ಗರುಡ ಪುರಾಣದ ಪ್ರಕಾರ, ರಾತ್ರಿ ಮಲಗುವ ಮುನ್ನ ಈ ತಪ್ಪು ಮಾಡುವವರಿಗೆ ಶನಿ ಕಾಟ ತಪ್ಪಿದ್ದಲ್ಲ!
Garuda purana ದ ಪ್ರಕಾರ ಜೀವನದ ಉನ್ನತಿಗಾಗಿ ಕೆಲವು ಅಭ್ಯಾಸಗಳನ್ನ ತ್ಯಜಿಸಬೇಕು. ಈ ಅಭ್ಯಾಸಗಳಿಂದ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಬಡವನನ್ನಾಗಿ ಮಾಡುತ್ತದೆ ಅಂತಹ ಕೆಟ್ಟ ಅಭ್ಯಾಸಗಳು ಯಾವವು ಎಂದು ಇಲ್ಲಿ ತಿಳಿಯೋಣ.
ಗರುಡ ಪುರಾಣ
ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಬಹಳ ಮಹತ್ವವಿದೆ. ಇದು ಹಿಂದೂ ಧರ್ಮದ ಮೂಲ ತತ್ವ ಮತ್ತು ತತ್ವಶಾಸ್ತ್ರವನ್ನು ವಿವರಿಸುತ್ತದೆ. ದೇವರುಗಳು ದೇವಸ್ಥಾನಗಳಲ್ಲಿ ಮಾತ್ರವಲ್ಲದೆ ದೇಹ ಮತ್ತು ಸಮಾಜದಲ್ಲಿ ಎಲ್ಲೆಡೆ ಇದ್ದಾರೆ ಎಂದು ಅದು ಹೇಳುತ್ತದೆ. ಹೆಸರೇ ಸೂಚಿಸುವಂತೆ ಈ ಪುರಾಣವು ಗರುಡ ಮತ್ತು ವಿಷ್ಣುವಿನ ನಡುವಿನ ಸಂಭಾಷಣೆಯನ್ನು ವಿವರಿಸುವುದಿಲ್ಲ. ಜೀವನ ಮತ್ತು ಮರಣಾನಂತರದ ಜೀವನದ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ.
ಗರುಡ ಪುರಾಣ
ಸನಾತನ ಧರ್ಮದಲ್ಲಿರುವ 18 ಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಈ ಎಲ್ಲಾ ಪುರಾಣಗಳು ಮನುಷ್ಯನ ಜೀವನಶೈಲಿ ಹೇಗೆ ಸರಿಯಾಗಿರಬೇಕೆಂದು ಹೇಳುತ್ತದೆ. ಮಾನವ ಆತ್ಮಗಳು, ನರಕ ಮತ್ತು ಭಯಾನಕ ಶಿಕ್ಷೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇವುಗಳೊಂದಿಗೆ, ಈ ಪುರಾಣವು ಜೀವನವನ್ನು ಪೂರ್ಣವಾಗಿ ಬದುಕುವುದು ಮತ್ತು ಸರಿಯಾದ ಮಾರ್ಗವನ್ನು ಅನುಸರಿಸುವುದು ಹೇಗೆ ಎಂಬುದನ್ನು ವಿವರಿಸುತ್ತದೆ. ನಮ್ಮ ಜೀವನವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಈ ಪುರಾಣದಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ನಾವು ಬಳಸಬಹುದು.
ಮನೆಯ ನೈಋತ್ಯ ಭಾಗದಲ್ಲಿ ಟಾಯ್ಲೆಟ್ ಇರಕೂಡದು. ಆದಷ್ಟು ಅವನ್ನು ಮನೆಯಿಂದ ಪ್ರತ್ಯೇಕವಾಗಿರಿಸಿದರೆ ಒಳಿತು. ಇದು ಖಾಲಿ ಜೇಬಿಗೆ ಕಾರಣವಾಗುತ್ತದೆ.
ಗರುಡ ಪುರಾಣದಲ್ಲಿ, ಶ್ರೀ ಮಹಾವಿಷ್ಣುವು ಜನರು ಖಂಡಿತವಾಗಿಯೂ ತ್ಯಜಿಸಬೇಕಾದ ಐದು ಅಭ್ಯಾಸಗಳನ್ನು ವಿವರಿಸಿದ್ದಾರೆ. ನೀವು ಈ ಅಭ್ಯಾಸಗಳನ್ನು ಅನುಸರಿಸಿದರೆ, ನೀವು ಖಂಡಿತವಾಗಿಯೂ ಬಡತನಕ್ಕೆ ಹೋಗುತ್ತೀರಿ. ಹಾಗಾದ್ರೆ ಗುರುಡ ಪುರಾಣದಲ್ಲಿ ಹೇಳಿದ ಅಭ್ಯಾಸಗಳು ಯಾವವು?
ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ತಡವಾಗಿ ಏಳುವುದು, ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ, ಬೆಳಗ್ಗೆ ತಡವಾಗಿ ಏಳುವುದು ಕೆಟ್ಟ ಅಭ್ಯಾಸ. ಈ ಅಭ್ಯಾಸ ಇರುವವರು ಜೀವನದಲ್ಲಿ ಎಂದೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇಂಥವರು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಹೇಳುತ್ತದೆ.
ಗರುಡ ಪುರಾಣದ ಪ್ರಕಾರ, ಮಲಗುವ ಮೊದಲು ಅಡುಗೆಮನೆಯಲ್ಲಿ ತಟ್ಟೆಗಳು ಅಥವಾ ಖಾಲಿ ಅಡುಗೆ ಪಾತ್ರೆಗಳನ್ನು ಹಾಗೆ ಇಟ್ಟು ಮಲಗಬಾರದು, ಹೀಗೆ ಮಾಡಿದ್ರೆ ಶನಿಗ್ರಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದಲ್ಲದೆ, ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ಮನೆಗೆ ಪ್ರವೇಶಿಸುವುದಿಲ್ಲ. ರಾತ್ರಿ ಮಲಗುವ ಮುನ್ನ ಆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ.