Asianet Suvarna News Asianet Suvarna News

Astro for Fruits: ನವಗ್ರಹ ದೋಷ ತಪ್ಪಿಸಲು ಹಣ್ಣು ಸೇವಿಸಿ!

ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಲಾಭಕಾರಿಯೋ, ನವಗ್ರಹಗಳ ದೋಷ ತೊಡೆಯಲೂ ಅಷ್ಟೇ ಪರಿಣಾಮಕಾರಿಯಾಗಬಲ್ಲವು. ಯಾವ ಗ್ರಹದ ದೋಷಕ್ಕೆ ಯಾವ ಹಣ್ಣನ್ನು ಸೇವಿಸಬೇಕು ತಿಳಿಯಿರಿ. 

Fruits will remove Navgrah dosh know how to use skr
Author
Bangalore, First Published Jun 23, 2022, 10:02 AM IST

ನವಗ್ರಹ ದೋಷ(Defects of Navgraha)ಗಳನ್ನು ಹೋಗಲಾಡಿಸಲು ಹಣ್ಣಿನ ರಸವನ್ನು ಬಳಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಆರೋಗ್ಯ(health)ವನ್ನು ಉತ್ತಮವಾಗಿಡುವುದಲ್ಲದೆ, ಗ್ರಹಗಳ ರಾಶಿಯ ಅಶುಭ ಪರಿಣಾಮ(inauspecious effects)ಗಳನ್ನು ಕಡಿಮೆ ಮಾಡಬಹುದು.

ಹಣ್ಣುಗಳು ನಮ್ಮ ಆರೋಗ್ಯವನ್ನು ಕಾಪಾಡಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು(nutrients) ನೀಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದೇ ರೀತಿಯಲ್ಲಿ, ಈ ಹಣ್ಣುಗಳು ನಮ್ಮ ಅದೃಷ್ಟವನ್ನು ಸಹ ಜಾಗೃತಗೊಳಿಸುತ್ತವೆ ಎಂಬುದು ಗೊತ್ತೇ? ಹೌದು, ಜ್ಯೋತಿಷ್ಯ(Astrology)ದಲ್ಲಿ ನವಗ್ರಹ ದೋಷಗಳನ್ನು ಹೋಗಲಾಡಿಸಲು ಹಣ್ಣಿನ ರಸವನ್ನು ಬಳಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಆರೋಗ್ಯವನ್ನು ಉತ್ತಮವಾಗಿಡುವುದಲ್ಲದೆ, ಗ್ರಹಗಳ ರಾಶಿಯ ಅಶುಭ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಯಾವ ಫಲದಿಂದ ಯಾವ ಗ್ರಹದ ದೋಷ ತಗ್ಗಿಸಬಹುದು ಎಂದು ತಿಳಿಯೋಣ.

ಸೂರ್ಯ ದೋಷ ತಗ್ಗಿಸಲು
ಸೂರ್ಯ(Sun)ನನ್ನು ರಾಜಯೋಗದ ದಯಪಾಲಕ, ದಕ್ಷ ಆಡಳಿತಗಾರ, ಖ್ಯಾತಿ ಮತ್ತು ಅದೃಷ್ಟವನ್ನು ನೀಡುವ ಗ್ರಹ ಎಂದು ಕರೆಯಲಾಗುತ್ತದೆ. ಸೂರ್ಯನ ಅಶುಭ ಪರಿಣಾಮವನ್ನು ಕಡಿಮೆ ಮಾಡಲು, ಕೆಂಪು ಬಣ್ಣದ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂದು ಜ್ಯೋತಿಷ್ಯ ಹೇಳುತ್ತದೆ. ಸೂರ್ಯನನ್ನು ಬಲಪಡಿಸಲು ಬೀಟ್ರೂಟ್, ದಾಳಿಂಬೆ, ಟೊಮೆಟೊ ಮತ್ತು ಮಾವಿನ ರಸವನ್ನು ಸೇವಿಸಬೇಕು.

ನಿಮ್ಮ ಹಸ್ತ ರೇಖೆ ಪ್ರಕಾರ ಪೂಜಿಸಿ ಈ ದೇವರ, ಪಡೆಯಿರಿ ಅನುಗ್ರಹ!

ಚಂದ್ರನಿಗೆ ಬಲ ತುಂಬಲು
ಚಂದ್ರ(Moon)ನು ಸೌಮ್ಯತೆ ಮತ್ತು ನೀರಿನ ಸೂಚಕ. ಚಂದ್ರನ ಬಲವನ್ನು ಹೆಚ್ಚಿಸಲು ಲಿಚಿ, ಕಲ್ಲಂಗಡಿ ಮತ್ತು ಕಬ್ಬಿನ ರಸವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಚಂದ್ರನು ನಿಮಗೆ ಅನುಕೂಲಕರವಾಗಿರುತ್ತಾನೆ.

ಮಂಗಳದ ದುಷ್ಪರಿಣಾಮ ತೆಗೆಯಲು
ಜಾತಕದಲ್ಲಿ ಮಂಗಳ(Mars)ವು ಅಶುಭವಾಗಿದ್ದರೆ, ವ್ಯಕ್ತಿಯು ಕ್ರೂರ ಮತ್ತು ಹಿಂಸಾತ್ಮಕನಾಗುತ್ತಾನೆ. ಅಂಥ ಪರಿಸ್ಥಿತಿಯಲ್ಲಿ, ಅವನಿಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ನೀವು ಅದರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಬಯಸಿದರೆ, ಆಹಾರ ಪದಾರ್ಥಗಳಲ್ಲಿ ಹೆಚ್ಚು ಕೆಂಪು ವಸ್ತುಗಳನ್ನು ಬಳಸಿ. ಉದಾಹರಣೆಗೆ, ದಾಳಿಂಬೆ, ಟೊಮೆಟೊ, ಕಲ್ಲಂಗಡಿ, ಸ್ಟ್ರಾಬೆರಿ ಮತ್ತು ಬೀಟ್‌ರೂಟ್ ರಸವನ್ನು ಬಳಸಬಹುದು.

ಬುಧಕ್ಕೆ ಫಲ
ಬುಧ(Mercury)ವು ಕಲಿಕೆ, ಬುದ್ಧಿವಂತಿಕೆ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಬುಧ ಗ್ರಹಕ್ಕೆ ಹಸಿರು ಅತ್ಯಂತ ಪರಿಣಾಮಕಾರಿ ಬಣ್ಣವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಬುಧ ದೋಷವಿದ್ದರೆ ಅದನ್ನು ಕಡಿಮೆ ಮಾಡಲು ಪೇರಳೆ ಮತ್ತು ನೆಲ್ಲಿಕಾಯಿ ರಸವನ್ನು ಕುಡಿಯಿರಿ.

ಗುರು ಗ್ರಹದ ಅಶುಭ ಪರಿಣಾಮ
ಜಾತಕದಲ್ಲಿ ಗುರು(Jupiter) ಬಲಹೀನನಾಗಿದ್ದರೆ ವಿದ್ಯಾಭ್ಯಾಸ, ಧನ ಪ್ರಾಪ್ತಿಯಲ್ಲಿ ಅಡೆತಡೆಗಳು, ಅಶುಭ ಪರಿಣಾಮದಿಂದ ಜೀವನದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಗುರುಗ್ರಹದ ಅಶುಭ ಪರಿಣಾಮಗಳು ನಿಮ್ಮ ಮೇಲೆ ಬೀಳಬಾರದು ಎಂದರೆ ನೀವು ಬಾಳೆಹಣ್ಣು, ಪಪ್ಪಾಯಿ, ಕಿತ್ತಳೆ ಮತ್ತು ಮೂಸಂಬಿಗಳನ್ನು ತಿನ್ನಬೇಕು.

ಸಿಟ್ಟಿನ ನಿಯಂತ್ರಣಕ್ಕೆ ಜ್ಯೋತಿಷ್ಯ ಮಂತ್ರ

ಶುಕ್ರದ ದುಷ್ಪರಿಣಾಮ ತಗ್ಗಿಸಲು
ಶುಕ್ರ ಗ್ರಹ(Venus)ವನ್ನು ಪ್ರೀತಿ, ಸೌಂದರ್ಯ ಮತ್ತು ಆಕರ್ಷಣೆಯ ಅಂಶವೆಂದು ಪರಿಗಣಿಸಲಾಗಿದೆ. ಅದರ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು, ಲಿಚಿ ಮತ್ತು ಕಲ್ಲಂಗಡಿ ರಸವನ್ನು ಸೇವಿಸುವುದು ಒಳ್ಳೆಯದು.

ಶನಿಯ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು
ಶನಿಯ ಅಶುಭ ಪರಿಣಾಮ ಎಂದರೆ ವ್ಯಕ್ತಿಯ ನಾಶ. ಶನಿ(Saturn)ಯ ಮಂಗಳಕರ ಬಣ್ಣ ಕಪ್ಪು. ಅಂತಹ ಪರಿಸ್ಥಿತಿಯಲ್ಲಿ, ಅದರ ದುಷ್ಪರಿಣಾಮವನ್ನು ಕಡಿಮೆ ಮಾಡಲು, ನೀವು ಕಪ್ಪು ದ್ರಾಕ್ಷಿ, ನೇರಳೆ, ಬ್ಲ್ಯಾಕ್ ಬೆರಿ ಸೇರಿದಂತೆ ಕಪ್ಪು ಹಣ್ಣುಗಳ ರಸವನ್ನು ಕುಡಿಯಬಹುದು. ರಾಹು-ಕೇತುಗಳ ಪ್ರಭಾವಗಳಿಗೂ ಈ ಫಲಗಳು ಮಂಗಳಕರ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios