Chanakya Niti: ಈ 3 ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಂಡ್ರೆ ಕೆಟ್ಟದಾಗುತ್ತಂತೆ!
ಚಾಣಕ್ಯ ನೀತಿಯಲ್ಲಿ ಜೀವನಕ್ಕೆ ಉಪಯುಕ್ತವಾದ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಜೀವನದಲ್ಲಿ ಒಬ್ಬ ವ್ಯಕ್ತಿಯು ಸರಿ ಮತ್ತು ತಪ್ಪುಗಳನ್ನು ನಿರ್ಧರಿಸಬೇಕಾದ ಅನೇಕ ಸಂದರ್ಭಗಳಿವೆ. ಆದರೆ ಆಚಾರ್ಯ ಚಾಣಕ್ಯ ಹೇಳುವಂತೆ ಕೆಲವು ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಮಾರಣಾಂತಿಕವಾಗಬಹುದು. ಅವುಗಳ ಬಗ್ಗೆ ತಿಳಿಯೋಣ.
ಆಚಾರ್ಯ ಚಾಣಕ್ಯ(Acharya Chanakya) ಮಾನವ ನಡವಳಿಕೆಯನ್ನು ಬಹಳ ಗಂಭೀರವಾಗಿ ಅಧ್ಯಯನ ಮಾಡಿದರು ಮತ್ತು ಅದರ ನಂತರ ತನ್ನ ಚಾಣಕ್ಯ ನೀತಿಯಲ್ಲಿ ಅಂತಹ ಅನೇಕ ಸೂತ್ರಗಳನ್ನು ಬರೆದನು, ಅದನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿಯ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು.
ತನ್ನ ನೀತಿ ಶಾಸ್ತ್ರದಲ್ಲಿ(Niti shastra) ಆಚಾರ್ಯರು, ಒಬ್ಬರು ಯಾವೆಲ್ಲಾ ಸಂದರ್ಭದಲ್ಲಿ ಯಾರಿಗೂ ಉತ್ತರಿಸಬಾರದು, ಭರವಸೆಗಳನ್ನು ನೀಡಬಾರದು ಅಥವಾ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಅನ್ನೋದನ್ನು ವಿವರಿಸಿದ್ದಾರೆ. ಹಾಗೆ ಮಾಡಿದರೆ, ವ್ಯಕ್ತಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ.
ಯಾವಾಗ ಭರವಸೆ ನೀಡಬಾರದು?: ಆಚಾರ್ಯ ಚಾಣಕ್ಯನ ಪ್ರಕಾರ, ನೀವು ಸಂತೋಷವಾಗಿರುವಾಗ(Happy) ಯಾರಿಗೂ ಯಾವುದೇ ಭರವಸೆಯನ್ನು ನೀಡಬಾರದು. ಆಗೇನಾದರೂ ಮಾಡಿದರೆ, ನೀವು ನಂತರ ವಿಷಾದಿಸಬಹುದು. ಯಾಕಂದ್ರೆ ಸಂತೋಷವಾಗಿರುವಾಗ ನಾವು ಏನು ಹೇಳುತ್ತೇವೆ ಅನ್ನೋದೆ ನಮಗೆ ತಿಳಿದಿರೋದಿಲ್ಲ.
ಹೆಚ್ಚು ಸಂತೋಷವಾಗಿರುವ ಸ್ಥಿತಿಯಲ್ಲಿ, ಒಬ್ಬ ವ್ಯಕ್ತಿ ಕೆಲವೊಮ್ಮೆ ತಾನು ಪೂರೈಸಲಾಗದ ಭರವಸೆಗಳನ್ನು ನೀಡುತ್ತಾನೆ. ಆದ್ದರಿಂದ, ಮಾತು ಕೊಡುವಾಗ ಯಾವಾಗಲೂ ಚಿಂತನಶೀಲವಾಗಿ ನೀಡಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಈ ಪರಿಸ್ಥಿತಿಯಲ್ಲಿ ಯಾರಿಗೂ ಉತ್ತರಿಸಬೇಡಿ: ನೀವು ಕೋಪಗೊಂಡಾಗ, ಯಾರಿಗೂ ಉತ್ತರಿಸಬಾರದು. ಯಾಕಂದ್ರೆ ಕೋಪದಲ್ಲಿರೋವಾಗ(ANgry), ವ್ಯಕ್ತಿಗೆ ತನ್ನ ಮೇಲೆಯೇ ಸರಿಯಾಗಿ ನಿಯಂತ್ರಣ ಇರೋದಿಲ್ಲ. ಈ ಕಾರಣದಿಂದಾಗಿ ಅವನು ಕೆಲವೊಮ್ಮೆ ಇತರ ವ್ಯಕ್ತಿಯ ಮನಸ್ಸನ್ನು ನೋಯಿಸುವಂತಹ ವಿಷಯಗಳನ್ನು ಹೇಳುತ್ತಾನೆ.
ಯಾವುದೇ ಸಂದರ್ಭ ಇರಲಿ ನೀವು ಕೋಪಗೊಂಡಾಗ ಸಂಯಮವನ್ನು ಕಾಪಾಡಿಕೊಳ್ಳಿ ಮತ್ತು ಈ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ತಪ್ಪಿಸಿ. ಈ ಸಂದರ್ಭದಲ್ಲಿ ಯಾರೊಂದಿಗೂ ಮಾತನಾಡಲೇ ಬೇಡಿ. ಇಲ್ಲವಾದರೆ ಮುಂದೊಂದು ದಿನ ನಿಮಗೆ ಸಮಸ್ಯೆ(Problems) ಉಂಟಾಗುವ ಸಾಧ್ಯತೆ ಇದೆ.
ಯಾವಾಗ ನಿರ್ಧಾರ ತೆಗೆದುಕೊಳ್ಳಬಾರದು: ಒಬ್ಬ ವ್ಯಕ್ತಿ ದುಃಖದ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಅಂತಹ ಪರಿಸ್ಥಿತಿಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಸಹ ತಪ್ಪಾಗಿರಬಹುದು, ಇದರಿಂದಾಗಿ ಭವಿಷ್ಯದಲ್ಲಿ(Future) ನಷ್ಟವನ್ನು ಅನುಭವಿಸಬೇಕಾಗಬಹುದು.
ಚಾಣಕ್ಯ ನೀತಿಯ ಪ್ರಕಾರ, ದುಃಖದ ಸಮಯದಲ್ಲಿ, ಕೆಲಸವನ್ನು ಬುದ್ದಿಯಿಂದ ಮಾಡಬೇಕು ಮತ್ತು ಹೃದಯದಿಂದ(Heart) ಅಲ್ಲ. ಹಾಗಾಗಿ ದುಃಖದಲ್ಲಿರೋವಾಗ ನಿರ್ಧಾರ ತೆಗೆದುಕೊಳ್ಳಬೇಡಿ. ಈ ಮೂರು ವಿಷ್ಯಗಳನ್ನು ನೀವು ನೆನಪಿನಲ್ಲಿಟ್ಟುಕೊಂಡರೆ ಜೀವನದಲ್ಲಿ ಸಮಸ್ಯೆ ಬರೋದಿಲ್ಲ.