ಮಹಾಕುಂಭ ಮೇಳದಲ್ಲಿ ಸುಧಾ ಮೂರ್ತಿ, ಮೂರು ದಿನ ಪುಣ್ಯ ಸ್ನಾನ, ಪಿತೃಗಳಿಗೆ ತರ್ಪಣ ಅರ್ಪಿಸುವ ಸಂಕಲ್ಪ

ಮಹಾಕುಂಭ ಮೇಳಕ್ಕೆ ಭಕ್ತರ ದಂಡೇ ಹರಿದು ಬರ್ತಿದೆ. ಈ ಪುಣ್ಯ ಸ್ಥಳಕ್ಕೆ ಸಾಮಾಜಿಕ ಕಾರ್ಯಕರ್ತೆ ಸುಧಾ ಮೂರ್ತಿ ತಲುಪಿದ್ದಾರೆ. ಪುಣ್ಯ ಸ್ನಾನ ಮಾಡಿ ತರ್ಪಣ ಬಿಟ್ಟಿರುವ ಅವರು, ಕುಂಭ ಮೇಳದ ಮಹತ್ವವನ್ನು ಜನತೆಗೆ ತಿಳಿಸಿದ್ದಾರೆ.
 

Sudhamurthy taking  holy dip at the Mahakumbh Mela

144  ವರ್ಷಗಳ ನಂತ್ರ ಪ್ರಯಾಗರಾಜ್ (Prayagraj) ನಲ್ಲಿ ಮಹಾಕುಂಭ ಮೇಳ (Mahakumbh Mela) ನಡೆಯುತ್ತಿದೆ. 45 ದಿನಗಳ ಕಾಲ ನಡೆಯುವ ಮಹಾಕುಂಭ ಮೇಳ ಈಗಾಗಲೇ 9ನೇ ದಿನಕ್ಕೆ ಕಾಲಿಟ್ಟಿದೆ. ದೇಶ, ವಿದೇಶದಿಂದ ಭಕ್ತರು ಮಹಾಕುಂಭ ಮೇಳಕ್ಕೆ ಬಂದು ಪುಣ್ಯ ಸ್ನಾನ ಮಾಡ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಕೋಟಿ ಲೆಕ್ಕದಲ್ಲಿ ಜನರು ಪ್ರಯಾಗರಾಜ್ ಗೆ ಬರ್ತಿದ್ದಾರೆ. ಪ್ರಸಿದ್ಧ ಕೈಗಾರಿಕೋದ್ಯಮಿ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ (Rajya Sabha MP Sudha Murthy) ಕೂಡ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ.

ಜನವರಿ 21ರಂದು ಪ್ರಯಾಗರಾಜ್ ತಲುಪಿರುವ ಸುಧಾ ಮೂರ್ತಿ,  ತ್ರಿವೇಣಿ ಸಂಗಮದಲ್ಲಿ (Triveni Sangam) ಪವಿತ್ರ ಸ್ನಾನ ಮಾಡಿ,ಸೂರ್ಯ ದೇವರಿಗೆ ಜಲವನ್ನು ಅರ್ಪಿಸಿದ್ದಾರೆ. ಮೂರು ದಿನಗಳ ಕಾಲ ಪ್ರಯಾಗರಾಜ್ ನಲ್ಲಿ ತಂಗಲಿರುವ ಸುಧಾ ಮೂರ್ತಿ, ಮೂರೂ ದಿನ ಪುಣ್ಯ ಸ್ನಾನ ಮಾಡಲಿದ್ದಾರೆ. ಜೊತೆಗೆ ಪಿತೃಗಳಿಗೆ ತರ್ಪಣ ಬಿಡಲಿದ್ದಾರೆ.  

Mahakumbh 2025: ಮಹಾಕುಂಭಮೇಳದಲ್ಲಿ ಅದಾನಿ ಕುಟುಂಬ; ಹನುಮಂತನಿಗೆ ವಿಶೇಷ ಪೂಜೆ ಫೋಟೊ ವೈರಲ್!

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಸುಧಾ ಮೂರ್ತಿ, ಮಹಾಕುಂಭ ಮೇಳದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ರು. ಮಹಾಕುಂಭವು ಅತ್ಯುತ್ತಮ ತೀರ್ಥಯಾತ್ರೆ ಎಂದಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ ಎಂದಿದ್ದಾರೆ, ಇದು ಅತ್ಯಂತ ಪವಿತ್ರ ಸ್ಥಳ. ಮಹಾ ಕುಂಭಮೇಳವು 144 ವರ್ಷಗಳಿಗೊಮ್ಮೆ ಬರುತ್ತದೆ. ನನಗೆ ಅದನ್ನು ನೋಡಲು ಅವಕಾಶ ಸಿಕ್ಕಿದ್ದು ಹಾಗೂ ನಾನು ಇಲ್ಲಿಗೆ ಬಂದಿದ್ದು ತುಂಬಾ ಸಂತೋಷ ನೀಡಿದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ. 

 ನಾನು 3 ದಿನಗಳ ಸಂಕಲ್ಪ ಮಾಡಿದ್ದೇನೆ. ಮಂಗಳವಾರ ನಾನು ಪ್ರಯಾಗದಲ್ಲಿ ಪವಿತ್ರ ಸ್ನಾನ ಮಾಡಿದ್ದೇನೆ. ಬುಧವಾರ ಹಾಗೂ ಗುರುವಾರ ಕೂಡ ಪವಿತ್ರ ಸ್ನಾನ ಮಾಡಲಿದ್ದೇನೆ. ನನ್ನ ತಂದೆ - ತಾಯಿ ಸೇರಿದಂತೆ ಪೂರ್ವಜರಿಗೆ ಮಹಾ ಕುಂಭ ಮೇಳಕ್ಕೆ ಬರಲು ಸಾಧ್ಯವಾಗ್ಲಿಲ್ಲ. ಅದಕ್ಕಾಗಿ ಅವರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸುವುದು ಅಗತ್ಯ ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ವೈರಲ್ ಸಾಧ್ವಿ ತೆಗೆದುಕೊಂಡಿದ್ದು ಮಂತ್ರ ದೀಕ್ಷೆ ! ತಪ್ಪು ಮಾಡಿಲ್ವ ಸುಂದರಿ ಹರ್ಷ ರಿಚಾರಿಯಾ?

ಮಹಾಕುಂಭ ಮೇಳದಲ್ಲಿ ತರ್ಪಣ ಬಿಡುವುದು ಬಹಳ ಅಗತ್ಯ. ಯಾಕೆಂದ್ರೆ 144 ವರ್ಷಗಳಿಗೊಮ್ಮೆ ಈ ಬೃಹತ್ ಧಾರ್ಮಿಕ ಉತ್ಸವ ನಡೆಯುತ್ತಿದೆ. ಈ ಶುಭ ಸಮಯದಲ್ಲಿ ಪಿತೃಗಳನ್ನು ಶಾಂತಗೊಳಿಸುವುದು ಮುಖ್ಯ. ಪ್ರಯಾಗದ ಸಂಗಮದ ದಡದಲ್ಲಿ ಗಂಗಾ ಸ್ನಾನ ಮಾಡಿದ ನಂತ್ರ ಪೂರ್ವಜರಿಗೆ ನೈವೇದ್ಯ ಅರ್ಪಿಸಬೇಕು. ತರ್ಪಣ ಅರ್ಪಿಸಲು ಸಾಧ್ಯವಿಲ್ಲ ಎನ್ನುವವರು ಪುಣ್ಯ ಸ್ನಾನವನ್ನಾದ್ರೂ ಮಾಡ್ಬೇಕು. ಹೀಗೆ ಮಾಡಿದ್ರೆ ಶಾಶ್ವತ ಪುಣ್ಯ ಲಭಿಸುತ್ತದೆ. ಸ್ನಾನ ಮಾಡಿದ ನಂತ್ರ ಗಂಗಾ ಜಲವನ್ನು ಕೈಯಲ್ಲಿ ತೆಗೆದುಕೊಂಡು ಪೂರ್ವಜರಿಗೆ ಅರ್ಪಿಸಿ ನಮಸ್ಕರಿ, ಇದು ಪೂರ್ವಜರ ಆತ್ಮಕ್ಕೆ ಶಾಂತಿ ನೀಡುತ್ತದೆ.  

Latest Videos
Follow Us:
Download App:
  • android
  • ios