Asianet Suvarna News Asianet Suvarna News

ಈ ರಾಶಿಯವರಗೆ ನಿಮ್ಮ ಬಗ್ಗೆ ಪ್ರೀತಿ ಇದೆಯೋ, ದ್ವೇಷವಿದೆಯೋ ಗೊತ್ತಾಗೋಲ್ಲ!

ಜನ್ಮರಾಶಿಗೂ ಸ್ವಭಾವಕ್ಕೂ ಸಂಬಂಧ ಇರುವಂತೆ, ಜನ್ಮರಾಶಿಗೂ ಭಾವನೆಗಳಿಗೂ ಮುಚ್ಚಿಟ್ಟ ರಹಸ್ಯಗಳಿಗೂ ಸಂಬಂಧವಿದೆ. ನೀವೇನನ್ನು ಮುಚ್ಚಿಟ್ಟುಕೊಳ್ಳಲು ಬಯಸುತ್ತೀರಿ ಎಂಬುದು ನಿಮ್ಮ ಜನ್ಮರಾಶಿಯ ಮೂಲಕ ನೋಡಿಕೊಳ್ಳಿ.

what secret you are always hiding about yourself according to zodiac signs
Author
Bengaluru, First Published Aug 5, 2022, 2:55 PM IST

ಪ್ರತಿಯೊಬ್ಬರೂ ತಮಗೆ ಸಂಬಂಧಿಸಿದ ಯಾವುದೋ ವಿಚಾರವನ್ನು ಮುಚ್ಚಿಟ್ಟುಕೊಂಡಿರುತ್ತಾರೆ ಎಂಬುದರಲ್ಲಿ ಸಂಶಯ ಬೇಡ. ಅದರಲ್ಲೂ ಜನ್ಮರಾಶಿಗೆ ತಕ್ಕಂತೆ ರಹಸ್ಯಗಳು ಇರುತ್ತವೆ ಎಂದರೆ ಅಚ್ಚರಿಪಡುತ್ತೀರಾ? ಅಚ್ಚರಿಯೇನೂ ಬೇಡ. ಪ್ರತಿ ಜನ್ಮರಾಶಿ ಚಿಹ್ನೆಯ ಜನಗಳಿಗೂ ಅವರದೇ ಸ್ವಭಾವ ಇರುವುದರಿಂದ, ಅವರದೇ ಆದ ಗುಟ್ಟುಗಳೂ ಇರುವುದು ಸಹಜ. ಹಾಗೇ ನಿಮ್ಮದೂ ಇರಲಿದೆ. ನಿಮ್ಮದು, ನಿಮ್ಮ ಸಂಗಾತಿ- ಸ್ನೇಹಿತರ ಸೇಹಿತೆಯರ ಗುಟ್ಟುಗಳು ಯಾವುದು ಅಂತ ಇಲ್ಲಿ ನೋಡಿ.

ಮೇಷ ರಾಶಿ
ತಮ್ಮ ಜೀವನದ ಮೇಲೆ ಸಂಪೂರ್ಣ ಹಿಡಿತ ಹೊಂದಿರುವವರಂತೆ ಕಾಣಿಸಿಕೊಳ್ಳುತ್ತಾರೆ, ವರ್ತಿಸುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲ. ಬದುಕು ಎಲ್ಲಿಯೋ ಹೋಗುತ್ತಿರುತ್ತದೆ, ಇವರೆಲ್ಲೋ ಹೋಗುತ್ತಿರುತ್ತಾರೆ. ಗಟ್ಟಿ ಬದುಕು ತಮ್ಮದು ಎಂದು ನಟಿಸುತ್ತಾರೆ. ಒಳಗೇ ಪೊಳ್ಳಾಗಿರುತ್ತಾರೆ.

ವೃಷಭ ರಾಶಿ
ಎದೆಯಲ್ಲಿ ನೋವನ್ನು ಅಡಗಿಸಿ ಇಟ್ಟುಕೊಂಡು ಮೇಲಿನಿಂದ ನಗುನಗುತ್ತಾ ಇರುವುದರಲ್ಲಿ ಇವರು ನಿಷ್ಣಾತರು. ತಮ್ಮ ಬೇಸರವನ್ನು ಹೃದಯದಲ್ಲಿ ಹುದುಗಿಸಿಟ್ಟುಕೊಂಡು ಅದರ ಮೇಲೆ ಆತ್ಮವಿಶ್ವಾಸದ ನಗೆಯ ಮಾಸ್ಕ್‌ ಹಾಕುವುದರಲ್ಲಿ ಇವರು ಕಿಂಗ್‌ ಅಥವಾ ಕ್ವೀನ್.‌

ಮಿಥುನ ರಾಶಿ
ಇವರ ಹೃದಯ ಸಂಗಾತಿಯಿಂದ ಒಡೆದು ಚೂರು ಚೂರಾಗಿರಬಹುದು. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. ಅವರ ಹೃದಯದಲ್ಲಿ ಏನಾಗುತ್ತಿದೆ ಎಂಬುದೇ ನಿಮ್ಮ ಅರಿವಿಗೆ ಬಾರದಂತೆ ಇವರು ವರ್ತಿಸುತ್ತಿರುತ್ತಾರೆ.

ಕಟಕ ರಾಶಿ
ಇವರು ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರಕ್ಕೆ ಬಂದಾಗ ದುರ್ಬಲರು. ಆದರೆ ತಾವು ಕಠಿಣ ಎಂದು ತೋರಿಸಿಕೊಳ್ಳುತ್ತಿರುತ್ತಾರೆ. ಇವರು ಕಠಿಣವಾದ ಗ್ಲಾಸ್‌ನಂತೆ ಇರಬಹುದು. ಒಂದು ಹಂತದವರೆಗೂ ಕಠಿಣವಾಗಿದ್ದು, ಪ್ರೆಶರ್‌ ಜಾಸ್ತಿಯಾದಾಗ ಠಳ್‌ ಎಂದು ಮುರಿದುಹೋಗಬಹುದು.

ಸಿಂಹ ರಾಶಿ
ಇವರು ಮಹಾ ಆತ್ಮವಿಶ್ವಾಸಿಗಳಂತೆ ತೋರಿಸಿಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅಷ್ಟೇ ಅಳ್ಳೆದೆಯವರೂ ಆಗಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಇವರು ಎಷ್ಟು ಕಂಪಿಸುತ್ತಾರೆ ಎಂಬುದನ್ನು ನೀವು ಊಹಿಸಲಾರಿರಿ. ಇವರ ನಗೆಯಲ್ಲಿ ನಿಮಗೆ ಆತ್ಮವಿಶ್ವಾಸ ಕಂಡರೂ ಅದು ಅವರ ಪುಕ್ಕಲನ್ನು ಅಡಗಿಸುವ ನಗೆ.

ಕನ್ಯಾ ರಾಶಿ
ಇವರಿಗೆ ಇನ್ನೊಬ್ಬರಿಂದ ತಿರಸ್ಕಾರಕ್ಕೆ ಒಳಗಾಗುವುದು ಎಂದರೆ ಅಲರ್ಜಿ. ಅದನ್ನು ತಡೆಯಲು ಏನು ಬೇಕಿದ್ದರೂ ಮಾಡುತ್ತಾರೆ. ಕೆಲವೊಮ್ಮೆ ಇವರು ನಿಮ್ಮನ್ನೇ ತಿರಸ್ಕರಿಸುತ್ತಿದ್ದಾರೆ ಎಂದು ನಿಮಗೆ ಅನಿಸುವಂತೆ ವರ್ತಿಸಲೂಬಹುದು.

ತುಲಾ ರಾಶಿ
ನೀವು ಇವರನ್ನು ಯಾವುದೋ ಕಾರಣಕ್ಕೆ ನೋಯಿಸುತ್ತೀರಿ ಅಥವಾ ಅವಮಾನ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಒಂದು ಕ್ಷಣ ಹರ್ಟ್‌ ಆದರೂ ಅದನ್ನು ತೋರಿಸಿಕೊಳ್ಳದಂತೆ ಮುಚ್ಚಿಟ್ಟುಕೊಳ್ಳುತ್ತಾರೆ. ತಾವು ಅವಮಾನಿತರಾದೆವು ಎಂದು ಭಾವ ಇತರರ ಕಣ್ಣಲ್ಲಿ ಮೂಡುವುದು ಅವರಿಗೆ ಬೇಕಿರುವುದಿಲ್ಲ.

ವೃಶ್ಚಿಕ ರಾಶಿ
ಇವರು ಇತರರ ಸಾಧನೆಗಳ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ. ತಮ್ಮಿಂದ ಸಾಧಿಸಲು ಆಗಲಿಲ್ಲ ಎಂದು ಕೊರಗಬಹುದು. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. ಮತ್ಸರವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ನಿಮ್ಮನ್ನು ಗಮನಿಸುತ್ತಾ ಇರುತ್ತಾರೆ. ಕೆಟ್ಟದು ಮಾಡುತ್ತಾರೆಂದಲ್ಲ, ಎಚ್ಚರವಾಗಿರಿ ಅಷ್ಟೆ.

ಈ ಒಂದು ವಿಷಯ ಕನಸಲ್ಲಿ ಕಂಡ್ರೆ ಸಧ್ಯದಲ್ಲೇ ಶ್ರೀಮಂತರಾಗಲಿದ್ದೀರಿ ಎಂದರ್ಥ!

ಧನು ರಾಶಿ
ಇವರು ಸಿಟ್ಟು ಹಾಗೂ ಅಸಮಾಧಾನವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಮೇಲೆ ನಗುತ್ತ ಇರುತ್ತಾರೆ. ಆದರೆ ಹೊಟ್ಟೆಯೊಳಗೆ ರಾಶಿಯಾಗುತ್ತಾ ಹೋದ ಸಿಟ್ಟು ಎಂದಾದರೂ ಹೊರಗೆ ಬರಲೇಬೇಕಲ್ಲವೆ? ಹಾಗೆ ಇದ್ದಕ್ಕಿದ್ದಂತೆ ಅದು ಮೇಲೆದ್ದು ಬರುವಾಗ ನೀವು ಗಾಬರಿಯಾಗಬಹುದು.

ಮಕರ ರಾಶಿ
ತಮ್ಮ ನೆಗೆಟಿವ್‌ ಭಾವನೆಗಳನ್ನು ಇವರು ಹೊರಗೆ ತೋರಿಸಿಕೊಳ್ಳುವುದಿಲ್ಲ. ಅದರಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಅವರು ಸಿದ್ಧರಾಗಿರುವುದಿಲ್ಲ. ತಮ್ಮ ವ್ಯಕ್ತಿತ್ವವೇ ನೆಗೆಟಿವ್‌ ಎನಿಸಿಕೊಳ್ಳಬಹುದು ಎಂಬ ಆತಂಕ ಅವರಲ್ಲಿ ಇರುತ್ತದೆ.

ಕುಂಭ ರಾಶಿ
ಇವರು ಕೆಲವರನ್ನು ಶತಾಯಗತಾಯ ದ್ವೇಷಿಸಬಹುದು. ಆದರೆ ಎಂದೆಂದೂ ಈ ದ್ವೇಷಭಾವನೆ ಸಂಬಂಧಪಟ್ಟವರ ಗಮನಕ್ಕೆ ಬಾರದೇ ಇರುವಂತೆಯೇ ವರ್ತಿಸಬಹುದು. ಹೀಗಾಗಿ ಅವರಲ್ಲಿ ನಿಮ್ಮ ಬಗ್ಗೆ ಪ್ರೀತಿಯಿದೆಯೋ, ದ್ವೇಷವಿದೆಯೋ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ.

ಮೀನ ರಾಶಿ
ತಮ್ಮ ಶೋಕವನ್ನು ಇವರು ಸದಾ ಮುಚ್ಚಿಟ್ಟುಕೊಂಡಿರುತ್ತಾರೆ. ಶೋಕವನ್ನು ಮೂಟೆಕಟ್ಟಿ ತಮ್ಮ ಮನದ ಕತ್ತಲೆ ಕೋಣೆಗಳೊಳಕ್ಕೆ ಎಸೆದು ಬೀಗ ಜಡಿದು ಬಿಟ್ಟಿರುತ್ತಾರೆ. ಏಕಾಂತದಲ್ಲಿ, ಏಕಾಂಗಿಯಾಗಿರುವಾಗ ಮಾತ್ರ ಆ ಶೋಕದ ಭೂತಗಳು ಅವರನ್ನು ಕಾಡುತ್ತವೆ.

ಈ ನಾಲ್ಕು ರಾಶಿಯವ್ರು ಸಿಕ್ಕಾಪಟ್ಟೆ ಶಾರ್ಪ್, ಬುಧ ಶನಿ ಕರುಣೆ ಇವರಿಗೆ ಜನ್ಮಜಾತಸ್ಯ ವರ!
 

Follow Us:
Download App:
  • android
  • ios