Asianet Suvarna News Asianet Suvarna News

ಮೋಕ್ಷಕ್ಕಾಗಿ ಆಷಾಢದಲ್ಲಿ ಮಾಡಬೇಕಾದ 5 ಕಾರ್ಯಗಳು

ಆಷಾಢ ಎಂದರೆ ಮಳೆಯ ತಿಂಗಳು. ಸುಖಮಯ ಜೀವನ ಮತ್ತು ಮೋಕ್ಷಕ್ಕಾಗಿ ಆಷಾಢ ಮಾಸದಲ್ಲಿ ಮಾಡಬೇಕಾದ 5 ಪ್ರಮುಖ ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.

What are those 5 tasks of the month of Ashadha skr
Author
Bangalore, First Published Jun 23, 2022, 11:09 AM IST

ಹಿಂದೂ ಕ್ಯಾಲೆಂಡರ್ ಪ್ರಕಾರ, ವರ್ಷದ ನಾಲ್ಕನೇ ತಿಂಗಳು ಆಷಾಢ(Ashadha Month 2022). ಧಾರ್ಮಿಕ ನಂಬಿಕೆಯ ಪ್ರಕಾರ, ಆಷಾಢ ಮಾಸವನ್ನು ಭಗವಾನ್ ವಿಷ್ಣು(Lord Vishnu)ವಿಗೆ ಸಮರ್ಪಿಸಲಾಗಿದೆ. ಈ ಮಾಸದಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ವಿಶೇಷ ಲಾಭಗಳು ದೊರೆಯುತ್ತವೆ. ಆಷಾಢ ಮಾಸದಲ್ಲಿ ಬರುವ ಏಕಾದಶಿ ವ್ರತವನ್ನು ಆಚರಿಸುವುದರಿಂದ 88 ಸಾವಿರ ಬ್ರಾಹ್ಮಣರಿಗೆ ಅನ್ನದಾನ ಮಾಡಿದ ಪುಣ್ಯ ಲಭಿಸುತ್ತದೆ. ಮತ್ತೊಂದೆಡೆ, ದೇವಶಯಾನಿ ಏಕಾದಶಿ ಉಪವಾಸವನ್ನು ಆಷಾಢ ಶುಕ್ಲ ಏಕಾದಶಿಯಂದು ಇರಿಸಲಾಗುತ್ತದೆ. ಈ ದಿನದಿಂದ ಭಗವಾನ್ ವಿಷ್ಣು ಯೋಗ ನಿದ್ರೆಗೆ ಹೋಗುತ್ತಾನೆ. 

ಮಳೆಗಾಲದ ಆರಂಭಿಕ ಕಾಲ. ಈ ಮಾಸದಲ್ಲಿ ಬರುವ ಮಳೆ  ನಮ್ಮ ಹೊಲಗಳಲ್ಲಿ ಬೆಳೆ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ, ಆಶಾಢವು ರೈತರಿಗೆ ಪ್ರಮುಖ ಕಾಲ. ಹೀಗಾಗಿ ಆಶಾಢ ಮಾಸದಲ್ಲಿ ಮಳೆಯ ದೇವರಾದ ವರುಣನನ್ನು ಮೆಚ್ಚಿಸಲೂ ಪೂಜೆಯನ್ನು ಮಾಡುತ್ತಾರೆ. ಜೊತೆಗೆ ಸೂರ್ಯ ದೇವರನ್ನೂ ಪೂಜಿಸಲಾಗುತ್ತದೆ. ಈ ಮೂಲಕ ಅತಿವೃಷ್ಟಿ, ಅನಾವೃಷ್ಟಿಗಳಾಗದೆ ಸಮತೋಲಿತವಾಗಿ ಮಳೆ ಸುರಿಯಲಿ ಎಂದು ಬೇಡಲಾಗುತ್ತದೆ. ಆಷಾಢ ಮಾಸದಲ್ಲಿ ಸುಖ-ಶಾಂತಿ-ಸಮೃದ್ಧಿಯ ಜೊತೆಗೆ ಮೋಕ್ಷ ಪ್ರಾಪ್ತಿ(salvation)ಗೂ ಕೆಲವು ಅಗತ್ಯ ಕೆಲಸಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಅಂದ ಹಾಗೆ ಆಷಾಢವು ಜೂನ್ 30ರಂದು ಆರಂಭವಾಗುತ್ತಿದೆ.

ಶತಮಾನಗಳಿಂದ ಆಚರಣೆಯಲ್ಲಿರುವ ಆಷಾಢ ಮಾಸದ ಈ 5 ಸಂಪ್ರದಾಯ ಆಚರಣೆಗಳು ಯಾವೆಲ್ಲ ನೋಡೋಣ. 

ಸೂರ್ಯನಿಗೆ ಅರ್ಘ್ಯ(offering Arghya to the Sun God)
ಇಡೀ ಭೂಮಿಗೆ ಬೆಳಕು ನೀಡುವ ಸೂರ್ಯ ದೇವರಿಗೆ ತಾಮ್ರದ ಪಾತ್ರೆಯಲ್ಲಿ ಅಕ್ಷತೆ ಹೂವುಗಳಿಂದ ಅರ್ಘ್ಯವನ್ನು ಅರ್ಪಿಸುವ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದರಿಂದ ಭಗವಂತನಾದ ಸೂರ್ಯ ಪ್ರಸನ್ನನಾಗುತ್ತಾನೆ ಮತ್ತು ಜೀವಿಯು ಮರಣಾನಂತರ ಮೋಕ್ಷವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.

Astro for Fruits: ನವಗ್ರಹ ದೋಷ ತಪ್ಪಿಸಲು ಹಣ್ಣು ಸೇವಿಸಿ!

ಮಂತ್ರಗಳ ಪಠಣ(Chanting of mantras)
ಆಷಾಢ ಮಾಸದಲ್ಲಿ ಉತ್ತಮ ಮಳೆ ಮತ್ತು ಉತ್ತಮ ಫಸಲು ಪಡೆಯಲು ಮಂತ್ರಗಳ ಪಠಣ ಕಡ್ಡಾಯ. 'ಓಂ ನಮೋ ಭಗವತೇ ವಾಸುದೇವಾಯ',' ಓಂ ನಮಃ ಶಿವಾಯ' ಮೊದಲಾದ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ ಮತ್ತು ಆತ್ಮಸ್ಥೈರ್ಯ ಹೆಚ್ಚುತ್ತದೆ.

ದಾನ(donation)
ಬಿಸಿಲಿನ ಬೇಗೆಯಿಂದ ಉಪಶಮನ ನೀಡುವ ಆಷಾಢ ಮಾಸದಲ್ಲಿ ಜನರಿಗೆ ಹಣ, ಆಹಾರ ಧಾನ್ಯಗಳ ಕೊರತೆ ಎದುರಾಗುತ್ತದೆ. ಆದ್ದರಿಂದಲೇ ಆಷಾಢ ಮಾಸದಲ್ಲಿ ಧನ, ಧಾನ್ಯ, ಕೊಡೆಗಳನ್ನು ದಾನ ಮಾಡುವ ಸಂಪ್ರದಾಯ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ಜನರು ಆತ್ಮತೃಪ್ತಿ ಮತ್ತು ಮೋಕ್ಷವನ್ನು ಪಡೆಯುತ್ತಾರೆ.

ತೀರ್ಥಯಾತ್ರೆ(pilgrimage)
ಜನರು ಆಷಾಢ ಮಾಸದಲ್ಲಿ ತೀರ್ಥಯಾತ್ರೆ ಕೈಗೊಳ್ಳಲು ಇಷ್ಟಪಡುತ್ತಾರೆ. ತೀರ್ಥಯಾತ್ರೆಯ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಪೂರ್ವಜರು ಇದರಿಂದ ಸಂತುಷ್ಟರಾಗಿ ಜನರ ಕಲ್ಯಾಣ ಮಾಡುತ್ತಾರೆ.

ರಾತ್ರೆ ಎಲ್ಲಾ ಪರ್ಫ್ಯೂಮ್ ಬಳಸಬೇಡಿ, ಮನೆಯಲ್ಲಿ ಹೆಚ್ಚಬಹುದು ನೆಗಟಿವ್ ಎನರ್ಜಿ!

ಗುರುಪೂಜೆ(Guru pooja)
ಗುರು ಪೂರ್ಣಿಮೆಯ ಪ್ರಸಿದ್ಧ ಹಬ್ಬ ಆಷಾಢ ಮಾಸದಲ್ಲಿ ಬರುತ್ತದೆ. ಇದರಲ್ಲಿ ಗುರುಗಳ ಆಶೀರ್ವಾದ ಪಡೆದು ಜನರ ಮನಸ್ಸಿನಿಂದ ಭಯ, ಅನುಮಾನಗಳು ದೂರವಾಗುತ್ತವೆ. ಇದರಿಂದಾಗಿ ಅವರು ತಮ್ಮ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನೀವು ಸಂಪತ್ತು, ಖ್ಯಾತಿ ಮತ್ತು ವೈಭವದ ಪ್ರಯೋಜನಗಳನ್ನು ಪಡೆಯುತ್ತೀರಿ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios