ಮನೆಯೊಳಗೆ ಗೂಬೆ, ಕಾಗೆ ಬಂದರೆ ಏನರ್ಥ? ಪರಿಹಾರವೇನು?
ಯಾವುದೇ ಪಕ್ಷಿ ಅಥವಾ ಪ್ರಾಣಿ ಇದ್ದಕ್ಕಿದ್ದಂತೆ ಮನೆಯೊಳಗೆ ಬಂದರೆ ಅದನ್ನು ದೈವೀಶಕ್ತಿ ಕಳುಹಿಸಿದ ಯಾವುದೋ ಸೂಚನೆ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಂದು ಪಕ್ಷಿ ಅಥವಾ ಪ್ರಾಣಿಗೂ ಅದರದೇ ಆದ ಅರ್ಥವಿದೆ. ಅದು ಏನು ಎಂದು ತಿಳಿದುಕೊಳ್ಳೋಣ.
ಗೂಬೆ (owl)
ಗೂಬೆ ಲಕ್ಷ್ಮಿ ದೇವಿಯ ವಾಹನ. ಆದರೆ ಇದನ್ನು ಮನೆಯೊಳಗೆ ಯಾರೂ ಆಹ್ವಾನಿಸುವುದಿಲ್ಲ ಹಾಗೂ ಇದನ್ನು ಸಾಕುವುದಿಲ್ಲ. ಮನೆಯೊಳಗೆ ಇದರ ಆಗಮನ ಸಹ ಅಶುಭವೆಂದು ತಿಳಿಯಲಾಗುತ್ತದೆ. ದೀಪಾವಳಿಯ ದಿನ ಮಾತ್ರ ಗೂಬೆಯ ಆಗಮನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಅಂದು ಲಕ್ಷ್ಮಿ ದೇವಿಯ ಪೂಜೆಯ ದಿನ. ಇತರ ದಿನಗಳಲ್ಲಿ ಗೂಬೆಯ ಆಗಮನ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ಮನೆಗೆ ಗೂಬೆ ಬಂದರೆ ಅದರಿಂದ ಆ ಮನೆಯ ಪ್ರಗತಿ ಕುಂಠಿತವಾಗುತ್ತದೆ. ಮನೆಯಲ್ಲಿ ವಾಸಿಸುವ ಸದಸ್ಯರ ನಡುವೆ ಜಗಳ, ಮನಸ್ತಾಪ ಉಂಟಾಗಬಹುದು, ಗೂಬೆ ಮನೆಯೊಳಗೆ ಬಂದರೆ ಪರಿಹಾರವಾಗಿ ಕೆಂಪು ಬಟ್ಟೆ, ತಿಲ ದಾನ ಮಾಡಬಹುದು.
ಕಾಗೆ (crow)
ಕಾಗೆ ಮನೆಯೊಳಗೆ ಬರುವುದು ಶನಿ ಮನೆಯನ್ನು ಪ್ರವೇಶಿಸುತ್ತಿದ್ದಾನೆ ಎನ್ನುವುದರ ಸೂಚನೆ. ಯಾಕೆಂದರೆ ಕಾಗೆಯು ಶನಿಯ ವಾಹನ (Vehicle of Shani). ಆದರೆ ಶನಿಯು ಕೆಡುಕನಲ್ಲ. ಆದರೆ ಇದು ದೈವಭಕ್ತಿಯನ್ನು ಹೆಚ್ಚಿಸಿಕೊಳ್ಳಲು ದೇವರು ನೀಡುತ್ತಿರುವ ಸೂಚನೆಯಾಗಿರುತ್ತದೆ. ಮನೆಯ ಮುಂದೆ ಕಾಗೆ ಕುಳಿತುಕೊಂಡು ಕೆಟ್ಟ ಸ್ವರದಲ್ಲಿ ಕೂಗುತ್ತಿದ್ದರೂ ಅಶುಭವೇ. ಕಾಗೆ ಪದೇ ಪದೇ ಮನಯೊಳಗೆ ಬಂದರೆ ನೀವು ಶಾಂತಿ ಮಾಡಿಸುವುದು ಅಗತ್ಯ.
ರಣಹದ್ದು (Vulture)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯೊಳಗೆ ರಣಹದ್ದು ಆಗಮಿಸುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ರಣಹದ್ದು ಬಂದೊಡನೆ ಮನೆಯ ಸದಸ್ಯರ ಬೆಳವಣಿಗೆ ನಿಂತು ಪರಸ್ಪರ ಪ್ರೀತಿಯೂ ಕೊನೆಗೊಳ್ಳುತ್ತದೆ. ಮನೆಗೆ ರಣಹದ್ದು ಬಂದರೆ, ಅದನ್ನು ಓಡಿಸಿ ಶಾಂತಿಯನ್ನು ಪ್ರಾರ್ಥಿಸಬೇಕು. ರಣಹದ್ದು ಸತ್ತ ಜೀವಿಗಳನ್ನು ತಿನ್ನುತ್ತದೆ ಮತ್ತು ಮನೆಯೊಳಗೆ ಅದರ ಪ್ರವೇಶವು ಧನಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ, ಇದು ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ. ಜೀವನದ ಬೆಳವಣಿಗೆಯಲ್ಲಿ ಅಡೆತಡೆಗಳನ್ನು ತರುತ್ತದೆ. ಪರಿಹಾರಕ್ಕಾಗಿ ರುದ್ರಸೂಕ್ತವನ್ನು ಪಠಿಸಿ, ಬೆಳ್ಳಿ ನಾಣ್ಯ ದಾನ ಮಾಡಬೇಕು.
ರಾವಣದಹನದ ಜೊತೆಗೆ ನಿಮ್ಮಲ್ಲಿರುವ ಈ ಕೆಟ್ಟ ಅಭ್ಯಾಸ ಬಿಟ್ಟುಬಿಡಿ
ಬಾವಲಿ (bat)
ಹಾಳು ಮನೆಗಳಲ್ಲಿ ಬಾವಲಿ ಓಡಾಡುವುದನ್ನು ನೀವು ನೋಡಿರಬಹುದು. ಮನೆಯೊಳಗೆ ಬಾವಲಿ ಬರುವುದು ಮನೆ ಪಾಳು ಬೀಳುವುದನ್ನೂ ಸೂಚಿಸಬಹುದು. ಬಾವಲಿಗೆ ಹಗಲಿನಲ್ಲಿ ಕಾಣುವುದಿಲ್ಲ, ಆದ್ದರಿಂದ ಇದನ್ನು ರಾತ್ರಿ ಹಕ್ಕಿ ಎಂದೂ ಕರೆಯುತ್ತಾರೆ. ಮನೆಗೆ ಬಾವಲಿಗಳ ಬರುವುದರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸವಾಗುತ್ತದೆ. ಇದರಿಂದಾಗಿ ಮನೆಯಲ್ಲಿ ವಾಸಿಸುವ ಜನರ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ ಮತ್ತು ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ. ಇವುಗಳು ದೆವ್ವಗಳಂತೆ ತಲೆಕೆಳಗಾಗಿ ನೇತಾಡುವ ಕಾರಣ ಕೆಟ್ಟ ಸುದ್ದಿಗಳ ಆಗಮನವನ್ನು ಸಹ ಸೂಚಿಸುತ್ತವೆ. ಶಾಂತಿಗಾಗಿ ನವಗ್ರಹ ಮಂತ್ರವನ್ನು ಪಠಿಸಬೇಕು. ನವಧಾನ್ಯ ದಾನ ಮಾಡಬಹುದು.
ಪಾರಿವಾಳ (pigeon)
ಪಾರಿವಾಳವನ್ನು ಶಾಂತ ಪಕ್ಷಿ (Bird of Peace) ಎಂದು ಪರಿಗಣಿಸಲಾಗುತ್ತದೆ. ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಗೆ ಪಾರಿವಾಳದ ಆಗಮನವು ಅತ್ಯಂತ ಅಶುಭಕರ. ಅವುಗಳ ಗೂಡುಗಳನ್ನು ಕೂಡ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಪಾರಿವಾಳ ರಾಹುವಿಗೆ ಸಂಬಂಧಿಸಿದೆ. ರಾಹು ವಾಸ್ತವ್ಯದಿಂದಾಗಿ ಆ ಸ್ಥಳವು ಸಂಪೂರ್ಣವಾಗಿ ನಿರ್ಜನವಾಗುತ್ತದೆ, ಇದರಿಂದಾಗಿ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುತ್ತವೆ. ಇದರಿಂದ ಮನೆಯ ಸದಸ್ಯರೂ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ನಂಬಿಕೆಯಿದೆ. ಶಾಂತಿಗಾಗಿ ಶನಿ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಹೂವಿನ ಪೂಜೆ ಮಾಡಿಸಿ.
ಗುಬ್ಬಿ, ಗಿಣಿ (sparrow, parrot)
ಗಿಣಿಗಳನ್ನು ಮನೆಯೊಳಗೆ ಸಾಕುತ್ತಾರೆ. ಗುಬ್ಬಿಗಳು ಮನೆಯೊಳಗೂ ಹೊರಗೂ ಓಡಾಡುತ್ತವೆ. ಇವು ಮನೆಯೊಳಗೆ ಬಂದರೆ ಏನೂ ಬಾಧಕವಿಲ್ಲ. ಹಾಗೆಂದು ಇವುಗಳಿಂದ ಯಾವುದೇ ವಿಶೇಷ ಸಕಾರಾತ್ಮಕ ಶಕ್ತಿಯೂ ದೊರೆಯುವುದಿಲ್ಲ. ಆದರೆ ಗಿಣಿಗಳನ್ನು ಬೆಸ ಸಂಖ್ಯೆಯಲ್ಲಿ ಸಾಕಬಾರದು. ಸಮ ಸಂಖ್ಯೆಯಲ್ಲಿ ಸಾಕಬೇಕು. ಗುಬ್ಬಿಗಳು ನಿಮ್ಮ ಮನೆಯ ಮಹಾದ್ವಾರದ ಮೇಲೆ ಗೂಡು ಕಟ್ಟದಂತೆ ನೋಡಿಕೊಳ್ಳಬೇಕು. ಇದು ಋಣಾತ್ಮಕ.
ಶನಿ ದೋಷಕ್ಕೆ ಚಪ್ಪಲಿಯಲ್ಲಿದೆ ಪರಿಹಾರ, ಏನು ಮಾಡಬೇಕು?