ಈ ರಾಶಿಯವರನ್ನು ಸೋಮಾರಿ ಮಠದ ಅಧ್ಯಕ್ಷರನ್ನಾಗಿಸಬಹುದು!

ಪ್ರತಿಯೊಬ್ಬರಲ್ಲೂ ದೌರ್ಬಲ್ಯವಿರುತ್ತದೆ. ಕೆಲವರು ಅದನ್ನು ತೋರಿಸಿಕೊಳ್ಳುವುದಿಲ್ಲ. ಮತ್ತೆ ಕೆಲವರು ಬೇಡವೆಂದರೂ ದೌರ್ಬಲ್ಯಗಳು ಹೊರ ಬರುತ್ತವೆ. ಯಾವ ರಾಶಿಯ ದೌರ್ಬಲ್ಯ ಏನು ನೋಡೋಣ. 

What are the Weaknesses of Your Zodiac Sign skr

ಪ್ರತಿಯೊಬ್ಬ ವ್ಯಕ್ತಿಗೂ ಕೆಲವೊಂದು ಬಲ, ಮತ್ತೆ ಕೆಲವು ದೌರ್ಬಲ್ಯಗಳಿರುತ್ತವೆ. ಯಾರ ಬಲ ಏನೆಂಬುದು ಸಾಮಾನ್ಯವಾಗಿ ತಿಳಿದು ಹೋಗುತ್ತದೆ. ಆದರೆ, ಒಬ್ಬರ ದೌರ್ಬಲ್ಯ ತಿಳಿಯುವುದು ಸುಲಭವಲ್ಲ. ಎಲ್ಲ ರಾಶಿಗಳೂ ಗಾಳಿ, ನೀರು, ಬೆಂಕಿ ಹಾಗೂ ಭೂಮಿಯೊಂದಿಗೆ ಸಂಬಂಧ ಹೊಂದಿರುತ್ತವೆ. ಹೀಗಾಗಿ, ಗ್ರಹಗಳ ಸ್ಥಾನ ಬದಲಾದಂತೆಲ್ಲ ಮನುಷ್ಯರ ಸನ್ನಿವೇಶಗಳೂ ಬದಲಾಗುತ್ತವೆ. ಅವುಗಳಿಗೆ ಪ್ರತಿಕ್ರಿಯಿಸುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸದ್ಯ 12 ರಾಶಿಗಳಲ್ಲಿ ಯಾವ ರಾಶಿಯ ದೌರ್ಬಲ್ಯ ಏನು ನೋಡೋಣ. 

ಮೇಷ(Aries)
ಮೇಷ ರಾಶಿಯ ಚಿಹ್ನೆಯು ಬೆಂಕಿಯಾಗಿದ್ದು ಅದು ಕೋಪ ಮತ್ತು ಸ್ಫೋಟವನ್ನು ಸೂಚಿಸುತ್ತದೆ. ಮೇಷ ರಾಶಿಯವರು ಉತ್ತಮ ಆಡಳಿತಗಾರು. ಯಾವ ವಿಷಯವನ್ನೂ ಅವರು ಸುಮ್ಮನೆ ನಿರ್ಲಕ್ಷಿಸುವುದಿಲ್ಲ ಅಥವಾ ಅನ್ಯಾಯ ನೋಡಿಕೊಂಡು ಸುಮ್ಮನಿರುವುದಿಲ್ಲ; ಅವರು ಅದನ್ನು ಪ್ರತಿಭಟಿಸುವುದಷ್ಟೇ ಅಲ್ಲ, ಸರಿಪಡಿಸುವ ಅಧಿಕಾರ ತೆಗೆದುಕೊಳ್ಳುತ್ತಾರೆ. ಆ ಮೂಲಕ ನಾಯಕತ್ವ ಸಾಬೀತುಪಡಿಸುತ್ತಾರೆ. ಗುರಿಯನ್ನು ಹೇಗೆ, ಎಲ್ಲಿಂದ ಹೊಡೆಯಬೇಕೆಂದು ಅವರಿಗೆ ತಿಳಿದಿದೆ. ಕೋಪ, ಮೊಂಡುತನ ಮತ್ತು ವಿನಾಶಕಾರಿ ಸ್ವಭಾವ ಇವರ ವೀಕ್ನೆಸ್ ಆಗಿದೆ. 

ವೃಷಭ(taurus)
ವೃಷಭ ರಾಶಿಯ ಜನರ ದೌರ್ಬಲ್ಯವೆಂದರೆ ಇವರು ಸೋಮಾರಿಗಳು. ಜೊತೆಗೆ ಸುಲಭಕ್ಕೆ ಬದಲಾಗದವರು ಮತ್ತು ಕಟ್ಟುನಿಟ್ಟಾದವರು. ಅವರು ತಮ್ಮ ನಿಗದಿತ ವೇಳಾಪಟ್ಟಿಗೆ ಅಂಟಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಅವರ ಜೀವನದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಸುಲಭವಾಗಿ ಒಪ್ಪುವವರಲ್ಲ. ಬದಲಾವಣೆಗಳು ಇವರಲ್ಲಿ ಕಿರಿಕಿರಿ ಉಂಟು ಮಾಡುತ್ತವೆ. ಬಹಳ ನಿಧಾನಗತಿಯವರಾದ ಕಾರಣದಿಂದಲೇ ತಮ್ಮ ಜೀವನದಲ್ಲಿ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಈ ಜನರು ಬಹುತೇಕ ಎಲ್ಲವನ್ನೂ ಉತ್ಪ್ರೇಕ್ಷಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ ಮತ್ತು ಸ್ವಭಾವತಃ ಮೊಂಡುತನದವರಾಗಿದ್ದಾರೆ.

ಮಿಥುನ(Gemini)
ಮಿಥುನ ರಾಶಿಯವರಲ್ಲಿ ಕುತೂಹಲ ಹೆಚ್ಚು. ಅವರು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಬಹು ಬೇಗ ತಮ್ಮದೇ ಆದ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಇವರು ಬಹಳ ವೇಗಗಳು ಮತ್ತು ಯಾವಾಗ ಏನು ಮಾಡುತ್ತಾರೆಂದು ಊಹಿಸಲು ಕಷ್ಟ. ಮಿಥುನ ರಾಶಿಯ ಜನರು ದ್ವಿಮುಖ(double faced)ರು ಮತ್ತು ಮತ್ತೊಬ್ಬರನ್ನು ಕಾಳಜಿ ಮಾಡುವುದು ಕಡಿಮೆ. ಮತ್ತೊಬ್ಬರ ವಿಷಯ ಹೋಗಲಿ, ಸ್ವತಃ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವಷ್ಟು ಅಸಡ್ಡೆ ಹೊಂದಿದ್ದಾರೆ. 

ಶನಿ -ಕುಜ -ರಾಹು- ತ್ರಿಗ್ರಹ ಉಪಟಳ

ಕಟಕ(Cancer)
ಕರ್ಕಾಟಕ ರಾಶಿಯ ಜನರು ನಾಚಿಕೆ ಸ್ವಭಾವದವರು, ಮೂಡಿ ಮತ್ತು ಗುಟ್ಟು ಮಾಡುವವರು. ಅವರು ಯಾವುದಾದರೂ ನೋವಿನ ಘಟನೆ ನಡೆದರೆ ದೀರ್ಘಕಾಲದವರೆಗೆ ಅದನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಸೇಡು ತೀರಿಸಿಕೊಳ್ಳಲು ಬಯಸುತ್ತಾರೆ. ತುಂಬಾ ಅಸೂಯೆ ಸ್ವಭಾವದ ಇವರು, ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ. ಎಲ್ಲವನ್ನೂ ದುಡ್ಡಿನಿಂದ ಅಳೆಯುವುದು, ಎಲ್ಲದರಲ್ಲೂ ಲಾಭ ಹುಡುಕುವುದು ಇವರ ಮತ್ತೊಂದು ದೌರ್ಬಲ್ಯ.

ಸಿಂಹ(Leo)
ಎಲ್ಲರನ್ನೂ ಮತ್ತು ಎಲ್ಲವನ್ನೂ ಆಳುವ ಅವರ ಆಳವಾದ ಬಯಕೆ ಅವರ ದೊಡ್ಡ ದೌರ್ಬಲ್ಯವಾಗಿದೆ. ಅವರು ತುಂಬಾ ಹಠಮಾರಿ ಮತ್ತು ತಮ್ಮ ಶಕ್ತಿಯನ್ನು ಗರಿಷ್ಠವಾಗಿ ಬಳಸಿಕೊಳ್ಳುತ್ತಾರೆ. ಅವರ ಮೊಂಡುತನದ ನಡವಳಿಕೆಯು ತಮ್ಮನ್ನು ತಾವು ನಂಬುವಂತೆ ಒತ್ತಾಯಿಸುತ್ತದೆ. ಅವರು ಪ್ರಸಿದ್ಧಿಯಲ್ಲಿ ಉಳಿಯಲು ಇಷ್ಟಪಡುತ್ತಾರೆ ಆದರೆ ನಿಸ್ಸಂಶಯವಾಗಿ, ಇದು ಸಾರ್ವಕಾಲಿಕವಾಗಿ ಸಾಧ್ಯವಿಲ್ಲ.

ಖಿನ್ನತೆ ಮತ್ತು ಆತಂಕದಿಂದ ದೂರಾಗಲು ಈ Astrology Remedies ಪಾಲಿಸಿ..

ಕನ್ಯಾ(Virgo)
ಕನ್ಯಾ ರಾಶಿಯವರಿಗೆ ಯಾರನ್ನಾದರೂ ನಂಬುವುದು ತುಂಬಾ ಕಷ್ಟ. ಅವರು ತಮ್ಮ ಉತ್ತಮ ಸ್ನೇಹಿತರನ್ನು ಸಹ ನಂಬುವುದಿಲ್ಲ. ಇವರು ಇತರರನ್ನು ಸದಾ ಟೀಕಿಸುತ್ತಾರೆ. ಕನ್ಯಾ ರಾಶಿಯವರೊಂದಿಗೆ ಬೆರೆಯಲು ಜನರು ತುಂಬಾ ಕಷ್ಟಪಡುತ್ತಾರೆ.

ತುಲಾ(Libra)
ತುಲಾ ರಾಶಿಯವರು ಗೊಂದಲಮಯ ಜನರು. ಇದು ಒಮ್ಮೊಮ್ಮೆ ಚೆನ್ನಾಗಿರಬಹುದು ಮತ್ತು ಸಹಿಸಿಕೊಳ್ಳಬಹುದು. ಆದರೆ ಇವರ ನಿರಂತರ ನಿರ್ದಾಕ್ಷಿಣ್ಯ ವರ್ತನೆಯನ್ನು ಸಹಿಸಿಕೊಳ್ಳುವುದು ಕಷ್ಟ. ಇಂಥ ಗೊಂದಲಮಯ ಜನರ ಸುತ್ತಲೂ ಇರುವುದು ಕೆಲವೊಮ್ಮೆ ಹತಾಶೆಯನ್ನು ಉಂಟುಮಾಡಬಹುದು. ತುಲಾ ರಾಶಿಯವರು ಇತರರ ಭಾವನೆಗಳಿಗೆ ಅಷ್ಟೇನೂ ಗಮನ ಕೊಡುವುದಿಲ್ಲ.

ವೃಶ್ಚಿಕ(Scorpio)
ಇವರು ವಿಷಚೇಳುಗಳಿದ್ದಂತೆ. ಇವರನ್ನು ಜಾಸ್ತಿ ಕೆಣಕದಿರುವುದೇ ಲೇಸು. ಇವರಿಗೆ ಪ್ರೀತಿಸಲು ಆರಂಭಿಸಲು ಗೊತ್ತು. ಆದರೆ ಅವರ ಪ್ರೀತಿಯ ವಿಷಯಗಳಿಗೆ ಸಂಬಂಧಿಸಿದಂತೆ ಅವರ ಅನಿರ್ದಿಷ್ಟ ವರ್ತನೆ ಅವರ ದೊಡ್ಡ ದೌರ್ಬಲ್ಯವಾಗಿದೆ. ಅವರು ಯಾರ ಸಲಹೆಯನ್ನು ಕೇಳಲೂ ಸಿದ್ಧರಿಲ್ಲದೆ ತುಂಬಾ ಹಠಮಾರಿಗಳಾಗಿದ್ದಾರೆ.

ಸ್ಪರ್ಧೆ ಯಾವ್ದೇ ಇರಲಿ, ಗೆಲ್ಲೋ ಕುದುರೆಗಳು ಈ ಐದು ರಾಶಿಯವರು!

ಧನು(Sagittarius)
ಧನು ರಾಶಿಯವರು ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅವರು ನಿಜವಾಗಿಯೂ ಸುಲಭವಾಗಿ ವಿಚಲಿತರಾಗುತ್ತಾರೆ ಮತ್ತು ಬದಲಾಗುತ್ತಿರುವ ಸನ್ನಿವೇಶಗಳೊಂದಿಗೆ ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುತ್ತಾರೆ. ಅವರು ಅನೇಕ ಕೆಲಸಗಳನ್ನು ಸಾಮೂಹಿಕವಾಗಿ ಮಾಡಲು ಬಯಸುತ್ತಾರೆ ಆದರೆ ಅದು ಅವರ ಜೀವನದಲ್ಲಿ ಸಮಸ್ಯೆಗಳನ್ನು ಮಾತ್ರ ಉಂಟುಮಾಡುತ್ತದೆ. ಕೆಲವೊಮ್ಮೆ, ಅವರು ವಾಸ್ತವದಲ್ಲಿ ನಂಬುವುದನ್ನು ನಿಲ್ಲಿಸಿದ ಸಿದ್ಧಾಂತಗಳಲ್ಲಿ ಮುಳುಗಿದರು.

ಮಕರ(Capricorn)
ಮಕರ ರಾಶಿಯ ಜನರು ತಮ್ಮ ಕಾಲ್ಪನಿಕ ಜಗತ್ತಿನಲ್ಲಿ ವಾಸಿಸುತ್ತಾರೆ. ಅವರು ಯಾವಾಗಲೂ ನೈಜ ಪ್ರಪಂಚದಿಂದ ಬೇರ್ಪಟ್ಟಿರುತ್ತಾರೆ ಮತ್ತು ಅವರು ಪ್ರೀತಿಸುತ್ತಿರುವಾಗಲೂ ಭಾವಶೂನ್ಯರಂತೆ ಕಾಣಿಸುತ್ತಾರೆ. ಅವರು ನಿಧಾನವಾಗಿ ಕಲಿಯುವವರು. ಅವರ ದೊಡ್ಡ ದೌರ್ಬಲ್ಯವೆಂದರೆ ಅವರು ತಮ್ಮ ಜೀವನದಲ್ಲಿ ಹೊಸ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತರಲು ಒಂದು ಹೆಜ್ಜೆ ಮುಂದೆ ಹೋಗುವುದಿಲ್ಲ.

ಕುಂಭ(Aquarius)
ಇವರು ಸ್ವಾತಂತ್ರ್ಯದಲ್ಲಿ ನಂಬಿಕೆ ಹೊಂದಿದವರು. ಸ್ವಾತಂತ್ರ್ಯ ಎಷ್ಟು ಸಿಕ್ಕರೂ ಸಾಲದವರು. ತಮ್ಮೆಲ್ಲ ಕೆಲಸಗಳನ್ನು ಸ್ವತಂತ್ರವಾಗಿ ಮಾಡುವ ಇವರು ಯಾರ ಸಹಾಯವನ್ನೂ ಬಯಸುವುದಿಲ್ಲ. ಹಸಿವಾದರೆ ಇವರು ಇವರಾಗಿರೋಲ್ಲ. ಬೇಗ ಕೋಪಗೊಳ್ಳುತ್ತಾರೆ. ಬೇಗ ತಾಳ್ಮೆಗೆಡುವುದೇ ಇವರ ದೊಡ್ಡ ದೌರ್ಬಲ್ಯ. 

ಮೀನ(Pisces)
ಇವರಲ್ಲಿ ಛಲ ಕಡಿಮೆ. ಎಲ್ಲರನ್ನೂ ಬೇಗ ನಂಬುವುದು ಇವರ ದೌರ್ಬಲ್ಯ. ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಬಹಳ ಸೂಕ್ಷ್ಮ ಸ್ವಭಾವದವರಾದ ಇವರನ್ನು ಹೆಚ್ಚಿನವರು ತಮ್ಮ ಲಾಭಕ್ಕಾಗಿ ಬಳಸುತ್ತಾರೆ. 
 

Latest Videos
Follow Us:
Download App:
  • android
  • ios