ಚಂದ್ರನು ಸಂಬಂಧಗಳ ಅಧಿಪತಿ. ಅವನ ಸ್ವಭಾವ ತಂಪು. ಚಂದ್ರಗ್ರಹಣ ಆಗುವುದು ಎಂದರೆ ಸೂರ್ಯನಿಗೂ ಚಂದ್ರನಿಗೂ ಮಧ್ಯೆ ಅಡ್ಡ ಬರುವ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದು. ಹೀಗಾಗಿ ಚಂದ್ರ ಕಾಣದಾಗುವುದು. ಸ್ವಲ್ಪ ಕಾಲದವರೆಗೆ ಚಂದ್ರನು ಭೂಮಿಯ ಮೇಲಿನಿಂದ ಅದೃಶ್ಯನಾಗುವನು. ಇದರಿಂದ ಅನೇಕ ಮಂದಿಯ ಸಂಬಂಧಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಸತ್ಪರಿಣಾಮವೂ ಇದೆ, ದುಷ್ಪರಿಣಾಮವೂ ಇದೆ.

"

ಮೇಷ ರಾಶಿ

ಮೇಷ ರಾಶಿಯವರು ಈ ಗ್ರಹಣಧ ಹೆಚ್ಚಿನ ದುಷ್ಪರಿಣಾಮವನ್ನು ಕಾಣಬಹುದು. ಆತ್ಮೀಯ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಗಂಡ- ಹೆಂಡತಿ ನಡುವೆ ವಿರಸ ಉಂಟಾಗಬಹುದು, ಆಗ ನಿಮ್ಮ ಸಂಬಂಧವನ್ನು ಪುನರ್‌ ಸ್ಥಾಪಿಸಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಮೇಷ ರಾಶಿಯವರಿಗೆ ಮಿಥುನ ರಾಶಿಯವರು ಸಂಬಂಧಿಗಳಾಗಿದ್ದರಂತೂ ಹೆಚ್ಚಿನ ಅಹಂ ತಾಕಲಾಟ, ಘರ್ಷಣೆ ತಪ್ಪಿದ್ದಲ್ಲ. ಅಹಂಕಾರದ ಕೈಗೆ ಬುದ್ಧೀ ಕೊಡಬಾರದು. ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಒಳಿತಾಗುತ್ತದೆ.

ಮಿಥುನ ರಾಶಿ

ಮಿಥುನ ರಾಶೀಯವರು ಜಾಗರೂಕರಾಗಿರಬೇಕು. ಗಂಡ- ಹೆಂಡತಿ ನಡುವೆ ನಾನಾ ಮನಸ್ತಾಪ ಉಂಟಾಗಬಹುದು. ಮನೆಯಲ್ಲಿ ಸಂಬಂಧಗಳು ಹದಗೆಡಬಹುದು. ಅಪ್ಪ- ಮಕ್ಕಳು, ಅಮ್ಮ- ಮಕ್ಕಳ ನಡುವೆಯೂ ಕಲಹ ಉಂಟಾಗಬಹುದು. ಸಣ್ಣ ಪುಟ್ಟ ಕಾರಣಗಳೂ ಕಲಹಕ್ಕೆ ಕಾರಣ. ಯಾವುದನ್ನೂ ಕ್ಷುಲ್ಲಕ ಎಂದು ಪರಿಗಣಿಸಬೇಡಿ.ಸೃಷ್ಟಿಯಲ್ಲಿ ಯಾವುದೂ ಸಣ್ಣದಲ್ಲ. ದೇವಿ ಅಪರಾಧ ಕ್ಷಮಾಪಣ ಸ್ತೋತ್ರವನ್ನು ಪಠಿಸುವುದರಿಂದ ಲೇಸಾಗುತ್ತದೆ.

ಕುಂಭ ರಾಶಿ

ಈ ರಾಶಿಯವರಿಗೆ ಚಂದ್ರನು ಕುಂಭದ ತುಂಬ ಕಷ್ಟವನ್ನು ಕೊಡುತ್ತಾನೆ ಎಂದು ಲೆಕ್ಕ. ಈ ಕುಂಭವನ್ನು ಮಗುಚಿಬಿಡಬೇಕು. ಅಂದರೆ ನೀವು ಇದುವರೆಗೆ ಗಳಿಸಿದ್ದನ್ನು ಸತ್ಕಾರ್ಯಕ್ಕೆ ವಿನಿಯೋಗಿಸುವುದರಿಂದ ಒಳಿತಾಗುತ್ತದೆ. ಕಚೇರಿಯಲ್ಲಿ ಸಂಬಂಧಗಳು ಹಳಸಬಹುದು. ಬಾಸ್‌ ರೇಗಬಹುದು. ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ಟೈಮ್‌ ಸರಿಯಾಗಿಲ್ಲ. ಆದರೆ ಮುಂದೆ ಕೆಲವೇ ದಿನಗಳಲ್ಲಿ ಸರಿಯಾಗುತ್ತದೆ. ಶಿವಪಂಚಾಕ್ಷರಿ ಮಂತ್ರ ಜಪಿಸಿ.

ಮೀನ ರಾಶಿ

ನೀವು ಮೀನಿನಂತೆ ನೀರಿನೊಳಗೆ ಸದ್ದಿಲ್ಲದೆ ಸಂಚರಿಸುವ ಸ್ವಭಾವದರೇ ಆಗಿದ್ದರೂ ಕೆಲವೊಮ್ಮೆ ಸದ್ದು ಮಾಡಬೇಕಾಗಬಹುದು. ಕರ್ಕಟಕ ಅಥವಾ ಧನುಸ್ಸು ರಾಶಿಯವರೊಂದಿಗೆ ನೀವು ಸಂಬಂಧಿಕರಾಗಿದ್ದಲ್ಲಿ ಜಗಳ ತಪ್ಪಿದ್ದೇ ಅಲ್ಲ. ಚಂದ್ರನು ನಿಮ್ಮ ಮನಸ್ಸಿನ ಮೇಲೆ ವ್ಯಗ್ರವಾಗುವಂಥ ಪರಿಣಾಮ ಬೀರಬಹುದು. ಆದರೆ ತಾಳ್ಮೆಗೆಟ್ಟು ವ್ಯವಹರಿಸಬೇಡಿ. ಚಂದ್ರನಿಂದಲೇ ನೀವು ತಂಪಿನ ಅನುಭವ ಪಡೆಯುತ್ತೀರಿ. ಅಷ್ಟಾಕ್ಷರಿ ಮಂತ್ರ ಪಠಿಸಿ.

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ ! 

ವೃಶ್ಷಿಕ ರಾಶಿ

ನಿಮಗೆ ಇನ್ನು ಕೊಂಚ ಕಾಲ ಕಷ್ಟಗಳು ಕಾದಿರುತ್ತವೆ. ಮನೆಯಿಂದಲೇ ಕೆಲಸ ಮಾಡಬೇಕಾಗಿ ಬರಬಹುದು. ಹೊಸ ಸಾಹಸಗಳಿಗೆ ಕೈ ಹಾಕುವ ಮನಸ್ಸು ಇದ್ದರೆ ಸದ್ಯಕ್ಕೆ ಅದು ಬೇಡ. ಮನೆಯಲ್ಲಿರುವ ವಯಸ್ಸಾದವರನ್ನು ಹಾಗೂ ಮಕ್ಕಳನ್ನು ಚೆನ್ನಾಗಿ, ಪ್ರೀತಿಯಿಂದ ನೋಡಿಕೊಳ್ಳಿ. ದೇವರ ಸೇವೆ ಶ್ರದ್ಧೆಯಿಂದ ಮಾಡಿ. ಅದೇ ನಿಮ್ಮನ್ನು ಕಾಪಾಡುತ್ತದೆ. ಹನುಮಾನ್‌ ಚಾಲೀಸ್‌ ಪಠಿಸುವುದರಿಂಧ ಒಳ್ಳೆಯದಾಗುತ್ತದೆ.

ಈ ರಾಶಿಯವರು ಸೆಕ್ಸ್, ಲವಲ್ಲಿ ಭಲೇ ಹುಷಾರ್! 

ಕರ್ಕಟಕ ರಾಶಿ

ನಿಮಗೆ ಚಂದ್ರನ ಆಶೀರ್ವಾದವಿದೆ. ಸೂರ್ಯನು ಸ್ವಲ್ಪ ತಾಪವನ್ನು ನಿಮ್ಮ ಮೇಲೆ ತೋರಿಸಬಹುದು. ಇದರಿಂದ ಶೀತಬಾಧೆ, ವಾಯುಬಾಧೆಗಳು ಕಾಡಬಹುದು. ಹತ್ತಿರದ ಬಂಧುಗಳ ಜೊತೆಗೆ ಕಲಹ ಮೂಡಿ ಬರಬಹುದು. ಆದರೆ ಇದೆಲ್ಲವೂ ಚಂದ್ರಗ್ರಹಣದಂತೆಯೇ ಕರಗಿ ಹೋಗುತ್ತದೆ. ಕಚೇರಿ ಕೆಲಸ ಅನುಕೂಲಕರವಾಗಿದೆ. ಲಲಿತಾ ಸಹಸ್ರನಾಮ ಪಠಿಸುವುದರಿಂದ ನಿಮಗೆ ಶ್ರೇಯಸ್ಸು ಆಗುವುದು.

ಆರೋಗ್ಯವಾಗಿರಲು ಯಾವ ರಾಶಿಯವರು, ಯಾವ ಆಹಾರ ಸೇವಿಸಬೇಕು? 

ತುಲಾ ರಾಶಿ

ನೀವು ದಿನವೂ ನೋಡುವ, ಓಡಾಡುವ, ಒಡನಾಡುವ ವೃತ್ತಿಯವರು, ಸಹೋದ್ಯೋಗಿಗಳಿಂದ ನಿಮ್ಮ ಅಹಂಗೆ ಏಟು ಬೀಳಬಹುದು. ಇಷ್ಟು ಕಾಲ ನನ್ನ ಜೊತೆಗೆ ಚೆನ್ನಾಗಿದ್ದವರು ಇವರೇನಾ ಎಂಬಂಧ ಅನುಮಾನ ದುಃಖಗಳೂ ಕಾಡಬಹುದು. ಆದರೆ ಅದು ಕೂಡ ತಾತ್ಕಾಲಿಕ. ಚಂದ್ರನ ಬೆಳಕು ಮತ್ತೆ ಬಂದಾಗ ಎಲ್ಲ ನಿಚ್ಚಳವಾಗಿ ಕಾಣುವಂತೆ ಸಂಬಂಧಗಳು ಕಾಣುತ್ತವೆ. ವ್ಯಗ್ರತೆಯನ್ನು ಮನದಲ್ಲಿ ಇಟ್ಟುಕೊಳ್ಳಬೇಡಿ. ಮೃತ್ಯುಂಜಯ ಮಂತ್ರಜಪ ಶ್ರೇಯಸ್ಕರ.