ಶನಿಯಿಂದ ನಾಶವಾಗದ ವಿಷಯೋಗ ಸೃಷ್ಟಿ; ಈ ನಾಲ್ಕು ರಾಶಿಯವರಿಗೆ ಇನ್ಮುಂದೆ ಬರೀ ಸಂಕಷ್ಟ..!

ವಿಷ ಯೋಗವು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯು ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವಿಷಯೋಗದಿಂದ ಯಾವ ರಾಶಿಯವರಿಗೆ ತೊಂದರೆ ಎಂದು ತಿಳಿಯಿರಿ.

vish yog 2023 saturn and moon troubles can break life of these 4 zodiac sign suh

ವಿಷ ಯೋಗವು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯು ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವಿಷಯೋಗದಿಂದ ಯಾವ ರಾಶಿಯವರಿಗೆ ತೊಂದರೆ ಎಂದು ತಿಳಿಯಿರಿ.

ಕೆಲವು ಯೋಗಗಳ ಪರಿಣಾಮದಿಂದಾಗಿ ಜೀವನದಲ್ಲಿ ಒಂದೇ ರೀತಿಯ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಜಾತಕದಲ್ಲಿನ ನಾಶವಾಗದ ಯೋಗವು ಇದಕ್ಕೆ ಕಾರಣ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಈ ಯೋಗ ಎಷ್ಟು ಅಪಾಯಕಾರಿ ಎಂದರೆ ಸಾವಿನ ಅಂಚಿನಲ್ಲಿ ನಿಲ್ಲುವ ಸಂದಿಗ್ದ ಪರಿಸ್ಥಿತಿಗಳೂ ಎದುರಾಗಬಹುದು. ಇದೇ ವಿಷ ಯೋಗ.

ಕಟಕ ರಾಶಿಯಲ್ಲಿ ಶನಿಯಿದ್ದು ಪುಷ್ಯ ನಕ್ಷತ್ರದ ಸಂಯೋಗವಿದ್ದರೆ ಮತ್ತು ಚಂದ್ರನು ಮಕರ ರಾಶಿಯಲ್ಲಿದ್ದು ಶ್ರವಣ ನಕ್ಷತ್ರದ ಸಂಯೋಗವಿದ್ದರೆ ಅಥವಾ ಚಂದ್ರ ಮತ್ತು ಶನಿ ಪರಸ್ಪರ ವಿರುದ್ಧ ಸ್ಥಾನಗಳಲ್ಲಿದ್ದರೆ ಮತ್ತು ಇಬ್ಬರೂ ಪರಸ್ಪರ ತಮ್ಮ ಸ್ಥಾನಗಳಿಂದ ನೋಡುತ್ತಿದ್ದರೆ ಆಗ ವಿಷ ಯೋಗವು ರೂಪುಗೊಳ್ಳುತ್ತದೆ. ಅಲ್ಲದೆ, ಜಾತಕದಲ್ಲಿ ರಾಹು ಎಂಟನೇ ಸ್ಥಾನದಲ್ಲಿದ್ದರೆ ಮತ್ತು ಶನಿ ಲಗ್ನದಲ್ಲಿದ್ದರೆ, ಆಗಲೂ ಈ ಯೋಗ ರೂಪುಗೊಳ್ಳುತ್ತದೆ. ವಿಷ ಯೋಗದ ಪರಿಣಾಮವು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿಷ ಯೋಗದಿಂದ ಯಾವ ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ತೊಂದರೆಗಳನ್ನು ಎದುರಿಸಬಹುದು ಎಂಬುದನ್ನು ತಿಳಿಯಿರಿ.

ವೃಷಭ ರಾಶಿ (Taurus) 

ವಿಷಯೋಗವು ನಿಮ್ಮ ವೃತ್ತಿ ಪರ ಜೀವನದಲ್ಲಿ ಅತೃಪ್ತಿ ಹೊಂದುವಂತೆ ಮಾಡುತ್ತದೆ. ಇದು ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವನ್ನು ಹದಗೆಡಿಸಲು ಕಾರಣವಾಗಬಹುದು. ಈ ಯೋಗವು ಉದ್ಯೋಗ ಅಥವಾ ವೃತ್ತಿಯಲ್ಲಿ ಬಡ್ತಿ ಪಡೆಯುವಲ್ಲಿ ವಿಳಂಬವನ್ನು ಉಂಟುಮಾಡಬಹುದು. ನಿಮ್ಮ ಮೇಲಾಧಿಕಾರಿಗಳ ಮುಂದೆ ನೀವು ಕೆಟ್ಟ ಖ್ಯಾತಿಯನ್ನು ಗಳಿಸಬಹುದು.

‘ಅಣ್ಣಾವ್ರ ಕುಟುಂಬ’ ನಲುಗಿಸಿದ ಸರಣಿ ದುರಂತಗಳು; ನಿಲ್ಲಲಿ ವಿಧಿಯ ಕ್ರೌರ್ಯ..!

 

ಕಟಕ ರಾಶಿ (Cancer) 

ವಿಷಯೋಗದಿಂದ ಈ ರಾಶಿಯವರಿಗೆ ಅಪಘಾತಗಳು, ಗಾಯಗಳು ಅಥವಾ ಹಠಾತ್‌ ಘಟನೆಗಳ ಅಪಾಯ ಹೆಚ್ಚುತ್ತದೆ. ಈ ಯೋಗದ ಪ್ರಭಾವದಿಂದ ಕಟಕ ರಾಶಿಯವರು ತಮ್ಮ ಜೀವನವನ್ನು ಅಡ್ಡಿಪಡಿಸುವ ಅನಿರೀಕ್ಷಿತ ಮತ್ತು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು.

ಸಿಂಹ ರಾಶಿ (Leo) 

ಈ ಯೋಗವು ನಿಮ್ಮ ವೈವಾಹಿಕ ಜೀವನ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ನೀವು ಜಗಳದಲ್ಲಿ ಸಿಲುಕಿಕೊಳ್ಳಬಹುದು. ಮತ್ತು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಹತಾಶೆ ಹೆಚ್ಚಾಗಬಹುದು ಮತ್ತು ಆತಂಕವು ಉತ್ತುಂಗಕ್ಕೇರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ನೀವು ನಿರಾಶೆಯನ್ನು ಅನುಭವಿಸುವಿರಿ.

ಕುಂಭ ರಾಶಿ (Aquarius ) 

ಈ ಯೋಗವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಮತ್ತು ನಿಮ್ಮ ಮರೆವು ಹೆಚ್ಚಾಗಬಹುದು. ಈ ಯೋಗವು ಅತ್ಯಂತ ಚಿಂತೆ ಮತ್ತು ಉದ್ವೇಗವನ್ನು ಉಂಟುಮಾಡುತ್ತೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಮತ್ತು ಅಡೆತಡೆಗಳು ಹತಾಶೆ ಮತ್ತು ಅಸಹಾಯಕತೆಯ ಭಾವನೆಯನ್ನು ಉಂಟುಮಾಡುತ್ತದೆ. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿನಾಮ ಬೀರುತ್ತದೆ ಮತ್ತು ವಾದಗಳು ಮತ್ತು ವಿವಾದಗಳು ನಿಮ್ಮ ದೈನಂದಿನ ಜೀವನದ ಭಾಗವಾಗುತ್ತವೆ.

ಶುಕ್ರನ ಉದಯ; ಇವರ ಬಳಿ ಸಂಪತ್ತಿನ ಕೋಡಿಯೇ ಹರಿದು ಬರಲಿದೆ..!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios