Asianet Suvarna News Asianet Suvarna News

Dream Interpretation: ಕನಸಲ್ಲಿ ಹಾವು ಪದೇ ಪದೇ ಬರ್ತಿದ್ಯಾ? ಕಾರಣ ಹೀಗಿರಬಹುದು..

ಹಾವು ಕನಸಿನಲ್ಲಿ ಪದೇ ಪದೆ ಬರ್ತಿದ್ಯಾ?  ಹಾಗಿದ್ರೆ ಅದು ನಿಮ್ಮ ಭವಿಷ್ಯದ ಸೂಚಕವಿರಬಹುದು. ಕನಸಿನಲ್ಲಿ ಬರುವ ಹಾವು ಏನೆಲ್ಲ ಸೂಚನೆಗಳನ್ನು ನೀಡುತ್ತದೆ ಇಲ್ಲಿದೆ ನೋಡಿ. 

What does it mean to have dreams about snakes skr
Author
Bangalore, First Published Feb 15, 2022, 12:26 PM IST | Last Updated Feb 15, 2022, 12:26 PM IST

ಹಾವು ಎದುರು ಕಂಡರಷ್ಟೇ ಅಲ್ಲ, ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವವರ ಸಂಖ್ಯೆ ಅನೇಕ. ಹಾವೇಕೆ ಕನಸಲ್ಲಿ ಬಂತು, ಏನಾದರೂ ಸರ್ಪದೋಷ ಇದ್ಯಾ, ನಾಗರಿಗೆ ಸರಿಯಾಗಿ ನಡಕೊಂಡಿಲ್ವಾ? ಯಾವುದಾದರೂ ಅಪಾಯದ ಮುನ್ಸೂಚನೆನಾ ಎಂದೆಲ್ಲ ಗೊಂದಲಕ್ಕೊಳಗಾಗುವವರು ಹಲವರು. ಆದರೆ, ಹಾವು ಕನಸಲ್ಲಿ ಬಂದರೆ ಅದು ಕೇವಲ ಕೆಟ್ಟದ್ದೇ ಆಗಿರಬೇಕಿಲ್ಲ. ಶುಭವೂ ಇರಬಹುದು. ಹಾವಿನ ವಿವಿಧ ರೀತಿಯ ಕನಸುಗಳೂ, ಅದಕ್ಕಿರುವ ಅರ್ಥಗಳೂ ಇಲ್ಲಿವೆ. 

ಲೈಂಗಿಕ ಶಕ್ತಿ(sexual energy)
ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ, ಹಾವುಗಳ ಕನಸು ನಮ್ಮೊಳಗಿನ ಲೈಂಗಿಕ ವಾಂಛೆಗಳ ಪ್ರತಿಬಿಂಬವಾಗಿದೆ. ಅದು ನಮ್ಮ ಲೈಂಗಿಕ ಶಕ್ತಿ ಸೂಚಕವಾಗಿದೆ. ಅದರಲ್ಲೂ ಕನಸು ಕೊಂಚ ಉದ್ವೇಗಕಾರಿಯಾಗಿದ್ದರೆ, ಅದು ಹೊಸ ಸಂಬಂಧದ ಅಗತ್ಯ ಇರುವುದನ್ನು ಅಥವಾ ಹಳೆಯ ಸಂಬಂಧಕ್ಕೆ ತೇಪೆ ಹಾಕಬೇಕಾದುದರ ಸೂಚನೆಯಾಗಿದೆ. ಆದರೆ, ಹಾವಿನ ಕನಸಿನ ಸೂಚನೆ ಇದೊಂದೇ ಅಲ್ಲ. 

ಹೊಸ ವ್ಯಕ್ತಿತ್ವ
ಶತ ಶತಮಾನಗಳಿಂದಲೂ ಹಾವುಗಳು ಜ್ಞಾನ ಹಾಗೂ ಗುಣಮುಖತೆ ಸಂಬಂಧಿಸಿವೆ. ಅವು ಆಗಾಗ ಪೊರೆ ಬಿಟ್ಟು ತಮ್ಮ ಹಳೆತೊಗಲಿನಿಂದ ಮುಕ್ತಿ ಹೊಂದುತ್ತವೆ. ಅಂತೆಯೇ ಅವು ಕನಸಿನಲ್ಲಿ ಬಂದಾಗ, ಹೊಸ ವ್ಯಕ್ತಿತ್ವವಾಗಿ ನೀವು ಬದಲಾಗಬೇಕಾದ ಸೂಚನೆ ನೀಡುತ್ತಿರುತ್ತವೆ. ನಿಮ್ಮ ಮಿಶ್ರ ಭಾವನೆಗಳ(mixed emotions) ತೊಳಲಾಟವನ್ನು ಅವು ಸೂಚಿಸುತ್ತವೆ. 

ಎಚ್ಚರಿಕೆ ಸೂಚಕ(Warning sign)
ಕೆಲ ಹಾವುಗಳು ತಾವಿರುವ ಜಾಗಕ್ಕೆ ತಕ್ಕಂತೆ ಬಣ್ಣ ಬದಲಿಸುವ ಗುಣ ಹೊಂದಿವೆ. ಅವು ಕನಸಿನಲ್ಲಿ ಬಂದು ನಿಮಗೆ ಯಾರೋ ತೊಂದರೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಎಚ್ಚರಿಕೆ ನೀಡುತ್ತಿರಬಹುದು. ಅಥವಾ ನೀವೇ ಬಚ್ಚಿಟ್ಟ ಸತ್ಯಗಳು ಸಧ್ಯದಲ್ಲೇ ಹೊರ ಬಂದು ನಿಮಗೆ ಅಪಾಯ ಮಾಡಲಿವೆ ಎಂಬುದನ್ನು ಸೂಚಿಸುತ್ತಿರಬಹುದು. ಅದೇ ಹಾವು ನಿಮ್ಮನ್ನು ಕಚ್ಚಿದಂತೆ, ನುಂಗಲು ಬಯಸಿದಂತೆ ಕನಸಿನಲ್ಲಿ ಕಂಡರೆ, ನೀವು ಹಳೆಯ ಯಾವುದೋ ವಿಷಯದ ಬಗ್ಗೆ ಬಹಳ ಚಿಂತಿತರಾಗಿದ್ದೀರಿ. ಅದನ್ನು ಬಿಡದೆ ಭವಿಷ್ಯ ಮುಂದುವರಿಯುವುದು ಸಾಧ್ಯವಿಲ್ಲ ಎಂದರ್ಥ.

ಅವಿತ ಆಸೆಗಳು
ಹಾವು ಹುತ್ತದಿಂದ ಹೊರ ಬರುತ್ತಿರುವಂತೆ ಅಥವಾ ಮಲಗಿದ ಹಾವು ಏಳುತ್ತಿರುವಂತೆ ಕನಸಿನಲ್ಲಿ ಕಂಡರೆ ಅದು ನೀವು ಅಡಗಿಸಿಟ್ಟ ಆಸೆಗಳ ಸೂಚಕ. ನಿಮ್ಮ ಅವಿತ ಹವ್ಯಾಸಗಳು, ಗುರಿಗಳು, ಆಸೆಗಳನ್ನು ಹೊರ ತೆಗೆದು ಗಂಭೀರವಾಗಿ ಪರಿಗಣಿಸಿ ಮುಂದುವರಿಯಿರಿ ಎಂದು ಹೇಳುತ್ತಿದೆ ಕನಸು. 

Devi Annapoorna: ಆಹಾರ, ಪೋಷಣೆಯ ಮಹಾತಾಯಿ ಅನ್ನಪೂರ್ಣೇಶ್ವರಿಯ ಆಸಕ್ತಿಕರ ಕತೆ

ಆಧ್ಯಾತ್ಮಿಕ ಬೆಳವಣಿಗೆ(Spiritual growth)
ಹಾವು ಕನಸಿನಲ್ಲಿ ಬಂದರೆ ಬಹಳಷ್ಟು ಸಂಸ್ಕೃತಿಗಳ ನಂಬಿಕೆಯ ಪ್ರಕಾರ, ನಮ್ಮ ಕುಂಡಲಿನಿ(kundalini) ಜಾಗೃತವಾಗಿದೆ ಎಂದರ್ಥ. ಅಂದರೆ, ನೀವು ವೈಯಕ್ತಿಕ ಬೆಳವಣಿಗೆಯ ಹಾದಿಯಲ್ಲಿ ಮುಖ ಮಾಡಿದ್ದೀರಿ. ಇದ್ದಕ್ಕಿದ್ದಂತೆ ಸಂತೋಷ ಹಾಗೂ ಸಬಲತೆ ನಿಮ್ಮಲ್ಲಿ ಕೂಡಿ ಆಧ್ಯಾತ್ಮಿಕ ಹಾದಿ(spiritual path)ಯಲ್ಲಿ ನಡೆಸಲಿದೆ ಎಂದರ್ಥ. 

ಅಪ್ರಜ್ಞಾವಸ್ಥೆಯ ಶಕ್ತಿ(Unconcious energy)
ಕೆಲವೊಮ್ಮೆ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಅವು ಕನಸಿನಲ್ಲಿ ತಮ್ಮದೇ ರೀತಿಯಲ್ಲಿ ವ್ಯಕ್ತವಾಗಬಹುದು. ಹಾವನ್ನು ಕನಸಿನಲ್ಲಿ ಕಾಣುವುದು ಕೂಡಾ ಯಾವುದೋ ತಿಳಿಯದ ಭಯ(unknown fear) ನಿಮ್ಮನ್ನು ಆವರಿಸಿದೆ ಎಂಬುದರ ಸೂಚಕವಾಗಿರಬಹುದು. ಧನಾತ್ಮಕ ರೀತಿಯಲ್ಲಿ ನೋಡಿದರೆ, ಇದು ಆರೋಗ್ಯ(health)ದಲ್ಲಿ ಚೇತರಿಕೆ ಕಾಣುತ್ತಿರುವುದರ ಹಾಗೂ ಮುಂದೆ ಒಳ್ಳೆ ದಿನಗಳಿರುವುದರ ಸೂಚಕವೂ ಹೌದು. 

Astrology Tips : ಮನೆಯ ಅಂದ ಹೆಚ್ಚಿಸುವ ಗುಲಾಬಿಯಲ್ಲಿದೆ ಅದೃಷ್ಟ ಬದಲಿಸುವ ಶಕ್ತಿ

ಮರಿಹಾವು(baby snake)
ಮರಿಹಾವು ಕನಸಿನಲ್ಲಿ ಬಂದರೆ ನೀವು ಅಪಾಯವಲ್ಲ ಎಂದುಕೊಂಡಿರುವ ವಿಷಯವೊಂದು ನಿಮ್ಮನ್ನು ಸಂಪೂರ್ಣ ನಾಶ ಮಾಡುವಷ್ಟು ಶಕ್ತವಾಗಿರುವುದರ ಸೂಚನೆಯಾಗಿದೆ. ಹಾಗಾಗಿ, ಶತ್ರುಗಳನ್ನು ಅಸಡ್ಡೆಯಾಗಿ ಭಾವಿಸಬೇಡಿ. 

 

Latest Videos
Follow Us:
Download App:
  • android
  • ios