ತ್ರಿವೇಣಿಯಲ್ಲಿ ಎಷ್ಟು ದಿನ ಸ್ನಾನ ಮಾಡಿದ್ರೆ ಪಾಪ ಪರಿಹಾರ, ಸದ್ಗುರು ಹೇಳೋದೇನು?
ಪ್ರಯಾಗರಾಜ್ ನಲ್ಲಿ ಮಹಾಕುಂಭ ಮೇಳ ಮೇಳೈಸಿದೆ. ಕೋಟಿಗಟ್ಟಲೆ ಜನರು ಕುಂಭ ಮೇಳಕ್ಕೆ ಬರ್ತಿದ್ದಾರೆ. ಈ ಮಧ್ಯೆ ಸದ್ಗುರು ಕುಂಭ ಮೇಳದ ಪುಣ್ಯ ಸ್ನಾನದ ಬಗ್ಗೆ ಭಕ್ತರಿಗೆ ಸೂಕ್ತ ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್ ( Uttar Pradesh Prayagraj) ನಲ್ಲಿ ಮಹಾಕುಂಭ ಮೇಳ (Mahakumbh Mela) ನಡೆಯುತ್ತಿದೆ. 144 ವರ್ಷಗಳಿಗೆ ಒಮ್ಮೆ ಮಹಾಕುಂಭ ಮೇಳ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭ ಮೇಳ ನಡೆಯುತ್ತದೆ. 2025ರಲ್ಲಿ ಮಹಾ ಕುಂಭ ಮೇಳ ಬಂದಿರುವುದು ಪ್ರತಿಯೊಬ್ಬನ ಅದೃಷ್ಟ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಕುಂಭ ಮೇಳ ಕಣ್ತುಂಬಿಕೊಳ್ಳಲು ಭಾರತೀಯರು ಹಾತೊರೆಯುತ್ತಿದ್ದಾರೆ. ಲಕ್ಷಾಂತರ ಮಂದಿ ಕುಂಭ ಮೇಳಕ್ಕೆ ಪ್ರತಿ ನಿತ್ಯ ಭೇಟಿ ನೀಡ್ತಿದ್ದಾರೆ. ಕುಂಭ ಮೇಳಕ್ಕೆ ಏಕೆ ಹೋಗ್ಬೇಕು ಎನ್ನುವ ಪ್ರಶ್ನೆಗೆ ಈಗಾಗಲೇ ಅನೇಕರು ಉತ್ತರ ನೀಡಿದ್ದು ಈಗ ಸದ್ಗುರು ಮಾತುಗಳು ವೈರಲ್ ಆಗಿವೆ. ಕುಂಭ ಮೇಳದಲ್ಲಿ ಪಾಲ್ಗೊಂಡು ಸ್ನಾನ ಮಾಡಿದ್ರೆ ನಿಜವಾಗಿಯೂ ಪಾಪಗಳಿಂದ ಮುಕ್ತಿ ಸಿಗುತ್ತದೆಯೇ ಇಲ್ಲವೆ ಎಂಬುದನ್ನು ಸದ್ಗುರು (Sadhguru) ಹೇಳಿದ್ದಾರೆ. ಅಲ್ಲದೆ ಎಷ್ಟು ದಿನ ಕುಂಭ ಮೇಳದಲ್ಲಿ ಭಾಗಿಯಾಗ್ಬೇಕು. ಯಾವೆಲ್ಲ ದಿನ ಪುಣ್ಯ ಸ್ನಾನ ಮಾಡ್ಬೇಕು ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ.
ಸುಮಾರು 144 ವರ್ಷಗಳ ನಂತರ, ಸೂರ್ಯ ಮತ್ತು ಗುರು ಗ್ರಹಗಳ ಸಂಚಾರದಿಂದಾಗಿ ಅದ್ಭುತ ಕಾಕತಾಳೀಯ ಘಟನೆಗೆ ಸಾಕ್ಷಿಯಾಗಿದೆ. ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಪ್ರತಿಯೊಬ್ಬರೂ ಹೋಗ್ಬೇಕು ಎಂದು ಸದ್ಗುರು ಹೇಳಿದ್ದಾರೆ. ಕುಂಭ ಮೇಳಕ್ಕೆ ಒಂದು ದಿನ ಹೋಗಿ, ತ್ರಿವೇಣಿ ಸಂಗಮ (Triveni Sangam ) ದಲ್ಲಿ ಸ್ನಾನ ಮಾಡಿದ್ರೆ ನಿಮ್ಮ ಪಾಪಗಳು ತೊಳೆಯುತ್ತವೆ ಎಂದಲ್ಲ. ಒಂದು ದಿನದ ಸ್ನಾನ ಮಾಡಿದ್ರೆ ಸಾಲದು. ನೀವು ಕುಂಭ ಮೇಳದಲ್ಲಿ ಕೆಲ ದಿನ ಇರಬೇಕು ಎಂದು ಸದ್ಗುರು ಹೇಳಿದ್ದಾರೆ. ಕುಂಭ ಮೇಳದಲ್ಲಿ ತಂಗಿ, ಸಂಗಮದಲ್ಲಿ ಸ್ನಾನ ಮಾಡಿ, ಪೂಜೆ ಮಾಡುವುದರಿಂದ ಮಾತ್ರ ಫಲ ಪ್ರಾಪ್ತಿಯಾಗುತ್ತದೆ. ಅಲ್ಲದೆ ಇದು ನಮ್ಮ ದೇಹಕ್ಕೂ ಪ್ರಯೋಜನಕಾರಿ ಎಂದು ಸದ್ಗುರು ಹೇಳಿದ್ದಾರೆ. ನಮ್ಮ ದೇಹ ಸುಮಾರು ಮೂರನೇ ಎರಡರಷ್ಟು ನೀರಿನಿಂದ ತುಂಬಿದೆ. ನೀವು ಸಂಗಮದಲ್ಲಿ ಸ್ನಾನ ಮಾಡಿದರೆ, ದೇಹಕ್ಕೆ ಪ್ರಯೋಜನವಾಗುತ್ತದೆ ಎಂದಿದ್ದಾರೆ.
ಮಹಾಕುಂಭ ಮೇಳದಲ್ಲಿ ಸುಧಾ ಮೂರ್ತಿ, ಮೂರು ದಿನ ಪುಣ್ಯ ಸ್ನಾನ, ಪಿತೃಗಳಿಗೆ ತರ್ಪಣ ಅರ್ಪಿಸುವ ಸಂಕಲ್ಪ
ಕುಂಭ ಮೇಳ 45 ದಿನಗಳ ಕಾಲ ನಡೆಯಲಿದೆ. ಇಂದು 10ನೇ ದಿನ. ನಿಮಗೆ ಕುಂಭ ಮೇಳಕ್ಕೆ ಭೇಟಿ ನೀಡಲು ಇನ್ನೂ ಅವಕಾಶವಿದೆ. ಫೆಬ್ರವರಿ 26ರಂದು ಕುಂಭ ಮೇಳ ಕೊನೆಗೊಳ್ಳಲಿದೆ. ಅಂದು ಅಮೃತ ಸ್ನಾನ ನಡೆಯಲಿದೆ. ಅದಲ್ಲದೆ ಕುಂಭ ಮೇಳದಲ್ಲಿ ಆರು ರಾಜ ಸ್ನಾನಗಳು ನಡೆಯಲಿವೆ. ಈಗಾಗಲೇ ಎರಡು ರಾಜ ಸ್ನಾನ ಪೂರ್ಣಗೊಂಡಿದೆ. ಜನವರಿ 13 ಮತ್ತು ಜನವರಿ 14ರಂದು ರಾಜ ಸ್ನಾನ ನಡೆದಿದೆ. ಇದು ಅತ್ಯಂತ ಪವಿತ್ರವಾಗಿದ್ದು, ಲಕ್ಷಾಂತರ ಮಂದಿ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದರು. ಜನವರಿ 29, ಮಾಘ ಅಮವಾಸ್ಯೆಯಂದು ಮೂರನೇ ರಾಜ ಸ್ನಾನ ನಡೆಯಲಿದೆ. ಇದಾದ್ಮೇಲೆ ಫೆಬ್ರವರಿ 3, ಬಸಂತ ಪಂಚಮಿಯಂದು ರಾಜ ಸ್ನಾನವಾಗಲಿದೆ. ಫೆಬ್ರವರಿ 13 ಮಾಘ ಪೂರ್ಣಿಮೆ ಹಾಗೂ ಫೆಬ್ರವರಿ 26 ಮಹಾ ಶಿವರಾತ್ರಿಯಂದು ಮತ್ತೆರಡು ರಾಜ ಸ್ನಾನ ನಡೆಯಲಿದೆ.
ರುದ್ರಾಕ್ಷಿ ಧರಿಸಿದ ನಂತರ ಈ ಕೆಲಸಗಳನ್ನ ಮಾಡಬೇಡಿ? ಧಾರಣೆ ಬಳಿಕ ಪಾಲಿಸಬೇಕಾದ ನಿಯಮಗಳು
ಕುಂಭ ಮೇಳದ ಸಮಯದಲ್ಲಿ ಸಂಗಮದಲ್ಲಿ ಯಾವುದೇ ದಿನ ನೀವು ಸ್ನಾನ ಮಾಡಿದ್ರೂ ಒಳ್ಳೆಯದು. ರಾಜ ಸ್ನಾನಕ್ಕೆ ಮತ್ತಷ್ಟು ಮಹತ್ವವಿದೆ. ನೀವು ಸ್ನಾನ ಮಾಡಿದ ನಂತ್ರ ಎರಡು ದೇವಸ್ಥಾನಗಳಿಗೆ ಅಗತ್ಯವಾಗಿ ಭೇಟಿ ನೀಡ್ಬೇಕು. ಬಡೇ ಹನುಮಾನ್ ಮತ್ತು ನಾಗವಾಸುಕಿ ದೇವಸ್ಥಾನಕ್ಕೆ ನೀವು ಹೋಗ್ಬೇಕು. ಒಂದು ದೇವರ ದರ್ಶನ ಪಡೆದ್ರೂ ಫಲ ಪ್ರಾಪ್ತಿಯಾಗುತ್ತದೆ. ಈ ದೇವಸ್ಥಾನಕ್ಕೆ ಭೇಟಿ ನೀಡದೆ ವಾಪಸ್ ಬಂದಲ್ಲಿ ಈ ಧಾರ್ಮಿಕ ಪ್ರಯಾಣವನ್ನು ಅಪೂರ್ಣ ಎನ್ನಲಾಗುತ್ತದೆ.