ಸಂತಾನ ಭಾಗ್ಯವೇ ಇಲ್ಲವೆಂದರೆ ಈ ಜೋತಿಷ್ಯ ಪರಿಹಾರ ಫಾಲೋ ಮಾಡಿ!
ಮಕ್ಕಳಾಗಿಲ್ಲ ಎಂದು ಚಿಂತೆ ಮಾಡ್ತಿದ್ದೀರಾ? ಹಾಗಿದ್ರೆ ನಿಮ್ಮ ಚಿಂತೆಯನ್ನು ದೂರ ಮಾಡಲು ಇಲ್ಲಿದೆ ನಿಮಗಾಗಿ ಕೆಲವೊಂದು ಸಲಹೆಗಳನ್ನು ಇವುಗಳನ್ನು ಪಾಲಿಸಿದ್ರೆ ಬೇಗನೆ ಮಕ್ಕಳಾಗುವ ಸಾಧ್ಯತೆ ಇದೆಯಂತೆ.
ಈ ಹೊಸ ವರ್ಷದಲ್ಲಿ ಪೋಷಕರಾಗುವ ಸಂತೋಷವನ್ನು ಅನುಭವಿಸಲು ನೀವು ಬಯಸಿದರೆ, ಈ ಪರಿಹಾರಗಳನ್ನು ಪ್ರಯತ್ನಿಸುವ ಮೂಲಕ, ಮಗುವಿನ ಆಗಮನ ಸಂತೋಷವನ್ನು ಅನುಭವಿಸಬಹುದು. ಈ ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ತುಂಬಾ ಪರಿಣಾಮಕಾರಿ. ಈ ಕ್ರಮಗಳು ಯಾವುವು ಎಂದು ನೋಡೋಣ.
ಹೊಸ ವರ್ಷದ (new year) ಬಗ್ಗೆ ನಮ್ಮ ಮನಸ್ಸಿನಲ್ಲಿ ಹೊಸ ನಿರೀಕ್ಷೆಗಳಿವೆ. ಅದರಲ್ಲೂ ಮದುವೆಯಾಗಿ ಮಕ್ಕಳನ್ನು ಪಡೆಯದೇ ನೋವು ಅನುಭವಿಸುತ್ತಿರೋರು ಹೊಸ ವರ್ಷದಲ್ಲಾದ್ರೂ ಮಗುವಿನ ಆಗಮನ ಆಗಲಿ ಎಂದು ಕಾಯುತ್ತಿರುತ್ತಾರೆ. ಅಂತಹ ಜನರಿಗಾಗಿ ಈ ಜ್ಯೋತಿಷ್ಯ ಪರಿಹಾರ. ಇದನ್ನು ಅನುಸರಿಸಿದ್ರೆ, ನೀವು ಬೇಗ ತಂದೆ-ತಾಯಿಯಾಗಿ ಭಡ್ತಿ ಪಡೆಯೋದು ಗ್ಯಾರಂಟಿ.
ಏಕಾದಶಿ ಉಪವಾಸ ಮಾಡಿ
ಮಗುವನ್ನು ಪಡೆಯಲು, ಪ್ರತಿ ಏಕಾದಶಿಯಂದು ಉಪವಾಸ (fasting on ekadashi) ಮಾಡಿ. ಇದನ್ನು ಮಾಡೋದರಿಂದ, ವಿಷ್ಣುವಿನ ಆಶೀರ್ವಾದದಿಂದ ನೀವು ಬೇಗ ಮಗು ಪಡೆಯುವಿರಿ. ಪ್ರತಿ ಏಕಾದಶಿಯಂದು ಉಪವಾಸ ಮಾಡಿದ ನಂತರ, ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಿ. ಇದನ್ನು ಮಾಡುವುದರಿಂದ, ಶೀಘ್ರದಲ್ಲೇ ನಿಮ್ಮ ಮನೆಗೆ ಒಳ್ಳೆಯ ಸುದ್ದಿ ಬರಲಿದೆ.
ಎಕ್ಕದ ಬೇರಿನ ಪರಿಹಾರ
ಜ್ಯೋತಿಷ್ಯದಲ್ಲಿ, ಎಕ್ಕದ ಗಿಡ ಗ್ರಹಗಳ ರಾಜ ಸೂರ್ಯನಿಗೆ ಸಂಬಂಧಿಸಿದೆ. ಶುಕ್ರವಾರ, ಮಹಿಳೆಯರು ಎಕ್ಕದ ಬೇರನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಸೊಂಟಕ್ಕೆ ಧರಿಸಬೇಕು. ಯಾರಿಗೂ ಹೇಳದೆ ಇದನ್ನು ಮಾಡಿ, ಇದನ್ನು ಮಾಡುವಾಗ ಯಾರೂ ನಿಮ್ಮನ್ನು ನೋಡಬಾರದು. ಈ ಪರಿಹಾರವನ್ನು ಮಾಡುವುದರಿಂದ, ಬಹು ಬೇಗ ನಿಮ್ಮ ಮನೆಯಲ್ಲಿ ಪುಟ್ಟ ಕಂದನ ಆಗಮನವಾಗುವುದು.
ಭಾನುವಾರ ಸೂರ್ಯನಿಗೆ ಅರ್ಘ್ಯ ನೀಡಿ
ಮಗುವನ್ನು ಪಡೆಯಲು, ಹೊಸ ವರ್ಷದ ಪ್ರತಿ ಭಾನುವಾರದಿಂದ ಈ ಪರಿಹಾರವನ್ನು ಮಾಡಲು ಪ್ರಾರಂಭಿಸಿ. ಪ್ರತಿ ಭಾನುವಾರ, ತಾಮ್ರದ ಲೋಟದಲ್ಲಿ ಕೆಂಪು ಶ್ರೀಗಂಧವನ್ನು ಹಾಕುವ ಮೂಲಕ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಈ ಪರಿಹಾರವನ್ನು ಮಾಡುವುದರಿಂದ, ನೀವು ಶೀಘ್ರದಲ್ಲೇ ಪೋಷಕರಾಗುವ ಸಂತೋಷವನ್ನು ಪಡೆಯುತ್ತೀರಿ. ಭಾನುವಾರ (Sunday), ಅಗತ್ಯವಿರುವವರಿಗೆ ಕನಿಷ್ಠ ಒಂದು ಊಟವನ್ನು ನೀಡಿ.
ಅರಳಿ ಮರಕ್ಕೆ ಪರಿಹಾರ
ಅರಳಿ ಮರವು (Peepal Tree) ಎಲ್ಲಾ ದೇವರು ಮತ್ತು ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಪ್ರತಿ ಶನಿವಾರ ಅರಳಿ ಮರದ ಮೇಲೆ ಸಾಸಿವೆ ಎಣ್ಣೆ ದೀಪ ಬೆಳಗಿಸಿ. ಈ ಪರಿಹಾರ ಮಾಡುವುದರಿಂದ, ದೇವತೆಗಳ ಜೊತೆಗೆ, ಪೂರ್ವಜರು ಸಹ ನಿಮ್ಮ ಬಗ್ಗೆ ಸಂತೋಷಪಡುತ್ತಾರೆ. ಜೊತೆಗೆ ಮಗುವಾಗುವಂತೆ ನಿಮಗೆ ಆಶೀರ್ವಾದ ನೀಡುತ್ತಾರೆ. ಕನಿಷ್ಠ 11 ಶನಿವಾರಗಳಂದು ಈ ಪರಿಹಾರ ಮಾಡುವುದರಿಂದ, ನಿಮ್ಮ ಬಯಕೆಗಳು ಈಡೇರುತ್ತವೆ.
ಇದನ್ನು ಶುಕ್ರವಾರ ಮಾಡಿ
ಹೊಸ ವರ್ಷದ ಪ್ರತಿ ಶುಕ್ರವಾರ ಕನಿಷ್ಠ 5 ಕನ್ಯೆಯರಿಗೆ ಖೀರ್ ತಿನ್ನಿಸಿ. ಈ ಹುಡುಗಿಯರನ್ನು ನಿಮ್ಮ ಮನೆಗೆ ಆಹ್ವಾನಿಸಿ, ಮೊದಲಿಗೆ ತಾಯಿ ಲಕ್ಷ್ಮಿಗೆ ಪಾಯಸ ಅರ್ಪಿಸಿ, ನಂತರ ಕನ್ಯೆಯರಿಗೆ ಅರ್ಪಿಸಿ. ಇದನ್ನು ಮಾಡುವುದರಿಂದ, ನಿಮ್ಮ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ, ಶೀಘ್ರದಲ್ಲೇ ಸಂತಾನ ಭಾಗ್ಯ ಸಿಗುತ್ತೆ.