Asianet Suvarna News Asianet Suvarna News

ಹಣದ ಹೊಳೆ ಹರೀಬೇಕು ಅಂದ್ರೆ ತವರಿಗೆ ಹೋಗುವ ಮುನ್ನ ವಾರ ನೋಡಿ

ಕೆಲಸಕ್ಕೆ ಬಿಡುವಿದೆ, ಮಕ್ಕಳಿಗೆ ರಜೆ ಇದೆ ಅಂದಾಗ ತವರು ಮನೆಗೆ ಹೊರಡುವ ಮಹಿಳೆಯರು ಕೆಲ ಶಾಸ್ತ್ರ ತಿಳಿದಿರಬೇಕು. ಮನಸ್ಸಿಗೆ ಬಂದಾಗ ತವರಿಗೆ ಹೋದ್ರೆ ನಷ್ಟ ಗ್ಯಾರಂಟಿ. ಹಾಗಾಗಿ ಸ್ವಲ್ಪ ಶುಭ ದಿನ ನೋಡಿ ಹೋಗೋದನ್ನ ರೂಢಿ ಮಾಡಿಕೊಳ್ಳಿ. 
 

When Should Married Girl Go To Her Mother Home From In Laws House
Author
First Published Sep 22, 2022, 5:23 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಾಹಿತ ಮಹಿಳೆ ಅನೇಕ ಸಂಪ್ರದಾಯಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ. ಮದುವೆಯಾಗಿ ಇನ್ನೊಂದು ಮನೆಗೆ ಬಂದ ಮಹಿಳೆ, ಲಕ್ಷ್ಮಿ ರೂಪವಾಗಿರುತ್ತಾಳೆ. ಆಕೆ ಮಾಡುವ ಕೆಲಸಗಳು ಗಂಡನ ಮನೆ ಹಾಗೂ ತವರು ಮನೆಯ ಏಳ್ಗೆಗೆ ಕಾರಣವಾಗುತ್ತದೆ. ವಿವಾಹಿತ ಮಹಿಳೆ ಬಳೆ ಯಾಕೆ ಹಾಕಿಕೊಳ್ಳಬೇಕು, ಕುಂಕುಮ ಯಾಕೆ ಹಚ್ಚಬೇಕು, ಪ್ರತಿ ದಿನ ಪೂಜೆ ಯಾಕೆ ಮಾಡ್ಬೇಕು ಎಂಬೆಲ್ಲವನ್ನೂ ಶಾಸ್ತ್ರದಲ್ಲಿ ಹೇಳಲಾಗಿದೆ. ಅದರಂತೆ ವಿವಾಹಿತ ಮಹಿಳೆ ತವರು ಮನೆಗೆ ಹೋಗುವ ಹಾಗೂ ತವರು ಮನೆಗೆ ಬರುವ ಸಮಯವನ್ನು ಕೂಡ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಯಾವ ಸಂದರ್ಭದಲ್ಲಿ ತವರಿಗೆ ಹೋದ್ರೆ ಶುಭ ಹಾಗೂ ಯಾವ ಸಂದರ್ಭದಲ್ಲಿ ತವರಿನಿಂದ ಬಂದ್ರೆ ಅಶುಭ ಎಂಬುದನ್ನು ಕೂಡ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂದು ನಾವು ಯಾವ ದಿನ ತವರಿಗೆ ಹೋದ್ರೆ ಮಂಗಳಕರ ಎಂಬ ಬಗ್ಗ ಮಾಹಿತಿ ನೀಡ್ತೇವೆ.  ಶಾಸ್ತ್ರಗಳ ಪ್ರಕಾರ, ಮಹಿಳೆಯರು ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿದ್ದಾರೆ. ಹಾಗಾಗಿ ಮಹಿಳೆಯರ ಜಾತಕದಲ್ಲಿ ಶುಕ್ರ ಬಲವಾಗಿರುವುದು ಬಹಳ ಮುಖ್ಯ.  

ತಾಯಿ ಮನೆಗೆ ಯಾವಾಗ ಹೋಗ್ಬಹುದು? :ಶಾಸ್ತ್ರಗಳ ಪ್ರಕಾರ, ಬುಧ ಮತ್ತು ಶನಿ ಶುಕ್ರನ ಸ್ನೇಹಿ ಗ್ರಹಗಳು. ಸೂರ್ಯ (Sun) ಮತ್ತು ಚಂದ್ರ (Moon) ಶುಕ್ರನ ಶತ್ರುಗಳು ಎಂದು ನಂಬಲಾಗಿದೆ. ವಿವಾಹಿತ (married) ಮಹಿಳೆಯರು ಬುಧವಾರ ಮತ್ತು ಶನಿವಾರದಂದು ತಾಯಿ ಮನೆಗೆ ಹೋಗಬಹುದು. ಶುಕ್ರವಾರ (Friday) ಕೂಡ ತವರಿಗೆ ಹೋಗಬಹುದು. 

ನವರಾತ್ರಿ ಉಪವಾಸದ ನಂತ್ರ ಅಸಿಡಿಟಿ ಸಮಸ್ಯೆ ಕಾಡ್ಬಾರ್ದು ಅಂದ್ರೆ ಹೀಗ್ ಮಾಡಿ

ಧರ್ಮಗ್ರಂಥಗಳ ಪ್ರಕಾರ, ಶುಕ್ರವಾರ ನೀವು ತವರು ಮನೆ (Hometown) ಯಿಂದ ಅತ್ತೆ ಮನೆಗೆ ಕೂಡ ಬರಬಹುದು. ಶಾಸ್ತ್ರಗಳ ಪ್ರಕಾರ, ಬುಧ ಮತ್ತು ಚಂದ್ರ ಇಬ್ಬರೂ ಶತ್ರು (Enemy ) ಗಳು. ಮಹಿಳೆಯರ ಜಾತಕದಲ್ಲಿ ಚಂದ್ರ ಬಲಶಾಲಿ ಮತ್ತು ಬುಧ ದುರ್ಬಲವಾಗಿದ್ದರೆ  ಮಹಿಳೆಯರು ಬುಧವಾರವೂ ತಮ್ಮ ತಾಯಿಯ ಮನೆಗೆ ಹೋಗಬಾರದು ಎನ್ನುತ್ತಾರೆ ಪಂಡಿತರು. ಅತ್ತೆ ಮನೆಯಿಂದ ಮಹಿಳೆಯರು ಚತುರ್ಥಿ ಮತ್ತು ಅಷ್ಟಮಿ ದಿನದಂದು ಕೂಡ ತವರಿಗೆ ಹೋಗಬಹುದು. ಇದು ಕೂಡ ಮಂಗಳಕರವೆಂದು ಹೇಳಲಾಗುತ್ತದೆ. ತವರಿನಿಂದ ನೀವು ಅತ್ತೆ ಮನೆಗೆ 9ನೇ ದಿನ ಬರಬೇಡಿ. ತವರಿನಲ್ಲಿ ಐದು ದಿನವಾದ್ರೂ ಇರಬೇಕು ಎನ್ನುತ್ತದೆ ಶಾಸ್ತ್ರ. ತಾಯಿಯ ಮನೆಯಿಂದ ನೀವು ಹುಣ್ಣಿಮೆ ದಿನ ಅಥವಾ ಏಕಾದಶಿ ದಿನ ಅತ್ತೆ ಮನೆಗೆ ಬರಬಹುದು.  

ವಿವಾಹಿತ ಮಹಿಳೆಯರು ಇದನ್ನು ನೆನಪಿಟ್ಟುಕೊಳ್ಳಿ : 
1. ಚಂದ್ರಗ್ರಹಣ, ಸೂರ್ಯಗ್ರಹಣ ಮತ್ತು ಅಮಾವಾಸ್ಯೆಯ ದಿನದಂದು ತವರಿಗೆ ಹೋಗ್ಬೇಡಿ. ನೀವು ಈ ದಿನಗಳಲ್ಲಿ ತಾಯಿ ಮನೆಗೆ ಹೋದ್ರೆ ತಾಯಿ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ.
2. ಒಂಬತ್ತು ದಿನಗಳ ಕಾಲ ತಾಯಿಯ ಮನೆಯಲ್ಲಿ ಉಳಿದು ಒಂಬತ್ತನೇ ದಿನ ಅತ್ತೆಯ ಮನೆಗೆ ವಾಪಸ್ ಆಗ್ಬೇಡಿ.  11 ದಿನಗಳ ಕಾಲ ತವರಿನಲ್ಲಿ ಉಳಿದು 12ನೇ ದಿನ ನೀವು ಅತ್ತೆ ಮನೆಗೆ ವಾಪಸ್ ಆಗಿ. ನೀವು ಈ ನಿಯಮವನ್ನು ಪಾಲನೆ ಮಾಡಿದ್ರೆ ತವರು ಮನೆ ಹಾಗೂ ಅತ್ತೆ ಮನೆ ಎರಡೂ ಮನೆಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ನೀವು ನೋಡಬಹುದು. 3. ನೀವು ಅತ್ತೆ ಮನೆಯಿಂದ ತಾಯಿ ಮನೆ ಅಥವಾ ತಾಯಿ ಮನೆಯಿಂದ ಅತ್ತೆ ಮನೆಗೆ ಹೋಗುವ ವೇಳೆ ಗಾಜು ಒಡೆದ್ರೆ ನೀವು ಪ್ರಯಾಣವನ್ನು ಮುಂದೂಡಿ ಎನ್ನುತ್ತದೆ ಶಾಸ್ತ್ರ. ಅದೇ ದಿನ ಪ್ರಯಾಣ ಬೆಳೆಸಿದ್ರೆ ಎರಡೂ ಮನೆಯವರು ತೊಂದರೆ ಅನುಭವಿಸುತ್ತಾರೆ. 

Samudrik Shastra: ಈ ರೀತಿ ಹಣೆ ಇರುವ ಹುಡುಗಿಯರು ಪತಿಗೆ ತರ್ತಾರೆ ಅದೃಷ್ಟ!

4. ತವರಿಗೆ ಹೋಗುವ ವೇಳೆ ಸಂಗಾತಿ ಜೊತೆ ಜಗಳವಾಡಿಕೊಂಡು ಎಂದೂ ಪ್ರಯಾಣ ಬೆಳೆಸಬೇಡಿ. ಇದ್ರಿಂದ ಎರಡೂ ಮನೆಯವರು ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. 

 

Follow Us:
Download App:
  • android
  • ios