ಹಂದಿ, ಹಾವು, ಕಾಗೆ ಅಡ್ಡ ಬಂದರೂ ಅಪಶಕುನಾವೇ? ಏನು ಹೇಳುತ್ತೆ ಶಾಸ್ತ್ರ?
ಶಕುನುಗಳಿಗೆ ಅದರದ್ದೇ ಆದ ಮಹತ್ವವಿದೆ. ಕೆಲವು ಪ್ರಾಣಿಗಳು, ಜೀವಿಗಳು ನಾವು ಸಂಚರಿಸುವಾಗ ಎದುರಾದರೆ ಅವುಗಳಿಗೆ ವಿಶೇಷವಾದ ಅರ್ಥಗಳು ಇರುತ್ತವೆ. ಆದರೆ ಬಹಳಷ್ಟು ನಮಗೆ ತಿಳಿದೇ ಇರುವುದಿಲ್ಲ. ಬೆಕ್ಕು ಅಡ್ಡಬಂದರೆ ಶುಭ ಇಲ್ಲವೇ ಅಶುಭದ ಶಕುನ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ, ಇತರ ಕೆಲವು ಪ್ರಾಣಿಗಳು ಅಡ್ಡಬಂದರೆ ಏನರ್ಥ ಎಂಬುದನ್ನು ಈಗ ನೋಡೋಣ...
ಹಿಂದು ಧರ್ಮದಲ್ಲಿ (Hindu Religion) ಅನೇಕ ನಂಬಿಕೆಗಳು ಪುರಾತನ ಕಾಲದಿಂದಲೂ ರೂಢಿಯಲ್ಲಿವೆ. ಯಾವುದೇ ಶುಭ ಕೆಲಸಕ್ಕೆ ಹೋಗುವ ಮುಂಚೆ ಏನನ್ನು ನೋಡಬೇಕು..? ಏನನ್ನು ನೋಡಬಾರದು..? ಯಾವುದನ್ನು ಮಾತನಾಡಬಾರದು.. ಹೀಗೆ ಅನೇಕ ವಿಧಿ ವಿಧಾನಗಳನ್ನು ಹಾಕಿಕೊಂಡು ಅದರ ಪ್ರಕಾರ ನಡೆದುಕೊಂಡು ಬರಲಾಗುತ್ತಿದೆ. ಅಂದರೆ ಶಕುನಗಳು (Omen) ಒಳ್ಳೆಯದಾಗಿದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಬಲವಾದ ನಂಬಿಕೆ (Trust) ಆಧಾರದ ಮೇಲೆ ನಡೆದುಕೊಂಡು ಬರಲಾಗುತ್ತಿದೆ. ಹಾಗೆಯೇ ಅಪಶಕುನಗಳೂ ಒಂದು.
ಎಲ್ಲಾದರೂ ಹೊರಟಿರುವಾಗ ಬೆಕ್ಕು (Cat) ಅಡ್ಡಬಂದರೆ ಹಲವು ಶಕುನ-ಅಪಶಕುನಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology)ಹೇಳುತ್ತದೆ. ಆದರೆ, ನಮಗೆ ಗೊತ್ತಿರದ ಪ್ರಮುಖ ಅಂಶವೆಂದರೆ ನಾವು ಎಲ್ಲಾದರೂ ಹೊರಟಿರುವಾಗ ಇಲ್ಲವೇ ಹೋಗುತ್ತಿರುವಾಗ ಬೆಕ್ಕು ಅಡ್ಡಬಂದರಷ್ಟೇ ಅಪಶಕುನವಲ್ಲ, ಇತರ ಕೆಲವು ಪ್ರಾಣಿಗಳು (Animals) ಬಂದರೂ ವಿವಿಧ ಶಕುನಗಳಿವೆ ಎಂದು ಉಲ್ಲೇಖಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಭಾಗವಾದ ಶಕುನ ಶಾಸ್ತ್ರದ ಅನುಸಾರ, ಬೇರೆ ಪ್ರಾಣಿಗಳು ಅಡ್ಡ ಬಂದರೆ ಸಹ ಅಪಶಕುನ ಆಗಲಿದೆ. ಈ ವೇಳೆ ಕೆಲವು ಸಮಯ ಕುಳಿತು ಹೋಗುವುದೋ, ಬೇರೆ ಮಾರ್ಗವನ್ನು ಅನುಸರಿಸುವುದನ್ನೋ ಮಾಡಬೇಕು. ಇಂತಹ ಸನ್ನಿವೇಶಗಳಲ್ಲಿ ಕೆಲವು ಅಶುಭ ಘಟನೆಗಳ ಮುನ್ಸೂಚನೆಯನ್ನು ನೀಡಿದರೆ, ಕೆಲವೊಮ್ಮೆ ಹಾನಿಯನ್ನುಂಟು ಮಾಡುತ್ತವೆ. ಹೀಗಾಗಿ ಯಾವ ಪ್ರಾಣಿಗಳು ಅಡ್ಡಬಂದರೆ ಏನು ಎಂಬುದರ ಬಗ್ಗೆ ತಿಳಿಯೋಣ...
ಜಾನುವಾರು ದಂಡು ಕಂಡರೆ!
ರಸ್ತೆ ಎಂದ ಮೇಲೆ ಅಲ್ಲಲ್ಲಿ ಜಾನುವಾರುಗಳು (Cows) ಕಾಣಿಸಿಕೊಳ್ಳುತ್ತವೆ. ನಾವು ಯಾವುದಾದರೂ ಮುಖ್ಯ ಕೆಲಸದ ನಿಮಿತ್ತ ಹೊರಗೆ ಹೊರಟಾಗ ದನಗಳ ಹಿಂಡು ಕಂಡರೆ ಅಶುಭ ಎಂದು ಭಾವಿಸುವುದು ಬೇಡ. ಆದರೆ, ಎಚ್ಚರಿಕೆ (Alert) ಸಂದೇಶವನ್ನು (Message) ಇದು ರವಾನಿಸುತ್ತಿದೆ ಎಂಬುದನ್ನು ತಿಳಿಯಿರಿ. ಹೀಗೆ ದನಗಳ ಹಿಂಡು ಕಂಡರೆ ಸ್ವಲ್ಪ ಸಮಯ ಅಲ್ಲೇ ನಿಂತು ಹೊರಡುವುದು ಒಳ್ಳೆಯದು.
ಹಾವು ಕಂಡರೂ ಶುಭವಲ್ಲ
ರಸ್ತೆಯಲ್ಲಿ ಪ್ರಯಾಣಿಸುವಾಗ ಹಲವು ವೇಳೆ ಹಾವು (Snake) ಕಾಣಿಸಿಕೊಂಡಿರುತ್ತದೆ. ಹೀಗೆ ಹಾವುಗಳು ಕಾಣಿಸಿಕೊಂಡಾಗ ಎಡದಿಂದ ಬಲಕ್ಕೆ ಹೋದರೆ ಅಶುಭ ಸಂಕೇತ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ನೀವು ಹೋಗುವ ಕೆಲಸದಲ್ಲಿ ಸಮಸ್ಯೆ ಇದೆ ಎಂಬುದರ ಮುನ್ಸೂಚನೆ ನೀಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಹಾವು ಶತ್ರು (Enemy) ಸೂಚಕವಾಗಿದೆ.
ಇದನ್ನು ಓದಿ: ಮನೆಯಲ್ಲಿ ಶಿವಲಿಂಗವಿದ್ದರೆ ಈ ತಪ್ಪನ್ನೆಲ್ಲಾ ಮಾಡಬೇಡಿ..
ಕಾಗೆ ಕಂಡರೆ?
ಕಾಗೆಗಳು (crows) ಎಲ್ಲೆಂದರಲ್ಲಿ ಹಾರಾಡುತ್ತಲೇ ಇರುತ್ತವೆ. ಇದಕ್ಕಾಗಿ ಪ್ರಯಾಣಿಸುವಾಗ (Travel) ಸ್ವಲ್ಪ ಎಚ್ಚರ ಇರಲಿ. ನಿಮ್ಮ ತಲೆಗೆ ತಾಗಿಕೊಂಡು ಕಾಗೆಗಳು ಹೋದರೆ, ದೇಹಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು (Problems) ಎದುರಾಗುತ್ತವೆ. ಅಲ್ಲದೆ, ಇನ್ನಿತರ ರೋಗಗಳಿಗೆ (Diseases) ತುತ್ತಾಗಬಹುದಾಗಿದೆ. ಮೃತ್ಯುವೂ (Death) ಕೂಡಾ ಸಂಭವಿಸಬಹುದು ಎನ್ನಲಾಗುತ್ತದೆ. ತಲೆ (Head) ಮೇಲೆ ಕಾಗೆ ಕುಳಿತುಕೊಂಡರೂ ಅಶುಭವಾಗುತ್ತದೆ. ಇಂತಹ ಸಂದರ್ಭ ಎದುರಾದರೆ ಜಾತಕವನ್ನು (Horoscope) ಜ್ಯೋತಿಷಿಗಳ ಬಳಿ ತೋರಿಸಿಕೊಳ್ಳುವುದು ಉತ್ತಮ.
ಮುಂಗುಸಿ ಕಾಣಿಸಿದರೆ?
ಮುಂಗುಸಿ (Mongoose) ಹಾವನ್ನು ಬೇಟೆಯಾಡುತ್ತದೆಯಾದರೂ ಶುಭ ಕಾರ್ಯಕ್ಕೆ ಹೋಗುವಾಗ ಕಾಣಿಸಿಕೊಳ್ಳಬಾರದು. ಹೀಗೆ ಕಂಡರೆ ಆಗಬೇಕಾದ ಕೆಲಸಗಳು ಆಗದು... ಇದಕ್ಕೋಸ್ಕರ ಬಹಳ ಕಷ್ಟಪಡಬೇಕು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.
ಇದನ್ನು ಓದಿ: ಲಕ್ಷ್ಮೀ ದೇವಿಯ ಈ ಫೋಟೋಗಳು ಮನೆಯಲ್ಲಿ ಬೇಡ!
ಹಂದಿ (Pig) ಅಡ್ಡಬಂದರೆ?
ಪ್ರಯಾಣಿಸುವಾಗ ಹಂದಿ ಕಾಣಿಸಿದರೆ ಶತ್ರುಗಳಿಂದ ನಷ್ಟ ಸಂಭವಿಸುತ್ತದೆ, ಅಪಾಯಗಳು ಎದುರಾಗುತ್ತವೆ ಎಂಬ ಮುನ್ಸೂಚನೆಯನ್ನು ನೀಡಿದಂತೆ ಅರ್ಥವನ್ನು ಕೊಡುತ್ತದೆ. ಅಲ್ಲದೆ, ಎಲ್ಲಾದರೂ ಸಂಚರಿಸುತ್ತಿದ್ದಾಗ ವಾಹನಗಳಿಗೆ ಏನಾದರೂ ಡಿಕ್ಕಿ ಹೊಡೆದರೆ ಸಹ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಆ ವಾಹನವನ್ನೇ ಮಾರಿಬಿಡುತ್ತಾರೆ.