Asianet Suvarna News Asianet Suvarna News

ಶರೀರದ ಈ ಭಾಗಗಳಲ್ಲಿರುವ ಮಚ್ಚೆ ತರುತ್ತೆ ಅದೃಷ್ಟ..!

ಭವಿಷ್ಯದ ವಿಷಯಗಳನ್ನು ತಿಳಿದುಕೊಳ್ಳಲು ಹಲವು ಶಾಸ್ತ್ರಗಳಿವೆ. ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾದ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮನುಷ್ಯನ ಶರೀರದ ಮೇಲಿರುವ ಚಿಹ್ನೆ ಮತ್ತು ಮಚ್ಚೆಗಳಿಂದ ಗುಣ, ಸ್ವಭಾವ ಮತ್ತು ಅದೃಷ್ಟದ ಬಗ್ಗೆ ಹಲವು ವಿಚಾರಗಳನ್ನು ತಿಳಿಯಬಹುದಾಗಿದೆ.  ಶರೀರದ ಬೇರೆ ಬೇರೆ ಭಾಗಗಳಲ್ಲಿ ಕೆಲವು ಚಿಹ್ನೆ ಅಥವಾ ಮಚ್ಚೆಗಳಿದ್ದರೆ ಅವರು ಹೆಚ್ಚು ಭಾಗ್ಯಶಾಲಿ ಮತ್ತು ಅದೃಷ್ಟವಂತರೆಂದು ಹೇಳಲಾಗುತ್ತದೆ. ಆ ಬಗ್ಗೆ ಇಲ್ಲಿ ತಿಳಿಯೋಣ.

Moles on some parts of body reveal financial status
Author
Bangalore, First Published Dec 14, 2020, 12:33 PM IST

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಶರೀರದ ಮೇಲಿರುವ ಮಚ್ಚೆ ಮತ್ತು ಚಿಹ್ನೆಗಳನ್ನು ನೋಡಿ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ವಿಚಾರಗಳನ್ನು ತಿಳಿಯಬಹುದಾಗಿದೆ. ಹಸ್ತದಲ್ಲಿ ಅಥವಾ ಶರೀರದಲ್ಲಿರುವ ವಿವಿಧ ರೀತಿಯ ಚಿಹ್ನೆಗಳು ವ್ಯಕ್ತಿಯ ಅದೃಷ್ಟ, ಆರೋಗ್ಯ, ಜೀವನ ಮತ್ತು ಕೌಟುಂಬಿಕ ನೆಮ್ಮದಿ ಹೀಗೆ ಹಲವು ವಿಚಾರಗಳನ್ನು ಅರಿತುಕೊಳ್ಳಲು ಹಸ್ತ ಸಾಮುದ್ರಿಕಾ ಶಾಸ್ತ್ರ ಸಹಾಯಕವಾಗಿದೆ. ಶರೀರದ ಮೇಲಿರುವ ಮಚ್ಚೆಯು ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯದ ವಿಷಯಗಳನ್ನು ಸೂಚಿಸುವ ಒಂದು ಬಗೆಯ ಸಂಕೇತವಾಗಿದೆ. ಜನ್ಮಜಾತವಾಗಿರುವ ಮಚ್ಚೆಯು ಭಾಗ್ಯವನ್ನು ಮತ್ತು ವ್ಯಕ್ತಿಯ ಚಾರಿತ್ಯ್ರವನ್ನು ಹೇಳುತ್ತದೆ.

ಹಸ್ತದಲ್ಲಿರುವ ಮಚ್ಚೆ ಅಥವಾ ಚಿಹ್ನೆಗಳಷ್ಟೇ ಅಲ್ಲದೇ ಶರೀರದ ಇತರ ಭಾಗಗಳಲ್ಲಿರುವ ಮಚ್ಚೆ ಮತ್ತು ಚಿಹ್ನೆಗಳಿಗೂ ವಿಶೇಷ ಮಹತ್ವವಿದೆ. ಶರೀರದ ಕೆಲವು ಭಾಗಗಳಲ್ಲಿರುವ ಮಚ್ಚೆ ಶುಭವೆಂದು ಹೇಳಿದರೆ, ಮತ್ತೆ ಕೆಲವು ಭಾಗಗಳಲ್ಲಿ ಮಚ್ಚೆ ಇದ್ದರೆ ಅದು ಅಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಶರೀರದ ಯಾವ ಭಾಗದಲ್ಲಿರುವ ಮಚ್ಚೆ ಅದೃಷ್ಟವನ್ನು ತರುತ್ತದೆಂದು ನೋಡೋಣ...

ಹಿಂಭಾಗದಲ್ಲಿ ಮಚ್ಚೆ ಇದ್ದರೆ
ಹಿಂಭಾಗದಲ್ಲಿ ಮಚ್ಚೆ ಇದ್ದರೆ ಭಾಗ್ಯವಂತರೆಂದು ಹೇಳಲಾಗುತ್ತದೆ. ಹಿಂಭಾಗದಲ್ಲಿರುವ ಮಚ್ಚೆ ಗಾತ್ರದಲ್ಲಿ ಚಿಕ್ಕದಾಗಿದ್ದರೆ ಅಥವಾ ದೊಡ್ಡದಾಗಿದ್ದರೂ ಸಹ ಅದು ಶುಭವೆಂದೇ ಹೇಳಲಾಗುತ್ತದೆ. ಈ ರೀತಿಯ ಮಚ್ಚೆ ಹೊಂದಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಈ ವ್ಯಕ್ತಿ ಅತಿ ಕಡಿಮೆ ವಯಸ್ಸಿನಲ್ಲಿಯೇ ಯಶಸ್ಸಿನ ಶಿಖರವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದವರಾಗಿರುತ್ತಾರೆ. ಹಾಗಾಗಿ ಹಿಂಭಾಗದಲ್ಲಿ ಮಚ್ಚೆ ಅದೃಷ್ಟವನ್ನು ತರುವ ಮಚ್ಚೆಯಾಗಿರುತ್ತದೆ.

ಇದನ್ನು ಓದಿ: ಪದೇ ಪದೇ ಅನಾರೋಗ್ಯವಾ..? ಕಿಟಕಿಯ ದಿಕ್ಕು ಯಾವ ಕಡೆಗಿದೆ..? 

ಹೊಟ್ಟೆಯಲ್ಲಿ ಮಚ್ಚೆ ಇದ್ದರೆ
ಕೆಲವರಿಗೆ ಹೊಟ್ಟೆಯಲ್ಲಿ ಮಚ್ಚೆ ಇರುತ್ತದೆ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹೊಟ್ಟೆಯ ಭಾಗದಲ್ಲಿರುವ ಮಚ್ಚೆ ಅಶುಭದ ಸಂಕೇತವಾಗಿದೆ. ಹೊಟ್ಟೆಯಲ್ಲಿ ಮಚ್ಚೆ ಹೊಂದಿರುವ ವ್ಯಕ್ತಿಗಳಿಗೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುವುದಲ್ಲದೇ, ಇಂಥವರಿಗೆ ಖರ್ಚು ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಇಂಥ ವ್ಯಕ್ತಿಗಳ ಬಳಿ ಹಣ ನಿಲ್ಲುವುದಿಲ್ಲವೆಂದು ಸಹ ಹೇಳಲಾಗುತ್ತದೆ.

ಹಸ್ತದಲ್ಲಿರುವ ಮಚ್ಚೆ
ಹಸ್ತದ ಮಧ್ಯಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದರೆ ಅದು ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಮುಷ್ಠಿ ಕಟ್ಟಿದಾಗ ಕಾಣದೇ ಇರುವ ಮಚ್ಚೆಯು ಅದೃಷ್ಟವನ್ನು ತರುವ ಮಚ್ಚೆಯಾಗಿರುತ್ತದೆಂದು ಹೇಳಲಾಗುತ್ತದೆ. ಈ ರೀತಿಯ ಮಚ್ಚೆಯನ್ನು ಹೊಂದಿದ್ದವರಿಗೆ ಕಡಿಮೆ ಪರಿಶ್ರಮದಿಂದ ಹಣವನ್ನು ಪಡೆಯುತ್ತಾರೆಂದು ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ.  

ಇದನ್ನು ಓದಿ: ಮಹಿಳೆಯರು ತೆಂಗಿನ ಕಾಯಿಯನ್ನು ಒಡೆಯಬಾರದು… ಏಕೆ ಗೊತ್ತಾ..? 

ಗುರು ಪರ್ವತದಲ್ಲಿರುವ ಮಚ್ಚೆ
ಹಸ್ತದಲ್ಲಿ ಗುರು ಪರ್ವತದ ಮೇಲೆ ಮಚ್ಚೆ ಇದ್ದರೆ ಶುಭವೆಂದು, ಅಂಥಹ ವ್ಯಕ್ತಿಗಳಿಗೆ ಹಣದ ಕೊರತೆ ಎಂದಿಗೂ ಕಾಡುವುದಿಲ್ಲವೆಂದೂ ಹೇಳಲಾಗುತ್ತದೆ. ಈ ರೀತಿ ಮಚ್ಚೆ ಹೊಂದಿದವರ ಜೀವನವು ಸದಾ ಸುಖ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ.

ಹಣೆಯ ಮೇಲಿರುವ ಮಚ್ಚೆ
ಹಣೆಯ ಬಲಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದವರು ವಯಸ್ಸಾಗುತ್ತಾ ಬಂದಂತೆ ಹೆಚ್ಚೆಚ್ಚು ಹಣವನ್ನು ಸಂಪಾದಿಸುತ್ತಾರೆ.  ಹಣೆಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅಂಥವರು ತುಂಬಾ ಅದೃಷ್ಟವಂತರು. ಇವರು ಮಾಡುವ ಎಲ್ಲ ಕೆಲಸಗಳಿಗೂ ಅದೃಷ್ಟ ಜೊತೆಗಿರುತ್ತದೆ. ಪ್ರತಿ ಕ್ಷೇತ್ರದಲ್ಲಿಯೂ ಯಶಸ್ಸನ್ನು ಕಾಣುತ್ತಾರೆ. ಅದೃಷ್ಟ ದೇವತೆ ಮತ್ತು ಲಕ್ಷ್ಮೀದೇವಿಯ ಆಶೀರ್ವಾದವೂ ಇವರ ಬಳಿ ಸದಾ ಇರುತ್ತದೆ. ಹಣೆಯ ಬಲ ಅಥವಾ ಎಡಭಾಗದಲ್ಲಿರುವ ಮಚ್ಚೆ ಧನ ಸಮೃದ್ಧಿಯ ಸಂಕೇತ. ಇವರು ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಐಷಾರಾಮಿ ಜೀವನವನ್ನು ಬಯಸುತ್ತಾರೆ. ಹೆಚ್ಚು ಧನವ್ಯಯ ಮಾಡುವ ಕಾರಣ ಇವರ ಹತ್ತಿರ ದುಡ್ಡು ನಿಲ್ಲುವುದಿಲ್ಲ.

Moles on some parts of body reveal financial status

ಹುಬ್ಬಿನ ಮೇಲಿರುವ ಮಚ್ಚೆ
ಹುಬ್ಬಗಳ ಮಧ್ಯದಲ್ಲಿ ಮಚ್ಚೆಯಿದ್ದರೆ ಅಂಥವರು ಉತ್ತಮವಾದ ಸಿರಿ-ಸಂಪತ್ತು ಮತ್ತು ಆರೋಗ್ಯವನ್ನು ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ರೆಪ್ಪೆಗಳ ಬಳಿಯಿರುವ ಮಚ್ಚೆಯು ಐಶ್ವರ್ಯ ಮತ್ತು ಪ್ರಸಿದ್ಧಿಯ ಸಂಕೇತವಾಗಿದೆ.   

ಇದನ್ನು ಓದಿ: ನೀವು ಹುಟ್ಟಿದ ವಾರ ಯಾವುದು? ವಾರದ ಪ್ರಕಾರ ನಿಮ್ಮ ಸ್ವಭಾವ ಹೇಗಿದೆ? 

ಕಿವಿಯಲ್ಲಿರುವ ಮಚ್ಚೆಯ ಸಂಕೇತ
ಕಿವಿಯ ಯಾವುದೇ ಭಾಗದಲ್ಲಿರುವ ಮಚ್ಚೆಯು ಐಷಾರಾಮಿ ಜೀವನವನ್ನು ಸೂಚಿಸುತ್ತದೆ.    

Follow Us:
Download App:
  • android
  • ios