ದುಡ್ಡನ್ನು ಯಾರಾದ್ರೂ ಬೇಡ ಅಂತಾರಾ? ಹೀಗ್ ಮಾಡಿದ್ರೆ ಜೇಬು ತುಂಬುತ್ತೆ ನೋಡಿ!
ಪ್ರತಿಯೊಬ್ಬರಿಗೂ ಹಣ ಬೇಕು. ಇದಕ್ಕಾಗಿ ಸಾಕಷ್ಟು ಪ್ರಯತ್ನ ನಡೆದಿರುತ್ತದೆ. ಆದ್ರೆ ಎಲ್ಲ ಪ್ರಯತ್ನ ವಿಫಲವಾದಾಗ ಜನರು ದೇವರ ಮೊರೆ ಹೋಗ್ತಾರೆ. ಆರಂಭದಲ್ಲಿಯೇ ಕೆಲ ನಿಯಮ ಪಾಲನೆ ಮಾಡಿದ್ರೆ ಹಣದ ಹೊಳೆ ಹರಿಯೋದು ನಿಶ್ಚಿತ.
ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಿದೆ. ಅನೇಕ ಬಾರಿ ಕೈ ಎಷ್ಟೇ ಕೆಸರಾದ್ರೂ ನಿರೀಕ್ಷಿಸಿದ ಫಲ ಮಾತ್ರ ಸಿಗೋದಿಲ್ಲ. ಏನು ಅಂದ್ಕೊಂಡಿರ್ತೇವೋ ಅದು ನಡೆಯೋದಿಲ್ಲ. ನಮ್ಮ ಇಷ್ಟದಂತೆ ಯಾವುದೂ ಆಗಿಲ್ಲ ಎಂದಾಗ ಮನಸ್ಸು ನಿರಾಸೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕೆಲ ಜ್ಯೋತಿಷ್ಯ ತಂತ್ರಗಳನ್ನು ಪಾಲನೆ ಮಾಡಿದ್ರೆ ಒಳ್ಳೆಯದು. ಇದ್ರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಹಣದ ಸಮಸ್ಯೆ ಸದಾ ಕಾಡ್ತಿದೆ, ಎಷ್ಟೇ ಪ್ರಯತ್ನ ನಡೆಸಿದ್ರೂ ಖಜಾನೆಯಲ್ಲಿ ಹಣ ತುಂಬುತ್ತಿಲ್ಲ ಎನ್ನುವವರು ಕೆಲ ಟಿಪ್ಸ್ ಪಾಲನೆ ಮಾಡ್ಬೇಕು.
ಆರ್ಥಿಕ ವೃದ್ಧಿಗೆ ಮಾಡಿ ಈ ಕೆಲಸ :
ಲಕ್ಷ್ಮಿ (Lakshmi) ಗೆ ಇದನ್ನು ಅರ್ಪಿಸಿ : ಮನೆಯಲ್ಲಿ ಹಣ (Money) ನಿಲ್ಲುತ್ತಿಲ್ಲ, ಸಂಪಾದಿಸಿದ್ದೆಲ್ಲ ಖರ್ಚಾಗ್ತಿದೆ ಎನ್ನುವವರು ಲಕ್ಷ್ಮಿ ದೇವಿಗೆ ಒಂದು ರೂಪಾಯಿ ನಾಣ್ಯವನ್ನು ಅರ್ಪಿಸಬೇಕು. ಈ ನಾಣ್ಯವನ್ನು ಮನೆಯ ಹಿಟ್ಟಿನ ಡಬ್ಬಿಯಲ್ಲಿ ಇಡಬೇಕು. ಹೀಗೆ ಮಾಡಿದ್ರೆ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಹಣ ಪೋಲಾಗ್ತಿದ್ದರೆ ಹೀಗೆ ಮಾಡಿ : ಪರ್ಸ್ (Purse ) ನಲ್ಲಿಟ್ಟ ಹಣ ಪೋಲಾಗ್ತಿದೆ ಎಂದಾದ್ರೆ ನೀವು ಪರ್ಸ್ ನಲ್ಲಿ 7 ಲವಂಗವನ್ನು ಇಡಬೇಕು. ಇದು ದುಂದು ವೆಚ್ಚವನ್ನು ಕಡಿಮೆ ಮಾಡುತ್ತದೆ.
ಶೀಘ್ರ ಧನ ಪ್ರಾಪ್ತಿಗೆ ಹೀಗೆ ಮಾಡಿ : ಸಿಲುಕಿಕೊಂಡ ಹಣ ಸಿಕ್ಕಿಲ್ಲ ಎಂದಾದ್ರೆ ಅಥವಾ ಶೀಘ್ರ ಹಣ ಪ್ರಾಪ್ತಿಗಾಗಿ ನೀವು ತಾ ಯಿ ಲಕ್ಷ್ಮಿಗೆ ದಾಸವಾಳದ ಹೂವನ್ನು ಅರ್ಪಿಸಬೇಕು. ಶುಕ್ರವಾರದ ದಿನ ನೀವು ಈ ಕೆಲಸ ಮಾಡಬೇಕಾಗುತ್ತದೆ.
ಸಂಪತ್ತು ಹೆಚ್ಚಾಗಬೇಕೆಂದ್ರೆ ಹೀಗೆ ಮಾಡಿ : ದೀರ್ಘಕಾಲದವರೆಗೆ ಉದ್ಯೋಗದಲ್ಲಿ ಬಡ್ತಿ ಸಿಕ್ಕಿಲ್ಲವೆಂದಾದ್ರೆ ಅಥವಾ ವ್ಯಾಪಾರದಲ್ಲಿ ಲಾಭವಾಗ್ತಿಲ್ಲ ಎನ್ನುವುದಾದ್ರೆ ನೀವು ಸಂಜೆ ಸೂರ್ಯಾಸ್ತದ ನಂತರ ದೇವರ ಮನೆಯಲ್ಲಿ ಕರ್ಪೂರದ ದೀಪ ಬೆಳಗಬೇಕು. ಪ್ರತಿ ದಿನ ಹೀಗೆ ಮಾಡಿದ್ರೆ ಲಕ್ಷ್ಮಿ ಒಲಿಯುತ್ತಾಳೆ. ಸಂಪತ್ತು ಹೆಚ್ಚಾಗುತ್ತದೆ.
ಕಳೆದುಕೊಂಡ ಹಣ ಪಡೆಯಲು ಹೀಗೆ ಮಾಡಿ : ಕಳೆದುಕೊಂಡ ಹಣ ಸಿಗೋದು ಬಹಳ ಕಷ್ಟ. ಅದನ್ನು ವಾಪಸ್ ಪಡೆಯಲು ಪ್ರತಿಯೊಬ್ಬರೂ ಪ್ರಯತ್ನ ನಡೆಸುತ್ತಾರೆ. ಕಳೆದ ಹಣ ಸಿಗಬೇಕೆಂದ್ರೆ ನೀವು ಶನಿವಾರ, ಶನಿ ದೇವರಿಗೆ ಎಳ್ಳಿನ ದಾನ ಮಾಡಬೇಕು. ಇದ್ರಿಂದ ಶೀಘ್ರ ಹಣ ವಾಪಸ್ ಬರುತ್ತದೆ.
ಹೊಸ ಅವಕಾಶಕ್ಕೆ ಮಾಡಿ ಈ ಕೆಲಸ : ಹಣ ಗಳಿಸಲು ಹೊಸ ಅವಕಾಶಗಳನ್ನು ಅನೇಕರು ಹುಡುಕುತ್ತಿರುತ್ತಾರೆ. ನೀವೂ ಇವರಲ್ಲಿ ಒಬ್ಬರು ಎಂದಾದ್ರೆ ನೀವು ಮನೆಯಿಂದ ಹೊರಗೆ ಹೊರಡುವ ಮೊದಲು ಮುಖ್ಯ ಬಾಗಿಲಿನ ಬಳಿ ಒಂದು ಲೋಟ ನೀರನ್ನು ಇಟ್ಟು ಹೋಗಿ. ಪ್ರತಿ ದಿನ ಹೀಗೆ ಮಾಡೋದ್ರಿಂದ ಹೊಸ ಹೊಸ ಅವಕಾಶಗಳು ನಿಮಗೆ ಪ್ರಾಪ್ತಿಯಾಗುತ್ತವೆ.
ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಮಾರ್ಗ : ದೀರ್ಘಕಾಲದಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಶುಕ್ರವಾರದಂದು ಲಕ್ಷ್ಮಿ ದೇವಿಗೆ ಕಮಲದ ಹೂವನ್ನು ಅರ್ಪಿಸಬೇಕು.
LOVE 2023: ಹೊಸ ವರ್ಷದಲ್ಲಿ ಈ 5 ರಾಶಿಯವರು ಪ್ರೀತಿ, ಪ್ರಣಯ, ವಿವಾಹದಲ್ಲಿ ಲಕ್ಕಿ
ಸಾಲ ಮರುಪಾವತಿಯಾಗ್ತಿಲ್ಲವೆಂದ್ರೆ ಹೀಗೆ ಮಾಡಿ : ಯಾರಿಗಾದ್ರೂ ನೀವು ಹಣ ನೀಡಿದ್ದು, ಅದನ್ನು ಅವರು ವಾಪಸ್ ನೀಡ್ತಿಲ್ಲ ಎಂದಾದ್ರೆ ಸೂರ್ಯ ದೇವನಿಗೆ ದಾಸವಾಳದ ಹೂವನ್ನು ಅರ್ಪಿಸಬೇಕು. ಹಾಗೆಯೇ ನೀರನ್ನು ಅರ್ಪಿಸಬೇಕು. ಹೀಗೆ ಮಾಡಿದ್ರೆ ಸಾಲ ನೀಡಿದ ಹಣ ವಾಪಸ್ ಬರುತ್ತದೆ.
ಸಂಬಳ ಹೆಚ್ಚಾಗಲು ಹೀಗೆ ಮಾಡಿ : ಆರ್ಥಿಕ ಸ್ಥಿತಿ ಸುಧಾರಿಸಬೇಕು, ಸಂಬಳ ಹೆಚ್ಚಾಗಬೇಕು ಎಂದಾದ್ರೆ ನೀವು ಕಚೇರಿಯಲ್ಲಿ ಕುಳಿತುಕೊಳ್ಳುವ ಸ್ಥಳದಲ್ಲಿ, ಮೇಜಿನ ಮೇಲೆ ಆಮೆಯನ್ನು ಇಡಿ. ಪ್ಲೇಟ್ ಮೇಲೆ ಆಮೆಯನ್ನು ಇಡಬೇಕು. ಹಿತ್ತಾಳೆ, ಗಾಜು ಅಥವಾ ಮಣ್ಣಿನ ಆಮೆಯನ್ನು ನೀವು ಇಡಬೇಕಾಗುತ್ತದೆ.
Vastu Tips : ಕಚೇರಿಯಲ್ಲಿಈ ವಸ್ತುಗಳನ್ನಿಟ್ಟರೆ ಉತ್ತರೋತ್ತರ ಏಳಿಗೆ ಆಗೋದು ಗ್ಯಾರಂಟಿ
ಪೂರ್ವಜರ ಆಸ್ತಿ ಪಡೆಯಲು : ಪೂರ್ವಜರ ಆಸ್ತಿ ನಿಮಗೆ ಸಿಗಬೇಕೆಂದ್ರೆ ಶುಕ್ರವಾರ ಲಕ್ಷ್ಮಿಗೆ ತೆಂಗಿನಕಾಯಿಯನ್ನು ಅರ್ಪಿಸಬೇಕು.