ಶುಕ್ರನ ಉದಯ; ಇವರ ಬಳಿ ಸಂಪತ್ತಿನ ಕೋಡಿಯೇ ಹರಿದು ಬರಲಿದೆ..!
ಪ್ರತಿಯೊಂದು ಗ್ರಹದ ಉದಯವು ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆಗಸ್ಟ್ 19 ರಂದು ಶುಕ್ರನು ಕಟಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಮೂರು ರಾಶಿಯವರಿಗೆ ಅದೃಷ್ಟ ಬದಲಾಗಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ಪ್ರತಿಯೊಂದು ಗ್ರಹದ ಉದಯವು ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆಗಸ್ಟ್ 19 ರಂದು ಶುಕ್ರನು ಕಟಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಮೂರು ರಾಶಿಯವರಿಗೆ ಅದೃಷ್ಟ ಬದಲಾಗಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಪರಿಣಾಮ ಬೀರುತ್ತವೆ. ಇದರಿಂದ ಶುಭ-ಅಶುಭ ಫಲಗಳು ಸಿಗುತ್ತವೆ. ಆಗಸ್ಟ್ 19ರಂದು ಶುಕ್ರನು ಕಟಕ ರಾಶಿಯಲ್ಲಿ ಬೆಳಗ್ಗೆ 05:21ಕ್ಕೆ ಉದಯಿಸುತ್ತಾನೆ. ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಬರಲಿದೆ. ಜೀವನದಲ್ಲಿ ಎಲ್ಲಾ ತೊಂದರೆಗಳ ದೂರವಾಗಿ, ಸಂತೋಷ ಮತ್ತು ಸಮೃದ್ಧಿಯೊಂದಿಗೆ ಸಿಗಲಿದೆ. ಅವು ಯಾವ ರಾಶಿಗಳು ಎಂಬ ಡೀಟೇಲ್ಸ್ ಇಲ್ಲಿದೆ.
ಕಟಕ ರಾಶಿ (Cancer)
ನಿಮ್ಮ ರಾಶಿಯಲ್ಲಿ ಶುಕ್ರನು ಉದಯಿಸುತ್ತಿದ್ದಾನೆ, ಇದು ಧನಾತ್ಮಕ ಫಲಿತಾಂಶಗಳನ್ನು ತೋರಿಸುತ್ತದೆ. ನಿಮ್ಮ ರಾಶಿಚಕ್ರದ ಜನರು ದೊಡ್ಡ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತಾರೆ. ನಿಮ್ಮ ನೆಟ್ವರ್ಕ್ ಹೆಚ್ಚಾಗುತ್ತದೆ ಮತ್ತು ನಿಮ್ಮ ಪ್ರಭಾವವೂ ಹೆಚ್ಚಾಗುತ್ತದೆ. ಪ್ರೀತಿಯ ಜೀವನಕ್ಕೆ ಸಮಯ ಉತ್ತಮವಾಗಿದೆ. ಪ್ರೀತಿಯ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ನಿಮ್ಮ ಸಂಗಾತಿ ಪ್ರಗತಿ ಹೊಂದುವರು. ಇದರಿಂದ ನಿಮಗೆ ಸಂತೋಷವಾಗುತ್ತದೆ. ವಿವಾಹಿತರ ಜೀವನದಲ್ಲಿ ಯಾವುದೇ ಗೊಂದಲವಿಲ್ಲ. ಜೀವನವು ಸಂತೋಷ ಮತ್ತು ಶಾಂತಿಯುತವಾಗಿರುತ್ತದೆ. ಶುಕ್ರವು ನಿಮ್ಮ ವ್ಯಕ್ತಿತ್ವದ ಮೇಲೆ ಶುಭ ಪ್ರಭಾವ ಬೀರುತ್ತದೆ. ವ್ಯಕ್ತಿತ್ವ ಸುಧಾರಿಸುತ್ತದೆ.
ಮಕರ ರಾಶಿ (Capricorn)
ಶುಕ್ರನ ಉದಯವು ನಿಮ್ಮ ರಾಶಿಚಕ್ರದ ಅದೃಷ್ಟವನ್ನು ಬೆಳಗಿಸುತ್ತದೆ. ಇದರಿಂದ ನಿಮ್ಮ ಕೆಲಸ ಯಶಸ್ವಿಯಾಗುತ್ತದೆ. ಸ್ಥಗಿತಗೊಂಡ ಯೋಜನೆಗಳು ಮುಂದೆ ಸಾಗಲಿವೆ. ಇನ್ನೂ ಒಂಟಿಯಾಗಿರುವವರಿಗೆ ಮದುವೆ ಪ್ರಸ್ತಾಪ ಬರಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ಗಳಿಸಲು ಅವಕಾಶವಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ಎರಡೂ ಸುಧಾರಿಸುತ್ತದೆ. ನಿಮ್ಮ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರು ಕೆಲಸದಲ್ಲಿ ಬೆಂಬಲವನ್ನು ಪಡೆಯಬಹುದು.
ಕನ್ಯಾರಾಶಿಯಲ್ಲಿ ಮಂಗಳನ ಸಂಚಾರ; ನಿಮ್ಮ ಕನಸನ್ನೆಲ್ಲಾ ನನಸು ಮಾಡ್ತಾನೆ ಈ ಗ್ರಹಗಳ ಕಮಾಂಡರ್
ಮೀನ ರಾಶಿ (Pisces)
ಕಟಕ ರಾಶಿಯಲ್ಲಿ ಶುಕ್ರನ ಉದಯವು ಮೀನ ರಾಶಿಯವರಿಗೆ ನೆಮ್ಮದಿಯನ್ನು ಹೆಚ್ಚಿಸುತ್ತದೆ. ನೀವು ವಾಹನ ಅಥವಾ ಹೊಸ ಆಸ್ತಿಯನ್ನು ಖರೀದಿಸಲು ಬಯಸಿದರೆ ಇದು ಉತ್ತಮ ಸಮಯ. ಈ ಹೂಡಿಕೆಯು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಪೂರ್ವಜರ ಸಂಪತ್ತಿನ ವಿಷಯದಲ್ಲಿ ಕುಟುಂಬದ ಸದಸ್ಯರು ನಿಮಗೆ ಪ್ರಯೋಜನವನ್ನು ನೀಡುತ್ತಾರೆ. ಆಸ್ತಿ ಅಥವಾ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುವ ಜನರು ಹೆಚ್ಚಿನ ಲಾಭದ ಅವಕಾಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಪ್ರಣಯ ಬರುತ್ತದೆ.
ಆಗಸ್ಟ್‌ನಲ್ಲಿ 4 ಗ್ರಹಗಳ ರಾಶಿ ಬದಲಾವಣೆ; ದೋಷದಿಂದ ಪಾರಾಗಲು ಹನುಮಾನ್ ಮೊರೆ ಹೋಗಿ..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.