Asianet Suvarna News Asianet Suvarna News

ತಿರುಪತಿಗೆ ಹೋದಾಗ 'ಮುಡಿ' ಕೊಡೋದು ಏಕೆ? ಕೂದಲು ಮಾರಾಟದಿಂದಲೇ ಕೋಟಿ ಕೋಟಿ ಗಳಿಸುವ ಟಿಟಿಡಿ!

ತಿರುಪತಿ ಬಾಲಾಜಿ ದೇವಸ್ಥಾನದ ಬಗ್ಗೆ ಅನೇಕ ನಂಬಿಕೆಗಳು ಮತ್ತು ಆಚರಣೆಗಳು ಚಾಲ್ತಿಯಲ್ಲಿವೆ, ಅವುಗಳಲ್ಲಿ ಒಂದು ಕೂದಲನ್ನು ದಾನ ಮಾಡುವುದು. ಈ ದಾನ ಮಾಡಿದ ಕೂದಲನ್ನು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಹರಾಜು ಮಾಡುತ್ತದೆ. ಹಾಗಾದರೆ, ತಿರುಪತಿಗೆ ಹೋದಾಗ ಮುಡಿ ಕೊಡಬೇಕು ಎಂದು ಹೇಳುವುದು ಯಾಕೆ? ಇಲ್ಲಿದೆ ರೀಸನ್‌..

What happens to the 500-600 tons of hair offered to Tirupati Balaji You will be surprised to know san
Author
First Published Sep 22, 2024, 9:58 PM IST | Last Updated Sep 22, 2024, 9:58 PM IST

ಬೆಂಗಳೂರು (ಸೆ.22): ಸದ್ಯ ತಿರುಪತಿ ತಿಮ್ಮಪ್ಪನ  ದೇವಸ್ಥಾನದ ಪ್ರಸಾದ ಹಾಗೂ ಲಡ್ಡುಗಳಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿರುವ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಭಕ್ತರಿಗೆ ವಿತರಿಸುವ ಪ್ರಸಾದದಲ್ಲಿ ತುಪ್ಪದ ಬದಲು ಹಂದಿ ಕೊಬ್ಬು, ದನದ ಮಾಂಸ ಇತ್ಯಾದಿಗಳನ್ನು ಬಳಸಲಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ತಿರುಪತಿ ಬಾಲಾಜಿ ದೇವಸ್ಥಾನವನ್ನು ಭಾರತದ ಅತ್ಯಂತ ಅದ್ಭುತವಾದ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ತಿರುಮಲ ಅಥವಾ ತಿರುಪತಿ ಬಾಲಾಜಿಯ ಜಗತ್ಪ್ರಸಿದ್ಧ ದೇವಾಲಯವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ತಿರುಮಲ ಬೆಟ್ಟದ ಮೇಲೆ ನೆಲೆಗೊಂಡಿದೆ, ಇಲ್ಲಿ ಭಗವಾನ್ ಶ್ರೀ ಹರಿ ವಿಷ್ಣುವಿನ ಶ್ರೀ ವೆಂಕಟೇಶ್ವರ ರೂಪವನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ, ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ದೇಣಿಗೆ ನೀಡುತ್ತಾರೆ, ಇದರಿಂದಾಗಿ ಇದು ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.

ತಿರುಪತಿ ದೇವಸ್ಥಾನದಲ್ಲಿ ಲಡ್ಡು ಎಷ್ಟು ಫೇಮಸ್‌ ಎನ್ನುವುದು ಎಲ್ಲರಿಗೂ ಗೊತ್ತು. ಅದರೊಂದಿಗೆ ತಿರುಪತಿಗೆ ಹೋದವರು ಒಮ್ಮೆಯಾದರೂ ಮುಡಿ (ತಲೆಗೂದಲು ದಾನ) ಕೊಡುತ್ತಾರೆ ಅನ್ನೋದ ಸತ್ಯ. ಇದರಿಂದ ವರ್ಷದಲ್ಲಿ ನೂರಾರು ಕೆಜಿ ಕೂದಲು ತಿರುಪತಿಯಲ್ಲಿ ಸಂಗ್ರಹವಾಗುತ್ತದೆ. ಈ ಕೂದಲನ್ನು ಹೇಗೆ ವಿಲೇವಾರಿ ಮಾಡಲಾಗುತ್ತದೆ. ಅಷ್ಟಕ್ಕೂ ತಿರುಪತಿಗೆ ಹೋದವರು ಮುಡಿಯನ್ನೇ ಯಾಕೆ ದಾನ ಮಾಡುತ್ತಾರೆ ಅನ್ನೋದರ ಕಾರಣ ಇಲ್ಲಿದೆ.

ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕೂದಲನ್ನು ಏಕೆ ದಾನ ಮಾಡುತ್ತಾರೆ?: ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕೂದಲು ದಾನ ಮಾಡುವ ಜನಪ್ರಿಯ ಪದ್ಧತಿ ಇದೆ. ಕೂದಲು ವ್ಯಕ್ತಿಯ ವಿಶೇಷ ಭಾಗ. ಆದ್ದರಿಂದ ವ್ಯಕ್ತಿಯು ತಿರುಪತಿ ಬಾಲಾಜಿಗೆ ಹೋಗಿ ತನ್ನ ಕೂದಲನ್ನು ದಾನ ಮಾಡಿದರೆ, ಶ್ರೀ ವೆಂಕಟೇಶ್ವರನು ಅವನು ಎಷ್ಟು ಕೂದಲನ್ನು ನೀಡುತ್ತಾನೋ ಅಷ್ಟು ಶ್ರೀಮಂತನನ್ನಾಗಿ ಮಾಡುತ್ತಾನೆ ಎನ್ನುವ ಪ್ರತೀತಿ ಇದೆ. ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಹೋಗಿ ಕೂದಲು ದಾನ ಮಾಡುವವರ ಜೀವನದಲ್ಲಿ ಎಲ್ಲಾ ರೀತಿಯ ದುಷ್ಪರಿಣಾಮಗಳು ಮತ್ತು ನಕಾರಾತ್ಮಕತೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ಅವರ ಮೇಲೆ ಉಳಿಯುತ್ತದೆ.

ದಾನ ಮಾಡಿದ ಕೂದಲನ್ನು ಹರಾಜು ಮಾಡಲಾಗುತ್ತದೆ: ಇಂಡಿಯಾ ಟುಡೇ ವರದಿಯ ಪ್ರಕಾರ, 2018 ರಲ್ಲಿ, ತಿರುಪತಿ ಬಾಲಾಜಿ ದೇವಸ್ಥಾನವು ಭಕ್ತರು ನೀಡಿದ ಕೂದಲಿನ ಮಾಸಿಕ ಹರಾಜಿನಿಂದ ಸುಮಾರು 6.39 ಕೋಟಿ ಗಳಿಸಿದೆ. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಪ್ರತಿ ವರ್ಷದ ಮೊದಲ ಗುರುವಾರದಂದು ಈ ಹರಾಜನ್ನು ಆಯೋಜಿಸುತ್ತದೆ.

ಇವು ಕೂದಲಿನ ವಿವಿಧ ವರ್ಗ: ಒಂದು ಮಾಹಿತಿಯ ಪ್ರಕಾರ, 2018 ರಲ್ಲಿ ವಿವಿಧ ವರ್ಗಗಳ ಸುಮಾರು 1,87,000 ಕೆಜಿ ಕೂದಲು ಮಾರಾಟವಾಗಿದೆ. ಈ ಪೈಕಿ 10,000 ಕೆಜಿ ಕೂದಲು ಉತ್ತಮ ಗುಣಮಟ್ಟದ್ದಾಗಿದೆ, ಈ 600 ಕೆಜಿ ಕೂದಲನ್ನು ಕೆಜಿಗೆ 22,494 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗಿದೆ. ಇದರಿಂದ ಒಟ್ಟು 1.35 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಕಡಿಮೆ ಗುಣಮಟ್ಟದ ಅಂದರೆ ದ್ವಿತೀಯ ದರ್ಜೆಯ ಸುಮಾರು 46,100 ಕೆಜಿ ಕೂದಲನ್ನು ಕಲೆಹಾಕಲಾಗಿತ್ತು. ಇದರ ಬೆಲೆ ಕೆಜಿಗೆ 17,223 ರೂ. ಈ ವರ್ಗದಿಂದ 2400 ಕೆಜಿ ಕೂದಲು ಮಾರಾಟವಾಗಿದ್ದು, 4.13 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ತಿರುಪತಿಯ 'ನಾನ್‌ವೆಜ್‌..' ಪ್ರಸಾದ ತಿಂದ ಪಾಪ ಕಾಡ್ತಿದ್ಯಾ? ದೈವಜ್ಞ ಸೋಮಯಾಜಿ ಪರಿಹಾರ ಹೇಳಿದ್ದಾರೆ ನೋಡಿ..

ತೃತೀಯ ದರ್ಜೆಯ ಕೂದಲಿನ ಬಗ್ಗೆ ಮಾತನಾಡುವುದಾದರೆ, ಟಿಟಿಡಿಯಲ್ಲಿ 30,300 ಕೆಜಿ ಕೂದಲು ಸ್ಟಾಕ್ ಇತ್ತು, ಅದರ ಬೆಲೆ ಕೆಜಿಗೆ 2833 ರೂಪಾಯಿ. ಈ ಕೂದಲನ್ನು 500 ಕೆಜಿ ಮಾರಾಟ ಮಾಡಲಾಗಿದ್ದು, 14.17 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಇನ್ನು ನಾಲ್ಕನೇ ದರ್ಜೆಯ 200 ಕೆಜಿ ಕೂದಲನ್ನು ಕೆಜಿಗೆ 1195 ರೂಪಾಯಿಯಂತೆ ಮಾರಾಟ ಮಾಡಲಾಗಿದ್ದು, ಇದರಿಂದ 2.39 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಅದೇ ರೀತಿಯಲ್ಲಿ ಐದನೇ ಹಾಗೂ ಕೊನೆಯ ದರ್ಜೆಯ 1.93 ಲಕ್ಷ ಕೆಜಿ ಕೂದಲನ್ನು ಪ್ರತಿ ಕೆಜಿಗೆ 24 ರೂಪಾಯಿಯಂತೆ ಮಾರಾಟ ಮಾಡಲಾಗಿದ್ದು, ಇದರಿಂದ 46.32 ಲಕ್ಷ ಸಂಗ್ರಹವಾಗಿತ್ತು. 6,900 ಕೆಜಿ ಬಿಳಿ ಕೂದಲು ಕೂಡ ಪ್ರತಿ ಕೆಜಿಗೆ 5462 ರೂ.ಗೆ ಮಾರಾಟವಾಗಿದ್ದು, 27.31 ಲಕ್ಷ ರೂಪಾಯಿ ಸಂಗ್ರಹವಾಗಿತ್ತು.

History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!

ದಾನ ಮಾಡಿದ ಕೂದಲನ್ನು ಸ್ವಚ್ಛಗೊಳಿಸಲಾಗುತ್ತದೆ: ಪ್ರತಿ ವರ್ಷ ಪ್ರಪಂಚದ ವಿವಿಧ ಭಾಗಗಳಿಂದ ಭಕ್ತರು ತಿರುಪತಿಗೆ ಬಂದು ಸುಮಾರು 500 ರಿಂದ 600 ಟನ್ ಕೂದಲನ್ನು ದಾನ ಮಾಡುತ್ತಾರೆ. ಈ ಪ್ರಕ್ರಿಯೆಯ ಪ್ರಕಾರ, ದಾನ ಮಾಡಿದ ಕೂದಲನ್ನು ಮೊದಲು ಕುದಿಸಿ ಸ್ವಚ್ಛ ಮಾಡಲಾಗುತ್ತದೆ. ನಂತರ ತೊಳೆದು ಒಣಗಿಸಿದ ನಂತರ ಅದನ್ನು ದೊಡ್ಡ ಗೋದಾಮುಗಳಲ್ಲಿ ಸಂಗ್ರಹಿಸಲು ಕಳುಹಿಸಲಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ನಲ್ಲಿ (ಟಿಟಿಡಿ), ಈ ಹರಾಜಿನ ಮೊದಲು ಕೂದಲನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಲಾಗಿದೆ. ಅದರಂತೆ,  5 ಇಂಚುಗಳಿಂದ 31 ಇಂಚುಗಳಷ್ಟು ಕೂದಲನ್ನು ಒಳಗೊಂಡಿರುವ ಉದ್ದದ ಆಧಾರದ ಮೇಲೆ 5 ವಿಭಾಗಗಳ ಕೂದಲನ್ನು ತಯಾರಿಸಲಾಗುತ್ತದೆ. ಪ್ರತಿ ವರ್ಷ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಈ ಹರಾಜಿನಿಂದ ಉತ್ತಮ ಮೊತ್ತವನ್ನು ಗಳಿಸುತ್ತದೆ.

Latest Videos
Follow Us:
Download App:
  • android
  • ios