ನಿಮ್ಮ ವಿವಾಹ ತಡವಾಗುತ್ತಿದೆಯೇ? ಕಾರಣಗಳಿಲ್ಲಿವೆ..

ನಿಮ್ಮ ಮದುವೆಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದೀರಾ? ಎರಡೂ ಕಡೆಯಿಂದ ಒಪ್ಪಿಗೆ ಪಡೆದರೂ ಕೊನೆ ಕ್ಷಣದಲ್ಲಿ ವಿನಾಕಾರಣ ತೊಂದರೆಯಾಗುತ್ತದೆ ಎಂದು ಅನಿಸುತ್ತಿದೆಯೇ? ಮದುವೆಯಲ್ಲಿ ವಿಳಂಬವನ್ನು ಉಂಟಾಗಲು ಜ್ಯೋತಿಷ್ಯ ಕಾರಣಗಳೇನು ನೋಡೋಣ. 

What Are the Causes of Delay in Marriage skr

ಗೆಳೆಯರದೆಲ್ಲ ಒಬ್ಬೊಬ್ಬರದೇ ಮದುವೆ(Marriage)ಯಾಗುತ್ತಾ ಹೋಗುತ್ತಿದೆ. ಆದರೆ ನಿಮ್ಮದು ಮಾತ್ರ ತಿಪ್ಪರಲಾಗ ಹಾಕಿದರೂ ಆಗುತ್ತಿಲ್ಲ. ಕೊನೆಯ ಹಂತಕ್ಕೆ ಹೋಗಿ ಮುರಿದು ಬಿದ್ದ ಸಂಬಂಧಕ್ಕೆ ಲೆಕ್ಕವಿಲ್ಲ. ಮದುವೆ ಸೆಟ್ಟಾದರೂ ದಿನಾಂಕವಿಡಲು ಮೇಲಿಂದ ಮೇಲೆ ಸಮಸ್ಯೆಗಳು.. ಕೂದಲೊಂದು ಕಡೆಯಿಂದ ಬೆಳ್ಳಗಾಗುತ್ತಾ ಆತಂಕ ಹುಟ್ಟಿಸುತ್ತಿದೆ.. ಈ ರೀತಿ ಮದುವೆ ವಿಳಂಬಗೊಂಡು ಮನೆಯಲ್ಲಿ ಅದೇ ದೊಡ್ಡ ಚಿಂತೆಯಾಗಿದೆಯೇ? ಏಕೆ ಹೀಗಾಗ್ತಿದೆ ಎಂದು ಯೋಚಿಸುತ್ತಿದ್ದೀರಾ?

ಓದಾಯಿತು, ಕೆಲಸವೂ ಆಗಿದೆ, ಆದರೆ, ಇನ್ನೂ ಏನೋ ಸಾಧಿಸಬೇಕು ಎಂದುಕೊಂಡು ಮದುವೆ ಮುಂದೂಡುವವರು ಕೆಲವರು. ಹಾಗಿದ್ದಾಗ ಪರವಾಗಿಲ್ಲ. ಆದರೆ, ಕಷ್ಟದ ಸಮಯದಲ್ಲಿ ನಮ್ಮನ್ನು ಬೆಂಬಲಿಸುವ ಮತ್ತು ನಮ್ಮ ಯಶಸ್ಸಿನಲ್ಲಿ ಸಂತೋಷಪಡುವ ಇನ್ನೊಬ್ಬ ವ್ಯಕ್ತಿಯೊಂದಿಗೆ ನಾವು ಒಟ್ಟಿಗೆ ಜೀವನವನ್ನು ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ನಾವು ಭಾವಿಸಿದಾಗಲೂ ಮದುವೆಯೇ ಆಗುತ್ತಿಲ್ಲವೆಂದರೆ! ಅಂಥ ಸಂದರ್ಭದಲ್ಲಿ ಮದುವೆಯ ವಿಳಂಬಕ್ಕೆ ಹಲವಾರು ಕಾರಣಗಳು ಕಾಣಿಸಿಕೊಂಡಾಗ ಒಬ್ಬನಿಗೆ ಹೇಗೆ ಅನಿಸುತ್ತದೆ? ಮದುವೆಯು ನಮ್ಮ ಜೀವನದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ, ಇದು ಸಂತೋಷ, ಆತಂಕ ಮತ್ತು ಸಂಕೀರ್ಣತೆಯೊಂದಿಗೆ ಸಂಬಂಧಿಸಿದೆ.

ಜ್ಯೋತಿಷ್ಯ(Astrology)ದ ಪ್ರಕಾರ, ಈ ವಿಷಯಗಳು ನಿಮ್ಮ ವಿವಾಹ ಜೀವನದ ಹಾದಿಗೆ ಅಡ್ಡಿಯಾಗಬಹುದು ಮತ್ತು ನಿಮ್ಮನ್ನು ಮದುವೆಯಾಗುವುದನ್ನು ತಡೆಯಬಹುದು. ಅವೇನೆಂದು ತಿಳಿದುಕೊಂಡರೆ ಪರಿಹಾರ(remedy)ದತ್ತ ಮುಖ ಮಾಡಬಹುದಲ್ಲವೇ? 

ತಡವಾದ ಮದುವೆಗೆ ಯಾವ ಗ್ರಹಗಳು(Planets) ಕಾರಣವಾಗಿವೆ?
ವೈದಿಕ ಜ್ಯೋತಿಷ್ಯದ ಪ್ರಕಾರ, ನಿಮ್ಮ ಕುಂಡಲಿಯಲ್ಲಿರುವ ಏಳನೇ ಮನೆಯನ್ನು ವಿವಾಹದ ಮನೆ ಎಂದು ಕರೆಯಲಾಗುತ್ತದೆ. ಈ ಮನೆಯೇ ನಿಮ್ಮ ವಿವಾಹದ ಬಗ್ಗೆ ಸಂಪೂರ್ಣ ನಿಯಂತ್ರಣ ಹೊಂದಿರುವುದು.  ಈ ಮನೆಯಲ್ಲಿ ಗ್ರಹಗಳು ಅನಾನುಕೂಲ ಸ್ಥಿತಿಯಲ್ಲಿದ್ದರೆ ಮದುವೆ ವಿಳಂಬವಾಗುತ್ತದೆ. 

ಹಾವು ಕಚ್ಚೋ ಕನಸು ನಿಮ್ಮ ಎಚ್ಚರಿಕೆ ಗಂಟೆ! ಇಗ್ನೋರ್ ಮಾಡ್ಬೇಡಿ..

ಮದುವೆಯಲ್ಲಿ ಮಹತ್ವದ ಪಾತ್ರ ವಹಿಸುವ ಗ್ರಹಗಳೆಂದರೆ - ಮಹಿಳೆಯರಿಗೆ ಗುರು(Jupiter) ಮತ್ತು ಪುರುಷರಿಗೆ ಶುಕ್ರ(Venus). ಈ ಎರಡು ಗ್ರಹಗಳು ವ್ಯಕ್ತಿಯ ಜಾತಕದಲ್ಲಿ ದಾಂಪತ್ಯ ಸುಖವನ್ನು ಒದಗಿಸುವಷ್ಟು ಬಲಶಾಲಿಯಾಗಿಲ್ಲದಿದ್ದಲ್ಲಿ, ಮದುವೆಯು ನಡೆಯುವ ಸಾಧ್ಯತೆ ಕಡಿಮೆ. ಏಕೆಂದರೆ ಶುಕ್ರವು ಪ್ರೀತಿಯ ಗ್ರಹವಾಗಿದೆ ಮತ್ತು ಗುರುವು ಬುದ್ಧಿವಂತಿಕೆ ಮತ್ತು ಸಂಪತ್ತಿನ ಗ್ರಹವಾಗಿದೆ.

ಶುಕ್ರ ದುರ್ಬಲನಾಗಿದ್ದು, ದಂಪತಿಯ ನಡುವೆ ಪ್ರೀತಿ ಇಲ್ಲದಿದ್ದರೆ, ಶೀಘ್ರದಲ್ಲೇ ಅಥವಾ ವಿವಾಹ ನಂತರ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಮತ್ತು ಗುರುವಿನ ಅನುಗ್ರಹವಿಲ್ಲದೆ ಮನೆಯಲ್ಲಿ ಹಣದ ನಿರಂತರ ಹರಿವು ಇಲ್ಲದಿದ್ದರೆ ಮತ್ತು ಯಾವುದೇ ವಾಸ್ತವಿಕ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ, ಮದುವೆಯು ಖಂಡಿತವಾಗಿಯೂ ವಿಫಲಗೊಳ್ಳುತ್ತದೆ.

ಅಲ್ಲದೆ, ಶನಿ ಗ್ರಹ(Saturn)ವು ನಿಮ್ಮ ವೈವಾಹಿಕ ಭವಿಷ್ಯದ ಮೇಲೆ ಶಾಶ್ವತ ಮತ್ತು ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಇದರೊಂದಿಗೆ, ಸೂರ್ಯ(Sun)ನು ಏಳನೇ ಮನೆಯಲ್ಲಿ ಸ್ಥಾನ ಪಡೆದು ಮದುವೆಯಾಗುವ ಅವಕಾಶವನ್ನು ತಡೆಯುವ ಮೂಲಕ ನಿಮ್ಮ ಮದುವೆಯನ್ನು ವಿಳಂಬಗೊಳಿಸಬಹುದು.

ಕೆಲವು ಜನರು ತಮ್ಮ ಕುಂಡಲಿಗಳಲ್ಲಿ ಮಾಂಗಳಿಕ ದೋಷ(Manglik Dosh)ವನ್ನು ಹೊಂದಿರುತ್ತಾರೆ. ಇದು ಅವರ ಜಾತಕದಲ್ಲಿ ಅಸ್ಥಿರವಾದ ಮಂಗಳ(Mars)ದ ಫಲಿತಾಂಶವಾಗಿದೆ. ಕುಜ ದೋಷವನ್ನು ಸಮಯೋಚಿತವಾಗಿ ಸರಿಪಡಿಸದಿದ್ದರೆ, ಇದು ಸಂಗಾತಿಯ ಸಾವು, ಮದುವೆಯ ವೈಫಲ್ಯ ಇತ್ಯಾದಿಗಳಂಥ ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು.

Weekly Horoscope: ಈ ರಾಶಿಗೆ ಅಪರಿಚಿತರಿಂದ ಆಘಾತ, ನಂಬಿಕೆಗೆ ಬೀಳುವುದು ಪೆಟ್ಟು

ಇನ್ನು, ರಾಹು(Rahu) ಮತ್ತು ಕೇತು(Ketu) ಗ್ರಹಗಳು  ಕೂಡಾ ನಿಮ್ಮ ಮದುವೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ರಾಹು ನಿಮ್ಮನ್ನು ಗೀಳು ಅನುಭವಿಸುವಂತೆ ಮಾಡಿದರೆ, ನೀವು ವಿವಾಹವಾಗುವುದರಲ್ಲಿ ನಿರ್ಲಿಪ್ತ ಮತ್ತು ನಿರಾಸಕ್ತಿ ಹೊಂದಲು ಕೇತು ಕಾರಣವಾಗಿದೆ. ಅಲ್ಲದೆ, ಹಿಮ್ಮುಖ ಚಲನೆಯಲ್ಲಿರುವ ಮತ್ತು ದುರ್ಬಲಗೊಂಡ ಗ್ರಹಗಳು ಮದುವೆಯ ವಿಳಂಬಕ್ಕೆ ಪ್ರಮುಖ ಕಾರಣವಾಗಿವೆ.

ಚಿಂತೆ ಬೇಡ
ಒಂದು ವೇಳೆ ಕುಂಡಲಿಯಲ್ಲಿ ಈ ಗ್ರಹಗಳ ದೋಷಗಳಿದ್ದರೆ, ಅಥವಾ ಅವು ದುರ್ಬಲವಾಗಿದೆ ಎಂದ ಮಾತ್ರಕ್ಕೆ ನಿಮಗೆ ವೈವಾಹಿಕ ಭವಿಷ್ಯವೇ ಇಲ್ಲ ಎಂದರ್ಥವಲ್ಲ. ತಜ್ಞ ಮತ್ತು ವಿಶ್ವಾಸಾರ್ಹ ಜ್ಯೋತಿಷಿಗಳನ್ನು ಸಂಪರ್ಕಿಸುವ ಮೂಲಕ ನೀವು ಮದುವೆ ವಿಳಂಬಕ್ಕೆ ಎಲ್ಲ ಜ್ಯೋತಿಷ್ಯ ಪರಿಹಾರಗಳನ್ನು ಪಡೆಯಬಹುದು. ಪರಿಹಾರಗಳನ್ನು ಕೈಗೊಳ್ಳುತ್ತಿದ್ದ ಹಾಗೆಯೇ ಗ್ರಹ ದೋಷಗಳು ನಿವಾರಣೆಗೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತೀರಿ. 

Latest Videos
Follow Us:
Download App:
  • android
  • ios