ದೇವಸ್ಥಾನದ ಪಕ್ಕದಲ್ಲಿ ಮನೆ ಮಾಡುವಾಗ ನೆರಳು ಬೀಳದಂತೆ ಗಮನಿಸಬೇಕು. ದೇವಸ್ಥಾನದ ಪೂಜೆ, ಗಂಧ, ಧೂಪಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದರೆ, ರಾತ್ರಿ ದೇವರ ಸಂಚಾರದ ವೇಳೆ ಅಡ್ಡ ಬಂದರೆ ತೊಂದರೆಯಾಗಬಹುದು. ಶಿವನ ದೇವಸ್ಥಾನವು 750 ಮೀಟರ್, ವಿಷ್ಣುವಿನ ಗುಡಿ 30 ಅಡಿ, ದೇವಿ ದೇವಸ್ಥಾನ 180 ಮೀಟರ್, ಆಂಜನೇಯ ಸ್ವಾಮಿ 120 ಮೀಟರ್ ದೂರವಿರಬೇಕು. 300 ಮೀಟರ್ ದೂರವಿದ್ದರೆ ಉತ್ತಮ.

ದೇವರು ಮತ್ತು ದೇವಸ್ಥಾನಗಳು ಅಂದ್ರೆ ನಮ್ಮಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತದೆ. ಖುಷಿಯಾದರೂ ದೇವರ ಪೂಜೆ ಮಾಡು, ದುಖಃವಾದರೂ ದೇವರಿಗೆ ಪೂಜೆ ಮಾಡು ಕಷ್ಟ ಬಂದ್ರೂ ದೇವರ ಪೂಜೆ ಮಾಡು....ಒಟ್ಟಾರೆ ಜೀವನದಲ್ಲಿ ಏನೇ ಅದ್ರೂ ದೇವರು ಬೇಕೇ ಬೇಕು. ಸ್ವಂತ ಮನೆ ಮಾಡುವವರು ಖಂಡಿತಾ ಮನೆ ಸುತ್ತ ಏನ್ ಇದೆ ಏನ್ ಇಲ್ಲ ಅಂತ ನೋಡಿ ವಿಚಾರಿಸಿ ಮನೆ ಮಾಡುತ್ತಾರೆ ಆದರೆ ಬಾಡಿಗೆ ಮನೆ ಮಾಡುವವರ ಪರಿಸ್ಥಿತಿ ಹಾಗಲ್ಲ. ಹಣಕಾಸಿಗೆ ತಕ್ಕಂತೆ, ಗಾಳಿಬೆಳಕು ನೋಡಿಕೊಂಡು ಮನೆ ಮಾಡಿ ಬಿಡುತ್ತಾರೆ. ದೇವಸ್ಥಾನದ ಪಕ್ಕದಲ್ಲಿ ಮನೆ ಸಿಕ್ಕರೆ ಖುಷಿ ಪಟ್ಟು ಬಾಡಿಗೆ ಜಾಸ್ತಿ ಆದ್ರೂ ಪರ್ವಾಗಿಲ್ಲ ಎನ್ನುತ್ತಾರೆ ಆದರೆ ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಅಂದ್ರೆ ಸಮಸ್ಯೆ ಆಗುತ್ತದೆ ಅಂತಾರೆ ಹಿರಿಯರು. 

ಹೌದು! ಮನೆ ಅಕ್ಕಪಕ್ಕ ದೇವಸ್ಥಾನ ಇದ್ದರೆ ಹೆಚ್ಚಾಗಿ ಗಮನಿಸುವುದು ನೆರಳು ಬೀಳಬಾರದು. ಗುಡಿಯ ನೆರಳು ಮನೆ ಮೇಲೆ ಬೀಳಬಾರದು, ನಿಮ್ಮ ಮನೆಯ ನೆರಳು ಗುಡಿಯ ಮೇಲೆ ಬೀಳಬಾರದು. ಇಷ್ಟು ಗಮನಸಲ್ಲಿ ಇಟ್ಟುಕೊಂಡರೆ ಸಾಕಾ? ಪ್ರತಿಯೊಬ್ಬರು ಈ ವಿಚಾರವನ್ನು ಒಂದೊಂದು ರೀತಿಯಲ್ಲಿ ಕಾಣುತ್ತಾರೆ. ದೇವಸ್ಥಾನದಲ್ಲಿ ಸದಾ ಪೂಜೆ ಪುನಸ್ಕಾರಗಳು ನಡೆಯುತ್ತಿರುವ ಕಾರಣ ಮನೆಗೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಅಂತಾರೆ. ದೇವಸ್ಥಾನದಲ್ಲಿ ಪೂಜೆ ಮಾಡುವಾ ಗಂಧ, ಹೂವು, ಧೂಪ ದ್ರವ್ಯಗಳ ಪರಿಮಗಳಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಅಂತಾರೆ. ಇಷ್ಟೆಲ್ಲಾ ಪಾಸಿಟಿವ್ ಎನರ್ಜಿ ಇದ್ದರೆ ಖಂಡಿತಾ ಒಳ್ಳೆಯ ಆರೋಗ್ಯ, ನೆಮ್ಮದಿ ಮತ್ತು ಹಣ ಇರುತ್ತದೆ. ಹಾಗಿದ್ರೆ ಸಮಸ್ಯೆ ಏನು?

ಕನಸಿನಲ್ಲಿ ರಾಧಾ ಕೃಷ್ಣ ಕಂಡರೆ ನಿಮ್ಮ ಬಾಳು ಬಂಗಾರ; ಈ ವಿಚಾರಗಳ ಬಗ್ಗೆ ಗಮನವಿರಲಿ!

ಮನೆಯಲ್ಲಿ ತುಂಬಾ ದೊಡ್ಡವರಿದ್ದರೆ ಈ ಮಾತುಗಳನ್ನು ಕೇಳಿರುತ್ತೀರಿ. ರಾತ್ರಿ ಹೊತ್ತು ದೇವರ ಸಂಚಾರ ನಡೆಯುತ್ತದೆ ಎಂದು. ಗುಡಿಯ ಸುತ್ತ ದೇವರು ತಮ್ಮ ವಾಹನದ ಜೊತೆ ಸಂಚಾರ ಮಾಡುತ್ತದೆ ಆಗ ಸಮಯದಲ್ಲಿ ಗೆಜ್ಜೆ ಸದ್ದು, ಹೂವಿನ ಪರಿಮಗಳ ಅಥವಾ ಯಾರೂ ಸಾಗುತ್ತಿದ್ದಾರೆ ಅನ್ನೋ ಭಾವನೆ ಬಂದರೆ ತಿರುಗಿ ನೋಡಬಾರದು ಅಥವಾ ಅಡ್ಡ ಹೋಗಬಾರದು ಎಂದು. ಹೀಗೆ ಮಾಡಿದರೆ ದೃಷ್ಟಿ ಕಳೆದುಕೊಳ್ಳುವ ಅಥವಾ ಮಾತು ಬಾರದ ಪರಿಸ್ಥಿತಿ ಎದುರಾಗುತ್ತದೆ ಎನ್ನಲಾಗಿದೆ. ಶಿವನ ದೇವಸ್ಥಾನ ಸುಮಾರು 750 ಮೀಟರ್‌ ಒಳಗೆ ನಿಮ್ಮ ಮನೆ ಇದ್ದರೆ ಸಮಸ್ಯೆ ಬರುತ್ತದೆ, ವಿಷ್ಣುವಿನ ಗುಡಿ 30 ಅಡಿ ದೂರದಲ್ಲಿ ಇರಬೇಕು, ದೇವಿ ದೇವಸ್ಥಾನಗಳು 180 ಮೀಟರ್ ದೂರದಲ್ಲಿ ಇರಬೇಕು, ಆಂಜನೇಯ ಸ್ವಾಮಿ 120 ಮೀಟರ್ ದೂರವಿರಬೇಕು. ಒಳ್ಳೆಯ ಸಲಹೆ ಅಂದ್ರೆ ನಿಮ್ಮ ಮನೆಯಿಂದ 300 ಮೀಟರ್‌ ದೂರದಲ್ಲಿ ಮನೆಯಿಂದ್ದರೆ ಯಾವ ಸಮಸ್ಯೆ ಎದುರಾಗುವುದಿಲ್ಲ. 

ತಲೆ ಬಾಚಿದ ಕೂದಲನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಬಿಡಬೇಡಿ; ಮಾಟ ಮಂತ್ರ ಮಾಡುವವರಿಂದ ಎಚ್ಚರ!