Asianet Suvarna News Asianet Suvarna News

Kissing as per Astrology: ಯಾವ ಜನ್ಮರಾಶಿಯ ವ್ಯಕ್ತಿ Kiss ಮಾಡುವುದು ಹೇಗೆ?

ಪ್ರತಿಯೊಬ್ಬ ವ್ಯಕ್ತಿಯ ಕಿಸ್ಸಿಂಗ್, ಫ್ಲರ್ಟಿಂಗ್ ಕೂಡ ವೈವಿಧ್ಯಮಯ. ಇದರಲ್ಲಿ ಅವರು ಜನಿಸಿದ ಜನ್ಮರಾಶಿಯ ಪಾಲು ಕೂಡ ಸಾಕಷ್ಟು ಇರುತ್ತೆ. ನಿಮ್ಮ ಕಿಸ್ಸಿಂಗ್ ಸ್ಟೈಲ್ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.
 

What are the types of kissers according to zodiac
Author
Bengaluru, First Published Apr 11, 2022, 12:10 PM IST | Last Updated Apr 11, 2022, 12:10 PM IST

ಹಲವಾರು ರೀತಿಯ ಕಿಸ್‌ಗಳಿವೆ (Kiss) - ಹೂಮುತ್ತು, ಗಾಢ ಮುತ್ತು, ಫ್ರೆಂಚ್ ಕಿಸ್ (French Kiss) , ಬಟರ್‌ಫ್ಲೈ ಕಿಸ್, ಪ್ಲೈಯಿಂಗ್ ಕಿಸ್ ಇತ್ಯಾದಿ. ಸಂಗಾತಿ ಅಥವಾ ಗೆಳೆಯ ನಿಮ್ಮ ಹಣೆಯ ಮೇಲೆ ಚುಂಬಿಸಿದರೆ, ಅವನು ನಿಮ್ಮನ್ನು ಸ್ನೇಹಿತ/ತೆ ಎಂದು ಭಾವಿಸುತ್ತಾನೆ. ಅಲ್ಲಿ ರೊಮ್ಯಾನ್ಸ್ (Romance) ಇರುವುದಿಲ್ಲ. ಯಾರಾದರೂ ನಿಮಗೆ ಕೆನ್ನೆಗೆ ಮುತ್ತು ಕೊಟ್ಟರೆ, ಅದು 'ಹಲೋ' ಎಂದಂತೆ. ಆದರೆ ಅವರ ತುಟಿಗಳು ಅಲ್ಲಿ ಹೆಚ್ಚು ಕ್ಷಣ ಕಾಲಹರಣ ಮಾಡಿದರೆ, ಅವರು ನಿಮ್ಮೊಂದಿಗೆ ಫ್ಲರ್ಟಿಂಗ್ (Flirting) ಮಾಡುತ್ತಿದ್ದಾರೆ ಎಂದರ್ಥ. ಬನ್ನಿ, ಈಗ ಜನ್ಮರಾಶಿಗೆ ತಕ್ಕಂತೆ ಯಾರು ಎಂಥ ಕಿಸ್ಸರ್ ಅಂತ ತಿಳಿದುಕೊಳ್ಳೋಣ.

ಮೇಷ ರಾಶಿ (Aries)
ಮೇಷ ರಾಶಿಯವರು ಉತ್ತಮ ಆರಂಭಕಾರರು, ವರ್ಚಸ್ವಿ ಮತ್ತು ಯಾವಾಗಲೂ ಫ್ರೆಶ್ ಆಗಿರುವವರು. ಅವರು ತಮ್ಮ ವಿಶೇಷ ಚುಂಬನಗಳಿಂದ ನಿಮ್ಮನ್ನು ಆಶ್ಚರ್ಯಚಕಿತಗೊಳಿಸಬಹುದು. ನಿಮ್ಮನ್ನು ಗಾಢವಾಗಿ ಹಿಡಿದುಕೊಂಡು ಉತ್ಸಾಹದಿಂದ ಚುಂಬಿಸುತ್ತಾರೆ. ಇವರದು ಕ್ಷಿಪ್ರ ಮತ್ತು ತಾತ್ಕಾಲಿಕ ಚುಂಬನವಾಗಿರುವುದಿಲ್ಲ. ಇವರ ಚುಂಬನದಿಂದಲೇ ಇವರ ರಾಶಿ ಮೇಷ ಎಂಬುದು ನಿಮಗೆ ತಿಳಿಯುತ್ತದೆ.

ವೃಷಭ ರಾಶಿ (Taurus)
ಇವರು ಸಂಗಾತಿಯ ಸಂವೇದನೆಯತ್ತ ಹೆಚ್ಚು ಗಮನಹರಿಸುತ್ತಾರೆ. ಕಠಿಣ ಪರಿಶ್ರಮಿಗಳು ಮತ್ತು ಹೊಸ ಆಲೋಚನೆಗಳನ್ನು ಹೊಂದಿರುತ್ತಾರೆ. ಇವರು ನಿಮ್ಮನ್ನು ಚುಂಬಿಸಿದಾಗ, ಅದು ಹೆಚ್ಚಿನ ಪ್ಯಾಶನ್ ಅನ್ನು ಒಳಗೊಂಡಿರುತ್ತದೆ. ಅವರು ನಿಮ್ಮ ಮುಖವನ್ನು ನೋಡುತ್ತಾರೆ, ನಿಮ್ಮ ಪರ್‌ಫ್ಯೂಮ್ ಪರಿಮಳವನ್ನು ಉಸಿರಾಡುತ್ತಾರೆ, ನಿಮ್ಮ ಕೂದಲನ್ನು ಸ್ಪರ್ಶಿಸುತ್ತಾರೆ ಮತ್ತು ನಂತರ ಅವರ ತುಟಿಗಳು ನಿಮ್ಮೊಂದಿಗೆ ಸಂಪರ್ಕವನ್ನು ಹೊಂದುತ್ತವೆ. 

ಮಿಥುನ ರಾಶಿ (Gemini)
ಇವರು ಚಂಚಲ ಮನಸ್ಸನ್ನು ಹೊಂದಿರುವವರು. ಬಹುಮುಖ ಪ್ರತಿಭೆ ಹಾಗೂ ಉತ್ತಮ ಸಂವಹನಕಾರರು. ಇವರು ಬಟರ್‌ಫ್ಲೈ ಕಿಸ್ ನೀಡುವುದರಲ್ಲಿ ನಿಪುಣರು. ಆದರೆ ನೀವು ಅವುಗಳನ್ನು ಹಿಂತಿರುಗಿಸಲು ಪ್ರಯತ್ನಿಸಿದರೆ ಅವರು ನಕ್ಕು ಓಡಿಹೋಗುತ್ತಾರೆ. ಅವರನ್ನು ಹೇಗೆ ಚುಂಬಿಸಬೇಕು ಎಂಬುದಕ್ಕೆ ಅವರು ನಿಮಗೆ ಯಾವ ಸುಳಿವನ್ನೂ ಬಿಟ್ಟುಕೊಡಲಾರರು. 

ಬೇಗ ಮದುವೆಯಾಗೋ ಯೋಗ ಈ ರಾಶಿಯವರಿಗಿಲ್ಲ!

ಕಟಕ ರಾಶಿ (Cancer)
ಇವರು ಗಟ್ ಫೀಲಿಂಗ್‌ನಿಂದ ಬದುಕುವವರು. ಅವರ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ. ಇವರು ತಮ್ಮ ಕೈಗಳನ್ನು ನಿಮ್ಮನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾರೆ ಹಾಗೂ ನಿಮ್ಮನ್ನು ನಿರಂತರವಾಗಿ ಚುಂಬಿಸುವ ಮೂಲಕ ನಿಮ್ಮ ಮೇಲಿನ ಪ್ರೀತಿ ಮತ್ತು ಬಯಕೆಯನ್ನು ತೋರಿಸಲು ಬಯಸುತ್ತಾರೆ. ಇವರು ಫ್ರೆಂಚ್ ಕಿಸ್‌ನೊಂದಿಗೆ ಆರಂಭಿಸುತ್ತಾರೆ ಮತ್ತು ಅದರಿಂದ ಇನ್ನಷ್ಟು ಉದ್ರೇಕಿತರಾಗುತ್ತಾರೆ.

ಸಿಂಹ ರಾಶಿ  (Leo)
ಇವರು ಧೈರ್ಯಶಾಲಿಗಳು ಮತ್ತು ಹಠಾತ್ ಪ್ರವೃತ್ತಿಯವರು. ಗಮನ ಸೆಳೆಯಲು ಇಷ್ಟಪಡುತ್ತಾರೆ. ಸಾರ್ವಜನಿಕವಾಗಿ ನಿಮಗೆ ಡೀಪ್ ಕಿಸ್ ನೀಡಲು ಇವರು ಹಿಂಜರಿಯುವುದಿಲ್ಲ. ಇವರು ಫ್ಲರ್ಟಿಂಗ್ ಚತುರರು ಆದ್ದರಿಂದ ನಿಮ್ಮನ್ನು ಕರಗಿಸುವಂಥ ಮತ್ತು ಉದ್ರೇಕಿತಗೊಳಿಸುವಂಥ ಚುಂಬನಗಳನ್ನು ಹೇಗೆ ನೀಡಬೇಕೆಂದು ಅವರಿಗೆ ತಿಳಿದಿರುತ್ತದೆ. ಅವರು ನಿಮಗೆ ಬೇಕಾದ ರೀತಿಯ ಚುಂಬನಗಳನ್ನು ನೀಡಬಲ್ಲರು. ಮತ್ತು ನೀವು ಕಿರುಚುವವರೆಗೂ ಬಿಟ್ಟುಕೊಡುವುದಿಲ್ಲ!

ಕನ್ಯಾ ರಾಶಿ (Virgo)
ಇವರು ಪರ್‌ಫೆಕ್ಷನ್‌ಗಾಗಿ ಪರಿಶ್ರಮಿಸುತ್ತಾರೆ. ಹಾಗೂ ಸೂಕ್ಷ್ಮ ವಿವರಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ. ಇದು ಅವರನ್ನು ಉತ್ತಮ ಕಿಸ್ಸರ್ ಆಗಿ ಮಾಡುತ್ತದೆ. ಇವರು ಚುಂಬಿಸುವಾಗ ನಿಮ್ಮನ್ನು ಸಂಪೂರ್ಣವಾಗಿ ತಮ್ಮ ದೇಹದಿಂದ ಆವರಿಸುತ್ತಾರೆ. ಸುದೀರ್ಘ ಕಾಲ ಚುಂಬಿಸುತ್ತಾರೆ.

ತುಲಾ ರಾಶಿ (Libra)
ಇವರು ಸೌಂದರ್ಯ ಮತ್ತು ಕಲೆಗಳನ್ನು ಪ್ರೀತಿಸುತ್ತಾರೆ. ಪ್ರಣಯದಲ್ಲಿ ಉತ್ತಮ ಕೌಶಲ್ಯಗಳನ್ನು ಹೊಂದಿರುತ್ತಾರೆ. ಪಾರ್ಟಿಗಳಲ್ಲಿ ನಿಮ್ಮನ್ನು ಉದ್ರೇಕಿಸುವ ನೋಟವನ್ನು ತೋರಿಸುತ್ತಾರೆ. ಇವರು ನಿಮ್ಮನ್ನು ತೀವ್ರತೆಯಿಂದ, ಗಾಢವಾಗಿ ಮತ್ತು ತಮ್ಮ ಪ್ರಜ್ಞೆಯೇ ಕಳೆದುಕೊಂಡಂತೆ ಚುಂಬಿಸುತ್ತಾರೆ.

Jupiter Transit: 12 ವರ್ಷಗಳ ಬಳಿಕ ಗುರು ಮೀನಕ್ಕೆ, ಈ 5 ರಾಶಿಗಳಿಗಿನ್ನು ಪರ್ವ ಕಾಲ

ವೃಶ್ಚಿಕ ರಾಶಿ (Scorpio)
ಇವರು ರಾಶಿಚಕ್ರದ ಅತ್ಯಂತ ಭಾವೋದ್ರಿಕ್ತ ಚಿಹ್ನೆ. ಇವರು ಚುಂಬಿಸಿದಾಗ, ನಿಮ್ಮ ತುಟಿಗಳನ್ನಷ್ಟೇ ಚುಂಬಿಸುವುದಿಲ್ಲ. ವಿವಿಧ ರೀತಿಯ ಚುಂಬನ ತಂತ್ರಗಳೊಂದಿಗೆ ಅವರು ನಿಮ್ಮ ದೇಹದ ಪ್ರತಿಯೊಂದು ಇಂಚನ್ನೂ ಬಿಡದೆ ಚುಂಬಿಸುತ್ತಾರೆ. ನಾಲಿಗೆಯಿಂದ ನೆಕ್ಕುವುದನ್ನೂ ಮುತ್ತು ಎಂದು ಪರಿಗಣಿಸಿದರೆ, ಅದನ್ನೂ ಪರಿಣಾಮಕಾರಿಯಾಗಿ ಬಳಸುತ್ತಾರೆ.

ಧನು ರಾಶಿ (Sagittarius)
ಇವರು ಅತ್ಯಂತ ರೋಮಾಂಚಕಾರಿ ಪ್ರೇಮಿ. ತಮ್ಮ ಸಂಗಾತಿಯನ್ನು ಸಂತೋಷಪಡಿಸುವುದಲ್ಲಿ ಎಕ್ಸ್‌ಪರ್ಟ್. ನಿಮಗೆ ಕಿಸ್ ಬೇಕು ಎಂದುಕೊಳ್ಳುವಾಗ ಅವರು ಅದನ್ನು ಕೊಡುತ್ತಾರೆ ಮತ್ತು ಕಿಸ್‌ಗಳ ಮಳೆ ಸುರಿಸುತ್ತಾರೆ. ಪ್ರಣಯದಲ್ಲಿ ವಿನೋದವನ್ನು ಪರಿಣಾಮಕಾರಿಯಾಗಿ ತರಬಲ್ಲವರಾದ ಇವರು ಕಿಸ್ಸಿಂಗ್‌ನಲ್ಲಿ ವೈವಿಧ್ಯಮಯ ಪ್ರಯೋಗ ಮಾಡಬಲ್ಲರು.

ಮಕರ ರಾಶಿ (Capricorn)
ಇವರು ಸಮಸ್ಯೆಗಳನ್ನು ಪರಿಹರಿಸುವವರು, ರಹಸ್ಯ ಕಾಪಾಡುವವರು, ಅದ್ಭುತ ಸಂಗಾತಿಗಳು ಮತ್ತು ಬೆಸ್ಟ್ ಫ್ರೆಂಡ್‌ಗಳು. ಇವರು ಕೆಲವೊಮ್ಮೆ ಸ್ವಲ್ಪ ತಡವಾಗಿ ಪ್ರಣಯವನ್ನು ಅರ್ಥ ಮಾಡಿಕೊಳ್ಳುವವರು. ಆದರೆ ಚುಂಬನಕ್ಕೆ ಬಂದಾಗ ಅವರ ಸಂಶೋಧನೆಯ ಗಾಢತೆ ನಿಮಗೆ ಗೊತ್ತಾಗುತ್ತದೆ. ಅವರು ನಿಮ್ಮ ಮೇಲೆ ಕಿಸ್ಸಿಂಗ್‌ನ ಪ್ರತಿಯೊಂದು ಬಗೆಯನ್ನೂ ಪ್ರಯತ್ನಿಸುತ್ತಾರೆ. ನೀವು ಇಷ್ಟಪಡುವುದಿಲ್ಲ ಎಂದುಕೊಂಡ ರೀತಿಗಳನ್ನೂ, ನಿಮಗೆ ತಿಳಿದಿರದ ವೈವಿಧ್ಯವನ್ನೂ ಇವರಿಂದ ಆನಂದಿಸುವಿರಿ.

ಕುಂಭ ರಾಶಿ (Aquarius)
ಇವರು ಅಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕ ರೀತಿಯ ಪ್ರಣಯ ಇಷ್ಟಪಡುತ್ತಾರೆ. ಇವರಿಗೆ ಉದ್ರೇಕ, ಚುಂಬನ, ಪ್ರೇಮಗಳೆಲ್ಲಾ ಒಂದು ಕಲೆಯಂತೆ. ಚಂದದ ಸಂಗೀತ, ಮಂದ ಬೆಳಕು, ಆನಂದದ ಮನಸ್ಸು ಎಲ್ಲಾ ಇರಬೇಕು. ಇವರು ಎಚ್ಚರಿಕೆಯ ಚುಂಬನಗಳೊಂದಿಗೆ ನಿಧಾನವಾಗಿ ಪ್ರಾರಂಭಿಸುತ್ತಾರೆ. ಆದರೆ ಅವರ ಮಗ್ನತೆ ಹೆಚ್ಚಾದಂತೆ ಅವರ ಚುಂಬನಗಳು ಗಾಢವಾಗುತ್ತವೆ ಮತ್ತು ಎಲ್ಲವನ್ನೂ ಆವರಿಸುತ್ತಾರೆ.

ಮೀನ ರಾಶಿ (Pisces)
ಇವರು ನಿಷ್ಠಾವಂತ ಪ್ರೇಮಿಗಳು ಮತ್ತು ಸ್ನೇಹಿತರು. ಮೀನದವರು ನಿಮ್ಮನ್ನು ಚುಂಬಿಸಿದಾಗ, ಅವರು ನಿಮ್ಮನ್ನು ಹತ್ತಿರ ಮತ್ತಷ್ಟು ಹತ್ತಿರಕ್ಕೆ ಎಳೆದುಕೊಳ್ಳುತ್ತಾರೆ. ನಿಮ್ಮ ತುಟಿಗಳನ್ನು ಕಚ್ಚುವುದು, ನೆಕ್ಕುವುದು ಮತ್ತು ಬ್ರಷ್ ಮಾಡುವುದೆಲ್ಲಾ ಮಾಡುತ್ತಾರೆ. ಆದರೂ ಎಚ್ಚರವಾಗಿರುತ್ತಾರೆ, ಕೀಟಲೆ ಮಾಡುತ್ತಾರೆ. ಆನಂದೋದ್ರೇಕದ ಕ್ಷಣದಲ್ಲೂ ಕೀಟಲೆ ಮಾಡಬಹುದು.

Vastu tips: ಮನೆಯಲ್ಲಿ ಪಾಸಿಟಿವ್ ಎನರ್ಜಿಗೆ ದಾಸವಾಳ ಸೂತ್ರ
 

Latest Videos
Follow Us:
Download App:
  • android
  • ios