MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹುಸ್ಕೂರು ಮದ್ದೂರಮ್ಮ ಜಾತ್ರೆ ಕುರ್ಜುಗಳ ಎತ್ತರಕ್ಕೆ ಬಿದ್ದ ಕಡಿವಾಣ; ಗಲಿವರನ ಬದಲು ಛೋಟಾ ಭೀಮ್ ನೋಡಿದಂಗಾಯ್ತೆಂದ ಜನ!

ಹುಸ್ಕೂರು ಮದ್ದೂರಮ್ಮ ಜಾತ್ರೆ ಕುರ್ಜುಗಳ ಎತ್ತರಕ್ಕೆ ಬಿದ್ದ ಕಡಿವಾಣ; ಗಲಿವರನ ಬದಲು ಛೋಟಾ ಭೀಮ್ ನೋಡಿದಂಗಾಯ್ತೆಂದ ಜನ!

ಆನೇಕಲ್‌ನ ಐತಿಹಾಸಿಕ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಕಳೆದ ವರ್ಷ 150 ಅಡಿ ಎತ್ತರದ ಕುರ್ಜು ನಿರ್ಮಿಸಿದಾಗ ನಡೆದ ದುರಂತದ ಹಿನ್ನೆಲೆಯಲ್ಲಿ, ಕುರ್ಜುಗಳ ಎತ್ತರವನ್ನು 80 ಅಡಿಗೆ ಸೀಮಿತಗೊಳಿಸಲಾಗಿತ್ತು. ಆದರೆ, ಜನರು ಅಜಾನುಬಾಹು ಗಲಿವರನನ್ನು ನೋಡುತ್ತಿದ್ದ ನಮಗೆ ಛೋಟಾ ಭೀಮ್ ನೊಡಿದಂಗಾಯ್ತು ಎಂದರು.

2 Min read
Author : Sathish Kumar KH
Published : Mar 15 2026, 10:50 AM IST
Share this Photo Gallery
  • FB
  • TW
  • Linkdin
  • Whatsapp
15
ಮದ್ದೂರಮ್ಮ ಜಾತ್ರೆ ಕುರ್ಜುಗಳ ಎತ್ತರಕ್ಕೆ ಮಿತಿ
Image Credit : Asianet News

ಮದ್ದೂರಮ್ಮ ಜಾತ್ರೆ ಕುರ್ಜುಗಳ ಎತ್ತರಕ್ಕೆ ಮಿತಿ

ಬೆಂಗಳೂರು ಗ್ರಾಮಾಂತರ (ಮಾ.15): ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಹಾಗೂ ಧರ್ಮರಾಯ ಸ್ವಾಮಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಈ ಭಾಗದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ಗಗನಚುಂಬಿ 'ಕುರ್ಜು'ಗಳ (Kurju) ಮೆರವಣಿಗೆಯು ಸಾವಿರಾರು ಭಕ್ತಾದಿಗಳ ಕಣ್ಮನ ಸೆಳೆಯಿತು. ಕಳೆದ ಬಾರಿಯ ಕಹಿ ಘಟನೆಯ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿಯಮಗಳ ನಡುವೆಯೇ ಜಾತ್ರೆ ಯಶಸ್ವಿಯಾಗಿ ನೆರವೇರಿತು.

25
ಕುರ್ಜುಗಳ ಕಲರವ
Image Credit : Asianet News

ಕುರ್ಜುಗಳ ಕಲರವ

ಹುಸ್ಕೂರು ಜಾತ್ರೆಯ ಪ್ರಮುಖ ಆಕರ್ಷಣೆಯೇ ಕುರ್ಜುಗಳು. ಸುಂದರವಾಗಿ ಅಲಂಕರಿಸಲ್ಪಟ್ಟ ಈ ಎತ್ತರದ ಗೋಪುರ ಮಾದರಿಯ ಕುರ್ಜುಗಳನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನಸಾಗರವೇ ಹರಿದುಬಂದಿತ್ತು. ಈ ಬಾರಿ ಒಟ್ಟು 17 ಕುರ್ಜುಗಳನ್ನು ವಿವಿಧ ಗ್ರಾಮಗಳ ಜನರು ಶ್ರದ್ಧಾ ಭಕ್ತಿಯಿಂದ ನಿರ್ಮಿಸಿ ಮದ್ದೂರಮ್ಮ ದೇವಿಯ ಸನ್ನಿಧಿಗೆ ತಂದಿದ್ದರು. ಇದರಲ್ಲಿ ದೊಡ್ಡನಾಗಮಂಗಲ ಗ್ರಾಮದ ಕುರ್ಜು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.

Related Articles

Related image1
ಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: 'ಜಸ್ಟೀಸ್ ಫಾರ್ ಸೌಜನ್ಯ' ಫಲಕ ಪ್ರದರ್ಶನ ಕಾರಣವೇ?
Related image2
Viral Video: ನೆಲಕ್ಕುರುಳಿದ ಬೆಂಗಳೂರು ಬಳಿಯ ಹುಸ್ಕೂರು ಮದ್ದೂರಮ್ಮ ಜಾತ್ರೆಯ 120 ಅಡಿ ತೇರು
35
ಸುರಕ್ಷತೆಗೆ ಆದ್ಯತೆ - 80 ಅಡಿಗೆ ಮಿತಿ
Image Credit : Asianet News

ಸುರಕ್ಷತೆಗೆ ಆದ್ಯತೆ - 80 ಅಡಿಗೆ ಮಿತಿ

ಕಳೆದ ವರ್ಷ ಜಾತ್ರೆಯ ವೇಳೆ 150 ಅಡಿಗೂ ಅಧಿಕ ಎತ್ತರದ ಕುರ್ಜುಗಳನ್ನು ನಿರ್ಮಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಎರಡು ಕುರ್ಜುಗಳು ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಕಾರಣ ಮೂವರು ಪ್ರಾಣ ಕಳೆದುಕೊಂಡಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಈ ದುರಂತದಿಂದ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಈ ಬಾರಿ ಭಕ್ತರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ. ಯಾವುದೇ ಕಾರಣಕ್ಕೂ ಕುರ್ಜುಗಳ ಎತ್ತರ 80 ಅಡಿ ಮೀರಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು. ಅದರಂತೆ ಈ ಬಾರಿ ಎಲ್ಲಾ ಕುರ್ಜುಗಳು 80 ಅಡಿಗೆ ಸೀಮಿತವಾಗಿದ್ದು, ಯಾವುದೇ ಅಪಾಯವಿಲ್ಲದಂತೆ ಶಾಂತಿಯುತವಾಗಿ ಸಾಗಿದವು.

45
ಆನೆ ಮತ್ತು ಒಂಟೆಗಳ ಸಾರಥ್ಯ
Image Credit : Asianet News

ಆನೆ ಮತ್ತು ಒಂಟೆಗಳ ಸಾರಥ್ಯ

ಸಾಮಾನ್ಯವಾಗಿ ಕುರ್ಜುಗಳನ್ನು ಎತ್ತುಗಳ ಸಹಾಯದಿಂದ ಎಳೆಯಲಾಗುತ್ತಿತ್ತು. ಆದರೆ ಈ ಬಾರಿ ಮೆರವಣಿಗೆಗೆ ಹೊಸ ಮೆರುಗು ನೀಡುವ ಸಲುವಾಗಿ ಆನೆ ಮತ್ತು ಒಂಟೆಗಳನ್ನು ಬಳಸಲಾಗಿತ್ತು. ಆನೆ ಮತ್ತು ಒಂಟೆಗಳು ಗಂಭೀರವಾಗಿ ಹೆಜ್ಜೆ ಹಾಕುತ್ತಾ ಭವ್ಯ ಕುರ್ಜುಗಳನ್ನು ಎಳೆಯುತ್ತಿರುವ ದೃಶ್ಯ ನೋಡುಗರಿಗೆ ರೋಮಾಂಚನ ನೀಡಿತು.

55
ಮದ್ಯ ಮಾರಾಟ ನಿಷೇಧ
Image Credit : Asianet News

ಮದ್ಯ ಮಾರಾಟ ನಿಷೇಧ

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರು ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದರು. ಪರಪ್ಪನ ಅಗ್ರಹಾರ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 14ರ ಬೆಳಗ್ಗೆ 6 ಗಂಟೆಯಿಂದ ಮಾರ್ಚ್ 15ರ ರಾತ್ರಿ 11 ಗಂಟೆಯವರೆಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಸ್ಟಾರ್ ಹೋಟೆಲ್ ಮತ್ತು ಕ್ಲಬ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಹಬ್ಬ
ಬೆಂಗಳೂರು ಗ್ರಾಮಾಂತರ
Latest Videos
Recommended Stories
Recommended image1
ನವವಿವಾಹಿತೆ ಶೃತಿ ಅನುಮಾನಾಸ್ಪದ ಸಾವು, ಗಂಡ ಪವನ್ ಕಲ್ಯಾಣ್ ಅರೆಸ್ಟ್: ಪತಿಯಿಂದಲೇ ಕೊಲೆ ಮಾಡಿ ಆತ್ಮ*ಹತ್ಯೆ ಆರೋಪ!
Recommended image2
ಯುದ್ಧ ನಡೆತಿರೋದು ಇರಾನ್‌ನಲ್ಲಿ, ಬರೆ ಪಾಕಿಸ್ತಾನಕ್ಕೆ, ಸಚಿವರು, ಸರ್ಕಾರಿ ನೌಕರರ 30% ಸಂಬಳ ಕಟ್!
Recommended image3
ಭೀಕರ ಅಪಘಾತದಲ್ಲಿ ಮೂವರು ಸಬ್ ಇನ್‌ಸ್ಪೆಕ್ಟರ್‌ ಸಾವು, ಇಬ್ಬರು ಎಸ್‌ಐಗಳಿಗೆ ಗಂಭೀರ ಗಾಯ
Related Stories
Recommended image1
ಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: 'ಜಸ್ಟೀಸ್ ಫಾರ್ ಸೌಜನ್ಯ' ಫಲಕ ಪ್ರದರ್ಶನ ಕಾರಣವೇ?
Recommended image2
Viral Video: ನೆಲಕ್ಕುರುಳಿದ ಬೆಂಗಳೂರು ಬಳಿಯ ಹುಸ್ಕೂರು ಮದ್ದೂರಮ್ಮ ಜಾತ್ರೆಯ 120 ಅಡಿ ತೇರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved