ಯಾವುದೋ ಕಾನ್‌ಫರೆನ್ಸ್‌ನಲ್ಲಿ ಸದ್ಗುರುವಿಗೆ ಒಬ್ಬ ವಿದ್ಯಾರ್ಥಿ ಕೇಳಿದ ಪ್ರಶ್ನೆ ಇದು- ಸದ್ಗುರು, ವಿದ್ಯಾರ್ಥಿಗಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಪೋರ್ನ್ ನೋಡುವುದು, ಹಸ್ತಮೈಥುನ ಮಾಡಿಕೊಳ್ಳುವುದು ಕಲಿತುಕೊಳ್ಳುತ್ತಾರೆ. ಇದು ಸರೀನಾ, ಎಷ್ಟು ಮಾಡಿದರೆ ಸರಿ, ಎಷ್ಟು ತಪ್ಪು?

ಇದಕ್ಕೆ ಸದ್ಗುರು ಕೊಟ್ಟ ಉತ್ತರ ಹೀಗಿತ್ತು. ನಮ್ಮೆಲ್ಲರಲ್ಲೂ ಲೈಂಗಿಕತೆ ಇದೆ. ಅದನ್ನು ಅಡಗಿಸಿ ಇಡಲು ಆಗೋಲ್ಲ. ಆದರೆ ನಮ್ಮ ಧರ್ಮಗಳು, ರಿಲಿಜನ್‌ಗಳು ಏನು ಮಾಡಿವೆ ಅಂದರೆ, ಲೈಂಗಿಕತೆಯನ್ನು ನಿಷೇಧಕ್ಕೆ ಒಳಪಡಿಸಿವೆ. ಅದರ ಬಗ್ಗೆ ಮಾತಾಡುವುದು, ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳುವುದು ಅಸಹ್ಯ ಎಂಬಂತೆ ಬೋಧಿಸಿವೆ. ಆದರೆ ಇದು ಧರ್ಮದ, ಮತದ ಸಮಸ್ಯೆ ಅಲ್ಲ. ಬದಲು ಧರ್ಮದ ವಕ್ತಾರರು, ಪಾದ್ರಿ, ಮುಲ್ಲಾಗಳು ಮಾಡಿಕೊಂಡಿರುವ ಸಮಸ್ಯೆ. ಅವರು ಜನರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳೋಕೆ ಒಂದಲ್ಲ ಒಂದು ಸುಳ್ಳು ಹೇಳ್ತಾನೇ ಇರುತ್ತಾರೆ.

ನಿಮ್ಮ ಜನ್ಮರಾಶಿಗೆ ಅದೃಷ್ಟದ ಬಣ್ಣದ ಬಟ್ಟೆ ಯಾವುದು? ...

ಹಿಂದೂ ಧರ್ಮದಲ್ಲಂತೂ ಹಸ್ತಮೈಥುನ ತಪ್ಪಲ್ಲ. ಅದಕ್ಕೆ ಉದಾಹರಣೆಯಾಗಿ ನೀವು ಹಿಂದೂ ದೇವಾಲಯಗಳ ಹೊರಭಿತ್ತಿಗಳನ್ನು ನೋಡಬಹುದು. ಖಜುರಾಹೋ ಮುಂತಾದ ದೇವಾಲಯಗಳ ಹೊರಗೋಡೆಗಳನ್ನು ನೋಡಿ. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲೈಂಗಿಕ, ಮಿಥುನ ಶಿಲ್ಪಗಳನ್ನು ಕೆತ್ತಿರುವುದು ಕಾಣುತ್ತೀರಿ. ಲೈಂಗಿಕತೆ ಸಲ್ಲದು ಅಂತಾದರೆ ಈ ಲೈಂಗಿಕ ಶಿಲ್ಪಗಳು ಯಾಕೆ ಇರುತ್ತವೆ? ಅದೂ ಎಲ್ಲರೂ ಭೇಟಿ ಕೊಡುವಂಥ ದೇವಾಲಯಗಳಲ್ಲಿ? ದೇವಾಲಯಗಳಿಗೆ ಬರುವವರು ಸಂಸಾರಸ್ಥರೇ ತಾನೆ? ಕೇವಲ ಸನ್ಯಾಸಿಗಳು ಮಾತ್ರ ಅಲ್ಲವಲ್ಲ? ಹಾಗಿದ್ದರೆ ಇಲ್ಲಿ ಯಾಕೆ ಇವುಗಳನ್ನು ಕೆತ್ತಿಸಿದರು? ಆರೋಗ್ಯಕರ ಲೈಂಗಿಕತೆ ನಿಮ್ಮ ಜೀವನದಲ್ಲಿ ಇರಲಿ ಅಂತಲೇ ಅಲ್ವೇ?

ಈ ಲೈಂಗಿಕ ಶಿಲ್ಪಗಳಲ್ಲಿ ಸಹಜವಾದ ಚಿತ್ರಗಳೂ ಇವೆ. ಅಸಹಜವಾದ ಚಿತ್ರಗಳೂ ಇವೆ. ಹಾಗೇ ಹಸ್ತಮೈಥುನ ಶಿಲ್ಪಗಳೂ ಇವೆ. ಅಂದರೆ ಇಲ್ಲಿ ಅಸಹಜವಾದ್ದೂ ಇದೆ; ಅಸಹಜವಾದದ್ದೂ ಇದೆ. ಹಸ್ತಮೈಥುನ ಮಾಡಿಕೊಳ್ಳುವುದು ಮನುಷ್ಯನ ಸಹಜ ಗುಣ. ಗಂಡಸು ಇರಲಿ; ಹೆಂಗಸು ಇರಲಿ. ಸೂಕ್ತ ಸಂಗಾತಿ ಇದ್ದಾಗ ಸಂಭೋಗ ನಡೆಸುತ್ತಾರೆ. ಇಲ್ಲದೆ ಹೋದಾಗ, ಎದ್ದ ಕಾಮನೆಗಳನ್ನು ತಣಿಸಿಕೊಳ್ಳುವುದಕ್ಕೆ ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ನಮ್ಮ ಸಮಾಜ ಅರೋಗ್ಯಕರವಾಗಿ ಇರೋದಕ್ಕೆ, ನಮ್ಮ ಬಾಡಿ ಕೂಡ ಆರೋಗ್ಯಕರವಾಗಿ ಇರಬೇಕು. ಹೀಗಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಪರವಾಗಿಲ್ಲ. ನಮ್ಮ ದೇಹ ಇಂತಿಷ್ಟು ವೀರ್ಯವನ್ನು ಒಂದು ದಿನದಲ್ಲಿ ಉತ್ಪತ್ತಿ ಮಾಡುತ್ತದ. ಅದು ಒಂದಲ್ಲ ಒಂದು ರೀತಿಯಲ್ಲಿ ಹೊರಹೋಗುತ್ತಲೇ ಇರಬೇಕು.

ಸ್ನೇಹದ ಮಹತ್ವವನ್ನು ಭಾಗವತದ ಈ ಕಥೆ ಬಹಳ ಸೊಗಸಾಗಿ ಹೇಳಿದೆ, ಕೇಳೋಣ ಬನ್ನಿ ...

ಆದರೆ ವಿವೇಚನೆ ಬೇಕು. ಎಷ್ಟು ಹಸ್ತಮೈಥುನ ಮಾಡಿಕೊಳ್ಳಬೇಕು ಎಂಬುದನ್ನು ನಿಮ್ಮ ದೇಹವೇ ನಿಮಗೆ ಹೇಳುತ್ತದೆ. ಅನಗತ್ಯವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಸರಿಯಲ್ಲ. ನಮ್ಮ ದೇಹದ ಹಾಗೆ ನಮ್ಮ ಪ್ರಜ್ಞೆಯ ಬಗ್ಗೆ ಕೂಡ ನಮಗೆ ಅರಿವು ಇರಬೇಕಾದುದು ಅಗತ್ಯ. ನಾವು ನಮ್ಮ ದೇಹದ ಬಗ್ಗೆ ಗಮನ ಕಡಿಮೆ ಮಾಡುತ್ತ ಹೋಗಿ, ನಮ್ಮ ಮನಸ್ಸಿನ ಬಗ್ಗೆ, ನಮ್ಮ ಪ್ರಜ್ಞೆಯ ಬಗ್ಗೆ, ನಮ್ಮ ಆತ್ಮದ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕು. ಅದೇ ಅಧ್ಯಾತ್ಮ. ದೇಹದ ಬಗ್ಗೆ ಪಶು ಕೂಡ ಗಮನ ಕೊಡುತ್ತದೆ. ಆದರೆ ಆತ್ಮದ ಬಗ್ಗೆ ಗಮನ ಕೊಡುವುದು ಮಾನವನಿಂದ ಮಾತ್ರ ಸಾಧ್ಯ. ಹೀಗಾಗಿಯೇ ಮಾನವ ಜನ್ಮ ದೊಡ್ಡದು. 

ಶರೀರದ ಈ ಭಾಗಗಳಲ್ಲಿರುವ ಮಚ್ಚೆ ತರುತ್ತೆ ಅದೃಷ್ಟ..! ...

ಹಿಂದಿನ ಸಂತರು, ಯೋಗಿಗಳು ಬ್ರಹ್ಮಚರ್ಯದ ಬಗ್ಗೆ ಹೇಳುತ್ತದ್ದರು. ಬ್ರಹ್ಮಚರ್ಯ ಅಂದರೆ ವಿವಾಹ ಆಗದೆ ಇರುವುದಲ್ಲ; ಹೆಣ್ಣಿನ ಸಂಗ ಮಾಡದೆ ಇರುವುದಲ್ಲ. ಬ್ರಹ್ಮಚರ್ಯವನ್ನು ಹೆಣ್ಣು ಕೂಡ ಮಾಡಬಹುದು. ಆತ ಅಥವಾ ಆಕೆ ಲೈಂಗಿಕ ವಿಚಾರಗಳನ್ನು ಒಂದು ಮಿತಿಯಲ್ಲಿ ಇಡುವುದೇ ಬ್ರಹ್ಮಚರ್ಯ ಅನಿಸಿಕೊಳ್ಳುತ್ತದೆ. ಇದು ಕೂಡ ಅತಿಯಾದರೆ ಹಾನಿಕರ ಎಂಬುದನ್ನು ಮತ್ತೆ ಹೇಳಬೇಕಿಲ್ಲ ಅಲ್ಲವೇ? ಬ್ರಹ್ಮಚರ್ಯದ ಬಗ್ಗೆ ಬ್ರಹ್ಮಾಂಡವಾದ ಕಲ್ಪನೆಗಳೂ ಕೂಡ ಬೇಡ. ಬ್ರಹ್ಮಚರ್ಯವೇ ದೊಡ್ಡ ಸಾಧನೆ ಎಂಬುದು ಕೂಡ ನಿಜವಲ್ಲ ಅಂತಾರೆ ಸದ್ಗುರು ಜಗ್ಗಿ ವಾಸುದೇವ್.