ತಾನು ಇನ್ಮೇಲಾದ್ರೂ ಹುಷಾರಾಗಿರಬೇಕು. ಯಾವ ಹುಡುಗಿ ಅಥವಾ ಹುಡುಗನ ಕಡೆಗೂ ಕಣ್ಣೆತ್ತಿಯೂ ನೋಡಬಾರದು. ತುಂಬಾ ಡೀಸೆಂಟ್ ಆಗಿರಬೇಕು ಅಂತ ಮನಸ್ಸಲ್ಲಿ ಸಾಕಷ್ಟು ಸಲ ಪ್ರತಿಜ್ಞೆ ಮಾಡಿಕೊಂಡಿರುತ್ತಾರೆ. ಆದರೆ ಅದೆಲ್ಲ ಕೆಲವು ಕ್ಷಣಗಳಿಗಷ್ಟೇ. ಯೋಚಿಸುತ್ತಿದ್ದ ಹಾಗೇ ಇವರಿಗೆ ಅಪೊಸಿಟ್ ಸೆಕ್ಸ್ ನವರ ಮೇಲೆ ಕ್ರಶ್ ಆಗುತ್ತೆ. ಇದಕ್ಕೆ ಅವರ ರಾಶಿಯೂ ಮುಖ್ಯ ಕಾರಣ. ಆ ರಾಶಿಯ ವಿವರ, ಅವರ ಗುಣಗಳ ಬಗೆಗಿನ ವಿವರ ಇಲ್ಲಿದೆ.

ಮೇಷ ರಾಶಿ
ಲೀಡರ್ ಶಿಪ್ ಕ್ವಾಲಿಟಿ, ಮುನ್ನುಗ್ಗುವ ಗುಣ, ಆಕರ್ಷಕ ಮೈಕಟ್ಟು ಇತ್ಯಾದಿಗಳಿರುವ ನೀವು ಹೊರಗಿನಿಂದ ನೋಡುವವರಿಗೆ ಮಾನಸಿಕವಾಗಿ ಬಹಳ ಸ್ಟ್ರಾಂಗ್ ಅನಿಸುತ್ತೀರಿ. ಆದರೆ ನಿಮ್ಮೊಳಗೆ ಸಾಕಷ್ಟು ಗೊಂದಲಗಳು ನಿಮ್ಮನ್ನು ಹೈರಾಣು ಮಾಡುತ್ತಿರುತ್ತವೆ. ಒಂದೋ ನೀವು ಬಹಳ ಎತ್ತರದಲ್ಲಿರುತ್ತೀರಿ, ಇಲ್ಲವಾದರೆ ಕೆಳಗೆ ಬಿದ್ದಿರುತ್ತೀರಿ. ಮೀಡಿಯಂ ಲೆವೆಲ್‌ನಲ್ಲಿ ಲೈಫ್ ಮೈಂಟೇನ್ ಮಾಡೋದು ನಿಮ್ಮಿಂದಾಗದ್ದು. ಹಿಂದೆ ಮುಂದೆ ನೋಡದೇ ರಿಸ್ಕ್ ತೆಗೆದುಕೊಳ್ಳೋ ಬುದ್ಧಿಯೇ ಇದಕ್ಕೆ ಕಾರಣ. ನಿಮ್ಮ ಈ ಸಾಹಸಮಯ ಸ್ವಭಾವ ವಿರುದ್ಧ ಲಿಂಗಿಗಳನ್ನು ನಿಮ್ಮೆಡೆಗೆ ಆಕರ್ಷಿಸುವ ಹಾಗೆ ಮಾಡುತ್ತೆ. ನಿಮ್ಮ ಲೈಪ್‌ನಲ್ಲಿ ಲವ್, ಬ್ರೇಕಪ್‌ಅಪ್ ಕಾಮನ್. ಯಾರಾದರೊಬ್ಬರು ನಿಮ್ಮ ಬಗ್ಗೆ ಮೆಚ್ಚುಗೆ ಮಾತಾಡಿದರೆ ಅಟ್ಟಕ್ಕೇರುವ ನಿಮಗೆ ಇತರರು ಬಂದು ಪ್ರೊಪೋಸ್ ಮಾಡಿದಾಗ ಇಲ್ಲ ಎನ್ನಲಾಗೋದಿಲ್ಲ. ಸೆಕ್ಸ್ ನಲ್ಲೂ ನೀವು ಸಖತ್ ಸ್ಟ್ರಾಂಗ್. ಆದರೆ ನಿಮ್ಮ ಸಂಗಾತಿಯಾಗಿ ಬರುವವರು ದುರ್ಬಲವಾಗಿದ್ದರೆ ಅವರ ಕತೆ ಮುಗೀತು ಅಂತಲೇ ಅರ್ಥ. ಸಮಬಲರಿದ್ದರೆ ಜಗಳ ಗ್ಯಾರೆಂಟಿ. ನಿಮ್ಮ ಜೊತೆಗೆ ಏಗಲು ತುಸು ಸ್ನೇಹಮಯಿ ಸ್ವಭಾವದವರೇ ಬೇಕು. 

ಕಟಕ
ಈ ರಾಶಿಯವರು ಸ್ನೇಹಮಯಿ ವ್ಯಕ್ತಿತ್ವದವರು. ಎದುರಿದ್ದವರ ಜೊತೆಗೆ ಸಲೀಸಾಗಿ ಬೆರೆಯುತ್ತಾರೆ. ವೈರುಧ್ಯ, ಗೊಂದಲ ಕಡಿಮೆ. ಆದರೆ ಸಾಹಸೀ ಮನೋಭಾವ ಹೆಚ್ಚು. ಭಾವುಕತೆ ಹೆಚ್ಚು. ಏನೇ ಮಾಡೋದಿದ್ದರೂ ಅದನ್ನು ಅಂದವಾಗಿ ಮಾಡುತ್ತಾರೆ. ಈ ರಾಶಿಯವರಿಗೆ ಚಂದ್ರ ಅಧಿಪತಿ. ಹಾಗಾಗಿ ಸದಾ ತಂಪನ್ನೀವ ಚಂದ್ರನ ಹಾಗಿರುತ್ತಾರೆ. ಇವರ ಈ ಸ್ವಭಾವದ ಹಲವರನ್ನು ಆಕರ್ಷಿಸುತ್ತದೆ. ಹಲವರ ಜೊತೆಗೆ ಸ್ನೇಹ ಹೊಂದಿರುತ್ತಾರೆ. ಪ್ರೀತಿಗೆ ಬೀಳುವುದು, ಒಂದಿಷ್ಟು ಕಾಲ ವಿರಹದಲ್ಲಿ ನರಳುವುದು, ಆಮೇಲೆ ಅದರಿಂದ ಹೊರಬರುವುದು ಇವರ ಲೈಫ್ ನಲ್ಲಿ ಆಗುತ್ತಲೇ ಇರುತ್ತದೆ. 

ಆಷಾಢ ಶುಕ್ರವಾರ ಹೀಗ್ ಮಾಡಿದರೆ ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕುತ್ತೆ ...

ಮಿಥುನ
ನೀವು ನೋಡಲು ಬಲು ಸುಂದರ. ನಿಮ್ಮ ತಲೆಯೂ ಭಲೇ ಚಾಲೂ ಆಗಿ ಓಡುತ್ತಿರುತ್ತದೆ. ಆದರೆ ದೇಹ ಮಾತ್ರ ಮೈಗಳ್ಳ. ನಿಮ್ಮ ಪಾದರಸದಷ್ಟು ಚುರುಕಿನ ಮನಸ್ಸಿಗೆ ತಕ್ಕ ಹಾಗೆ ಇರಲು ಸದಾ ವಿರೋಧ ತೋರಿಸುತ್ತಲೇ ಇರುತ್ತದೆ. ಹಾಗಾಗಿ ನೀವು ಅಂದುಕೊಳ್ಳುವುದು ಬಹಳ, ಆದರೆ ಅನುಷ್ಠಾನಕ್ಕೆ ತರುವುದು ತೀರಾ ವಿರಳ. ಹುಡುಗಿಯರ ಕಡೆ ಆಕರ್ಷಿತರಾಗುತ್ತೀರಿ. ಹತ್ತಿರ ಇರುವಷ್ಟು ಕಾಲ ಅವರ ಜೊತೆಗೆ ಪ್ರೀತಿಯಿಂದ ಇರುತ್ತೀರಿ. ಆದರೆ ಅವರು ಕೊಂಚ ಆಚೆ ಹೋದ ಮೇಲೆ ಮನಸ್ಸು ಪಾತರಗಿತ್ತಿಯಾಗುತ್ತದೆ. ನಿಮ್ಮ ಗಮನ ಬೇರೆ ಹುಡುಗಿ ಅಥವಾ ಹುಡುಗನತ್ತ ತಿರುಗುತ್ತದೆ. ಈ ಚಂಚಲ ಬುದ್ಧಿ ನಿಮಗೆ ಪಾಸಿಟಿವ್ ಗಿಂತ ನೆಗೆಟಿವ್ ಆಗೋದೇ ಹೆಚ್ಚು. 

ಶಿವನ ದಯೆ ನಿಮಗಾಗಬೇಕೆಂದರೆ ಶಿವ ಪುರಾಣದ ಈ ಮಾತುಗಳ ಪಾಲಿಸಿ! ...
ಕನ್ಯಾ
ನೋಡಲು ಸುಂದರ. ಆದರೆ ನಿಮ್ಮ ಅತಿಯಾದ ತರ್ಕಬದ್ಧತೆಯಿಂದ ಆಗಾಗ ಬೇಜಾರು. ನೀವು ಇತರರನ್ನು ಅತಿಯಾಗಿ ಹಚ್ಚಿಕೊಳ್ಳುತ್ತೀರಿ. ಒಂಥರಾ ಕರಡಿ ಪ್ರೀತಿ ನಿಮ್ಮದು. ಇದು ಉಸಿರುಗಟ್ಟಿಸುತ್ತದೆ. ಹತ್ತಿರ ಇದ್ದಾಗ ಹೀಗೆ ಉಸಿರುಗಟ್ಟಿಸುತ್ತಾ, ದೂರ ಹೋದ ಕೂಡಲೇ ಮತ್ತೆ ತಿರುಗಿ ನಿಮ್ಮತ್ತ ಬರುವ ಹಾಗೆ ಮಾಡುವ ವಿಚಿತ್ರ ಶಕ್ತಿ ನಿಮ್ಮಲ್ಲಿದೆ. ಭಾವುಕತೆ ಕಡಿಮೆ. ಪ್ರಾಕ್ಟಿಕಲ್ ಆಗಿರೋದೇ ಹೆಚ್ಚು. ನಿಮ್ಮ ಖುಷಿಯನ್ನೇ ಸದಾ ನೋಡುವ ನೀವು ಕೆಲವೊಮ್ಮೆ ನಿಮ್ಮ ಪ್ರೇಮಿಗೇ ಸ್ವಾರ್ಥಿಯಂತೆ ಕಾಣಿಸೋದು ಇದೆ. ಸೆಕ್ಸ್‌ ಲೈಫ್ ನಲ್ಲೂ ನಿಮಗಿಷ್ಟ ಬಂದಾಗ ಮಾತ್ರ ಸಹಕರಿಸುವ ಸ್ವಭಾವ. ನೀವು ಮುಲಾಜಿಗೆ ಬಿದ್ದು ಏನನ್ನಾದರೂ ಮಾಡುವುದು ಕಡಿಮೆ. ಇನ್ನೊಬ್ಬರನ್ನು ಮುಲಾಜಲ್ಲಿ ಸಿಕ್ಕಿಸೋದೇ ಹೆಚ್ಚು. 

ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಎದುರಾಗುವ ತೊಂದರೆ, ಪಾರಾಗುವ ಬಗೆ ತಿಳಿಯಿರಿ! ...