ದೇವರಿಗಷ್ಟೇ ಅಲ್ಲ ಮನುಷ್ಯರಿಗೂ ಪ್ರಭೆಯಿದೆ; ನಿಮ್ಮ ಪ್ರಭೆಯ ಬಣ್ಣ ಯಾವ್ದು ಗೊತ್ತಾ?

ಪ್ರತಿಯೊಬ್ಬ ಮಾನವರೂ ತಮ್ಮದೇ ಆದ ಪ್ರಭಾವಳಿ ಹೊಂದಿರುತ್ತಾರೆ ಹಾಗೂ ಆ ಪ್ರಭೆಗೆ ತನ್ನದೇ ಆದ ಬಣ್ಣವೂ ಇರುತ್ತದೆ ಎಂದರೆ ಅಚ್ಚರಿಯಾಗಬಹುದು. ಪ್ರತಿಯೊಂದು ರಾಶಿಯ ಜನರಿಗೂ ಅವುಗಳ ಕಾಸ್ಮಿಕ್ ಎನರ್ಜಿಯ ಪ್ರಭಾವದಿಂದ ನಿರ್ದಿಷ್ಟ ಬಣ್ಣದ ಪ್ರಭೆ ರೂಪುಗೊಂಡಿರುತ್ತದೆ. 

What is the color of your aura, know about it

ದೇವರ ಭಾವಚಿತ್ರಗಳಲ್ಲಿ ಅವರ ದೇಹದ ಸುತ್ತ ಒಂದು ರೀತಿಯ ಪ್ರಭಾವಳಿಯನ್ನು ಕಾಣುತ್ತೇವೆ. ದೇವರಿಗೆ ಮಾತ್ರವಲ್ಲ, ನಮ್ಮಂತಹ ಸಾಮಾನ್ಯ ಮನುಷ್ಯರು ಸಹ ಪ್ರಭಾವಳಿ ಹೊಂದಿರುತ್ತೇವೆ, ಅದು ಬರಿಕಣ್ಣಿಗೆ ಕಾಣಿಸುವುದಿಲ್ಲ ಅಷ್ಟೇ. ಆ ಪ್ರಭೆಯ ಕಾರಣದಿಂದಾಗಿಯೇ ಕೆಲವರ ಬಳಿ ಹೋದಾಗ ಹೆಚ್ಚು ಆತ್ಮೀಯ, ಆಪ್ತವಾದ ಭಾವನೆ ಮೂಡಬಹುದು, ಹಿತವೆನಿಸಬಹುದು ಅಥವಾ ನಕಾರಾತ್ಮಕ ಭಾವನೆಗಳು ಉಂಟಾಗಿ ಅವರಿಂದ ದೂರ ಸರಿಯಬೇಕು ಎಂದು ಅನಿಸಬಹುದು. ಒಟ್ಟಿನಲ್ಲಿ ಪ್ರಕೃತಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಪ್ರಭೆಯಿರುತ್ತದೆ ಹಾಗೂ ಆ ಪ್ರಭೆಗೆ ಬಣ್ಣವೂ ಇರುತ್ತದೆ. ಆಯಾ ರಾಶಿಯ ಕಾಸ್ಮಿಕ್ ಎನರ್ಜಿ ಆ ಜನರ ಪ್ರಭೆಯ ಬಣ್ಣದ ಮೇಲೆ ಪ್ರಭಾವ ಹೊಂದಿರುತ್ತದೆ.ಈಗ, ರಾಶಿಚಕ್ರಕ್ಕೆ ಅನುಗುಣವಾಗಿ, ಯಾವ ರಾಶಿಯ ಜನರಿಗೆ ಎಂತಹ ಬಣ್ಣದ ಪ್ರಭಾವಳಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳೋಣ. 

•    ಮೇಷ (Aries)
ಮೇಷ ರಾಶಿಯ ಜನ ತಮ್ಮ ಉತ್ಸಾಹ ಮತ್ತು ಮುನ್ನುಗ್ಗುವ ಸ್ವಭಾವಕ್ಕೆ ಹೆಸರು. ಬೆಂಕಿಯಂತಹ ಸ್ವಭಾವದ ಇವರ ಪ್ರಭೆಯ ಬಣ್ಣ ಬೆಂಕಿಯಂಥದ್ದೇ ಕೆಂಪು (Red). ಇದು ಇವರ ಡೈನಮಿಕ್ ಸ್ವಭಾವವನ್ನು ಪ್ರತಿನಿಧಿಸುತ್ತದೆ.

ಸಂತಾನ ಭಾಗ್ಯವೇ ಇಲ್ಲವೆಂದರೆ ಈ ಜೋತಿಷ್ಯ ಪರಿಹಾರ ಫಾಲೋ ಮಾಡಿ!

•    ವೃಷಭ (Taurus)
ವೃಷಭ ರಾಶಿಯ ಜನ ಭೂಮಿ ತತ್ವವನ್ನು ಪ್ರತಿನಿಧಿಸುತ್ತಾರೆ. ಈ ಜನರ ಪ್ರಭೆ ಸಹ ಹಸಿರು (Green) ಬಣ್ಣದಿಂದ ಕೂಡಿರುತ್ತದೆ. ಇದು ಇವರ ಆರೈಕೆ ಮಾಡುವ ಗುಣ ಹಾಗೂ ನೆಲದ ಸಹಜತೆಯನ್ನು ಬಿಂಬಿಸುತ್ತದೆ. 

•    ಮಿಥುನ (Gemini)
ಬುದ್ಧಿವಂತಿಕೆ ಹಾಗೂ ಕುತೂಹಲ ಮೇಳೈಸಿರುವ ಮಿಥುನ ರಾಶಿಯ ಜನರ ಪ್ರಭೆ ದಟ್ಟ ಹಳದಿ (Yellow) ಬಣ್ಣದಲ್ಲಿರುತ್ತದೆ. ಇವರ ಸಂವಹನದ ಸಾಮರ್ಥ್ಯ ಹಾಗೂ ವ್ಯಕ್ತಪಡಿಸುವಿಕೆಯ ಗುಣವನ್ನು ಇದು ಪ್ರತಿನಿಧಿಸುತ್ತದೆ. 

•    ಕರ್ಕಾಟಕ (Cancer)
ಭಾವನಾತ್ಮಕ ಜಲ ತತ್ವದ ರಾಶಿ ಕರ್ಕಾಟಕದ ಜನರು ಶಾಂತವಾದ ನೀಲಿ (Blue) ಬಣ್ಣದ ಪ್ರಭೆ ಹೊಂದಿರುತ್ತಾರೆ. ಸೂಕ್ಷ್ಮ ಮನಸ್ಸು ಹಾಗೂ ಪ್ರೀತಿ ತುಂಬಿದ ಗುಣವನ್ನು ಇದು ಪ್ರತಿನಿಧಿಸುತ್ತದೆ.

•    ಸಿಂಹ (Leo)
ನೈಸರ್ಗಿಕ ನಾಯಕತ್ವದ ಗುಣ ಹೊಂದಿರುವ ಸಿಂಹ ರಾಶಿಯ ಜನರ ಪ್ರಭಾವಳಿ (Aura) ಚಿನ್ನದ (Gold) ಬಣ್ಣದಿಂದ ಹೊಳೆಯುತ್ತದೆ. ವರ್ಚಸ್ಸು ಮತ್ತು ಆತ್ಮವಿಶ್ವಾಸವನ್ನು ಇದು ಎತ್ತಿ ತೋರುತ್ತದೆ.

•    ಕನ್ಯಾ (Virgo)
ಶುದ್ಧತೆ ಮತ್ತು ಮೌಲ್ಯವನ್ನು ಪ್ರತಿಪಾದಿಸುವ ಕನ್ಯಾ ರಾಶಿಯ ಜನರ ಪ್ರಭಾವಳಿ ಶುದ್ಧವಾದ ಬಿಳಿ (White) ಬಣ್ಣದಿಂದ ಕೂಡಿರುತ್ತದೆ. ಇವರು ಜೀವನದ ಕುರಿತು ಹೊಂದಿರುವ ವಿಮರ್ಶಾತ್ಮಕ ಮತ್ತು ವಿಸ್ತೃತ ಧೋರಣೆಯನ್ನು ಇದು ಬಿಂಬಿಸುತ್ತದೆ. 

ಈ ರಾಶಿಯವರು ಚುಂಬಿಸುವುದರಲ್ಲಿ ನಿಸ್ಸೀಮರು.. ನೀವು ಪಟ್ಟಿಯಲ್ಲಿದ್ದೀರಾ?

•    ತುಲಾ (Libra)
ರಾಶಿಚಕ್ರದ ಪೈಕಿ ಅತ್ಯಂತ ಡಿಪ್ಲೊಮ್ಯಾಟಿಕ್ ರಾಶಿ ಎಂದೇ ಕರೆಸಿಕೊಳ್ಳುವ ತುಲಾ ರಾಶಿಯ ಜನರ ಪ್ರಭೆಯು ತಿಳಿಯಾದ ಗುಲಾಬಿ ಬಣ್ಣ (Pink Color) ಹೊಂದಿದೆ. ಇವರ ಸಾಮರಸ್ಯದ ಗುಣ ಹಾಗೂ ವರ್ಚಸ್ಸಿನ ಗುಣಧರ್ಮವನ್ನು ಇದು ವ್ಯಕ್ತಪಡಿಸುತ್ತದೆ. 

•    ವೃಶ್ಚಿಕ (Scorpio)
ತೀವ್ರತೆ ಮತ್ತು ನಿಗೂಢತೆಯನ್ನು ಮೇಳೈಸಿಕೊಂಡಿರುವ ವೃಶ್ಚಿಕ ರಾಶಿಯ ಜನರ ಪ್ರಭಾವಳಿ ದಟ್ಟವಾದ ನೇರಳೆ (Deep Purple) ಬಣ್ಣದಿಂದ ಕೂಡಿರುತ್ತದೆ. ಈ ಬಣ್ಣ ನಿಗೂಢ ಮನೋಭಾವ ಮತ್ತು ಪ್ಯಾಷನೇಟ್ ವ್ಯಕ್ತಿತ್ವವನ್ನು ತೋರುತ್ತದೆ. 

•    ಧನು (Sagittarius)
ಅಪರಿಮಿತ ಆಶಾವಾದಿಯಾಗಿರುವ ಧನು ರಾಶಿಯ ಜನರ ಪ್ರಭೆ ಕೇಸರಿ (Orange) ಬಣ್ಣದಿಂದ ಕೂಡಿರುತ್ತದೆ. ಕೇಸರಿಯ ಹೊಳಪು ಇವರ ಸಾಹಸಾತ್ಮಕ,  ಮುಕ್ತ ಚಿಂತನೆ ಹೊಂದಿರುವ ಮನೋಧರ್ಮವನ್ನು ಬಿಂಬಿಸುತ್ತದೆ. 

•    ಮಕರ (Capricorn)
ಭೂಮಿ ತತ್ವದ ಮಕರ ರಾಶಿಯ ಜನ ಕಂದುಬಣ್ಣದ (Brown) ಪ್ರಭೆಯನ್ನು ಹೊಂದಿದ್ದಾರೆ. ಸ್ಥಿರತೆ ಮತ್ತು ಪ್ರಾಯೋಗಿಕ ಮನೋಭೂಮಿಕೆಯನ್ನು ಇದು ಪ್ರತಿನಿಧಿಸುತ್ತದೆ.

•    ಕುಂಭ (Aquarius)
ಸಹಜತೆಯನ್ನು ಮೇಳೈಸಿಕೊಂಡಿರುವ ಕುಂಭ ರಾಶಿಯ ಜನರ ಪ್ರಭಾವಳಿ ನೀಲಿ ಬಣ್ಣದಿಂದ ಕೂಡಿದೆ. ಇದು, ಅನ್ವೇಷಣಾತ್ಮಕ ಹಾಗೂ ಅಸಾಂಪ್ರದಾಯಿಕ ಚಿಂತನೆಯನ್ನು ಬಿಂಬಿಸುತ್ತದೆ. 

•    ಮೀನ (Pisces)
ಕನಸುಗಾರರಾಗಿರುವ ಮೀನ ರಾಶಿಯ ಜನ ಲ್ಯಾವೆಂಡರ್ (Lavender) ಬಣ್ಣದ ಪ್ರಭಾವಳಿ ಹೊಂದಿದ್ದಾರೆ. ಕಲಾತ್ಮಕ ಮತ್ತು ಸಹಾನುಭೂತಿಯನ್ನು ಇದು ಪ್ರತಿನಿಧಿಸುತ್ತದೆ. 

Latest Videos
Follow Us:
Download App:
  • android
  • ios