ಪ್ರತಿ ಹೊಸ ವರ್ಷ ಬಂದಾಗಲೂ ಇಬ್ಬರು ಭವಿಷ್ಯಕಾರರ ಮಾತುಗಳು ಮುನ್ನೆಲೆಗೆ ಬರ್ತವೆ. ಅವರಿಬ್ರೂ ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್.‌ ಆದರೆ ನೆನಪಿಡಿ, ಮುಂದಿನ ವರ್ಷದ (2025) ಬಗ್ಗೆ ಅವರಿಬ್ರೂ ಹೇಳಿರುವ ಮಾತುಗಳು, ಭಯ ಹುಟ್ಟಿಸುವಷ್ಟು ಹೋಲಿಕೆ ಹೊಂದಿವೆ!  

ಬಲ್ಗೇರಿಯಾದ ಕುರುಡು ಭವಿಷ್ಯಕಾರ್ತಿ ಬಾಬಾ ವಂಗಾ ಹಾಗೂ ಪ್ರಸಿದ್ಧ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಾಡಾಮಸ್ ತಮ್ಮ ನಿಖರ ಭವಿಷ್ಯವಾಣಿಗಳಿಂದ ಖ್ಯಾತರಾಗಿದ್ದಾರೆ. ಅವರು ಹೇಳಿರುವ ಹಲವು ಭವಿಷ್ಯಗಳು ಅಕ್ಷರಶಃ ಸತ್ಯವಾಗಿದೆ. ಹಾಗಾಗಿ ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್ ಭವಿಷ್ಯ ಎಂದರೆ ಜಗತ್ತಿನ ಜನರು ಹೆದರುತ್ತಾರೆ. 2024 ಮುಗಿಯುತ್ತಿದ್ದಂತೆ ಇವರಿಬ್ಬರ ಭವಿಷ್ಯವಾಣಿಗಳು ಮತ್ತೆ ಚರ್ಚಿತ ವಿಷಯವಾಗಿವೆ. ಹೊಸ ವರ್ಷದಲ್ಲಿ ಅಂದರೆ 2025ರಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಗಳ ಬಗ್ಗೆ ಅವರಿಬ್ಬರು ಬಹು ಹಿಂದೆಯೇ ಹೇಳಿದ್ದು ಒಂದೇ ರೀತಿ ಇವೆ! 

ಮುಖ್ಯವಾಗಿ ಇಬ್ಬರೂ ಹೇಳಿರೋದು ʼದುಷ್ಟರ ಆಳ್ವಿಕೆʼ ಬಗ್ಗೆ. ಈ ದುಷ್ಟರು ಯಾರು ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಅದು ಈಗಾಗಲೇ ಯುರೋಪ್‌ ಮುಂತಾದ ಕಡೆಗಳಲ್ಲಿ ಭಯೋತ್ಪಾದನೆ ನಡೆಸುತ್ತಿರುವ ದುಷ್ಟರೇ ಆಗಿರುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇನ್ನು ಕೆಲವೇ ವರ್ಷಗಳಲ್ಲಿ ಯುರೋಪಿನಾದ್ಯಂತ ಇವರ ಆಳ್ವಿಕೆ ಬರುತ್ತದಂತೆ. ಏಷ್ಯಾದ ಹಲವು ಕಡೆಗಳಲ್ಲಿ ಇವರು ಈಗಾಗಲೇ ಇದ್ದಾರೆ. ಇನ್ನಷ್ಟು ಹೆಚ್ಚಾಗಲಿದ್ದಾರೆ.

ನಾಸ್ಟ್ರಾಡಾಮಸ್‌ ಹೇಳಿದ್ದೇನು? 

ಹೊಸ ವರ್ಷದಲ್ಲಿ ಭಯಾನಕ ಯುದ್ಧಗಳು ನಡೆಯಲಿವೆ. ಇಂಗ್ಲೆಂಡ್‌ ದೇಶವು ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಚೀನ ಪ್ಲೇಗ್‌ನಂತಹ ರೋಗವು ಜಗತ್ತನ್ನು ಏಕಾಏಕಿ ಬಾಧಿಸಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಅವರು ನುಡಿದಿದ್ದ COVID-19 ಸಾಂಕ್ರಾಮಿಕ ಭವಿಷ್ಯವು ನಿಜವಾಗಿರುವುದರಿಂದ ಈ ಭವಿಷ್ಯವೂ ನಿಜವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. 2025ರಲ್ಲಿ ಭೂಮಿಯೊಂದಿಗೆ ಕ್ಷುದ್ರಗ್ರಹ ಘರ್ಷಣೆಯಾಗಲಿದ್ದು, ಗ್ರಹವು ತೀರಾ ಅಪಾಯಕಾರಿ ಸಾಮೀಪ್ಯದಲ್ಲಿ ಬರಬಹುದು ಎನ್ನುವ ಭವಿಷ್ಯವಾಣಿ ಭಯಗೊಳಿಸಿದೆ. 

ರಾಜಮನೆತನಗಳ ಸರ್ವನಾಶ, ಭೀಕರ ಕಾಯಿಲೆ ಸೇರಿ ಜಗತ್ತಿನ ಬಹುತೇಕ ವಿಚಾರಗಳ ಬಗ್ಗೆ ನಾಸ್ಟ್ರಾಡಾಮಸ್‌ ಬಹಳಷ್ಟು ಹಿಂದೆಯೇ ಕರಾರುವಾಕ್ಕಾಗಿ ಭವಿಷ್ಯ ನುಡಿದಿದ್ದಾರೆ. ಯುರೋಪ್‌ನಲ್ಲಿ 2025ರಲ್ಲಿ ಭೀಕರ ಯುದ್ಧ ನಡೆಯುವುದನ್ನು ಜಗತ್ತು ಕಾಣುತ್ತದೆ ಎಂದು ಭವಿಷ್ಯ ಹೇಳಿದ್ದಾರೆ. 2025ರಲ್ಲಿ ಯುರೋಪ್‌ನಲ್ಲಿ ಅತೀ ಭೀಕರ ಯುದ್ಧ ನಡೆಯಲಿದ್ದು, ಶತ್ರುಗಳಿಗಿಂತಲೂ ಕ್ರೂರವಾದ ಪ್ಲೇಗ್‌ನಂತಹ ಮಹಾಮಾರಿ ಮರುಕಳಿಸಲಿದೆ ಎನ್ನುವ ಮೂಲಕ ಜನರಲ್ಲಿ ಭಯ ಹುಟ್ಟಿಸಿದ್ದಾರೆ.

ಬಾಬಾ ವಂಗಾ ಹೇಳಿರುವುದೇನು? 

2025 ವಿನಾಶದ ವರ್ಷವಾಗಿರುತ್ತದೆ. 2024ರಿಂದಲೇ ವಿಶ್ವಾದ್ಯಂತ ವಿನಾಶದ ಆರಂಭವಾಗಿದೆ. ಮುಂಬರುವ ವರ್ಷ ಯುರೋಪ್‌ನಲ್ಲಿ ಭೀಕರ ಯುದ್ಧ ಸಂಭವಿಸಲಿದ್ದು, ಅಪಾರ ಹಾನಿ ಮತ್ತು ಪ್ರಾಣಹಾನಿ ಉಂಟಾಗುತ್ತದೆ. ಎರಡು ದೇಶಗಳ ನಡುವೆ ಮತ್ತೆ ಯುದ್ಧ ಪ್ರಾರಂಭವಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ರಷ್ಯಾ- ಉಕ್ರೇನ್‌, ಇಸ್ರೇಲ್-‌ ಇರಾನ್‌ ಯುದ್ಧಗಳು ನಡೆಯುತ್ತಿವೆ. ಸಿರಿಯಾದಲ್ಲಿ ಮತ್ತೊಂದು ದಂಗೆ ಶುರುವಾಗಿದೆ. ಬಾಬಾ ವಂಗಾ ನುಡಿದ ಭವಿಷ್ಯದ ಪ್ರಕಾರ, ರಷ್ಯಾ-ಉಕ್ರೇನ್‌ ಯುದ್ಧದ ಹೊರತಾಗಿ ಹೊಸದಾಗಿ 2 ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಲಿದೆ. ಇದು ಅಪಾರ ಪ್ರಮಾಣದ ಹಾನಿ ಹಾಗೂ ಮನುಷ್ಯರು ಸಾವನ್ನಪ್ಪಲಿದ್ದಾರೆ ಎಂದಿದ್ದಾರೆ ಎನ್ನಲಾ­­ಗಿದೆ.

ಗರುಡ ಪುರಾಣದ ಪ್ರಕಾರ, ರಾತ್ರಿ ಮಲಗುವ ಮುನ್ನ ಈ ತಪ್ಪು ಮಾಡುವವರಿಗೆ ಶನಿ ಕಾಟ ತಪ್ಪಿದ್ದಲ್ಲ!

ಇನ್ನು ಇಬ್ಬರೂ ಹೇಳಿರುವ ಒಂದೇ ಥರದ ಭವಿಷ್ಯವಾಣಿ ಎಂದರೆ ಕೆಲವು ನಾಯಕರ ಸಾವು. ಪಶ್ಚಿಮದ ಮಹಾ ನಾಯಕರೊಬ್ಬರ ಸಾವಿನ ಬಗ್ಗೆ ಬಾಬಾ ವಂಗಾ ಹೇಳಿದ್ದರೆ, ಏಷ್ಯಾದ ಪ್ರಭಾವಿ ರಾಜಕಾರಣಿಯೊಬ್ಬರ ಸಾವಿನ ಬಗ್ಗೆ ನಾಷ್ಟ್ರಾಡಾಮಸ್‌ ನುಡಿದಿದ್ದಾರೆ. ಇಬ್ಬರೂ ಅಸಹಜ ಸ್ಥಿತಿಗಳಲ್ಲಿ ಸಾಯಲಿದ್ದಾರಂತೆ. ಈ ದೇಶಗಳಲ್ಲಿ ಅಂತರ್ಯುದ್ಧ ನಡೆಯಬಹುದು ಎಂದು ಸೂಚಿಸಿದ್ದಾರೆ. ಈ ನಾಯಕರು ಯಾರು ಎಂಬ ಬಗ್ಗೆ ಇದೀಗ ಕುತೂಹಲ ಆರಂಭವಾಗಿದೆ. 

ಕೂತ್ಕೊಂಡಿದ್ದಾಗ ಒಂದೇ ಸಮ ಕಾಲು ಅಲುಗಾಡಿಸುತ್ತಿದ್ದರೆ ಈ ರಾಶಿಯವರಿಗೆ ಹಣ ಸಮಸ್ಯೆ ಗ್ಯಾರಂಟಿ!