Vishwakarma Jayanti 2022: ವಿಶ್ವಕರ್ಮ ಪೂಜೆಯಂದು 5 ಮಂಗಳಕರ ಯೋಗ! ಶುಭಮುಹೂರ್ತ, ಪೂಜಾ ವಿಧಾನ ಇಲ್ಲಿದೆ..

ಜಗತ್ತಿನ ಮೊದಲ ಇಂಜಿನಿಯರ್, ಬ್ರಹ್ಮ ಪುತ್ರ ವಿಶ್ವಕರ್ಮರ ಜಯಂತಿ ಸಮೀಪಿಸಿದೆ. ಈ ದಿನದ ಶುಭ ಯೋಗ, ಮಹತ್ವ ಮತ್ತು ಪೂಜಾ ವಿಧಾನವನ್ನು ತಿಳಿಯೋಣ.

When is Vishwakarma Jayanti Note down the date auspicious time and method of worship skr

ವಿಶ್ವಕರ್ಮ ಜಯಂತಿಯನ್ನು ಸೆಪ್ಟೆಂಬರ್ 17ರಂದು ಕನ್ಯಾ ಸಂಕ್ರಾಂತಿಯ ದಿನ ಆಚರಿಸಲಾಗುತ್ತದೆ ಮತ್ತು ಈ ದಿನ ಭಗವಾನ್ ವಿಶ್ವಕರ್ಮನನ್ನು ಪೂಜಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಬ್ರಹ್ಮ ದೇವರು ಈ ಸಂಪೂರ್ಣ ಸೃಷ್ಟಿಯನ್ನು ಸೃಷ್ಟಿಸಿದನು ಮತ್ತು ವಿಶ್ವಕರ್ಮನು ಬ್ರಹ್ಮಾಂಡವನ್ನು ಸುಂದರವಾಗಿ ಅಲಂಕರಿಸಿದನು. ವಿಶ್ವಕರ್ಮರು ಪ್ರಾಚೀನ ಕಾಲದಲ್ಲಿ ದೇವಾಲಯಗಳು, ದೇವರ ಅರಮನೆಗಳು ಮತ್ತು ಆಯುಧಗಳು ಇತ್ಯಾದಿಗಳನ್ನು ನಿರ್ಮಿಸಿದ್ದರು.

ವಿಶ್ವಕರ್ಮನನ್ನು ಈ ಬ್ರಹ್ಮಾಂಡದ ಶ್ರೇಷ್ಠ ಇಂಜಿನಿಯರ್ ಎಂದು ಪರಿಗಣಿಸಲಾಗಿದೆ. ಕನ್ಯಾ ಸಂಕ್ರಾಂತಿಯ ದಿನದಂದು ವಿಶ್ವಕರ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನ ಏಳನೇ ಮಗನಾಗಿ ಜನಿಸಿದನು. ಈ ದಿನದಂದು ಜಗತ್ತಿನ ಮೊದಲ ಇಂಜನಿಯರ್ ಹುಟ್ಟುಹಬ್ಬವಾದ್ದರಿಂದ ಜನರು ತಮ್ಮ ಕಾರ್ಖಾನೆಗಳಲ್ಲಿ ಅಳವಡಿಸಲಾಗಿರುವ ಯಂತ್ರಗಳು ಮತ್ತು ವಾಹನಗಳನ್ನು ಪೂಜಿಸುತ್ತಾರೆ. ಈ ದಿನ ಪೂಜೆ ಮಾಡುವುದರಿಂದ ಯಂತ್ರಗಳು ಸರಿಯಾಗಿ ನಡೆಯುತ್ತವೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ಈ ದಿನದಂದು 5 ಮಂಗಳಕರ ಯೋಗಗಳು ಸಹ ರೂಪುಗೊಳ್ಳುತ್ತವೆ. ವಿಶ್ವಕರ್ಮ ಜಯಂತಿಯ ಶುಭ ಸಮಯ ಮತ್ತು ಯೋಗವನ್ನು ತಿಳಿಯೋಣ.

Mahalaya Amavasya 2022 ಯಾವಾಗ? ಯಾರಿಗೆ ಈ ದಿನ ಶ್ರಾದ್ಧ ಮಾಡ್ಬಹುದು?

ಶುಭ ಮುಹೂರ್ತ(Shubh Muhurt)
ಜ್ಯೋತಿಷ್ಯ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆಯ ಶುಭ ಮುಹೂರ್ತವು ಬೆಳಿಗ್ಗೆ 7:35ರಿಂದ 09:10ರವರೆಗೆ ಇರುತ್ತದೆ. ಅದರ ನಂತರ, ಮಧ್ಯಾಹ್ನದ ಶುಭ ಮುಹೂರ್ತವು ಮಧ್ಯಾಹ್ನ 1:45 ರಿಂದ 3.20ರವರೆಗೆ ಇರುತ್ತದೆ. ನಂತರ ಮೂರನೇ ಶುಭ ಮುಹೂರ್ತವು ಮಧ್ಯಾಹ್ನ 3:20ರಿಂದ ಸಂಜೆ 4:53ರವರೆಗೆ ಇರುತ್ತದೆ. ಈ ಮೂರು ಮುಹೂರ್ತಗಳಲ್ಲಿ ನೀವು ನಿಮ್ಮ ಕಾರ್ಖಾನೆ, ವಾಹನ ಮತ್ತು ಉಪಕರಣಗಳನ್ನು ಪೂಜಿಸಬಹುದು. ಭಗವಾನ್ ವಿಶ್ವಕರ್ಮ ಅವರನ್ನು ಕೂಡಾ ಪೂಜಿಸಲಾಗುತ್ತದೆ. ಏಕೆಂದರೆ ಅವರನ್ನು ವಿಶ್ವದ ಮೊದಲ ಎಂಜಿನಿಯರ್ ಎಂದು ಪರಿಗಣಿಸಲಾಗಿದೆ. ಭಗವಾನ್ ವಿಶ್ವಕರ್ಮರ ಆಶೀರ್ವಾದದಿಂದ ಯಂತ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳಿಗೆ ಯಾವುದೇ ಅನಗತ್ಯ ಖರ್ಚು ಇರುವುದಿಲ್ಲ.

ಶುಭ ಯೋಗ(Shubha Yoga)
ಪಂಚಾಂಗದ ಪ್ರಕಾರ ಈ ವರ್ಷ ವಿಶ್ವಕರ್ಮ ಪೂಜೆಯ ದಿನದಂದು 5 ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಸೆಪ್ಟೆಂಬರ್ 17 ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಮೃತ ಸಿದ್ಧಿ ಯೋಗ, ರವಿ ಯೋಗ, ಸಿದ್ಧ ಯೋಗವಿದೆ. ಸರ್ವಾರ್ಥ ಸಿದ್ಧಿ ಯೋಗವು ಬೆಳಗ್ಗೆ 06.07 ರಿಂದ ಮಧ್ಯಾಹ್ನ 12.23 ರವರೆಗೆ ಇರುತ್ತದೆ. ಅದೇ ಸಮಯದಲ್ಲಿ, ದ್ವಿಪುಷ್ಕರ ಯೋಗವು ಮಧ್ಯಾಹ್ನ 12.23 ರಿಂದ 02.16 ರವರೆಗೆ ಇರುತ್ತದೆ. ಜ್ಯೋತಿಷ್ಯದಲ್ಲಿ ಈ ಯೋಗಗಳಿಗೆ ವಿಶೇಷ ಸ್ಥಾನವಿದೆ. ಹಾಗಾಗಿ ಈ ದಿನದ ಮಹತ್ವ ಹೆಚ್ಚುತ್ತಿದೆ. 

ಇಂಥ ತಪ್ಪು ಮಾಡಿದರೆ ಪೂರ್ವಿಕರು ಸಿಟ್ಟಾಗೋದು ಗ್ಯಾರಂಟಿ!

ವಿಶ್ವಕರ್ಮ ಪೂಜಾ ವಿಧಾನ(Puja Method)
ವಿಶ್ವಕರ್ಮ ಪೂಜೆಯ ದಿನ ಬೇಗ ಸ್ನಾನ ಮಾಡಿ. ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ಕಚೇರಿ ಅಥವಾ ಅಂಗಡಿಯನ್ನು ತಲುಪಿ. ಇದರ ನಂತರ, ಟೇಬಲ್ ಮೇಲೆ ಹೊಸ ಹಳದಿ ಬಟ್ಟೆಯನ್ನು ಹರಡಿ. ಇದರ ಮೇಲೆ ವಿಶ್ವಕರ್ಮರ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿ. ಬಳಿಕ ಯಂತ್ರಗಳು, ಉಪಕರಣಗಳನ್ನು ನೀವೇ ಅಥವಾ ಅರ್ಹರಿಂದ ಪೂಜಿಸಿ. ಪೂಜೆಯ ಸಮಯದಲ್ಲಿ ಭಗವಾನ್ ವಿಶ್ವಕರ್ಮನ ಮಂತ್ರಗಳನ್ನು ಸಹ ಪಠಿಸಿ. ನಂತರ ಆರತಿಯನ್ನು ಮಾಡಿ. ನೌಕರರಿಗೆ ಭೋಜನ ಉಣಬಡಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios