Asianet Suvarna News Asianet Suvarna News

ನಿಮ್ಮ ರಾಶಿಗೆ ಯಾವ ಬಣ್ಣದ ವಾಹನ ಕೊಂಡ್ರೆ ಒಳ್ಳೇದು?

ವಾಹನವನ್ನು ಖರೀದಿಸುವುದು ಒಬ್ಬರ ಜೀವನದಲ್ಲಿ ಒಂದು ಮೈಲಿಗಲ್ಲು. ಬೈಕಾಗಲೀ, ಕಾರಾಗಲಿ ಅದನ್ನು ಕೊಳ್ಳುವುದೆಂದರೆ ಅದು ಆ ವ್ಯಕ್ತಿಯ ಬಹು ಕಾಲದ ಕನಸೇ ಆಗಿರುತ್ತದೆ. ಹೀಗೆ ಲೈಫ್ ಟೈಂ ಕನಸನ್ನು ಈಡೇರಿಸಿಕೊಳ್ಳುವಾಗ ವಾಹನದ ಬಣ್ಣದ ಬಗ್ಗೆಯೂ ಗಮನ ಹರಿಸಬೇಕು. ಯಾವ ರಾಶಿಗೆ ಯಾವ ಬಣ್ಣದ ವಾಹನ ಬೆಸ್ಟ್ ಅಂತ ಇಂದು ತಿಳಿಸುತ್ತೀವಿ. 

Which Color of Vehicle Should You Buy skr
Author
Bangalore, First Published Jun 21, 2022, 4:01 PM IST

ಕಾರು ಅಥವಾ ಬೈಕ್ ಸೇರಿದಂತೆ ವಾಹನ(vehicle) ಖರೀದಿಸುವಾಗ ಬೆಲೆ, ಬ್ರ್ಯಾಂಡ್ ಬಗ್ಗೆ ಮೊದಲು ಯೋಚಿಸುತ್ತಾರೆ. ಅವು ಬಹಳ ಮುಖ್ಯ ಕೂಡಾ. ಅದರ ನಂತರದಲ್ಲಿ ಜನರು ವಾಹನದ ಬಣ್ಣ(Colour), ಸಂಖ್ಯೆ ಇತ್ಯಾದಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ವಾಹನದ ಬಣ್ಣ ಆರಿಸುವಾಗ ಕೆಲವರು ತಮಗಿಷ್ಟದ ಬಣ್ಣ ಎಂದು ಆಯ್ಕೆ ಮಾಡುತ್ತಾರೆ, ಮತ್ತೆ ಕೆಲವರು ಲಕ್ಕಿ ಕಲರ್ ಎಂದು ಆರಿಸುತ್ತಾರೆ. ಜ್ಯೋತಿಷಿಗಳ ಪ್ರಕಾರ ನಿಮ್ಮ ಇಷ್ಟದ ಬಣ್ಣ ಎಂದು ಆರಿಸುವುದಕ್ಕಿಂತ ವಾಹನಕ್ಕೆ ನಿಮ್ಮ ರಾಶಿಗೆ ಹೊಂದುವ ಬಣ್ಣ ಎಂದು ಆರಿಸಬೇಕು. ಇಲ್ಲದಿದ್ದಲ್ಲಿ, ನೀವು ಆರಿಸಿದ ಬಣ್ಣ ದುರದೃಷ್ಟಕರವೂ ಆಗಬಹುದು. 

ಶುಕ್ರ(Venus), ವಿಶೇಷವಾಗಿ, ವಾಹನವನ್ನು ಖರೀದಿಸುವಲ್ಲಿ ಪಾತ್ರ ವಹಿಸುವ ಪ್ರಮುಖ ಗ್ರಹವಾಗಿದೆ. ಏಕೆಂದರೆ ಇದು ಸಂಪತ್ತು, ಭೌತಿಕ ಸೌಕರ್ಯಗಳು ಮತ್ತು ಐಷಾರಾಮಿಗಳ ಕಾರಕ ಗ್ರಹವಾಗಿದೆ. ವಾಹನವನ್ನು ಖರೀದಿಸಲು ಶನಿಯು ಸಹ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿರಬೇಕು. ಈ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾದ ಇತರ ಗ್ರಹಗಳು ಮಂಗಳ ಮತ್ತು ರಾಹು. ಈ ಎರಡು ಗ್ರಹಗಳು ಜನ್ಮ ಕುಂಡಲಿಯಲ್ಲಿ ಒಂದೇ ಮಾರ್ಗವನ್ನು ತಲುಪಿದಾಗ, ಅದು ಅಪಘಾತಗಳನ್ನು ಸೂಚಿಸುತ್ತದೆ. ಜನ್ಮ ಕುಂಡಲಿಯಲ್ಲಿರುವ ಮನೆಗಳಲ್ಲಿ, ವಾಹನಗಳ ಖರೀದಿಯಲ್ಲಿ 4ನೇ ಮನೆಯು ಪ್ರಮುಖವಾಗಿದೆ.

ವಾಹನ ಖರೀದಿಗೆ ಸಂಬಂಧಿಸಿದಂತೆ ಜ್ಯೋತಿಷಿಯ ಸಲಹೆಯು ಸಾಮಾನ್ಯವಾಗಿ ವಾಹನವನ್ನು ಖರೀದಿಸಲು ಸರಿಯಾದ ಸಮಯ, ವಾಹನದ ಸಂಖ್ಯೆ ಮತ್ತು ವಾಹನದ ಬಣ್ಣವನ್ನು ಒಳಗೊಂಡಿರುತ್ತದೆ. ಜಾತಕವನ್ನು ಪರಿಶೀಲಿಸುವ ಮೂಲಕ ಮತ್ತು ವ್ಯಕ್ತಿಯ ಜನನದ ಸಮಯದಲ್ಲಿ ಚಂದ್ರನ ಸ್ಥಾನವನ್ನು ಗುರುತಿಸುವ ಮೂಲಕ, ಜ್ಯೋತಿಷಿಯು ವಾಹನಕ್ಕೆ ಸೂಕ್ತವಾದ ಬಣ್ಣವನ್ನು ಸೂಚಿಸುತ್ತಾರೆ. ಸಧ್ಯ ಕೇವಲ  ರಾಶಿಗನುಗುಣವಾಗಿ ನೋಡಿದರೆ ಯಾವ ರಾಶಿ ಯಾವ ಬಣ್ಣದ ವಾಹನ ಖರೀದಿಸಬೇಕು ತಿಳಿಯೋಣ. 

ಮೇಷ(Aries): ಮೇಷ ರಾಶಿಯನ್ನು ಮಂಗಳ ಗ್ರಹ ಆಳುತ್ತದೆ. ಮೇಷ ರಾಶಿಯವರಿಗೆ ವಾಹನಕ್ಕೆ ನೀಲಿ(blue) ಬಣ್ಣವು ಹೆಚ್ಚು ಸೂಕ್ತವಾಗಿದೆ. ಕಪ್ಪು ಬಣ್ಣವನ್ನು ತಪ್ಪಿಸಬೇಕು. ವಾಹನದಲ್ಲಿ ಹನುಮಂತನ ವಿಗ್ರಹವನ್ನು ಇಡಬಹುದು.

ವೃಷಭ(Taurus): ವೃಷಭ ರಾಶಿಯನ್ನು ಶುಕ್ರ ಗ್ರಹ ಆಳುತ್ತದೆ. ಅವರ ವಾಹನಕ್ಕೆ ಬಿಳಿ ಬಣ್ಣ(white)ವು ಉತ್ತಮವಾಗಿದೆ. ಕಪ್ಪು ಬಣ್ಣವನ್ನು ತಪ್ಪಿಸಬೇಕು. ವಾಹನದಲ್ಲಿ ಶಿವನ ಚಿತ್ರ ಇಡಬಹುದು.

ಮಿಥುನ(Gemini): ಮಿಥುನ ರಾಶಿಯನ್ನು ಬುಧ ಗ್ರಹ ಆಳುತ್ತದೆ. ಕ್ರೀಮ್ ಮತ್ತು ಹಸಿರು(green) ಬಣ್ಣಗಳು ಅವರ ವಾಹನಕ್ಕೆ ಉತ್ತಮವಾಗಿವೆ. ವಾಹನದಲ್ಲಿ ಗಣೇಶನ ಚಿತ್ರ ಇಡಬಹುದು.

ಕರ್ಕಾಟಕ(Cancer): ಕರ್ಕ ರಾಶಿಗೆ ಚಂದ್ರ ಅಧಿಪತಿ. ಕರ್ಕಾಟಕ ರಾಶಿಯವರು ತಮ್ಮ ವಾಹನಕ್ಕೆ ಬಿಳಿ ಮತ್ತು ಕೆಂಪು ಬಣ್ಣಗಳನ್ನು ಆಯ್ಕೆ ಮಾಡಬಹುದು. ವಾಹನದಲ್ಲಿ ಹನುಮಾನ್ ಚಿತ್ರವನ್ನು ಇಡಬಹುದು.

ಸಿಂಹ(Leo): ಸಿಂಹ ರಾಶಿಯ ಅಧಿಪತಿ ಸೂರ್ಯ. ತಮ್ಮ ವಾಹನಕ್ಕೆ ಬೂದು(grey) ಮತ್ತು ತಿಳಿ ನೀಲಿ ಬಣ್ಣಗಳನ್ನು ಆಯ್ಕೆ ಮಾಡಬೇಕು. ಗಾಯತ್ರಿ ಮಂತ್ರವನ್ನು ಬರೆದು ವಾಹನದಲ್ಲಿ ಇಡಬಹುದು.

ಕನ್ಯಾ(Virgo): ಕನ್ಯಾ ರಾಶಿಯವರ ವಾಹನಕ್ಕೆ ಬಿಳಿ ಮತ್ತು ನೀಲಿ ಬಣ್ಣಗಳು ಒಳ್ಳೆಯದು. ಕೆಂಪು ಬಣ್ಣವನ್ನು ತಪ್ಪಿಸಬೇಕು. ವಾಹನದಲ್ಲಿ ಕೃಷ್ಣನ ಚಿತ್ರ ಇಡಬಹುದು.

ತುಲಾ(Libra): ತುಲಾ ರಾಶಿಯ ಸ್ಥಳೀಯರು ವಯಸ್ಸಾದಾಗ ವಾಹನಗಳನ್ನು ಖರೀದಿಸುತ್ತಾರೆ. ತುಲಾ ರಾಶಿಯನ್ನು ಶುಕ್ರ ಗ್ರಹ ಆಳುತ್ತದೆ. ಅವರ ವಾಹನಕ್ಕೆ ಕಪ್ಪು ಮತ್ತು ನೀಲಿ ಬಣ್ಣಗಳು ಸೂಕ್ತವಾಗಿವೆ. ವಾಹನದಲ್ಲಿ ಸ್ವಸ್ತಿಕವನ್ನು ಇಡಬಹುದು.

ಈ ಐದು ರಾಶಿಗಳು ಎಲ್ಲರನ್ನೂ ಖುಷಿಯಾಗಿಡುತ್ತವೆ!

ವೃಶ್ಚಿಕ(Scorpio): ವೃಶ್ಚಿಕ ರಾಶಿಯನ್ನು ಮಂಗಳ(Mars) ಆಳುತ್ತದೆ. ಅವರ ವಾಹನಕ್ಕೆ ಬಿಳಿ ಬಣ್ಣ ಉತ್ತಮವಾಗಿದೆ. ಹಸಿರು ಮತ್ತು ಕಪ್ಪು ಬಣ್ಣಗಳನ್ನು ತಪ್ಪಿಸಬೇಕು. ವಾಹನದಲ್ಲಿ ಶಿವನ ಚಿತ್ರ ಇಡಬಹುದು.

ಧನು(Sagittarius): ಧನು ರಾಶಿಯನ್ನು ಗುರು ಗ್ರಹವು ಆಳುತ್ತದೆ. ಕೆಂಪು ಮತ್ತು ಸಿಲ್ವರ್ ಬಣ್ಣಗಳು ಅವರ ವಾಹನಕ್ಕೆ ಉತ್ತಮವಾಗಿದೆ. ಕಪ್ಪು ಮತ್ತು ನೀಲಿ ಬಣ್ಣಗಳನ್ನು ತಪ್ಪಿಸಬೇಕು. ವಾಹನದಲ್ಲಿ ಹನುಮಾನ್ ಚಾಲೀಸಾ ಇಡಬೇಕು.

ಮಕರ(Capricorn): ಮಕರವನ್ನು ಶನಿ ಗ್ರಹವು ಆಳುತ್ತದೆ. ಬಿಳಿ, ಬೂದು ಮತ್ತು ತಿಳಿನೀಲಿ ಬಣ್ಣಗಳು ಅವರ ವಾಹನಕ್ಕೆ ಒಳ್ಳೆಯದು. ಕೆಂಪು ಮತ್ತು ನೀಲಿ ಬಣ್ಣಗಳನ್ನು ತಪ್ಪಿಸಬೇಕು. ವಾಹನದಲ್ಲಿ ಕೃಷ್ಣನ ಚಿತ್ರ ಇಡಬೇಕು.

Vastu Tips: ನಿಮ್ಮನ್ನ ಬೀದಿಗೆ ತಳ್ಬಹುದು ಮನಿ ಪ್ಲಾಂಟ್

ಕುಂಭ(Aquarius): ಕುಂಭವನ್ನು ಶನಿ ಆಳುತ್ತದೆ. ನೀಲಿ, ಬಿಳಿ ಮತ್ತು ಬೂದು ಬಣ್ಣಗಳು ಅವರ ವಾಹನಗಳಿಗೆ ಒಳ್ಳೆಯದು. ವಾಹನದಲ್ಲಿ ಶಿವನ ಚಿತ್ರ ಇಡಬಹುದು.

ಮೀನ(Pisces): ಮೀನದ ಅಧಿಪತಿ ಗುರು. ಅವರ ವಾಹನಗಳಿಗೆ ಗೋಲ್ಡನ್, ಹಳದಿ ಅಥವಾ ಬಿಳಿ ಬಣ್ಣಗಳು ಸೂಕ್ತವಾಗಿವೆ. ವಾಹನದಲ್ಲಿ ಹನುಮಾನ್ ಚಿತ್ರವನ್ನು ಇಡಬಹುದು.

Follow Us:
Download App:
  • android
  • ios