Asianet Suvarna News Asianet Suvarna News

ರಾವಣದಹನದ ಜೊತೆಗೆ ನಿಮ್ಮಲ್ಲಿರುವ ಈ ಕೆಟ್ಟ ಅಭ್ಯಾಸ ಬಿಟ್ಟುಬಿಡಿ

ದಸರಾ ಹಬ್ಬ ಎಂದರೆ  ಕೆಟ್ಟದರ ಮೇಲೆ ಒಳ್ಳೆಯದರ ವಿಜಯದ ಸೂಚನೆಯಾಗಿದೆ.  ಹಲವೆಡೆ ಜನರು ರಾವಣನ ಮೇಲೆ ರಾಮನ ವಿಜಯವನ್ನು ಆಚರಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ.  ಹಬ್ಬದ ಸಂದರ್ಭದಲ್ಲಿ ಜನರು ಕೆಟ್ಟ ಗುಣವನ್ನು ಹೋಗಲಾಡಿಸಿ, ಒಳ್ಳೆಯತನವನ್ನು ಉಳಿಸಿಕೊಳ್ಳಬೇಕಾಗಿದೆ. ಅಂಥಾ ದುರ್ಗುಣಗಳು ಯಾವುವು ತಿಳಿಯೋಣ.

Leave This Bad Habit For This Dasara, You Will Be Happy Vin
Author
First Published Oct 5, 2022, 11:06 AM IST

ದಸರಾ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ದಸರಾ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ದೇವತೆಗಳನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಜನರು ಈ ಹಬ್ಬವನ್ನು ದುರ್ಗಾ ದೇವಿಯು ಮಹಿಷಾಸುರನ ಮೇಲೆ ವಿಜಯಿ ಎಂದು ಆಚರಿಸುತ್ತಾರೆ. ಆದರೆ ಪಶ್ಚಿಮ ಮತ್ತು ಉತ್ತರ ರಾಜ್ಯಗಳ ಜನರು ರಾವಣನ ಮೇಲೆ ರಾಮನ ವಿಜಯವನ್ನು ಆಚರಿಸುತ್ತಾರೆ. ಹೀಗಿದ್ದೂ, ಇಡೀ ಆಚರಣೆಯು ಯಾವಾಗಲೂ ಕೆಟ್ಟದರ ಮೇಲೆ ಒಳ್ಳೆಯದ ವಿಜಯದ ಬಗ್ಗೆ ಇರುತ್ತದೆ. ಇಂದಿನ ದಿನಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ವ್ಯತ್ಯಾಸವಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಹಾಗಾಗಿ.. ನಮ್ಮಲ್ಲಿರುವ ಕೆಡುಕನ್ನು ತೊಲಗಿಸಬೇಕು. ಈ ದಸರಾ ಸಂದರ್ಭದಲ್ಲಿ ಇಂಥಾ ಕೆಟ್ಟ ಚಟಗಳು ನಿಮ್ಮಿಂದ ದೂರವಾಗಬೇಕು. ಎಂಥಾ ಸದ್ಗುಣಗಳನ್ನು ರೂಢಿಸಿಕೊಳ್ಳಬೇಕು, ಎಂಥಾ ದುರ್ಗುಣಗಳನ್ನು ಬಿಟ್ಟು ಬಿಡಬೇಕು ಅನ್ನೋ ಮಾಹಿತಿ ಇಲ್ಲಿದೆ. 

ಸ್ವಾರ್ಥವನ್ನು ಬಿಟ್ಟುಬಿಡಿ: ಯಾವುದೇ ವಿಚಾರ ಬಂದಾಗ ಮನುಷ್ಯರಲ್ಲಿ ಮೊದಲಿಗೆ ನಾನು, ನನ್ನದು ಎಂಬ ಸ್ವಾರ್ಥ (Selfish) ಬಂದು ಬಿಡುತ್ತದೆ. ಇದು ಉತ್ತಮ ವ್ಯಕ್ತಿಯ ಲಕ್ಷಣವಲ್ಲ. ಸ್ವಾರ್ಥತೆಯನ್ನು ಬಿಟ್ಟುಬಿಡಿ. ನಾನು, ನನ್ನದು ಎಂಬುದನ್ನು ಹೊರತುಪಡಿಸಿ ಯೋಚಿಸಿ. ಇತರರಿಗಾಗಿಯೂ ಏನನ್ನಾದರೂ ಮಾಡಲು ಮುಂದಾಗಿ. ನಾನು ಎಂಬ ಬದಲು ನಾವು ಎಂಬುದು ಮನಸ್ಸಿಗೆ ಬರಲಿ. ಇದು ಉತ್ತಮ ವ್ಯಕ್ತಿತ್ವದ (Personality) ಲಕ್ಷಣವಾಗಿದೆ. 

Navratri: ಸೀರೆ ಉಡ್ತೀರಿ ಅಂದ್ರೆ ಈ ತಪ್ಪನ್ನೂ ಮಾತ್ರ ಮಾಡಬೇಡಿ

ಯಾರನ್ನೋ ನೋಯಿಸಬೇಡಿ: ಒತ್ತಡದ ಬದುಕಿನಲ್ಲಿ ಎಲ್ಲರೂ ಅತಿಯಾದ ಕೋಪ (Angry), ಅತಿಯಾದ ಉದ್ವೇಗವನ್ನು ಹೊಂದಿರುತ್ತಾರೆ. ಇದರಿಂದ ವಿನಾಕಾರಣ ಮತ್ತೊಬ್ಬರ ಮೇಲೆ ರೇಗುವುದು, ಮತ್ತೊಬ್ಬರ ಮನಸ್ಸನ್ನು ನೋಯಿಸುವುದು ಮಾಡುತ್ತಾರೆ. ಆದರೆ ಯಾರನ್ನೋ ನೋಯಿಸುವುದರಿಂದ ನಮಗೆ ಏನೇನೂ ಸಿಗುವುದಿಲ್ಲ. ಹೀಗಾಗಿ ಇಂಥಾ ಅಭ್ಯಾಸ (Habit)ದಿಂದ ದೂರವಿರುವುದು ಎಲ್ಲಾ ರೀತಿಯಲ್ಲೂ ಒಳ್ಳೆಯದು. ಯಾರನ್ನೋ ನೋಯಿಸದೆ ಖುಷಿಯಾಗಿರುವ ಅಭ್ಯಾಸ ರೂಢಿಸಿಕೊಳ್ಳಿ. 

ಮತ್ತೊಬ್ಬರ ನೋವಿಗೆ ಖುಷಿಪಡದಿರಿ: ಮತ್ತೊಬ್ಬರ ನೋವಿಗೆ (Pain) ಖುಷಿಪಡುವುದು ತುಂಬಾ ಕೆಟ್ಟ ಅಭ್ಯಾಸ ಎಂದೇ ಹೇಳಬಹುದು. ಹೀಗಿದ್ದೂ ಇವತ್ತಿನ ದಿನಗಳಲ್ಲಿ ಹೆಚ್ಚಿನವರು ಹೀಗೆ ಮಾಡುವುದನ್ನು ನೀವು ನೋಡಬಹುದು. ವಿನಾಕಾರಣ ಮತ್ತೊಬ್ಬರ ಕಷ್ಟದಲ್ಲಿದ್ದಾಗ, ಅಸಹಾಯಕರಾದಾಗ ಸಂತೋಷ ಪಡುತ್ತಾರೆ. ಇವತ್ತು ಅವರಿಗೆ ಬಂದ ಕಷ್ಟ ನಾಳೆ ನಮಗೂ ಬರಬಾರದು ಅಂತೇನಿಲ್ಲ. ಆಗ ನಾವು ಕೂಡಾ ಹೀಗೆಯೇ ನೋವನ್ನು ಅನುಭವಿಸಬಹುದು, ಅಸಹಾಯಕತೆಯಿಂದ ಕಂಗಾಲಾಗಬಹುದು. ಹೀಗಾಗಿ ಮತ್ತೊಬ್ಬರ ನೋವಿಗೆ ಖುಷಿಪಡುವುದನ್ನು ನಿಲ್ಲಿಸಿ. 

ಹೀಗಳೆಯುವುದನ್ನು ಬಿಟ್ಟುಬಿಡಿ: ಮತ್ತೊಬ್ಬರ ನಡವಳಿಕೆಯಲ್ಲಿ ತಪ್ಪು ಹುಡುಕಿ ಅದನ್ನೇ ಹೀಯಾಳಿಸುವುದು ಕೆಲವರಿಗೆ ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ಹೀಗಳೆಯುವುದರಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುವುದು ಬಿಟ್ಟರೆ ಮತ್ತೇನೂ ಸಿಗುವುದಿಲ್ಲ. ಹೀಗಾಗಿ ಇಂಥಾ ತಪ್ಪನ್ನು ಮಾಡದಿರಿ. ಸಾಧ್ಯವಾದರೆ ಸಾಂತ್ವನ ನೀಡಿ. ಅದು ಬಿಟ್ಟು ಹೀಯಾಳಿಸುವುದು ಖಂಡಿತವಾಗಿಯೂ ಒಳ್ಳೆಯ ಅಭ್ಯಾಸವಲ್ಲ. 

Festival makeup: ಇತರರಿಗಿಂತ ಭಿನ್ನ ಲುಕ್ ಗಾಗಿ ಮನೆಯಲ್ಲಿಯೇ ಹೀಗೆ ಮೇಕಪ್ ಮಾಡಿ

ಸಿಟ್ಟನ್ನು ಬಿಟ್ಟುಬಿಡಿ, ತಾಳ್ಮೆ ಕಲಿತುಕೊಳ್ಳಿ: ಕೋಪ ಮೂಗಿನ ಮೇಲೆ ಇರುತ್ತದೆ ಅಂತಾರಲ್ಲ ಹಾಗೆ. ಮುಂಗೋಪ ಹಲವರಲ್ಲಿ ಇರುತ್ತದೆ. ಇಂಥಾ ಸಿಟ್ಟು ಅವರಿಗೆ ಮಾತ್ರವಲ್ಲ ಇನ್ನೊಬ್ಬರಿಗೂ ತೊಂದರೆಯನ್ನುಂಟು ಮಾಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ತಾಳ್ಮೆ (Patience) ಇಲ್ಲದಿರುವುದೇ ಅನಾಹುತಕ್ಕೆ ಕಾರಣವಾಗುತ್ತದೆ. ಹೀಗಾಗಿ ಯಾವುದೇ ಸಂದರ್ಭಕ್ಕೆ ತಕ್ಷಣ ಪ್ರತಿಕ್ರಿಯಿಸುವ ಅಭ್ಯಾಸ ಬಿಟ್ಬಿಡಿ. ಸಿಟ್ಟನ್ನು ನಿಯಂತ್ರಿಸಿ ತಾಳ್ಮೆಯನ್ನು ಬೆಳೆಸಿಕೊಳ್ಳಿ.

ದ್ವೇಷಿಸುವುದನ್ನು ನಿಲ್ಲಿಸಿ, ಎಲ್ಲರನ್ನೂ ಪ್ರೀತಿಸಿ: ಅವರನ್ನು ಕಂಡ್ರೆ ಆಗಲ್ಲ, ಇವರನ್ನು ಕಂಡ್ರೆ ಆಗಲ್ಲ, ಅವರು ಮಾಡಿರೋದು ಸರಿಯಿಲ್ಲ, ಇವ್ರು ಮಾಡಿರೋದು ಸರಿಯಲ್ಲ. ಅವರಿವರ ಬಗ್ಗೆ ಹೇಳುತ್ತಾ ಎಷ್ಟೂಂತ ದ್ವೇಷ (Hate) ಸಾಧಿಸ್ತೀರಿ. ತಪ್ಪು ಎಲ್ಲರೂ ಮಾಡುತ್ತಾರೆ. ಎಲ್ಲರಲ್ಲೂ ಕೆಟ್ಟ ಗುಣಗಳಿರುತ್ತವೆ. ಪರ್ಫೆಕ್ಟ್ ಎಂದು ಯಾರೂ ಇರುವುದಿಲ್ಲ. ಹೀಗಾಗಿ ಎಲ್ಲರನ್ನೂ ಪ್ರೀತಿಸಲು (Love) ಕಲಿಯಿರಿ. ಮತ್ತೊಬ್ಬರ ತಪ್ಪಿದ್ದಾಗ ಬಿಡಿಸಿ ಹೇಳಿ. ಅದು ಬಿಟ್ಟು ದ್ವೇಷ ಸಾಧಿಸುವುದರಿಂದ ಏನನ್ನೂ ಸಾಧಿಸಿದಂತೆ ಆಗುವುದಿಲ್ಲ. 

Follow Us:
Download App:
  • android
  • ios