'ರಾಜ್' ಕುಟುಂಬದಲ್ಲಿ ನಿರಂತರ ಗಂಡಾಂತರ: ಈ ಸಂಕಷ್ಟಕ್ಕೆ ಪರಿಹಾರ ಏನು?
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಕಳೆದ ವಾರ ಹೃದಯಾಘಾತದಿಂದ ನಿಧನರಾಗಿದ್ದು, ಇದೀಗ ಸ್ಪಂದನಾ ಉತ್ತರ ಕ್ರಿಯೆಗೆ ಕುಟುಂಬ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಭಾಗವಹಿಸುವಂತೆ ಕುಟುಂಬಸ್ಥರು ಆಹ್ವಾನ ನೀಡಿದ್ದಾರೆ. ಈ ನಡುವೆ ರಾಜ್ ಕುಟುಂಬದಲ್ಲಿ ನಡೆಯುತ್ತಿರುವ ದುರಂತಗಳು ನಿಲ್ಲಲಿ ಎಂಬುದೇ ಎಲ್ಲರ ಹರಕೆ ಆಗಿದೆ. ಈ ಕುರಿತು ಏನ್ ಹೇಳುತ್ತೆ ಜ್ಯೋತಿಷ್ಯ ಎಂಬ ಮಾಹಿತಿ ಇಲ್ಲಿದೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಕಳೆದ ವಾರ ಹೃದಯಾಘಾತದಿಂದ ನಿಧನರಾಗಿದ್ದು, ಇದೀಗ ಸ್ಪಂದನಾ ಉತ್ತರ ಕ್ರಿಯೆಗೆ ಕುಟುಂಬ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಭಾಗವಹಿಸುವಂತೆ ಕುಟುಂಬಸ್ಥರು ಆಹ್ವಾನ ನೀಡಿದ್ದಾರೆ. ಈ ನಡುವೆ ರಾಜ್ ಕುಟುಂಬದಲ್ಲಿ ನಡೆಯುತ್ತಿರುವ ದುರಂತಗಳು ನಿಲ್ಲಲಿ ಎಂಬುದೇ ಎಲ್ಲರ ಹರಕೆ ಆಗಿದೆ. ಈ ಕುರಿತು ಏನ್ ಹೇಳುತ್ತೆ ಜ್ಯೋತಿಷ್ಯ ಎಂಬ ಮಾಹಿತಿ ಇಲ್ಲಿದೆ.
ಡಾ. ರಾಜ್ ಕುಮಾರ್ ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ಆಘಾತಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಅಣ್ಣಾವ್ರ ಫ್ಯಾಮಿಲಿ ಸಂತೋಷಕ್ಕಿಂತ ಹೆಚ್ಚು ನೋವೇ ಕಂಡಿದೆ. ಅನೇಕ ದುರಂತಗಳು ಅವರ ಕುಟುಂಬವನ್ನು ನಡುಗಿಸಿವೆ. ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣದ ಬಳಿಕ ಇದೀಗ, ಸ್ಪಂದನಾ ಸಾವು ಇಡೀ ಅವರ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಪುನೀತ್ ರಾಜ್ ಕುಮಾರ್ ನಿಧನದಿಂದ ಸ್ಪಂದನಾ ಮರಣದ ತನಕ ಸರಣಿ ದುರಂತ ಸಂಭವಿಸಿದೆ. ಇದಕ್ಕೆ ಕಾರಣ ಏನು ಹಾಗೂ ಜ್ಯೋತಿಷ್ಯರು ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೃದಯಾಘಾತದಿಂದ ಪುನೀತ್ ನಿಧನ
ಕನ್ನಡದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಎಲ್ಲ ವಯಸ್ಸಿನ ವೀಕ್ಷಕರನ ನೆಚ್ಚಿನ ನಟನಾಗಿದ್ದ ಅಪ್ಪು, 2021ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮನೆಯಲ್ಲಿ ಕಸರತ್ತು ಮಾಡುವ ವೇಳೆ ಹೃದಯಾಘಾತದಿಂದ ಅವರು ಕುಸಿದು ಬಿದ್ದಿದ್ದರು. ಅವರನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದ ನಂತರ ಆಪ್ತರು ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಲ್ಲಿ ಕೊನೆಯುಸಿರೆಳೆದಿದ್ದರು. ಫಿಟ್‌ನೆಸ್ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದ ಅಪ್ಪು ಏಕಾಏಕಿ ಕುಸಿದು ಕಣ್ಮುಚಿದ್ದು, ಎಲ್ಲರಿಗೂ ಆಘಾತ ತಂದಿತ್ತು.
ಅಶ್ವಿನಿ ತಂದೆ ರೇವನಾಥ್ ಸಾವು
ಪುನೀತ್ ರಾಜ್ ಕುಮಾರ್ ನಿಧನದ ಕೆಲವೇ ತಿಂಗಳುಗಳಲ್ಲಿ ರಾಜ್ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಯಿತು. ಅಶ್ವಿನಿ ಅವರ ತಂದೆ ರೇವನಾಥ್ ಅವರು ಫೆಬ್ರವರಿ 20ರಂದು ಮರಣ ಹೊಂದಿದರು. ಅಶ್ವಿನಿ ಪತಿಯನ್ನು ಕಳೆದುಕೊಂಡ ನೋವಿನ ಬೆನ್ನಲ್ಲೆ, ತಂದೆಯನ್ನೂ ಕಳೆದುಕೊಂಡರು. ಇದು ಎಲ್ಲರೂ ವಿಧಿಯನ್ನು ಶಪಿಸುವಂತೆ ಮಾಡಿತು.
ಶುಕ್ರನ ಉದಯ; ಇವರ ಬಳಿ ಸಂಪತ್ತಿನ ಕೋಡಿಯೇ ಹರಿದು ಬರಲಿದೆ..!
ಅಪಘಾತದಲ್ಲಿ ಕಾಲು ಕಳೆದುಕೊಂಡ ಸೂರಜ್
ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್‌ಗೆ ತಿಂಗಳ ಹಿಂದೆ ಗಂಭೀರ ಅಪಘಾತ ಆಗಿತ್ತು. ಅದರಲ್ಲಿ ಅವರು ತಮ್ಮ ಕಾಲು ಕಳೆದುಕೊಂಡರು. ಬೈಕ್‌ಗೆ ಲಾರಿ ಡಿಕ್ಕಿಯಾಗಿ, ಬಲಗಾಲು ಸಂಪೂರ್ಣ ನಜ್ಜುಗುಜ್ಜಾಯಿತು. ಅದರ ಪರಿಣಾಮವಾಗಿ ಅವರ ಕಾಲನ್ನು ವೈದ್ಯರು ಕತ್ತರಿಸಬೇಕಾಯಿತು. ಸೂರಜ್, ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಪಡೆದಿದ್ದರು. ಆ ಸಿನಿಮಾ ಬಿಡುಗಡೆಗೂ ಮುನ್ನವೇ ಇದೀಗ ಅಪಘಾತದಲ್ಲಿ ತಮ್ಮ ಕಾಲನ್ನೆ ಕಳೆದುಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ, ಸ್ನೇಹಿತರು ಕುಟುಂಬದವರ ಜೊತೆಗೆ ಸ್ಪಂದನಾ ಬ್ಯಾಕಾಂಕ್ ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ರಕ್ತದೊತ್ತಡ ಕಡಿಮೆ ಆಗಿದೆ. ಲೋ ಬಿಪಿ ಸಮಸ್ಯೆಯಿಂದ ಹೃದಯಾಘಾತವಾಗಿ ಬ್ಯಾಂಕಾಕ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ. ಆಗಸ್ಟ್ 9ರಂದು ಹರಿಶ್ಚಂದ್ರಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ಮಾಡಾಯಿತು. ಆಗಸ್ಟ್ 11ರಂದು ಹಾಲುತುಪ್ಪ ಬಿಟ್ಟು, ಅಸ್ಥಿಯನ್ನು ತೆಗೆದುಕೊಂಡು ಹೋಗಲಾಗಿದೆ. ಪತ್ನಿಯ ಅಗಲಿಕೆಯಿಂದ ವಿಜಯ ರಾಘವೇಂದ್ರ ಕಣ್ಣೀರು ಹಾಕುತ್ತಿದ್ದಾರೆ.
ಯಾವ ದೇವರಿಗೆ ಯಾವ ಹೂವು ಅಚ್ಚುಮೆಚ್ಚು; ಪೂಜೆಗೆ ಯಾವುದು ಶ್ರೇಷ್ಠ..?
ಅಷ್ಟಮಂಗಲದಿಂದ ಸಿಗುತ್ತೆ ಪರಿಹಾರ
ಡಾ.ರಾಜ್‌ಕುಮಾರ್ ಕುಟುಂಬದಲ್ಲಿ ಸಾಲು ಸಾಲು ದುರಂತಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಕೇರಳ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳವನ್ನು ಕೇಳುತ್ತೇವೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಇದರಿಂದ ಈ ದುರಂತಕ್ಕೆ ಕಾರಣ ಏನು ಎಂಬುದು ತಿಳಿಯುತ್ತದೆ. ನಂತರ ಇದಕ್ಕೆ ಪರಿಹಾರ ಕಂಡುಕೊಳ್ಳುಬಹುದು ಎನ್ನುತ್ತಾರೆ ಜ್ಯೋತಿಷಿಗಳು.