Asianet Suvarna News Asianet Suvarna News

Mirror of Mayabazar: ಶ್ರೀಕೃಷ್ಣನಿಗೆ ಕನ್ನಡಿಯಲ್ಲಿ ಕಂಡದ್ದೇನು?

ಮಹಾಭಾರತದಲ್ಲಿ ನೀವು ತಿಳಿಯದ ನಿಗೂಢ ಕತೆಗಳು ಎಷ್ಟೋ ಇವೆ. ಅಂಥದೊಂದು ಕತೆ ಇಲ್ಲಿದೆ. ಶ್ರೀಕೃಷ್ಣನ ಮನದಲ್ಲಿ ನಿಜಕ್ಕೂ ಯಾರು ಇದ್ದರು ಎಂಬುದು ನಿಮಗೆ ಗೊತ್ತೆ?

 

 

What Sri Krishna saw in magic mirror gifted by Yudhishtira in Mahabharata
Author
Bengaluru, First Published Jan 21, 2022, 6:27 PM IST

ಪಾಂಡವರು (Pandavas) ದೊಡ್ಡದಾಗಿ ರಾಜಸೂಯ ಯಾಗವನ್ನು ಮಾಡುತ್ತಾರೆ. ಸುತ್ತಮುತ್ತಲಿನ ರಾಜರನ್ನೆಲ್ಲಾ ಗೆದ್ದು, ಅವರಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡುತ್ತಾರೆ. ಹೀಗೆ ಅವರಿಗೆ ದೇಶವಿದೇಶಗಳಿಂದ, ಸ್ವರ್ಗ ಪಾತಾಳಗಳಿಂದಲೂ ಕಾಣಿಕೆಗಳು, (Gifts) ಉಡುಗೊರೆಗಳು ಹರಿದುಬರುತ್ತವೆ. ಇವುಗಳಲ್ಲಿ ಒಂದು ಕನ್ನಡಿಯೂ (Mirror) ಇರುತ್ತದೆ. ಈ ಕನ್ನಡಿಯನ್ನು ಮುಂದೆ ಧರ್ಮರಾಯ (Dharmaraya), ಶ್ರೀಕೃಷ್ಣನಿಗೆ (Sri Krishna) ಉಡುಗೊರೆಯಾಗಿ ಕೊಡುತ್ತಾನೆ. ಕೊಡುವಾಗ,' ಕೃಷ್ಣ, ಈ ಕನ್ನಡಿ ಅಪಾಯಕಾರಿಯಾದುದು. ಇದನ್ನು ಹದವರಿತು ಬಳಸಬೇಕು. ಇಲ್ಲವಾದರೆ ಸಂಸಾರಗಳೇ ಒಡೆದುಹೋಗಬಹುದು,'' ಎಂದು ನಗುತ್ತಾ ಕೊಡುತ್ತಾನೆ. ಶ್ರೀಕೃಷ್ಣ ಅದನ್ನು ತೆಗೆದುಕೊಂಡು ದ್ವಾರಕೆಗೆ ಪ್ರಯಾಣಿಸುತ್ತಾನೆ.

ದ್ವಾರಕೆಯಲ್ಲಿ (Dwaraka) ಈ ಕನ್ನಡಿಯನ್ನು ತೆರೆದು ಇಟ್ಟು ಪ್ರದರ್ಶಿಸಲಾಗುತ್ತದೆ. ಈ ಕನ್ನಡಿಗೊಂದು ವಿಶೇಷತೆ ಇದೆ. ಅದೇನು ಎಂದರೆ, ಈ ಕನ್ನಡಿಯ ಮುಂದೆ ಯಾರಾದರೂ ನಿಂತರೆ, ಅವರು ಕಾಣಿಸುವುದಲ್ಲ, ಬದಲಾಗಿ ಅವರ ಮನಸ್ಸಿನಲ್ಲಿ ಯಾರು ಇರುತ್ತಾರೋ, ಯಾರನ್ನು ಅವರು ಅತ್ಯಂತ ಹೆಚ್ಚು ಪ್ರೀತಿಸುತ್ತಾರೋ- ಅವರೇ ಕಾಣಿಸುತ್ತಾರೆ. ಈ ವಿಷಯ ಗೊತ್ತಾದ ಬಳಿಕ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲು ಜನ ಸಾಲುಗಟ್ಟುತ್ತಾರೆ. ಎಲ್ಲರಿಗೂ ಸತ್ಯದರ್ಶನವಾಗುತ್ತದೆ. ಎಲ್ಲರೂ ತಾವು ತುಂಬಾ ಪ್ರೀತಿಸುತ್ತೇವೆ (Love) ಎಂದು ಕೊಂಡವರು ಕಾಣಬಹುದು ಎಂದುಕೊಳ್ಳುತ್ತಾರೆ. ಆದರೆ ಇನ್ಯಾರೋ ಕಾಣುತ್ತಾರೆ.

2022ರಲ್ಲಿ ಮಕರ ರಾಶಿಯವರ Job, Love & Future ಹೇಗಿರಲಿದೆ?

ದ್ವಾರಕೆಯಲ್ಲೂ ಹಾಗೇ ಆಗುತ್ತದೆ. ಬಲರಾಮ ಮೊದಲು ನೋಡುತ್ತಾನೆ. ಆತನ ಹೆಂಡತಿ ರೇವತಿ, ಈಗ ತನ್ನ ಮುಖ ಕಾಣಬಹುದು ಎಂದು ಕೊಳ್ಳುತ್ತಾಳೆ. ಆದರೆ ಕಾಣುವುದಿಲ್ಲ. ಬದಲಾಗಿ ಕೌರವ (Kourava) ಕಾಣುತ್ತಾನೆ. ದುರ್ಯೋಧನನು ಬಲರಾಮನ ಮೆಚ್ಚಿನ ಶಿಷ್ಯನಾಗಿದ್ದ ಎಂಬುದು ಇಲ್ಲಿ ನೆನಪಿಡಬೇಕು. ಹಾಗೇ ಸತ್ಯಭಾಮೆಯು ನೋಡುತ್ತಾಳೆ. ಆಕೆಗೆ ಕೃಷ್ಣನ ಮುಖ ಕಾಣಬಹುದು ಎಂದು ಎಲ್ಲರೂ ಅಂದುಕೊಂಡರೆ, ಹಾಗಾಗುವುದಿಲ್ಲ. ಅಲ್ಲಿ ಧನಕನಕಗಳ ರಾಶೀಯೇ ಕಾಣಿಸುತ್ತದೆ. ಅಂದರೆ ಆಕೆಗೆ ಕೃಷ್ಣನಿಗಿಂತಲೂ ಹೊನ್ನ ರಾಶಿಯೇ ಹೆಚ್ಚು ಪ್ರಿಯವಾಗಿತ್ತು. ಹೀಗೇ ಎಲ್ಲರೂ ತಮ್ಮ ಮುಖ ನೋಡಿಕೊಳ್ಳುತ್ತಾರೆ. ಅವರ ನಿರೀಕ್ಷೆಗಳೆಲ್ಲ ತಲೆಕೆಳಗಾಗುತ್ತವೆ. ಈಗ ಎಲ್ಲರೂ ಶ್ರೀಕೃಷ್ಣನನ್ನು ನಿನ್ನ ಮುಖ ನೋಡಿಕೋ ಎಂದು ಒತ್ತಾಯಿಸುತ್ತಾರೆ. ಅಲ್ಲಿ ಅರ್ಜುನನ ಮುಖ ಕಾಣಬಹದು ಎಂದು ಭಾವಿಸುತ್ತಾರೆ. ಯಾಕೆಂದರೆ ಕೃಷ್ಣನಿಗೆ ಅತ್ಯಂತ ಪ್ರೀತಿಯ ಭಾವ ಅರ್ಜುನ (Arjuna).

Vastu Tips: ಕನ್ನಡಿಯಿಂದ ಮನೆಯ ಆಸ್ತಿ ಆರೋಗ್ಯ ಹೆಚ್ಚಿಸುವುದು ಹೀಗೆ..

ಶ್ರೀಕೃಷ್ಣ ಕನ್ನಡಿ ತೆರೆದು ಮುಖ ನೋಡುತ್ತಾನೆ. ಏನಾಶ್ಚರ್ಯ! ಅಲ್ಲಿ ಕೃಷ್ಣನೂ ಕಾಣಿಸುವುದಿಲ್ಲ, ಅರ್ಜುನನೂ ಕಾಣಿಸುವುದಿಲ್ಲ. ಬದಲಾಗಿ, ಶಕುನಿ (Shakuni) ಕಾಣುತ್ತಾನೆ! ಅರೆ, ಇದೇನಾಶ್ಚರ್ಯ ಎಂದು ಎಲ್ಲರೂ ಕೇಳುತ್ತಾರೆ. ಕೃಷ್ಣ ವಿವರಿಸಿ ಹೇಳುತ್ತಾನೆ- ಹೇಗೆ ಸಜ್ಜನರ ಪರವಾಗಿ ನಾನು ತಂತ್ರಗಾರನೋ ಹಾಗೇ ದುರ್ಜನರ ಪರವಾಗಿ ಅವನು ತಂತ್ರಗಾರನು. ನಮ್ಮಿಬ್ಬರು ಉದ್ದೇಶವೂ ಒಂದೇ ಆಗಿದೆ. ಏನೆಂದರೆ, ಈ ಭೂಮಿಯ ಮೇಲೆ ಒಂದು ಘನಘೋರ ಯುದ್ಧವಾಗಿ, ದುರ್ಜನರೆಲ್ಲ ಅಳಿಸಿಹೋಗಿಬಿಡಬೇಕು. ನನ್ನ ಈ ಲೋಕಕಲ್ಯಾಣದ ಉದ್ದೇಶಕ್ಕೆ ಶಕುನಿ ತನ್ನ ಮೋಸ ವಂಚನೆಗಳ ಮೂಲಕ ಸಾಥ್‌ ಕೊಡುತ್ತಿದ್ದಾನೆ. ಆದ್ದರಿಂದ ಅವನು ನನಗೆ ಅತ್ಯಂತ ಪ್ರಿಯನು. ಇದನ್ನು ಕೇಳಿ ದ್ವಾರಕೆಯ ಜನರೆಲ್ಲ ಮೂಕವಿಸ್ಮಿತರಾಗುತ್ತಾರೆ.

ಇದಕ್ಕೂ ಮುನ್ನ ಹಸ್ತಿನಾಪುರ (Hasthinapura) ದಲ್ಲೂ ಈ ಕನ್ನಡಿ ತನ್ನ ಮಾಯಾಬಜಾರನ್ನು ತೆರೆದು ತೋರಿಸಿತ್ತು. ಅಲ್ಲಿ ಧರ್ಮರಾಜನಿಗೆ ಖಾಲಿ ಕನ್ನಡಿ ಕಾಣಿಸಿತ್ತು. ಅವನು ಧರ್ಮಪರ, ಅವನು ಯಾರನ್ನೂ ಪ್ರೀತಿಸಲೂ ಇಲ್ಲ, ದ್ವೇಷಿಸಲೂ ಇಲ್ಲ. ದ್ರೌಪದಿಗೆ ಭೀಮ ಕಾಣಿಸಿದ್ದ. ಸಹದೇವನಿಗೆ ಸ್ವತಃ ಆತನೇ ಕಾಣಿಸಿದ್ದ. ಯಾಕೆಂದರೆ ಅವನು ತನ್ನ ದೇಹವನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುತ್ತಿದ್ದ.

Children And Zodiacs: ರಾಶಿ ಪ್ರಕಾರ ನಿಮ್ಮ ಮಗುವಿನ ಅಗತ್ಯಗಳೇನು ತಿಳಿಯಿರಿ

 

Follow Us:
Download App:
  • android
  • ios