Asianet Suvarna News Asianet Suvarna News

ಲಕ್ಷ್ಮೀ ದೇವಿಯ ಈ ಫೋಟೋಗಳು ಮನೆಯಲ್ಲಿ ಬೇಡ!

ಲಕ್ಷ್ಮೀ ದೇವಿಯ ಕೃಪೆಗಾಗಿ ನಾವು ಏನೆಲ್ಲಾ ಮಾಡುತ್ತೇವೆ. ಮನೆಯಲ್ಲಿ ಲಕ್ಷ್ಮೀ ಫೋಟೋಗಳನ್ನು ಇಟ್ಟುಕೊಂಡಿರುತ್ತೇವೆ. ಆದರೆ, ಈ ದೇವಿಯ ಎಲ್ಲ ಫೋಟೋಗಳನ್ನು ನಮಗೆ ಸಮೃದ್ಧಿಯನ್ನು ತಂದುಕೊಡುವುದಿಲ್ಲ. ಮನೆಯಲ್ಲಿ ಲಕ್ಷ್ಮೀ ದೇವಿಯ ಯಾವ ಫೋಟೋವನ್ನು ಇಟ್ಟುಕೊಳ್ಳಬೇಕು. ಯಾವುದನ್ನು ಇಟ್ಟುಕೊಳ್ಳಬಾರದು ಎಂಬುದರ ಬಗ್ಗೆ ನೋಡೋಣ... 

Do not keep such an photo of Goddess Lakshmi for peace and Prosperity of home
Author
Bangalore, First Published Jun 4, 2022, 8:18 PM IST

ದುಡ್ಡು (Money) ಎಂದರೆ ಯಾರಿಗೆ ಬೇಡ ಹೇಳಿ? ಎಲ್ಲರಿಗೂ ದುಡ್ಡು ಬೇಕು. ಹಣವೇನು ಸುಮ್ಮನೆ ಬಂದುಬಿಡುತ್ತದೆಯೇ..? ಕಷ್ಟಪಡಬೇಕು, ಅದೃಷ್ಟವೂ (Luck) ಇರಬೇಕು. ಬಹುಮುಖ್ಯವಾಗಿ ಹಣದ, ಸಂಪತ್ತಿನ (Wealth) ಒಡತಿ ಲಕ್ಷ್ಮೀ ದೇವಿಯ (Goddess Laxmi) ಕೃಪೆ ನಮಗೆ ಇರಲೇಬೇಕು. ಲಕ್ಷ್ಮೀ ಮಾತೆಯು ಧನ, ಧಾನ್ಯಗಳ ಅಧಿದೇವತೆಯಾಗಿದ್ದಾಳೆ. ಜಗತ್ತಿನ ಎಲ್ಲರಿಗೂ ವೈಭವ, ಕೀರ್ತಿ ಹಾಗೂ ಯಶಸ್ಸನ್ನು (Success) ದಯಪಾಲಿಸುವ ದೇವಿ ಇವಳು. ಒಮ್ಮೆ ಇವಳ ಕೃಪೆ ನಮ್ಮ ಮೇಲಾಗಲಿ ಎಂದು ಎಲ್ಲರೂ ಬಯಸುತ್ತೇವೆ.

ಲಕ್ಷ್ಮೀ ದೇವಿಯ ಕೃಪೆಗಾಗಿ ಮನೆಯಲ್ಲಿ ಆಕೆಯ ಫೋಟೋಗಳನ್ನು ತಂದಿಟ್ಟು ಪೂಜಿಸುತ್ತೇವೆ. ಕೆಲವು ಕೋಣೆಗಳಲ್ಲಿ ಲಕ್ಷ್ಮೀ ಫೋಟೋಗಳನ್ನು ತೂಗುಹಾಕುತ್ತೇವೆ. ಹಾಗೆಂದು ಲಕ್ಷ್ಮೀ ದೇವಿಯ ಎಲ್ಲ ಫೋಟೋಗಳನ್ನು ಹಾಕುವುದಲ್ಲ. ಎಲ್ಲ ಪೋಟೊಗಳು ಸಹ ಸಂಪತ್ತನ್ನು ದಯಪಾಲಿಸುವುದಿಲ್ಲ. ಹಾಗಾಗಿ ಯಾವ ಫೋಟೊಗಳನ್ನು (Photo) ಹಾಕಬೇಕು, ಹಾಕಬಾರದು ಎಂಬುದನ್ನು ನೋಡೋಣ... 

ಗೂಬೆ (owl) ವಾಹನದೊಂದಿಗಿನ ಫೋಟೊ
ಲಕ್ಷ್ಮೀ ದೇವಿಯು ಮನೆಯಲ್ಲೇ ನೆಲೆಸಿದ್ದರೆ ಸಂಪತ್ತು ಹೆಚ್ಚಾಗುತ್ತದೆ. ಜೊತೆಗೆ ಸಮೃದ್ಧಿ ಸಹ ಉಂಟಾಗುತ್ತದೆ. ಗೂಬೆ ಲಕ್ಷ್ಮೀ ದೇವಿಯ ವಾಹನವಾಗಿದೆ. ಯಾವುದೇ ಕಾರಣಕ್ಕೂ ಲಕ್ಷ್ಮೀ ದೇವಿಯು ಗೂಬೆ ಮೇಲೆ ಕುಳಿತ ಇಲ್ಲವೇ ಗೂಬೆಯ ಜೊತೆಗೆ ಇರುವ ಫೋಟೊಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಏಕೆಂದರೆ ಈ ಫೋಟೊ ದೇವಿ ಸಂಚಾರ ಮಾಡುವುದರ ಪ್ರತೀಕವಾಗಿದ್ದು, ಲಕ್ಷ್ಮೀ ಸಂಚಾರ ಹೊರಟರೆ ಹಣ ಮನೆಯಲ್ಲಿ (Home) ನಿಲ್ಲುವುದಿಲ್ಲ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ. 

ಈ ಫೋಟೊ ಇಡಿ ಲಕ್ಷ್ಮೀ ಕೃಪೆ ಪಡೆಯಿರಿ
ಆರ್ಥಿಕ ಸಮಸ್ಯೆ (Economic Problem) ತುಂಬಾ ಕಾಡುತ್ತಿದ್ದರೆ ಅಂಥವರು ಮನೆಯಲ್ಲಿ ಲಕ್ಷ್ಮೀಯ ಯಾವ ಫೋಟೋಗಳನ್ನು ಇಟ್ಟುಕೊಳ್ಳಬೇಕು ಎಂಬುದು ಮುಖ್ಯವಾಗುತ್ತದೆ. ಶ್ರೀ ಮಹಾವಿಷ್ಣುವಿನ ಜೊತೆ ಲಕ್ಷ್ಮೀ ದೇವಿಯು ಗರುಡ ದೇವನ (Garuda Deva) ಮೇಲೆ ಕುಳಿತಿರುವ ಫೋಟೊವನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ. ಇದರಿಂದಾಗಿ ವಿಷ್ಣು – ಲಕ್ಷ್ಮೀ ಜೊತೆಗೆ ಗರುಡನ ಕೃಪೆಯೂ ನಿಮ್ಮದಾಗುತ್ತದೆ. ಸಕಲ ಕಷ್ಟಗಳು ಸಹ ನಿವಾರಣೆ ಆಗಿ ಸುಖ-ಸಮೃದ್ಧಿ ನೆಲೆಸುತ್ತದೆ.

ಇದನ್ನು ಓದಿ: ಇದು ಮದುವೆ ವಿಷಯ, ಕುಜ ದೋಷದ ನಿರ್ಲಕ್ಷ್ಯ ಬೇಡ

ಲಕ್ಷ್ಮೀ - ಕುಬೇರ ದೇವನ ಫೋಟೋ
ಲಕ್ಷ್ಮೀಗೆ ಚಂಚಲ ಸ್ವಭಾವವಿದೆ. ಸಕಲ ಸಂಪತ್ತಿಗೆ ಕುಬೇರ (Lord Kubera) ದೇವನು ಸಹ ಒಡೆಯನಾಗಿದ್ದಾನೆ. ಹಾಗಾಗಿ ಲಕ್ಷ್ಮೀ ದೇವಿಯ ಜೊತೆಗೆ ಕುಬೇರ ದೇವರ ಫೋಟೋವನ್ನೂ ಇಟ್ಟುಕೊಂಡರೆ ಬಹಳ ಒಳ್ಳೆಯದು. ಹೀಗೆ ಮಾಡುವುದರಿಂದ ಲಕ್ಷ್ಮೀಯು ಮನೆಯಲ್ಲಿಯೇ ನೆಲೆಸುವುದಲ್ಲದೆ, ಕುಬೇರನ ಕೃಪೆಗೂ ಪಾತ್ರರಾಗಬಹುದು. ಮನೆಯಲ್ಲಿ ಧನ-ಧಾನ್ಯಗಳು ಸಮೃದ್ಧಿಯನ್ನೂ ಕಾಣಬಹುದು. 

ಲಕ್ಷ್ಮೀ ದೇವಿಯಿಂದ ಶ್ರೀಹರಿಯ ಚರಣ ಸ್ಪರ್ಶ
ಶ್ರೀಹರಿಯ (ShreeHari) ಚರಣವನ್ನು ಸ್ಪರ್ಶಿಸುತ್ತಿರುವ ಲಕ್ಷ್ಮೀದೇವಿಯ ಫೋಟೊವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಇವರಿಬ್ಬರ ಕೃಪೆ ಲಭಿಸುತ್ತದೆ. ಅಲ್ಲದೆ, ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.

ಇದನ್ನು ಓದಿ: ನಿಮ್ಮ ಜಾತಕದಲ್ಲಿದೆಯಾ ಈ ಯೋಗ...? ಇದ್ದರೆ ವೃತ್ತಿ, ಉದ್ಯಮದಲ್ಲಿ ಭರ್ಜರಿ ಯಶ!!!

ಇದರ ಜೊತೆಗೆ ಮನೆಯಲ್ಲಿ ಲಕ್ಷ್ಮೀ ದೇವಿಯು ಸದಾ ವಾಸವಾಗಿರಬೇಕೆಂದರೆ ಈ ಮಾರ್ಗಗಳನ್ನು ಅನುಸರಿಸಬೇಕಿದೆ. ಲಕ್ಷ್ಮೀ ದೇವಿಗೆ ಇಷ್ಟವಾದ ಈ ಕೆಲಸಗಳನ್ನು ಮಾಡಬೇಕು.

ಲಕ್ಷ್ಮೀಯು ಮನೆಯಲ್ಲಿ ನೆಲೆಸಬೇಕೆಂದರೆ ಮನೆಯು ಶುಚಿಯಾಗಿರಬೇಕು. ತುಳಸಿ ಗಿಡದಲ್ಲಿ (Tulasi Plant) ಲಕ್ಷ್ಮೀ ವಾಸಿಸುತ್ತಾಳಾದ್ದರಿಂದ ಗಿಡದ ಸುತ್ತ ಮುತ್ತ ಸಾರಿಸಿ, ರಂಗವಲ್ಲಿ ಹಾಕಿ, ಪೂಜಿಸಿ ದೀಪ ಬೆಳಗಬೇಕು. ಬಳಿಕ ಇಷ್ಟಾರ್ಥವನ್ನು ಕೇಳಿಕೊಂಡರೆ ಈಡೇರಲಿದೆ. ದೇವರ ಮನೆಯಲ್ಲಿ ಲಕ್ಷ್ಮೀ ಮತ್ತು ಗಣೇಶನ ಬೆಳ್ಳಿ ವಿಗ್ರಹವನ್ನು (Silver idol) ಇಟ್ಟು ಪ್ರತಿದಿನ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ. 

ಇದರ ಜೊತೆಗೆ ಶ್ರೀ ಮಹಾಲಕ್ಷ್ಮೀ ಅಷ್ಟಕಂ, ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರಂ, ಶ್ರೀ ಸ್ತುತಿ, ಶ್ರೀ ಚಟುಶ್ಲೋಕಿ, ಶ್ರೀ ಸೂಕ್ತ ಸೇರಿದಂತೆ ಇತರ ಪ್ರಮುಖ ದೇವಿ ಸ್ತೋತ್ರಗಳನ್ನು ಪಠಣೆ ಮಾಡಿದರೆ ಲಕ್ಷ್ಮೀ ದೇವಿಯು ಪ್ರಸನ್ನಳಾಗಿ ಆಶೀರ್ವದಿಸುತ್ತಾಳೆ.

Follow Us:
Download App:
  • android
  • ios