Vastu Tips: ಉದ್ಯೋಗಿಗಳು ಈ ರೀತಿ ಚಪ್ಪಲಿ ಹಾಕ್ಕೊಂಡರೆ ಧನ ಪ್ರಾಪ್ತಿ!

ಚಪ್ಪಲಿ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಮನೆಯಿಂದ ಹೊರಗೆ ಚಪ್ಪಲಿಯಿಲ್ಲದೆ ಯಾರೂ ಕಾಲಿಡರು. ಈಗಂತೂ ಮನೆಯೊಳಗೂ ಚಪ್ಪಲಿ ಹಾಕಿಕೊಂಡಿರುವವರಿದ್ದಾರೆ. ಈ ಚಪ್ಪಲಿಗೂ ವಾಸ್ತುವಿನಲ್ಲಿ ಸ್ಥಾನವಿದೆ ಎಂಬುದು ನಿಮಗೆ ಗೊತ್ತೇ? ಅಂದ ಹಾಗೆ, ಚಪ್ಪಲಿ ಹೇಗಿದ್ದರೆ ಧನಲಾಭ ಅಂತ ತಿಳ್ದಿದೀರಾ?

vastu tips for shoes and slippers to get rich skr

ಮನೆಯಲ್ಲಿ ಸಕಲ ಸೌಕರ್ಯವೂ ಇದೆ. ವಾಸ್ತು(Vastu)ವಿನಂತೆಯೇ ಮನೆ ನಿರ್ಮಿಸಲಾಗಿದೆ. ಹೇಳಿದ ಪೂಜೆ ಪುನಸ್ಕಾರ ಮಾಡಿಯಾಗಿದೆ. ಪ್ರತಿ ದಿನ ದೇವರ ಪೂಜೆಯೂ ನಡೆಯುತ್ತದೆ. ಹಾಗಿದ್ದೂ ಸಮಸ್ಯೆಗಳು(problems) ತಪ್ಪುತ್ತಿಲ್ಲ ಎಂದು ಕೊರಗುತ್ತಿದ್ದೀರಾ? ನೆಮ್ಮದಿ ಇಲ್ಲದೆ ಬಳಲುತ್ತಿದ್ದೀರಾ? ಬಹುಷಃ ನೀವು ನಿಮ್ಮ ಚಪ್ಪಲಿ(Slipper) ವಿಷಯದಲ್ಲಿ ಎಡವಿರಬಹುದು. ಚಪ್ಪಲಿ ವಿಷಯದ ವಾಸ್ತು ಸಲಹೆಗಳನ್ನು ಪರಿಗಣಿಸಿದರೆ ಸಾಕಷ್ಟು ಸಮಸ್ಯೆ ನಿವಾರಣೆಯಾಗುವುದಷ್ಟೇ ಅಲ್ಲ, ಧನಪ್ರಾಪ್ತಿಯೂ ಸಾಧ್ಯವಿದೆ. ಏಕೆಂದರೆ ಚಪ್ಪಲಿಗೆ ಶನಿ ಗ್ರಹ(Saturn)ದೊಂದಿಗೆ ಸಂಪರ್ಕ ಇರುತ್ತದೆ. 

ಹೌದು, ಮನುಷ್ಯನ ದೈನಂದಿನ ಚಟುವಟಿಕೆಗಳು, ಆಗು ಹೋಗುಗಳು ನಿರ್ದಿಷ್ಟ ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗೆಯೇ ನಾವು ಧರಿಸುವ ಚಪ್ಪಲಿ ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತೆ. ಯಾರು ಶನಿ ದೋಷ(Shani dosh)ದಿಂದ ಬಳಲುತ್ತಿರುತ್ತಾರೋ, ಅವರು ಚಪ್ಪಲಿ ದಾನ ಮಾಡುವುದರಿಂದ ಸಾಕಷ್ಟು ಒಳಿತಾಗುತ್ತದೆ. 

ಕೈ ನೋಡಿ ಭವಿಷ್ಯ(future prediction) ಹೇಳುವವರಿದ್ದಾರೆ, ಮುಖ ನೋಡಿ ಹೇಳುವವರಿದ್ದಾರೆ, ಜಾತಕ ನೋಡಿ ಹೇಳುವವರೂ ಇದ್ದಾರೆ. ಸಾಮುದ್ರಿಕಾ ಶಾಸ್ತ್ರದಲ್ಲಿ ದೇಹದ ಲಕ್ಷಣಗಳ ಆಧಾರದ ಮೇಲೆ ಭವಿಷ್ಯ ಹೇಳುತ್ತಾರೆ. ಹಾಗೆಯೇ ಅಂಗಾಲು ನೋಡಿ ಭವಿಷ್ಯ ಹೇಳುವವರೂ ಇದ್ದಾರೆ. ಕಾಲುಗಳ ಉದ್ದ, ಅಗಲ, ರೇಖೆಗಳು, ಬೆರಳ ಆಕಾರ, ರಚನೆ ಎಲ್ಲವನ್ನೂ ಅಭ್ಯಸಿಸಿ ಭವಿಷ್ಯ ಹೇಳಲಾಗುತ್ತದೆ. ಕಾಲುಗಳು ನಮ್ಮ ದೇಹದ ಬಹು ಮುಖ್ಯ ಅಂಗವಾಗಿದ್ದು ಅವುಗಳನ್ನು ಕಾಪಾಡುವಲ್ಲಿ ಚಪ್ಪಲಿಗಳ ಪಾತ್ರ ಹಿರಿದು. ಕಾಲಿನ ಆರೋಗ್ಯ(health) ಚೆನ್ನಾಗಿ ಕಾಪಾಡಿಕೊಂಡವರಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತವೆ ಎನ್ನಲಾಗುತ್ತದೆ. ಹಿಂದಿನ ಕಾಲದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿದ್ದವರೇ ಹೆಚ್ಚು. ಆದರೆ ಆಗಲೂ ಮರದ ಚಪ್ಪಲಿಯನ್ನು ಧರಿಸಲು ಸಲಹೆ ನೀಡಲಾಗುತ್ತಿತ್ತು. ಹೀಗಾಗಿ, ಚಪ್ಪಲಿಗಳು ಹೇಗಿರಬೇಕು, ಅವುಗಳ ಗುಣಮಟ್ಟ(quality) ಹೇಗಿರಬೇಕು ಮತ್ತು ಯಾವಾಗ ಯಾವ ರೀತಿಯ ಚಪ್ಪಲಿಗಳನ್ನು ಧರಿಸಬೇಕೆಂಬ ಬಗ್ಗೆ ಶಾಸ್ತ್ರಗಳಲ್ಲಿ, ವಾಸ್ತುವಿನಲ್ಲಿ ಹೇಳಲಾಗಿದೆ. ಹಾಗಾದರೆ ಚಪ್ಪಲಿಯಿಂದ ಜೀವನ ಝಗಮಗಿಸಲು ನೀವು ಅನುಸರಿಸಬೇಕಾದ ವಾಸ್ತು ಮತ್ತು ಜ್ಯೋತಿಷ್ಯ ಸಲಹೆಗಳೇನು ನೋಡೋಣ. 

Vastu Tips: ಪೊರಕೆ ಹೀಗಿಟ್ರೆ ದಾರಿದ್ರ್ಯ ಒಕ್ಕರಿಸುತ್ತೆ, ಎಚ್ಚರ!

  • ಕದ್ದ ಅಥವಾ ಉಡುಗೊರೆಯಾಗಿ ಸಿಕ್ಕ ಚಪ್ಪಲಿಯನ್ನು ಧರಿಸಕೂಡದು. ಕದ್ದ ಅಥವಾ ದಾನವಾಗಿ ಬಂದ ಚಪ್ಪಲಿ ಧರಿಸಿದರೆ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಿಲ್ಲ. ದುರದೃಷ್ಟ(bad luck) ನಿಮ್ಮನ್ನು ಅಟಕಾಯಿಸಿಕೊಳ್ಳಲಿದೆ. 
  • ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈಶಾನ್ಯ(North East) ದಿಕ್ಕಿನಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಬಾರದು. ಈ ದಿಕ್ಕಿನಲ್ಲಿ ಸೂರ್ಯನ ಮೊದಲ ಕಿರಣಗಳು ಬೀಳಲಿದ್ದು, ಮನೆಗೆ ಧನಾತ್ಮಕ ಶಕ್ತಿ(Positive energy) ಪ್ರವೇಶವಾಗುವ ಸ್ಥಳದಲ್ಲಿ ಚಪ್ಪಲಿಯಿರಬಾರದು.
  • ಹರಿದ ಅಥವಾ ತೀರಾ ಚಪ್ಪನ್ ಚೂರಾದ ಚಪ್ಪಲಿಯನ್ನು ಹಾಕಬೇಡಿ. ಇದರಿಂದ ಇರುವ ಅದೃಷ್ಟ(Luck)ವೂ ದುರಾದೃಷ್ಟವಾಗಿ ಪರಿವರ್ತಿತವಾಗಲಿದೆ. ಹರಿದ ಚಪ್ಪಲಿ ಯಶಸ್ಸನ್ನು ಹತ್ತಿಕ್ಕಲಿದೆ. ಚಪ್ಪಲಿ ಕದ್ದರೆ ಶನಿಗೆ ಕೋಪ ಬರುತ್ತದೆ. ಗ್ರಹಚಾರ ಕಟ್ಟಿಟ್ಟ ಬುತ್ತಿ.
  • ನಿಮ್ಮ ಉದ್ಯೋಗ ಸ್ಥಳದಲ್ಲಿ, ವೃತ್ತಿ ಕಾರ್ಯ ಕ್ಷೇತ್ರದಲ್ಲಿ ಕಂದು ಅಥವಾ ಮರದ ಬಣ್ಣದ ಚಪ್ಪಲಿ ಧರಿಸಬಾರದು. ಪರಿಸ್ಥಿತಿ ಹದಗೆಟ್ಟಿದ್ದರೆ, ಈ ಚಪ್ಪಲಿಯಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ.
  • ಅಕಸ್ಮಾತ್ ಉದ್ಯೋಗ ಸಂದರ್ಶನ(interview)ಕ್ಕೆ ಹೋಗುತ್ತಿದ್ದರೆ, ಹರಿದ ಅಥವಾ ಮಾಸಿದ ಚಪ್ಪಲಿಗಳನ್ನು ಧರಿಸಿಕೊಂಡು ಹೋಗಬೇಡಿ. ಇದರಿಂದ ಸಂದರ್ಶನದಲ್ಲಿ ಸೋಲಾಗುತ್ತದೆ. ಸಿಗುವ ಕೆಲಸವೂ ಕೈ ತಪ್ಪಿ ಹೋಗುತ್ತದೆ. 
  • ಬ್ಯಾಂಕಿಂಗ್(banking) ಹಾಗೂ ಶೈಕ್ಷಿಣಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಸ್ಥರು ಕಂದು ಬಣ್ಣದ ಅಥವಾ ಡಾರ್ಕ್ ಕಾಫಿ ಬಣ್ಣದ ಚಪ್ಪಲಿಗಳನ್ನು ಧರಿಸಬಾರದು. ನಿಮ್ಮ ಆದಾಯ ಮೂಲಕ್ಕೆ ಇದು ಧಕ್ಕೆ ತರಬಲ್ಲದು.

    Weekly Horoscope: ಕುಂಭಕ್ಕೆ ವಾರಾಂತ್ಯದಲ್ಲಿ ಕಾದಿದೆ ಸಿಹಿ ಸುದ್ದಿ, ನಿಮ್ಮ ಈ ವಾರಫಲ ಏನಿದೆ?
     
  • ವೈದ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಕಬ್ಬಿಣ ಸಂಬಂಧಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು ಬಿಳಿಯ ಬಣ್ಣದ ಶೂಸ್ ಅಥವಾ ಚಪ್ಪಲಿ ಧರಿಸಲೇಬಾರದು. ಇದರಿಂದ ಅವರ ಆದಾಯಕ್ಕೆ ಕತ್ತರಿ ಬೀಳುತ್ತದೆ. 
  • ಆಯುರ್ವೇದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ನೀಲಿ ಬಣ್ಣ(blue colour)ದ ಚಪ್ಪಲಿಯನ್ನು ಧರಿಸಕೂಡದು. ಅಲ್ಲದೇ ಬಟ್ಟೆಯಿಂದ ಮಾಡಿರುವ ಪಾದರಕ್ಷೆಗಳೂ ಇವರಿಗೆ ಒಳ್ಳೆಯದಲ್ಲ. ಇಂಥವರಿಗೆ ನೀಲಿ ಬಣ್ಣ ಹೇಳಿ ಮಾಡಿಸಿದ್ದಲ್ಲ.
Latest Videos
Follow Us:
Download App:
  • android
  • ios