು ಇಡಬೇಕು. ನಮ್ಮ ಪಾದ ಹಾಗೂ ಚಪ್ಪಲಿಗಳಿಗೆ ಶನಿ(Satrun), ರಾಹು(Rahu) ಮತ್ತು ಕೇತು(Kethu) ಗ್ರಹಗಳು ಮುಖ್ಯವಾಗಿ ಸಂಬAಧ ಹೊಂದಿದೆ.
ಶನಿ ಗ್ರಹವು ಶಿಸ್ತು(Discipline), ಕಷ್ಟಕರ ಕೆಲಸ(Hard Work), ಸಮರ್ಪಣೆಯ(Dedication) ಪ್ರತೀಕವಾಗಿದೆ. ನಮ್ಮ ಎಲ್ಲಾ ಕೆಲಸಗಳಿಗೂ ಕಾಲಿನ ಸಹಾಯ ಬೇಕೆ ಬೇಕು. ಮೂಳೆಯೂ(Bone) ಶನಿಗೆ ಸಂಬAಧಿಸಿದೆ. ದೇಹದ ಕೆಳಭಾಗವನ್ನು ಕೇತು ನಿಯಂತ್ರಿಸಿದರೆ, ರಾಹು ಅದರ ರಕ್ಷಣೆ ಮಾಡುತ್ತಾನೆ. ಹಾಗಾಗಿ ನಮ್ಮ ಪಾದ ಹಾಗೂ ಶೂ ಈ ಮೂರು ಗ್ರಹಗಳಿಗೆ ಸಂಬAಧಿಸಿದೆ. ಸಾಮಾನ್ಯವಾಗಿ ಈ ಮೂರು ಗ್ರಹಗಳನ್ನು ದುಷ್ಟ ಗ್ರಹಗಳೆಂದು ಕರೆಯಲಾಗುತ್ತದೆ ಅಲ್ಲದೆ ಮನುಷ್ಯನ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಶಾಸ್ತçದ ಪ್ರಕಾರ ಶೂ ಅಥವಾ ಯಾವುದೇ ಪಾದರಕ್ಷೆಗಳನ್ನು ಇನ್ನೊಬ್ಬರಿಂದ ಉಡುಗೊರೆಯಾಗಿ(Gift) ಪಡೆಯಬಾರದು. ಏಕೆಂದರೆ ಅವರಲ್ಲಿನ ನೆಗೆಟಿವ್ ಎನರ್ಜಿ ಪಡೆದಂತಾಗುತ್ತದೆ. ಹಾಗಾಗಿ ಯಾರಿಗೂ ಪಾದರಕ್ಷೆಗಳನ್ನು ಕೊಡಬಾರದು.
ಆಗಾಗ್ಗೆ ಟೈಂ ಸಿಕ್ಕಾಗ ಪಾದರಕ್ಷೆಗಳನ್ನು ಸ್ವಚ್ಛಗೊಳಿಸುತ್ತಿರುವಂತೆ(Clean) ಹಿರಿಯರು ಹೇಳುತ್ತಿರುತ್ತಾರೆ. ಪಾದರಕ್ಷೆಗಳನ್ನು ಸರಿಯಾದ ಜಾಗದಲ್ಲಿಡುವುದು ಮತ್ತು ಸರಿಯಾಗಿ ನೋಡಿಕೊಳ್ಳುವುದರಿಂದ ಧನಾತ್ಮಕ ಶಕ್ತಿ ಬೀರುತ್ತದೆ. ಜೊತೆಗೆ ದುಷ್ಟ ಶಕ್ತಿಗಳಾದ ಶನಿ ಹಾಗೂ ರಾಹುಗಳು ತಟಸ್ಥರಾಗುತ್ತಾರೆ.
Vastu Tips : ನಿಮಗೆ ಯಾವ ಬಣ್ಣದ ಚಪ್ಪಲಿ ಆಗಿ ಬರೋಲ್ಲ ತಿಳಿಯಿರಿ..
ವಾಸ್ತು ಪ್ರಕಾರ ಪಾದರಕ್ಷೆಗಳು ಎಲ್ಲಿಡಬೇಕು?
ವಾಸ್ತುವಿನಲ್ಲಿ ಹೀಗೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಮನೆಯ ಮುಖ್ಯದ್ವಾರದ(Main Door) ಎದುರು ಯಾವತ್ತು ಪಾದರಕ್ಷೆಗಳನ್ನು ಬಿಡಬಾರದು ಹಾಗೂ ಶೂ ರ‍್ಯಾಕ್‌ನಲ್ಲೂ(Rack) ಇಡಬಾರದು. ಮುಖ್ಯದ್ವಾರದಿಂದ ಒಳಗಡೆ ಅಂದರೆ ಎಡಭಾಗದಲ್ಲಿ(Leftside) ಪಾದರಕ್ಷೆಗಳನ್ನು ಇಡುವುದು ಸೂಕ್ತ ಜಾಗ. ಅದು ಯಾವ ದಿಕ್ಕಿರಲಿ, ಯಾವ ಜಾಗವೇ ಇರಲಿ, ಎಡಭಾಗದಲ್ಲಿ ಇಡುವುದು ಒಳ್ಳೆಯದು. ಅದನ್ನು ವೀಕ್ ಇರುವ ಜಾಗ ಎಂದು ಹೇಳಲಾಗುತ್ತದೆ.
ಪಾದರಕ್ಷೆಗಳನ್ನು ಎಂದಿಗೂ ಹೇಗೆಬೇಕೋ ಹಾಗೆ ಇಡಬಾರದು. ಅಲ್ಲದೆ ಹಳೆಯ ಶೂ ಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಉಪಯೋಗಿಸಿದ ನಂತರ ಅದನ್ನು ಸರಿಯಾದ ಜಾಗದಲ್ಲಿ ಜೋಡಿಸಿ ಇಡಬೇಕು.
ಬೆಡ್‌ರೂಮ್‌ನಲ್ಲಿ ಇಡಬಾರದು
ಪಾದರಕ್ಷೆಗಳನ್ನು ಎಂದಿಗೂ ಬೆಡ್‌ರೂಮನಲ್ಲಿ(Bedroom) ಇಡಬಾರದು. ಏಕೆಂದರೆ ಬೆಡ್‌ರೂಮ್‌ನಲ್ಲಿ ಇಡುವುದರಿಂದ ವೈವಾಹಿಕ ಜೀವನದಲ್ಲಿ(Married Life) ದುಷ್ಟ ಗ್ರಹಗಳ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಅಡುಗೆ ಕೋಣೆ(Kitchen), ದೇವರ ಮನೆಯ(Pooja Room) ಹತ್ತಿರವೂ ಪಾದರಕ್ಷೆಗಳನ್ನು ಬಿಡಬಾರದು. ಅಲ್ಲದೆ ಮುಖ್ಯ ಡಾಕ್ಯುಮೆಂಟ್(Important Document), ಓದುವ ಜಾಗದಲ್ಲಿಯೂ(Study) ಪಾದರಕ್ಷೆಗಳನ್ನು ಬಿಡಬಾರದು. ಹೀಗೆ ಮಾಡುವುದರಿಂದ ಜೀವನದಲ್ಲಿ ದುಷ್ಟ ಗ್ರಹಗಳ ಪರಿಣಾಮ ಹೆಚ್ಚಾಗುತ್ತದೆ.
Vastu tips : ಈ ದಿನದಂದು ಪಾದರಕ್ಷೆ ಖರೀದಿಸಿದರೆ ಭಾರೀ ನಷ್ಟ ಸಂಭವಿಸಬಹುದು ಎಚ್ಚರ!
ಯಾವ ದಿಕ್ಕಿನಲ್ಲಿಟ್ಟರೆ (Direction) ಯಾವ ಸಮಸ್ಯೆ?
ಪೂರ್ವ: ಸೂರ್ಯ(Sun) ಉದಯಿಸುವ ದಿಕ್ಕು ಅಂದರೆ ಪೂರ್ವದಲ್ಲಿ(East) ಪಾದರಕ್ಷೆಗಳನ್ನು ಇಡಬಾರದು. ಏಕೆಂದರೆ ರಾಹು, ಕೇತು, ಶನಿ ಗ್ರಹಗಳು ಸೂರ್ಯನ ಶತ್ರುಗಳು(Enemy). ಈ ದಿಕ್ಕಿನಲ್ಲಿಟ್ಟರೆ ಮಾನಸಿಕ ಸಮಸ್ಯೆ(Mental Disorder), ಕುಟುಂಬದಲ್ಲಿ ಅಸಂತೃಪ್ತಿ(Dissatisfaction), ಮಕ್ಕಳು(Childrens) ಮಾನಸಿಕ ದೌರ್ಬಲ್ಯ ಎದುರಿಸಬೇಕಾಗುತ್ತದೆ. ಕುಟುಂಬವು ಸಾಮಾನ್ಯವಾಗಿ ಯೋಚನಾಶಕ್ತಿ ಕಳೆದುಕೊಳ್ಳುತ್ತದೆ ಮತ್ತು ಮನೆಯೊಳಗೆ ಮಾನಸಿಕ ಅಡಚಣೆ ಮತ್ತು ಖಿನ್ನತೆ(Depression) ಹೆಚ್ಚುತ್ತದೆ. ಈ ದಿಕ್ಕಿನಲ್ಲಿ ರ‍್ಯಾಕ್‌ನಲ್ಲಿ ಇಟ್ಟಿದ್ದರೆ ಅದನ್ನು ಸ್ಥಳಾಂತರಿಸುವುದು ಒಳ್ಳೆಯದು.
ಆಗ್ನೇಯ: ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕೊರತೆ ಕಾಣಿಸಿಕೊಳ್ಳಬಹುದು. ಜೀವನದಲ್ಲಿ ದೊಡ್ಡ ಅವಕಾಶ(Opportunity) ಸಿಕ್ಕಿದ್ದರೂ ಹಣಕಾಸಿನ(Financial) ಅಡಚಣೆಗಳು ಅಥವಾ ನಿಮ್ಮ ಹಣವು ಸಿಲುಕಿಕೊಳ್ಳುವುದನ್ನು ಸಹ ನೀವು ಗಮನಿಸಬಹುದು. ನೀವು ಆ ಹಣದಿಂದ ಕೆಟ್ಟ ಹೂಡಿಕೆಯನ್ನು ಮಾಡುವುದು, ಆರೋಗ್ಯಕ್ಕೆ ಸಂಬAಧಿಸಿದ ಕರುಳಿನ ಸಮಸ್ಯೆ(Liver), ಪಿತ್ತಕೋಶ(Gallbladder) ಸಮಸ್ಯೆ ಕಾಣಿಸಿಕೊಳ್ಳುವುದು, ನಿದ್ರಾಹೀನತೆ(Lack of Sleep), ಹತಾಶೆ. ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯ ಸಮಸ್ಯೆಗಳಿದ್ದಲ್ಲಿ ಪಾದರಕ್ಷೆಯ ರ‍್ಯಾಕ್ ಬದಲಾಯಿಸುವುದು ಸೂಕ್ತ.
ದಕ್ಷಿಣ (South): ಆತ್ಮವಿಶ್ವಾಸ ಕಡಿಮೆ(Self Confidence), ಸ್ವಯಂ ಅನುಮಾನ(Self Doubt), ಜೀವನ ಕುರಿತಾದ ಸೋಮಾರಿತನದ ವರ್ತನೆ ಮತ್ತು ಜೀವನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕೆಲಸದಲ್ಲಿ ಸರಿಯಾಗಿ ಕೇಂದ್ರೀಕರಿಸದಿರುವುದು ಹಾಗೂ ಕೆಲಸ ಬದಲಾಯಿಸುತ್ತಿರುವುದು(Work Change). ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಪಾದರಕ್ಷೆ ಇಡುವ ಸ್ಥಳ ಬದಲಾಯಿಸಬೇಕಾಗುತ್ತದೆ.
ಈಶಾನ್ಯ: ಈ ದಿಕ್ಕಿನಲ್ಲಿಡುವುದರಿಂದ ವಯಕ್ತಿಕ ಜೀವನದಲ್ಲಿ(Personal Life) ಹಾಗೂ ದೈನಂದಿನ ಹಣಕಾಸಿನಲ್ಲಿ ತೊಂದರೆ(Financial Problem) ಎದುರಿಸಬೇಕಾಗುತ್ತದೆ. ಜೀವನದಲ್ಲಿ ವೆಚ್ಚ ಹೆಚ್ಚಾಗಿ, ಹಣ ಉಳಿಸುವುದು ಸಾಧ್ಯವಾಗುವುದಿಲ್ಲ. ಮದುವೆ(Marriage) ವಿಚಾರದಲ್ಲಿ ಸಮಸ್ಯೆಗಳು, ಶ್ವಾಸಕೋಶ(Lungs) ಹಾಗೂ ಹೃದಯ ಸಂಬAಧಿ(Heart Disease) ಸಮಸ್ಯೆ ಕಾಣಿಸಿಕೊಂಡಲ್ಲಿ ಶೂ ಸ್ಟಾö್ಯಂಡ್ ಬದಲಾಯಿಸುವುದು ಒಳ್ಳೆಯದು.

