ಬೇಗ ಮದುವೆಯಾಗೋ ಯೋಗ ಈ ರಾಶಿಯವರಿಗಿಲ್ಲ!

ಈ ಕೆಲವು ರಾಶಿಯ ವ್ಯಕ್ತಿಗಳ ಮದುವೆ ಒಂದಲ್ಲಾ ಒಂದು ಕಾರಣದಿಂದ ತಡವಾಗುತ್ತದೆ. ಬೇಗ ಮದುವೆಯಾಗುವ ಯೋಗ ಇವರಿಗಿಲ್ಲ..
 

These Zodiac signs have late marriage check your astro prediction

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಯ ಆಧಾರದ ಮೇಲೆ ವ್ಯಕ್ತಿಯ ವರ್ತಮಾನ, ಭವಿಷ್ಯ ಮತ್ತು ಭೂತಕಾಲದ ಬಗ್ಗೆ ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ ಯಾವ ರಾಶಿ ಎನ್ನುವುದರ ಆಧಾರದ ಮೇಲೆ ವ್ಯಕ್ತಿತ್ವ, ಸ್ವಭಾವ, ಅದೃಷ್ಟ ಯೋಗಗಳ ಬಗ್ಗೆ ಸಹ ತಿಳಿಯಬಹುದಾಗಿದೆ. ಹುಟ್ಟಿದಾಗಿನಿಂದ ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮತ್ತು ಸಂತಾನ ಇತ್ಯಾದಿ ಎಲ್ಲ ವಿಚಾರಗಳ ಬಗ್ಗೆ ರಾಶಿಯಿಂದ ತಿಳಿಯಬಹುದಾಗಿದೆ. ಹಾಗೆಯೇ ಅಂತಹ ಭವಿಷ್ಯದ ಪ್ರಕಾರ ಈ ಕೆಲವು ರಾಶಿಯ ವ್ಯಕ್ತಿಗಳ ಮದುವೆ ವಿಳಂಬವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ....

ಮೇಷ ರಾಶಿ (Aries)
ಮೇಷ ರಾಶಿಯ ವ್ಯಕ್ತಿಗಳು ಭಾವುಕರು (Emotion) ಮತ್ತು ಆತ್ಮವಿಶ್ವಾಸವನ್ನು (Confidence) ಉಳ್ಳವರು ಆಗಿರುತ್ತಾರೆ. ತಮ್ಮ ನಿರ್ಧಾರವನ್ನು ಸ್ವತಃ ತಾವೇ ತೆಗೆದುಕೊಳ್ಳುತ್ತಾರೆ. ತಮಗೆ ಸರಿ ಅನ್ನಿಸಿದ್ದನ್ನು ಮಾಡಿಯೇ ತೀರುತ್ತಾರೆ. ಅಷ್ಟೇ ಅಲ್ಲದೆ ಆಗಾಗ ಇವರ ಮನಸ್ಥಿತಿ ಬದಲಾವಣೆ ಆಗುತ್ತಿರುತ್ತದೆ. ಇದರ ಪರಿಣಾಮ ಸಂಬಂಧದ ಮೇಲೆ ಆಗುತ್ತದೆ. ಕುಟುಂಬದ ಅಗತ್ಯತೆಗಳನ್ನು ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ತಮ್ಮ ಬಗ್ಗೆ ನಿರ್ಲಕ್ಷ್ಯ (Neglect) ತೋರುತ್ತಾರೆ. ಈ ರಾಶಿಯ (Zodiac sign ) ವ್ಯಕ್ತಿಗಳಿಗೆ ಸ್ವತಂತ್ರವಾಗಿ ಜೀವಿಸುವುದನ್ನು ಇಷ್ಟಪಡುತ್ತಾರೆ. ಬೇರೆಯವರು ಹೇಳಿದಂತೆ ಕೇಳಲು ಸ್ವಲ್ಪವೂ ಇಷ್ಟ ಪಡುವುದಿಲ್ಲ. ಹಾಗಾಗಿ ಮದುವೆಯ (Marriage) ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ತುಂಬಾ ವಿಳಂಬ (Late) ಮಾಡುತ್ತಾರೆ.

ಕುಂಭ ರಾಶಿ (Aquarius)
ಈ ರಾಶಿಯ ವ್ಯಕ್ತಿಗಳು ಎಂತಹದೇ ಪರಿಸ್ಥಿತಿಯಲ್ಲಿದ್ದರು. ಮನಸ್ಥಿತಿ ಅಷ್ಟಾಗಿ ಸರಿ ಇಲ್ಲದಿದ್ದರೆ ಇತರರ ಬಳಿ ಸಲಹೆ ಕೇಳಲು ಹೋಗುವುದಿಲ್ಲ. ಇವರಿಗೆ ಇತರರ ಮೇಲೆ ಹೆಚ್ಚಿನ ಭರವಸೆ ಇರುವುದಿಲ್ಲ. ಹಾಗಾಗಿ ಬೇರೆ ವ್ಯಕ್ತಿಗಳನ್ನು ಭರವಸೆಗೆ (belief) ತೆಗೆದುಕೊಳ್ಳುವುದು ವಿಶ್ವಾಸವಿಡುವುದು ಇವರಿಗೆ ತುಂಬಾ ಕಷ್ಟದ ವಿಷಯವಾಗಿರುತ್ತದೆ. ವಿಶ್ವಾಸಕ್ಕೆ ಯಾರು ಅರ್ಹರು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಇವರ ವಿವಾಹ ವಿಳಂಬವಾಗುತ್ತದೆ.  ಈ ವ್ಯಕ್ತಿಗಳು ಸ್ವತಂತ್ರರು ಬುದ್ಧಿವಂತರು ಆಗಿರುತ್ತಾರೆ. ಹಾಗಾಗಿ ಇವರಿಗೆ ಇವರ ಬುದ್ಧಿವಂತಿಕೆ ಮೇಲೆ ಹೆಚ್ಚಿನ ಗರ್ವ ಇರುತ್ತದೆ. ಈ ಸ್ವಭಾವವು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನು ಓದಿ: ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!

ಮಿಥುನ ರಾಶಿ (Gemini)
ಈ ರಾಶಿಯ ವ್ಯಕ್ತಿಗಳು ತುಂಬ ಮಹತ್ವಾಕಾಂಕ್ಷೆ ಉಳ್ಳವರಾಗಿರುತ್ತಾರೆ. ಮದುವೆಯ ಬಂಧನದಲ್ಲಿ ಸಿಲುಕಿ ಕಂಡರೆ ತಮ್ಮ ಸ್ವತಂತ್ರ ಹಾಳಾಗುತ್ತದೆ ಎಂಬ ಭಾವನೆ ಅವರಲ್ಲಿರುತ್ತದೆ. ಹಾಗಾಗಿ ಮದುವೆಯ ಬಂಧನದಲ್ಲಿ ಸಿಲುಕಲು ಇವರು ಇಷ್ಟಪಡುವುದಿಲ್ಲ. ಹಾಗಾಗಿ ವಿವಾಹದ ಬಗ್ಗೆ ನಿರ್ಧರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. 

ವೃಶ್ಚಿಕ ರಾಶಿ (Scorpio ) 
ಈ ರಾಶಿಯ ವ್ಯಕ್ತಿಗಳು ಆಪೋಸಿಟ್ ಸೆಕ್ಸ್ ಮೇಲೆ ಬೇಗ ಆಕರ್ಷಿತರಾಗುತ್ತಾರೆ. ಅಷ್ಟೆ ಅಲ್ಲದೆ ತುಂಬ ರಹಸ್ಯವಾದ ವ್ಯಕ್ತಿತ್ವ ಇವರದ್ದಾಗಿರುತ್ತದೆ. ತಾವು ಅಂದುಕೊಂಡ ದಾರಿಯಲ್ಲಿಯೇ ನಡೆಯುವ ಮನಸ್ಥಿತಿಯನ್ನು ಇವರು ಹೊಂದಿರುತ್ತಾರೆ. ಎಲ್ಲರಿಗಿಂತ ಶ್ರೇಷ್ಠ ಎಂಬ ಭಾವನೆ ಇವರಲ್ಲಿರುವ ಕಾರಣ ಮದುವೆಗೆ (Marriage) ಬಂದ ಪ್ರಸ್ತಾಪಗಳನ್ನು ತಿರಸ್ಕರಿಸುತ್ತಾರೆ (Reject). ಹಾಗಾಗಿ ಈ ವ್ಯಕ್ತಿಗಳ ವಿವಾಹ ವಿಳಂಬ ಆಗುತ್ತದೆ.  

ಧನು ರಾಶಿ (Sagittarius)
ಈ ರಾಶಿಯ ವ್ಯಕ್ತಿಗಳು ವಿವೇಕಿಗಳು ಬುದ್ಧಿವಂತರು (Brilliant) ಮತ್ತು ದಯಾಗುಣವನ್ನು ಹೊಂದಿರುವವರು ಆಗಿರುತ್ತಾರೆ. ಆದರೆ ಸ್ವತಂತ್ರವಾಗಿ (Independent) ಇರಲು ಬಯಸುತ್ತಾರೆ. ಹಾಗಾಗಿ ಈ ರಾಶಿಯವರು ವಿವಾಹದ ಬಗ್ಗೆ ಚಿಂತಿಸುವುದೇ ಇಲ್ಲ.. 

ತುಲಾ ರಾಶಿ (Libra)
ಈ ರಾಶಿಯ ವ್ಯಕ್ತಿಗಳು ತುಂಬಾ ಸುಂದರವಾಗಿಯೂ ಮತ್ತು ಆಕರ್ಷಕವಾಗಿಯೂ ಇರುತ್ತಾರೆ. ಹಾಗಾಗಿ ಇವರು ಸರಿಯಾಗಿ ಮತ್ತು ಆಕರ್ಷಕವಾಗಿ ಇರುವ ವಸ್ತುಗಳನ್ನೇ ಇಷ್ಟಪಡುತ್ತಾರೆ. ಈ ರಾಶಿಯ ವ್ಯಕ್ತಿಗಳಿಗೆ ಹೊಂದಾಣಿಕೆಯ (Adjustment) ಬಗ್ಗೆ ಅರಿವು ಇದ್ದರೂ ಖಾಸಗಿ (Personal life) ಜೀವನದಲ್ಲಿ ಇತರರು ಮೂಗು ತೂರಿಸುವುದು ಇವರಿಗೆ ಹಿಡಿಸುವುದಿಲ್ಲ. ಹಾಗಾಗಿ ಮದುವೆಗೆ ಹೆಚ್ಚಿನ ಪ್ರಾಶಸ್ತ್ಯ ಇವರು ನೀಡುವುದಿಲ್ಲ.

ಇದನ್ನು ಓದಿ: Astro Policy: ಆರ್ಥಿಕ ಸಮಸ್ಯೆ ನಿವಾರಣೆಗೆ ಈ ಸರಳ ಉಪಾಯ!

ಸಿಂಹ ರಾಶಿ (Leo)
ಈ ರಾಶಿಯ ವ್ಯಕ್ತಿಗಳು ಎಲ್ಲ ವಿಷಯದಲ್ಲೂ ಸ್ವಲ್ಪ ನಿಧಾನಿಗಳಾಗಿರುತ್ತಾರೆ. ಹಾಗಾಗಿ ಮದುವೆಯ ವಿಷಯದಲ್ಲೂ ನಿರ್ಧಾರ ತೆಗೆದುಕೊಳ್ಳಲು ತುಂಬ ಸಮಯ ವ್ಯರ್ಥ ಮಾಡುತ್ತಾರೆ. ಅಷ್ಟೆ ಅಲ್ಲದೆ ಇವರ ಜೀವನದ ಬಗ್ಗೆ  ಇತರರು ಮೂಗು ತೂರಿಸುವುದು (Interfere) ಸಲಹೆಗಳನ್ನು ನೀಡುವುದು ಇವರಿಗೆ ಹಿಡಿಸುವುದಿಲ್ಲ. ಅಂದುಕೊಂಡ ಗುರಿಯನ್ನು ಮೊದಲ ತಲುಪುವುದು ನಂತರ ಮದುವೆ ಎಂಬ ಮನಸ್ಥಿತಿ (Mentality) ಇವರದ್ದಾಗಿರುತ್ತದೆ.

Latest Videos
Follow Us:
Download App:
  • android
  • ios