ಈ ಒಂದು ವಿಷಯ ಕನಸಲ್ಲಿ ಕಂಡ್ರೆ ಸಧ್ಯದಲ್ಲೇ ಶ್ರೀಮಂತರಾಗಲಿದ್ದೀರಿ ಎಂದರ್ಥ!
ನಿಮ್ಮ ಕನಸಿನಲ್ಲಿ ಆಮೆಗಳು ಕಾಣಿಸಿಕೊಂಡರೆ, ನಿಮ್ಮ ಅದೃಷ್ಟದ ಬಾಗಿಲು ತೆಗೆಯಿತೆಂದೇ ಅರ್ಥ. ಆಮೆಗಳು ಕನಸಿನಲ್ಲಿ ಹೇಗೆ ಕಂಡರೆ ಏನರ್ಥ ತಿಳಿಯಿರಿ..
ನಮ್ಮ ಜೀವನಕ್ಕೆ ಸಂಬಂಧವೇ ಇಲ್ಲದ ವಿಷಯಗಳು ಅನೇಕ ಬಾರಿ ಕನಸಿನಲ್ಲಿ ಬಂದು ಅಚ್ಚರಿ ಹುಟ್ಟಿಸುತ್ತವೆ. ಹಾಗೆ ಕಂಡ ಅಪರೂಪದ ಕನಸುಗಳಲ್ಲಿ ಕೆಲವು ಸೂಚನೆಗಳಿರುತ್ತವೆ. ಅಂತೆಯೇ ನೀವು ಸಧ್ಯದಲ್ಲೇ ಶ್ರೀಮಂತರಾಗುತ್ತೀರಿ ಎಂಬ ಸೂಚನೆ ಕೊಡುವುದು ಆಮೆಯ ಕನಸು.
ಹೌದು, ಆಮೆಗಳು ಕನಸಿನಲ್ಲಿ ಬರುವುದು ಅಪರೂಪವೇ. ಅವನ್ನು ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾಗಿ ಪರಿಗಣಿಸಲಾಗುತ್ತದೆ. ವಿಷ್ಣುವು ಕೂರ್ಮಾವತಾರದಲ್ಲಿ ಆಮೆಯ ಅವತಾರ ತಾಳಿದ್ದು ಗೊತ್ತೇ ಇದೆ. ಇನ್ನು ಫೆಂಗ್ ಶೂಯ್ ಹಾಗೂ ವಾಸ್ತುವಿನಲ್ಲಿ ಆಮೆಗಳ ಮೂರ್ತಿಗಳನ್ನು ಮನೆಯಲ್ಲಿಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಿಸಬಹುದು ಎಂಬುದನ್ನು ಹೇಳಲಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಆಮೆಯನ್ನು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ. ಇಂಥ ಪವಿತ್ರವಾದ ಆಮೆಯು ನಿಮ್ಮ ಕನಸಿಗೆ ಬಂತೆಂದರೆ ಶೀಘ್ರದಲ್ಲೇ ನಿಮ್ಮ ಅದೃಷ್ಟವು ಬದಲಾಗಲಿದೆ ಎಂದು ಅರ್ಥೈಸಲಾಗುತ್ತದೆ.
ಕನಸಿನಲ್ಲಿ ಆಮೆಯನ್ನು ನಾವು ಯಾವ ಸ್ಥಿತಿಯಲ್ಲಿ ನೋಡಿದರೆ ಏನರ್ಥ ಎಂದು ತಿಳಿದುಕೊಳ್ಳೋಣ.
ನೀರಿನಲ್ಲಿ ಹರಿಯುವ ಆಮೆ(tortoise)
ನಿಮ್ಮ ಕನಸಿನಲ್ಲಿ ಆಮೆ ನೀರಿನಲ್ಲಿ ಈಜುವುದನ್ನು ನೋಡಿದರೆ, ಅದು ನಿಮ್ಮ ಜೀವನಕ್ಕೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಮನಸ್ಸಿಗೆ ತಕ್ಕಂತೆ ನೀವು ನಿಮ್ಮ ಜೀವನವನ್ನು ನಡೆಸುತ್ತಿದ್ದೀರಿ ಎಂದು. ನೀವು ಯಾವುದರ ಬಗ್ಗೆ ಯೋಚಿಸುತ್ತೀರೋ ಅದನ್ನು ಸಾಧಿಸುತ್ತೀರಿ. ಅಂತಹ ಕನಸು ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ನಿಮ್ಮ ಭವಿಷ್ಯದ ಕೆಲಸದಲ್ಲಿ ನೀವು ಹೆಚ್ಚು ಶ್ರಮಿಸಬೇಕಾಗಬಹುದು ಎಂದೂ ಈ ಕನಸು ಅರ್ಥೈಸಬಲ್ಲದು. ಆದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ, ಅದಕ್ಕಾಗಿ ನೀವು ಸಂತೋಷವಾಗಿರಬೇಕು.
ನೀವು ಸಿಂಹ ರಾಶಿಯವರಾಗಿದ್ರೆ ಈ ಬಣ್ಣಗಳನ್ನು ಹೆಚ್ಚು ಬಳಸಿ..
ಬಹಳಷ್ಟು ಆಮೆಗಳನ್ನು ಒಟ್ಟಿಗೆ ನೋಡಿದರೆ
ಕನಸಿನಲ್ಲಿ ಅನೇಕ ಆಮೆಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅಂಥ ಯಾವುದೇ ಕನಸು ಮುಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಸಂತೋಷವನ್ನು ತರಬಹುದು. ಸಂತೋಷದ ಆಗಮನದೊಂದಿಗೆ, ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ವಾಸಿಸುತ್ತಾರೆ ಎಂದರ್ಥ. ಈ ಕನಸು ನಿಮ್ಮ ಏಕಾಗ್ರತೆಯನ್ನು ಸಹ ತೋರಿಸುತ್ತದೆ.
ಆಮೆಯ ಗೃಹಪ್ರವೇಶ
ನಿಮ್ಮ ಕನಸಿನಲ್ಲಿ ಆಮೆ ಮನೆಗೆ ಪ್ರವೇಶಿಸುವುದನ್ನು ನೀವು ನೋಡಿದರೆ, ಶೀಘ್ರದಲ್ಲೇ ಬಹಳಷ್ಟು ಹಣವನ್ನು ಪಡೆಯಲಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ. ಇಷ್ಟು ಮಾತ್ರವಲ್ಲದೆ, ನಿಮ್ಮ ಹಣವನ್ನು ಶೀಘ್ರದಲ್ಲೇ ಮರಳಿ ಪಡೆಯುವ ಲಕ್ಷಣಗಳೂ ಇವೆ.
ಪ್ರತಿ ದಿನ ಈ ಕೆಲ್ಸ ಮಾಡಿದ್ರೆ ಸಿಗುತ್ತೆ ಲಕ್ಷ್ಮೀ ಕೃಪೆ.. ಹಣಕ್ಕಿರೋಲ್ಲ ಕೊರತೆ
ಕನಸಿನಲ್ಲಿ ಆಮೆಗೆ ಆಹಾರ ನೀಡುವುದು
ನಿಮ್ಮ ಕನಸಿನಲ್ಲಿ ಆಮೆ ಆಹಾರವನ್ನು ತಿನ್ನುವುದನ್ನು ನೀವು ನೋಡಿದರೆ, ಮುಂಬರುವ ಸಮಯದಲ್ಲಿ ನೀವು ಹಣವನ್ನು ಗಳಿಸಲಿದ್ದೀರಿ ಎಂದರ್ಥ. ಇದರರ್ಥ ಲಕ್ಷ್ಮಿ ದೇವಿಯು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾಳೆ ಮತ್ತು ನಿಮಗೆ ಜೀವನಕ್ಕೆ ಹಣದ ಕೊರತೆಯಾಗುವುದಿಲ್ಲ. ನಿಮ್ಮ ಕನಸಿನಲ್ಲಿ ಆಮೆ ಕಾಳಗವನ್ನು ಕಂಡರೆ ಮುಂದಿನ ಜೀವನದಲ್ಲಿ ನೀವು ಹಣದ ಕೊರತೆಯನ್ನು ಎದುರಿಸಬೇಕಾಗಬಹುದು ಎಂದರ್ಥ. ಈ ಕನಸು ನಿಮಗೆ ಹಣದ ಕೊರತೆಯಿದೆ ಮತ್ತು ಹಣದ ಕೊರತೆಯಿಂದಾಗಿ ನೀವು ಬಡತನವನ್ನು ಎದುರಿಸಬೇಕಾಗಬಹುದು ಎಂಬ ಸೂಚನೆಯನ್ನು ನೀಡುತ್ತದೆ.
ಕನಸಿನಲ್ಲಿ ಆಮೆಯನ್ನು ಬೆನ್ನಟ್ಟುವುದು
ನಿಮ್ಮ ಕನಸಿನಲ್ಲಿ ನೀವು ಆಮೆಯನ್ನು ಬೆನ್ನಟ್ಟುವುದನ್ನು ನೋಡುವುದು ಎಂದರೆ ನೀವು ಕೆಲವು ಅಶುಭ ಚಿಹ್ನೆಗಳನ್ನು ಪಡೆಯಲಿದ್ದೀರಿ ಎಂದರ್ಥ. ಈ ಕನಸು ಎಂದರೆ ಕೆಲವು ತೊಂದರೆಗಳು ಬಹಳ ಸಮಯದಿಂದ ನಿಮ್ಮನ್ನು ಕಾಡುತ್ತಿವೆ. ಆದರೆ ನೀವು ಅದನ್ನು ಯಾರಿಗೂ ಹೇಳಲು ಸಾಧ್ಯವಾಗುತ್ತಿಲ್ಲ ಎಂಬುದರ ಸೂಚನೆ. ಕನಸಿನಲ್ಲಿ ಆಮೆ ಕಚ್ಚಿದರೆ, ಅದು ಒಳ್ಳೆಯ ಕನಸು ಎಂದು ಪರಿಗಣಿಸಲಾಗುವುದಿಲ್ಲ, ಭವಿಷ್ಯದಲ್ಲಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದರ್ಥ.
ಜೋಡಿ ಆಮೆಗಳು
ಕನಸಿನಲ್ಲಿ ಒಂದು ಜೋಡಿ ಆಮೆಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದು ಸಂತೋಷ ಮತ್ತು ಯಶಸ್ವಿ ದಾಂಪತ್ಯ ಜೀವನವನ್ನು ಸೂಚಿಸುತ್ತದೆ. ವಿವಾಹಿತ ವ್ಯಕ್ತಿಯು ಅಂಥ ಕನಸನ್ನು ಕಂಡರೆ, ಶೀಘ್ರದಲ್ಲೇ ಅವರು ಮಕ್ಕಳ ಫಲವನ್ನು ಪಡೆಯಲಿದ್ದಾರೆ.