ಮನೆಯಲ್ಲಿ ಶಿವಲಿಂಗವಿದ್ದರೆ ಈ ತಪ್ಪನ್ನೆಲ್ಲಾ ಮಾಡಬೇಡಿ..
ಶಿವಲಿಂಗವನ್ನು ಮನೆಯಲ್ಲಿ ಸ್ಥಾಪಿಸುವುದರಿಂದ ಅನೇಕ ಪ್ರಕಾರದ ಲಾಭಗಳನ್ನು ಪಡೆಯಬಹುದಾಗಿದೆ. ಆದರೆ ಶಿವಲಿಂಗವನ್ನು ಮನೆಯಲ್ಲಿ ಸ್ಥಾಪಿಸಿದರೆ ಅದಕ್ಕೆ ನಿಯಮ ಬದ್ಧವಾಗಿ ಪೂಜೆಯನ್ನು ಸಲ್ಲಿಸುವುದರ ಜೊತೆಗೆ ಕೆಲವು ತಪ್ಪುಗಳು ಆಗದಿರುವಂತೆ ನೋಡಿಕೊಳ್ಳಬೇಕು. ಅವು ಯಾವುವು ಎಂಬುದನ್ನು ತಿಳಿಯೋಣ...
ಹಿಂದೂ ಧರ್ಮದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ದೇವರ ಪೂಜೆ ಮಾಡಲಾಗುತ್ತದೆ. ದೇವಸ್ಥಾನ (Temple) ಅಥವಾ ಮನೆಯಲ್ಲೇ ಆದರೂ ಸಂಪೂರ್ಣವಾಗಿ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ. ಮನೆಯಲ್ಲಿ ದೇವರನ್ನು ಇಟ್ಟುಕೊಂಡಾಗ ಅದಕ್ಕೆ ತಕ್ಕ ಅನುಷ್ಠಾನವನ್ನು ಮತ್ತು ಪೂಜಾ ನಿಯಮವನ್ನು ಪಾಲಿಸಬೇಕಾಗುತ್ತದೆ. ಹಾಗೆ ಮಾಡದೇ ಅದು ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ಇಂತಹ ದೇವರುಗಳಲ್ಲಿ ಶಿವಲಿಂಗವು (Shivalinga) ಸಹ ಒಂದಾಗಿದೆ.
ಶಾಸ್ತ್ರ ಮತ್ತು ಪುರಾಣಗಳಲ್ಲಿ ಹೇಳುವ ಪ್ರಕಾರ ಶಿವನ (Lord Shiva) ಕೃಪೆಗೆ ಪಾತ್ರರಾಗಬೇಕೆಂದರೆ ಶಿವ ಲಿಂಗವನ್ನು ಪೂಜಿಸಿ, ಆರಾಧಿಸುವುದು ಪ್ರಶಸ್ತವಾದ ಮಾರ್ಗವೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ಶಿವಲಿಂಗವನ್ನು ಇಟ್ಟು ಶ್ರದ್ಧಾ ಭಕ್ತಿಯಿಂದ (Devotion) ನಿಯಮಾನುಸಾರ ಪೂಜೆ ಸಲ್ಲಿಸುವುದರಿಂದ ಮನೋ ಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.
ಪುರಾಣ ಗ್ರಂಥಗಳು ಹೇಳುವ ಪ್ರಕಾರ ಶಿವಲಿಂಗವನ್ನು ಕೇವಲ ದರ್ಶನ ಮಾಡುವುದರಿಂದಲೇ ಮನೋಕಾಮನೆಗಳು ಈಡೇರುತ್ತವೆ. ಅಷ್ಟೇ ಅಲ್ಲದೆ ಆರಾಧಿಸುವುದರಿಂದ ಯಶಸ್ಸು (Success), ಸಂಪತ್ತು (Wealth), ಆರೋಗ್ಯ (Health) ಮತ್ತು ಧೈರ್ಯ (Brave) ಎಲ್ಲವೂ ಪ್ರಾಪ್ತವಾಗುತ್ತದೆ. ಮತ್ತು ಶಿವಲಿಂಗವನ್ನು ಪೂಜಿಸುವುದರಿಂದ ಜನ್ಮ ಜನ್ಮಾಂತರಗಳ ಪಾಪ ನಾಶವಾಗುತ್ತದೆ.
ಹಾಗಾಗಿ ಸಾಮಾನ್ಯವಾಗಿ ಎಲ್ಲರೂ ಶಿವನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ ಕೆಲವರು ಶಿವಲಿಂಗವನ್ನು ಮನೆಯಲ್ಲೇ ಸ್ಥಾಪನೆ ಮಾಡಿ, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಹೀಗೆ ಮಾಡುವುದರಿಂದ ಸಹ ಶಿವನ ಕೃಪೆಗೆ ಪಾತ್ರರಾಗಬಹುದಾಗಿದೆ. ಆದರೆ, ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಲಾಭಗಳು (Benefit) ಎಷ್ಟಿವೆಯೋ, ನಿಯಮಾನುಸಾರ ಶಿವಲಿಂಗಕ್ಕೆ ಪೂಜೆ ಸಲ್ಲದೇ ಹೋದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಶಿವ ಲಿಂಗವನ್ನು ಪೂಜಿಸುವ ನೆನಪಿಡಬೇಕಾದ ಕೆಲವು ಅಂಶಗಳನ್ನು ತಿಳಿಯುವುದು ಅತ್ಯಗತ್ಯ.
ಹಣಕಾಸು ಸಮೃದ್ಧಿಗೆ ಮನೆಯಲ್ಲಿರಲಿ ಈ ಶಂಖ!
ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜಿಸುತ್ತಿದ್ದರೆ, ಕೆಲವು ನಿಯಮಗಳನ್ನು (Rules) ಪಾಲಿಸುವುದು ಅಷ್ಟೇ ಮುಖ್ಯವಾಗುತ್ತದೆ. ಇದರಿಂದಲೇ ಮನೆ ಸಮೃದ್ಧಿ ಮತ್ತು ಸಂತೋಷವನ್ನು (Happiness) ಕಾಣುವುದು. ಈ ನಿಯಮಗಳನ್ನು ಮೀರಿದಾಗ ತೊಂದರೆಗಳು ಉಂಟಾಗುತ್ತವೆ. ಹಾಗಾದರೆ ಶಿವಲಿಂಗ ಮನೆಯಲ್ಲಿದ್ದಾಗ ಈ ತಪ್ಪುಗಳನ್ನು ಮಾಡಬಾರದು ಅವು ಯಾವುವು ಎಂಬುದನ್ನು ತಿಳಿಯೋಣ..
• ಶಿವಲಿಂಗವನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಅದಕ್ಕೆ ನಿತ್ಯವೂ ಪೂಜೆ ಸಲ್ಲಬೇಕು. ಅಷ್ಟೇ ಅಲ್ಲದೆ ಶಿವಲಿಂಗವನ್ನು ಇಟ್ಟ ಜಾಗವು ಸ್ವಚ್ಚವಾಗಿರಬೇಕು. ಕೊಳಕಾದ ಜಾಗದಲ್ಲಿ (Place) ಮತ್ತು ತುಂಬಾ ಚಿಕ್ಕದಾದ (Congested) ಜಾಗದಲ್ಲಿ ಶಿವಲಿಂಗವನ್ನು ಸ್ಥಾಪಿಸಬಾರದು. ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
• ಮಹಿಳೆಯರ ಅಂದವನ್ನು ಹೆಚ್ಚಿಸಲು ಇರುವ ಅರಿಶಿಣವನ್ನು (Turmeric) ಕೆಲವು ದೇವರಿಗೆ ಅರ್ಪಿಸುವುದು ನಿಷಿದ್ಧವಾಗಿದೆ. ಹಾಗೆಯೇ ಅರಿಶಿಣವನ್ನು ಶಿವಲಿಂಗಕ್ಕೂ ಅರ್ಪಿಸುವುದು ನಿಷಿದ್ಧವಾಗಿದೆ.
• ಮನೆಯಲ್ಲಿ ಇಟ್ಟಿರುವ ಶಿವಲಿಂಗಕ್ಕೆ ಮರೆತು ಸಹ ಕುಂಕುಮವನ್ನು (Kumkuma) ಹಚ್ಚಬಾರದು. ಕುಂಕುಮವು ಸೌಭಾಗ್ಯದ ಪ್ರತೀಕವಾಗಿದೆ. ಶಿವನನ್ನು ಲಯಕರ್ತನೆಂದು ಕರೆಯಲಾಗುತ್ತದೆ. ವಿನಾಶದ ದೇವರಾಗಿರುವ ಶಿವನಿಗೆ ಮತ್ತು ಶಿವಲಿಂಗಕ್ಕೆ ಕುಂಕುಮವನ್ನು ಲೇಪಿಸಬಾರದು.
ಲಕ್ಷ್ಮೀ ದೇವಿಯ ಈ ಫೋಟೋಗಳು ಮನೆಯಲ್ಲಿ ಬೇಡ!
• ಶಿವಲಿಂಗಕ್ಕೆ ತುಳಸಿಯನ್ನು(Tulsi) ಅರ್ಪಿಸಬಾರದು. ಮಹಾ ವಿಷ್ಣುವಿಗೆ (Lord vishnu) ಪ್ರಿಯವಾದ ತುಳಸಿಯನ್ನು ಶಿವಲಿಂಗಕ್ಕೆ ಅರ್ಪಿಸುವ ಬದಲಾಗಿ, ಬಿಲ್ವ ಪತ್ರೆಯನ್ನು (Bilva) ಅರ್ಪಿಸಿದರೆ ಶಿವನ ಕೃಪೆ ಪ್ರಾಪ್ತವಾಗುತ್ತದೆ. ಅಷ್ಟೆ ಅಲ್ಲದೆ ಪ್ರತಿನಿತ್ಯ ಸ್ನಾನಾದಿಗಳನ್ನು ಮುಗಿಸಿ ಶುಚಿರ್ಭೂತರಾದ ಬಳಿಕ ಶಿವಲಿಂಗಕ್ಕೆ ಗಂಧವನ್ನು ಹಚ್ಚಬೇಕು.
• ಶಿವಲಿಂಗಕ್ಕೆ ತೆಂಗಿನಕಾಯಿ ನೀರನ್ನು (Coconut water) ಅರ್ಪಿಸಬಾರದು. ತೆಂಗಿನ ಕಾಯಿಯನ್ನು ಅರ್ಪಿಸಬಹುದಾಗಿದೆ. ಅಷ್ಟೇ ಅಲ್ಲದೆ ಕೇದಿಗೆ ಮತ್ತು ಸಂಪಿಗೆ (Champa) ಹೂವುಗಳನ್ನು ಸಹ ಶಿವಲಿಂಗಕ್ಕೆ ಅರ್ಪಿಸುವುದು ನಿಷಿದ್ಧವಾಗಿದೆ. ಯಾಕೆಂದರೆ ಈ ಹೂವುಗಳು (Flower) ಶಿವನಿಂದಲೇ ಶಾಪಕ್ಕೆ ಒಳಗಾಗಿದ್ದವು ಎಂದು ಹೇಳಲಾಗುತ್ತದೆ.