Asianet Suvarna News Asianet Suvarna News

2022ರಲ್ಲಿ ಮಕರ ರಾಶಿಯವರ Job, Love & Future ಹೇಗಿರಲಿದೆ?

ಮಕರ ರಾಶಿಯವರು ಕ್ರಿಯಾಶೀಲ ವ್ಯಕ್ತಿತ್ವದವರು. ಹೊಸ ಹೊಸ ಅನುಭವಗಳನ್ನು ಪಡೆಯುವ ಇವರು ಮಹತ್ವಾಕಾಂಕ್ಷಿಗಳು. ದೃಢನಿಶ್ಚಯವನ್ನು ಹೊಂದಿರುವ ಇವರುಗಳು ತಮ್ಮ ಗುರಿ ಸಾಧನೆಯನ್ನು ಹೊರತುಪಡಿಸಿ ಬೇರೆಯದ್ದರ ಬಗ್ಗೆ ತಲೆ ಹಾಕುವುದಿಲ್ಲ. ಗುರಿ ಸಾಧನೆಗೆ ಕಠಿಣ ಪರಿಶ್ರಮವನ್ನು ಹಾಕುವ ಗುಣ ಇವರದ್ದಾಗಿರುತ್ತದೆ. ಈ ರಾಶಿಯವರ ವಾರ್ಷಿಕ ಭವಿಷ್ಯವ ತಿಳಿಯೋಣ.

Know the future of Capricorn in 2022
Author
Bangalore, First Published Jan 20, 2022, 5:10 PM IST

ಹನ್ನೆರೆಡು ರಾಶಿಗಳಲ್ಲಿ ಮಕರ ರಾಶಿಯೂ (Capricorn) ಸಹ ಒಂದು. ಈ ರಾಶಿಯಲ್ಲಿ ಜನಿಸಿದವರು ವಿಶೇಷ ವ್ಯಕ್ತಿತ್ವವನ್ನು (Special Character) ಹೊಂದಿರುತ್ತಾರೆ. ಪ್ರಮುಖವಾಗಿ ನಾಯಕತ್ವ ಗುಣವನ್ನು (Leadership Quality) ಹೊಂದಿರುವ ಇವರ ಈ 2022ರ ವಾರ್ಷಿಕ ಭವಿಷ್ಯದ (Yearly Prediction) ಬಗ್ಗೆ ನೋಡೋಣ. 

ಈ ರಾಶಿಯವರು ಹುಟ್ಟಿನಿಂದಲೇ (Birth) ಚಾಣಾಕ್ಷರಾಗಿದ್ದು, ನಿಷ್ಠಾವಂತ (Loyal) ವ್ಯಕ್ತಿತ್ವದವರಾಗಿರುತ್ತಾರೆ (Personality). ಹಾಗಾಗಿ ಇವರು ಸಂಗಾತಿಯಾಗಿ (Partner), ಸ್ನೇಹಿತ/ಸ್ನೇಹಿತೆಯಾಗಿ (Friend) ಅಥವಾ ಸಹವರ್ತಿಯಾಗಿದ್ದರೆ ಬಹಳ ಒಳ್ಳೆಯದು. ಇಂಥವರಿಗೆ ಮೋಸ (Cheating) ಮಾಡುವ ಗುಣ ಇರುವುದಿಲ್ಲ. ಅಲ್ಲದೆ, ಇವರಿಗೆ ತಮಗೆ ಏನು ಬೇಕು ಎಂಬ ಬಗ್ಗೆ ಸ್ಪಷ್ಟ ಅರಿವು ಇರುತ್ತದೆ. 

ಮಕರ ರಾಶಿಯವರಿಗೆ ಶನಿ ಗ್ರಹದ ಪ್ರಭಾವದಿಂದಾಗಿ 2022ರ ಆರಂಭದ ದಿನಗಳು ಹೆಚ್ಚು ಶುಭವಾಗಿರಲಿದೆ. ಅರ್ಧಕ್ಕೆ ಬಿಟ್ಟ ಕೆಲಸಗಳೂ (Work) ಎಷ್ಟೇ ಪ್ರಯತ್ನಿಸಿದರೂ ಯಶಸ್ಸು (Success) ಸಿಗದೇ ಹಾಗೇ ಉಳಿದುಬಿಟ್ಟಿರುತ್ತದೆ. ಇಂಥ ಕಾರ್ಯಗಳಿಗೆ ಪುನಃ ಕೈಹಾಕಿದರೆ ಯಶಸ್ಸು ನಿಮ್ಮದಾಗಲಿದೆ. ಕೆಲಸ ಕಾರ್ಯಗಳ ಮೇಲೆ ರಾಹುವಿನ ಪ್ರಭಾವ ಇರುವುದರಿಂದ ನೀವು ಎಚ್ಚರಿಕೆಯಿಂದ (Careful) ಕಾರ್ಯನಿರ್ವಹಣೆ ಮಾಡುವುದು ಉತ್ತಮ. ವಿಶೇಷವಾಗಿ ಏಪ್ರಿಲ್‌ನಿಂದ ಜುಲೈವರೆಗೆ ಛಾಯಾಗ್ರಹವಾದ (Shadow planet) ಶನಿಗ್ರಹವು (Saturn) ನಿಮ್ಮ ರಾಶಿಗೆ ಹೆಚ್ಚಿನ ಪ್ರಭಾವ ಬೀರುವುದರಿಂದ ಯಾವುದಾದರೂ ಮುಖ್ಯ ಕೆಲಸಗಳಿಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು. ಇವು ಕೆಲವೊಮ್ಮೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಪ್ರಚೋದಿಸಬಹುದು. ತಾಳ್ಮೆಯೇ ನಿಮಗೆ ಒಳ್ಳೆಯ ಮಂತ್ರವಾಗಿದ್ದು, ತಾಳ್ಮೆವಹಿಸಿದರೆ ವರ್ಷವಿಡಿ ಸುಖ ಜೀವನ ನಿಮ್ಮದಾಗಲಿದೆ. ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸುವಾಗ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು ನಿಮ್ಮದೇ. 

ಇದನ್ನು ಓದಿ : Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!

ಪ್ರೀತಿಯ ಜೀವನ? (Love Life)
ಪ್ರೀತಿಯ ವಿಷಯದಲ್ಲಿ ವರ್ಷದ ಮೊದಲ ತ್ರೈಮಾಸಿಕದಲ್ಲಿ (Quarter) ಜಾಗರೂಕರಾಗಿರಬೇಕು. ಈ ವರ್ಷದ ಪ್ರಾರಂಭವು ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಅಡೆತಡೆಗಳನ್ನು ತರಬಹುದು. ಹೀಗಾಗಿ ಸಂಗಾತಿಯೊಂದಿಗೆ (Partner) ಯಾವುದೇ ಮುಚ್ಚುಮರೆಯಿಲ್ಲದೆ ಇರುವುದು ಉತ್ತಮ. ಮಾತನಾಡುವಾಗಲೂ ಎಚ್ಚರಿಕೆ ವಹಿಸಿ, ಆಲೋಚಿಸಿ ಮಾತನಾಡಿದರೆ ಒಳಿತು. ಬಾಯಿ ತಪ್ಪಿ ಆಡುವ ಕೆಲವು ಮಾತುಗಳು ಸಂಗಾತಿಯ ನೋವಿಗೆ ಕಾರಣವಾಗಿ ಪ್ರೀತಿಗೆ ಕುತ್ತು ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇನ್ನು ಮದುವೆಯಾಗಬಯಸಿದ್ದರೆ ಮೇ 1 (May) ರಿಂದ ಜೂನ್ 25ರ ನಡುವೆ ಪ್ಲಾನ್ ಮಾಡಿಕೊಳ್ಳುವುದು ಉತ್ತಮ. 

ಆರ್ಥಿಕ ಪ್ರಭಾವ ಹೇಗೆ? (Economy)
ಸಾಮಾನ್ಯವಾಗಿ ಮಕರ ರಾಶಿಯವರಿಗೆ ಆರ್ಥಿಕ ಅಡಚಣೆಗಳು ಎದುರಾಗುತ್ತಲೇ ಇರುತ್ತವೆ. ಆರ್ಥಿಕ ಏಳ್ಗೆ ಗಳಿಸಲು ಅವರು ಬಹಳ ಶ್ರಮ ಹಾಕುತ್ತಾರೆ. ಆದರೆ, ಈ 2022 ಅವರಿಗೆ ಒಳ್ಳೆಯದನ್ನುಂಟು ಮಾಡಲಿದೆ. ಈ ವರ್ಷದ ಪ್ರಾರಂಭದಲ್ಲಿ ಹೆಚ್ಚಿನ ಹಣ ಖರ್ಚಾದರೂ ಏಪ್ರಿಲ್‌ನಿಂದ ಜೂನ್‌ (April to June) ತಿಂಗಳಿನ ವರೆಗೆ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ, ನಿಮ್ಮ ಖರ್ಚು – ವೆಚ್ಚಗಳ ಮೇಲೆ ನಿಗಾವಹಿಸಿ, ಬುದ್ಧಿವಂತಿಕೆಯಿಂದ (Wisdom) ಖರ್ಚು ಮಾಡಿ. 

ಜಾಬ್ ಬದಲಾವಣೆಗೆ ಸಕಾಲ (Job)
ಮಕರ ರಾಶಿಯವರಿಗೆ ಹುಟ್ಟಿನಿಂದಲೇ ಶ್ರದ್ಧೆ, ಕಠಿಣ ಪರಿಶ್ರಮ ಮತ್ತು ನಾಯಕತ್ವದ ಗುಣಗಳು ಬಂದಿರುವುದರಿಂದ ವೃತ್ತಿಜೀವನವು ಉತ್ತಮವಾಗಿಯೇ ಇರುತ್ತದೆ. ವೃತ್ತಿ (Career) ಕ್ಷೇತ್ರದಲ್ಲಿ ಇವರ ಪರಿಶ್ರಮದ ಕೆಲಸ ಏಳ್ಗೆಯನ್ನು ತರಲಿದೆ. ಕೃಷಿ ವಲಯದ (Agricultural Sector)  ಉದ್ಯೋಗಿಗಳಿಗೆ ಸ್ವಲ್ಪ ಅಡೆತಡೆಗಳು ಇರುವ ಸಾಧ್ಯತೆ ಇದ್ದು, ಪ್ರತಿಸ್ಪರ್ಧಿಗಳ ಬಗ್ಗೆ ಜಾಗರೂಕರಾಗಿರುವುದು ಉತ್ತಮ. ವೃತ್ತಿಜೀವನದಲ್ಲಿ ಬದಲಾವಣೆ ಬಯಸಿದ್ದರೆ ಈ ವರ್ಷ ಅದಕ್ಕೆ ಬಲು ಪ್ರಶಸ್ತವಾಗಿದೆ. ಆದರೆ, ಸಂಕಲ್ಪ ಮಾಡಿ ಹೆಜ್ಜೆ ಇಡಬೇಕಿದೆ.

ಇದನ್ನು ಓದಿ: Numerology Prediction: ಪಾದಾಂಕ ಮೂರು, ಎದುರಿಸಬೇಕು ಹಲವು ಏರುಪೇರು

ರತ್ನ ಧಾರಣೆಯ ಅದೃಷ್ಟ (Gemstone)
ಬಿಳಿ, ನೀಲಿ ಮತ್ತು ಹಸಿರು ಬಣ್ಣಗಳು ಅದೃಷ್ಟವನ್ನು ತಂದುಕೊಡಲಿದ್ದು, ಅಂತೆಯೇ 4, 6 ಮತ್ತು 8 ಅದೃಷ್ಟದ ಸಂಖ್ಯೆಗಳಾಗಿವೆ. ಇದಲ್ಲದೆ, ರತ್ನಗಳ ಧಾರಣೆ ಉತ್ತಮ ಫಲಿತಾಶಂವನ್ನು ಕೊಡಲಿದ್ದು, ಇದಕ್ಕೆ ಸರಿಯಾದ ಜ್ಯೋತಿಷಿಗಳನ್ನು ಸಂಪರ್ಕಿಸುವುದು ಒಳಿತು. ನಕ್ಷತ್ರಗಳಿಗನುಸಾರವಾಗಿ ಧಾರಣೆ ಮಾಡಬೇಕಾಗುತ್ತದೆ.
 

Follow Us:
Download App:
  • android
  • ios