Asianet Suvarna News Asianet Suvarna News

Chanakya Niti: ಹೆಣ್ಮಕ್ಕಳ ಕಂಡ್ರೆ ಚಾಣಕ್ಯನಿಗೆ ಅಷ್ಟಕ್ಕಷ್ಟೇನಾ?

ಮಹಾ ಬುದ್ಧಿವಂತನಾದರೂ ಚಾಣಕ್ಯನಿಗೆ (Chanakya Niti) ಮಹಿಳೆಯರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಚಾಣಕ್ಯ ಮಹಿಳೆಯರನ್ನು ಯಾವ್ಯಾವ ಬಗೆಯಲ್ಲಿ ಕೆಟ್ಟವರೆಂದು ಹೇಳಬಹುದೋ ಆ ಏಲ್ಲಾ ರೀತಿಯಲ್ಲೂ ನಿಂದಿಸುವ ಪದಗಳನ್ನು ಬಳಸಿದ್ದಾನೆ. ಕೆಲವು ಉದಾಹರಣೆಗಳು ಇಲ್ಲಿವೆ.

Was chanakya or kaoutalya against women what his life lesson says bni
Author
First Published Jun 21, 2023, 5:03 PM IST | Last Updated Jun 21, 2023, 5:03 PM IST

ಭಾರತದಲ್ಲಿ ಚಾಣಕ್ಯನನ್ನು (ಕೌಟಲ್ಯ) ಮಹಾನ್ ನೀತಿಜ್ಞ, ಮಹಾನ್ ತಂತ್ರಜ್ಞ, ನಿರ್ದಯಿ ತಂತ್ರಗಾರ, ಮತ್ತು ಅತ್ಯಂತ ಬುದ್ಧಿವಂತ ಆಡಳಿತಗಾರ ಎಂದು ಪರಿಗಣಿಸಲಾಗಿದೆ. ಚಂದ್ರಗುಪ್ತ ಮೌರ್ಯನನ್ನು ಕಾಪಾಡಿ ಆತನಿಂದ ದೊಡ್ಡ ಸಾಮ್ತಾಜ್ಯವನ್ನೇ ಆಳಿಸಿದ ಕುಶಲಿಗ ಈತ. ʼಚಾಣಕ್ಯ ನೀತಿʼ (Chanakya Niti) ಈತನ ಚಿಂತನೆಗಳ ಪ್ರಸಿದ್ಧ ಸಂಗ್ರಹ. ರಾಜನೀತಿಯ ಅತಿ ಶ್ರೇಷ್ಠ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾ ಬುದ್ಧಿವಂತನಾದರೂ ಈತನಿಗೆ ಮಹಿಳೆಯರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಚಾಣಕ್ಯ ಮಹಿಳೆಯರನ್ನು ಯಾವ್ಯಾವ ಬಗೆಯಲ್ಲಿ ಕೆಟ್ಟವರೆಂದು ಹೇಳಬಹುದೋ ಆ ಏಲ್ಲಾ ರೀತಿಯಲ್ಲೂ ನಿಂದಿಸುವ ಪದಗಳನ್ನು ಬಳಸಿದ್ದಾನೆ. ಕೆಲವು ಉದಾಹರಣೆಗಳು ಇಲ್ಲಿವೆ.

1. ಚಾಣಕ್ಯ ನೀತಿಯ 2ನೇ ಅಧ್ಯಾಯವನ್ನು ಈ ಕೆಳಗಿನ ಪದಗಳೊಂದಿಗೆ ಪ್ರಾರಂಭಿಸುತ್ತಾನೆ: "ಅಸತ್ಯ, ದುಡುಕುತನ, ಮೋಸ, ಮೂರ್ಖತನ, ದುರಾಸೆ, ಅಶುಚಿತ್ವ ಮತ್ತು ಕ್ರೌರ್ಯ ಇವು ಮಹಿಳೆಯ ಏಳು ನೈಸರ್ಗಿಕ ದೋಷಗಳು."

2. ಅಧ್ಯಾಯ 14ರಲ್ಲಿ (ಶ್ಲೋಕ ನಂ.11) ಚಾಣಕ್ಯ ಬರೆಯುತ್ತಾನೆ: "ನಾವು ಯಾವಾಗಲೂ ಬೆಂಕಿ, ನೀರು, ಮಹಿಳೆಯರು, ಮೂರ್ಖ ಜನರು, ಸರ್ಪಗಳು ಮತ್ತು ರಾಜಮನೆತನದ ಸದಸ್ಯರೊಂದಿಗೆ ಜಾಗರೂಕತೆಯಿಂದ ವ್ಯವಹರಿಸಬೇಕು; ಏಕೆಂದರೆ ಅವರು ಸಂದರ್ಭ ಬಂದಾಗ, ತಕ್ಷಣವೇ ನಮ್ಮ ಸಾವಿಗೆ ಕಾರಣವಾಗಬಹುದು." ಈ ಉಲ್ಲೇಖದಲ್ಲಿ, ಚಾಣಕ್ಯ ಮೂಲತಃ ಹೆಣ್ಣನ್ನು ಹಾವು ಮತ್ತು ಮೂರ್ಖರೊಂದಿಗೆ ಹೋಲಿಸುತ್ತಿದ್ದಾನೆ.

3. ಅಧ್ಯಾಯ 1ರಲ್ಲಿ (ಶ್ಲೋಕ ನಂ.15) ಚಾಣಕ್ಯ ಹೇಳುತ್ತಾನೆ: "ನದಿಗಳು, ಆಯುಧಗಳನ್ನು ಹೊತ್ತ ಪುರುಷರು, ಉಗುರುಗಳು ಅಥವಾ ಕೊಂಬುಗಳನ್ನು ಹೊಂದಿರುವ ಮೃಗಗಳು, ಮಹಿಳೆಯರು ಮತ್ತು ರಾಜಮನೆತನದ ಸದಸ್ಯರ ಮೇಲೆ ನಂಬಿಕೆ ಇಡಬೇಡಿ."

4. ಅಧ್ಯಾಯ 1ರಲ್ಲಿ (ಶ್ಲೋಕ ನಂ.17) ಚಾಣಕ್ಯ ಹೇಳುತ್ತಾನೆ: " ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹಸಿವು ಎರಡು ಪಟ್ಟು, ಸಂಕೋಚ ನಾಲ್ಕು ಪಟ್ಟು, ಧೈರ್ಯ ಆರು ಪಟ್ಟು ಮತ್ತು ಕಾಮ ಎಂಟು ಪಟ್ಟು."

5. ಅಧ್ಯಾಯ 17ರಲ್ಲಿ (ಶ್ಲೋಕ ಸಂಖ್ಯೆ 9) ಚಾಣಕ್ಯ ಬರೆಯುತ್ತಾನೆ: "ಪತಿಯ ಅನುಮತಿಯಿಲ್ಲದೆ ಉಪವಾಸ ಮತ್ತು ಧಾರ್ಮಿಕ ಪ್ರತಿಜ್ಞೆಗಳನ್ನು ಆಚರಿಸುವ ಮಹಿಳೆ ಅವನ ಜೀವನವನ್ನು ಕೆಡಿಸುತ್ತಾಳೆ ಮತ್ತು ನರಕಕ್ಕೆ ಹೋಗುತ್ತಾಳೆ."

6. ಅಧ್ಯಾಯ 17ರಲ್ಲಿ (ಶ್ಲೋಕ ಸಂಖ್ಯೆ 10) ಹೀಗೆನ್ನುತ್ತಾನೆ: "ಹೆಣ್ಣು ದಾನ ಮಾಡುವ ಮೂಲಕ, ನೂರಾರು ಉಪವಾಸಗಳನ್ನು ಆಚರಿಸುವ ಮೂಲಕ ಅಥವಾ ಪವಿತ್ರ ನೀರನ್ನು ಕುಡಿಯುವುದರಿಂದ, ತನ್ನ ಗಂಡನ ಪಾದಗಳನ್ನು ತೊಳೆಯಲು ಬಳಸುವ ನೀರನ್ನು ಕುಡಿಯುವುದರಿಂದಲೂ ಪವಿತ್ರವಾಗುವುದಿಲ್ಲ."

7. ಅಧ್ಯಾಯ 8ರಲ್ಲಿ (ಶ್ಲೋಕ ಸಂಖ್ಯೆ 8) ಚಾಣಕ್ಯ ಹೇಳುತ್ತಾನೆ: "ಜ್ಞಾನವು ಅದನ್ನು ಆಚರಣೆಗೆ ತರದೆ ಕಳೆದುಹೋಗುತ್ತದೆ; ಅಜ್ಞಾನದಿಂದಾಗಿ ಪುರುಷನು ಕಳೆದುಹೋಗುತ್ತಾನೆ; ಸೈನ್ಯವು ಕಮಾಂಡರ್ ಇಲ್ಲದೆ ಕಳೆದುಹೋಗುತ್ತದೆ; ಮತ್ತು ಮಹಿಳೆ ಪತಿ ಇಲ್ಲದೆ ಕಳೆದುಹೋಗುತ್ತಾಳೆ."

8. ಅಧ್ಯಾಯ 12ರಲ್ಲಿ (ಶ್ಲೋಕ ಸಂಖ್ಯೆ 18) ಚಾಣಕ್ಯ ಹೇಳುತ್ತಾನೆ: ಸೌಜನ್ಯವನ್ನು ರಾಜಕುಮಾರರಿಂದ ಕಲಿಯಬೇಕು, ಸಂಭಾಷಣೆಯ ಕಲೆಯನ್ನು ಪಂಡಿತರಿಂದ ಕಲಿಯಬೇಕು, ಸುಳ್ಳು ಹೇಳುವುದನ್ನು ಜೂಜುಗಾರರಿಂದ ಕಲಿಯಬೇಕು ಮತ್ತು ವಂಚನೆಯ ಮಾರ್ಗಗಳನ್ನು ಮಹಿಳೆಯರಿಂದ ಕಲಿಯಬೇಕು.

Chanakya Niti: ಈ 3 ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಂಡ್ರೆ ಕೆಟ್ಟದಾಗುತ್ತಂತೆ!

9. ಅಧ್ಯಾಯ 14ರಲ್ಲಿ (ಶ್ಲೋಕ ಸಂಖ್ಯೆ 10) ಚಾಣಕ್ಯ: "ರಾಜ, ಅಗ್ನಿ, ಧಾರ್ಮಿಕ ಬೋಧಕ ಮತ್ತು ಮಹಿಳೆಗೆ ನಿಕಟವಾಗಿರುವುದು ಹಾನಿಕರ. ಅವರ ಬಗ್ಗೆ ಸಂಪೂರ್ಣವಾಗಿ ಅಸಡ್ಡೆ ತೋರಿದರೂ ನಮಗೆ ಲಾಭವಿಲ್ಲ.  ಆದ್ದರಿಂದ ಅವರೊಂದಿಗಿನ ನಮ್ಮ ಒಡನಾಟ ಸುರಕ್ಷಿತ ದೂರದಿಂದ ಇರಬೇಕು."

10. ಅಧ್ಯಾಯ 17ರಲ್ಲಿ (ಶ್ಲೋಕ ಸಂಖ್ಯೆ 14) ಹೇಳುತ್ತಾನೆ: "ಒಂದು ಮೂಲಿಕೆ ಪುರುಷನ ಪ್ರಜ್ಞೆಯನ್ನು ಕಸಿದುಕೊಂಡರೆ, ಇನ್ನೊಂದು ಮೂಲಿಕೆ ಅದನ್ನು ಪುನರುಜ್ಜೀವನಗೊಳಿಸುತ್ತದೆ. ಆದರೆ ಮಹಿಳೆ ತಾನೇ ಪುರುಷನ ಶಕ್ತಿಯನ್ನು ಕಸಿದುಕೊಳ್ಳಲೂಬಲ್ಲಳು, ಶಕ್ತಿ ತುಂಬಲೂ ಬಲ್ಲಳು."

11. ಅಧ್ಯಾಯ 16ರಲ್ಲಿ (ಶ್ಲೋಕ ಸಂಖ್ಯೆ 2): "ಹೆಣ್ಣಿನ ಹೃದಯ ಹಲವರಿಗಾಗಿ ಮಿಡಿಯುತ್ತದೆ. ಅವಳು ಒಬ್ಬ ಪುರುಷನೊಂದಿಗೆ ಮಾತನಾಡುವಾಗ, ಇನ್ನೊಬ್ಬ ಪುರುಷನನ್ನು ಕಾಮದಿಂದ ನೋಡುತ್ತಾಳೆ ಮತ್ತು ತನ್ನ ಹೃದಯದಲ್ಲಿ ಮೂರನೇ ವ್ಯಕ್ತಿಯ ಬಗ್ಗೆ ಪ್ರೀತಿಯಿಂದ ಯೋಚಿಸುತ್ತಾಳೆ."

12. ಅಧ್ಯಾಯ 11ರಲ್ಲಿ (ಶ್ಲೋಕ ಸಂಖ್ಯೆ 5): "ಕೌಟುಂಬಿಕ ಜೀವನದಲ್ಲಿ ಮುಳುಗಿರುವವನು ಎಂದಿಗೂ ಜ್ಞಾನವನ್ನು ಪಡೆಯುವುದಿಲ್ಲ; ಮಾಂಸವನ್ನು ತಿನ್ನುವವರಲ್ಲಿ ಕರುಣೆ ಇರುವುದಿಲ್ಲ; ದುರಾಸೆಯುಳ್ಳ ಪುರುಷನು ಸತ್ಯವಂತನಾಗುವುದಿಲ್ಲ; ಮಹಿಳೆ ಅಥವಾ ಬೇಟೆಗಾರನಲ್ಲಿ ಶುದ್ಧತೆ ಕಂಡುಬರುವುದಿಲ್ಲ."

Chanakya Niti : ಪುರುಷರ 'ಈ' ಗುಟ್ಟು ಮಹಿಳೆಯರ ಕಿವಿಗೆ ಬೇಗ ಬೀಳುತ್ತವೆ 
 

Latest Videos
Follow Us:
Download App:
  • android
  • ios