Asianet Suvarna News Asianet Suvarna News

Vidur Niti: ಈ 4 ಭಾವಗಳಿಂದ ದೂರವಿರದಿದ್ದರೆ ಲೈಫ್ ಹಾಳಾಗೋದು ಗ್ಯಾರಂಟಿ!

ಮಹಾತ್ಮಾ ವಿದುರ ಮಹಾಭಾರತ ಕಾಲದ ಪ್ರಸಿದ್ಧ ವಿದ್ವಾಂಸ. ಅತ್ಯಂತ ತಿಳಿವಳಿಕಸ್ಥ ಎಂದೇ ಪ್ರಸಿದ್ಧರಾಗಿದ್ದರು. ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ. ವಿದುರ ಹೇಳುವಂತೆ 4 ಭಾವಗಳ ಅಭಿವ್ಯಕ್ತಿಯಿಂದ ಮನುಷ್ಯ ದೂರ ಉಳಿಯಬೇಕು. ಅವು ಯಾವೆಲ್ಲ?

Vidur Niti Stay away from these 4 expressions otherwise life can be ruined skr
Author
First Published Nov 10, 2022, 10:45 AM IST

ಮಹಾಭಾರತ ಕಾಲದ ಮಹಾತ್ಮ ವಿದುರನ ಪರಿಚಯ ಎಲ್ಲರಿಗೂ ಇದೆ. ಅವರು ಮಹಾರಾಜ ಧೃತರಾಷ್ಟ್ರನ ಸಲಹೆಗಾರ ಮತ್ತು ಸಹೋದರರಾಗಿದ್ದರು. ಅವರು ಬಹಳ ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ಹೊಂದಿದ್ದರು. ಮಹಾತ್ಮ ವಿದುರ ಅತ್ಯಂತ ವಿವೇಕಿಯೂ ಸದ್ಗುಣಿಯೂ ನ್ಯಾಯಪ್ರಿಯನೂ ಆಗಿದ್ದರೂ,  ಋಷಿ ವೇದವ್ಯಾಸ ಅವರ ಪುತ್ರನಾಗಿದ್ದರೂ ತಾಯಿ ದಾಸಿಯಾಗಿದ್ದ ಕಾರಣದಿಂದ ರಾಜನಾಗುವ ಹಕ್ಕು ಅವರಿಗಿರಲಿಲ್ಲ. ಇದರ ಹೊರತಾಗಿಯೂ, ಅವರ ಪ್ರತಿಭೆಯಿಂದಾಗಿ, ಅವರು ಹಸ್ತಿನಾಪುರ ರಾಜ್ಯದ ಪ್ರಧಾನ ಮಂತ್ರಿಯಾದರು. ಇವರಿಗೆ ಹಸ್ತಿನಾಪುರದ ರಾಜ ಪಾಂಡು ಈ ಸ್ಥಾನವನ್ನು ನೀಡಿದ್ದನು.
ಅವರು ಮಹಾರಾಜ ಧೃತರಾಷ್ಟ್ರನ ಸಲಹೆಗಾರರಾಗಿ ಆಡಿದ ವಿವೇಕಯುತ ಮಾತುಗಳೇ ಇಂದು ವಿದುರನೀತಿಯಾಗಿ ಗುರುತಿಸಿಕೊಂಡಿವೆ. ಸಾರ್ವಕಾಲಿಕ ಜೀವನಪಾಠಗಳಾಗಿ ಪ್ರಸಿದ್ಧಿ ಪಡೆದಿವೆ. 
 ಹೀಗೆ ವಿದುರ ಕೆಲ ಕೆಟ್ಟ ಭಾವನೆಗಳು ನಮ್ಮ ಜೀವನವನ್ನು ನಾಶ ಮಾಡುವ ಬಗ್ಗೆಯೂ ಹೇಳಿದ್ದಾರೆ. ಆ ಅಭಿವ್ಯಕ್ತಿಗಳಿಂದ ದೂರ ಉಳಿಯುವ ಅಭ್ಯಾಸ ಮಾಡಿಕೊಳ್ಳದಿದ್ದರೆ ಜೀವನವೇ ನಾಶವಾಗಬಹುದು ಎಂದು ಎಚ್ಚರಿಸಿದ್ದಾರೆ. ವಿದುರ ಹೇಳಿದ ಈ 4 ಭಾವಗಳು ಯಾವೆಲ್ಲ ತಿಳಿದು ಅವರು ಹೇಳಿದಂತೆ ನಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಪ್ರತಿಯೊಬ್ಬ ಸುಪ್ರಜೆಯ ಲಕ್ಷಣವಾಗಿದೆ. 

ವಿದುರ ನೀತಿಯಲ್ಲಿ ಹೀಗೆ ಹೇಳಲಾಗಿದೆ:-

ವಿದುರ ನೀತಿಯ ಪ್ರಕಾರ, ಕೆಲವು ಅಭಿವ್ಯಕ್ತಿಗಳು ಮನುಷ್ಯನನ್ನು ಅವನ ಪುರುಷಾರ್ಥದಿಂದ ಅಂದರೆ ಅವನ ಕ್ರಿಯೆಯ ಮಾರ್ಗದಿಂದ ವಿಚಲನಗೊಳಿಸುತ್ತವೆ. ಅಂದರೆ, ಈ ಅಭಿವ್ಯಕ್ತಿಗಳು ಅವನನ್ನು ಅವನ ಗುರಿಯಿಂದ ವಿಮುಖಗೊಳಿಸುತ್ತವೆ. ಒಬ್ಬ ವ್ಯಕ್ತಿಯು ಆ ಭಾವನೆಗಳಿಂದ ತನ್ನನ್ನು ತಾನು ರಕ್ಷಿಸಿಕೊಂಡರೆ, ಅವನೇ ಬುದ್ಧಿವಂತ ಮತ್ತು ಅವನ ಜೀವನದಲ್ಲಿ ಪ್ರಗತಿ ಹೊಂದುತ್ತಾನೆ.

ಕೋಪ(Anger): ವಿದುರ ನೀತಿಯ ಪ್ರಕಾರ, ಕೋಪವು ವ್ಯಕ್ತಿಯನ್ನು ಹುಚ್ಚನನ್ನಾಗಿ ಮಾಡುತ್ತದೆ. ಕೋಪದ ನಿಯಂತ್ರಣದಲ್ಲಿ ಕೆಲಸ ಮಾಡುವ ವ್ಯಕ್ತಿಯು ಸರಿ ಮತ್ತು ತಪ್ಪುಗಳನ್ನು ನಿರ್ಧರಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತಾನೆ. ಅವನು ಏನು ಮಾಡುತ್ತಿರುತ್ತಾನೆ ಎಂದು ಅವನಿಗೇ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಕೋಪವು ನಿಮ್ಮ ಬುದ್ಧಿವಂತಿಕೆಯ ದೊಡ್ಡ ಶತ್ರುವಾಗಿದೆ. ಇದನ್ನು ತಪ್ಪಿಸಬೇಕು.

Astro remedies: ಶನಿ, ರಾಹು, ಕೇತು, ಕಾಳಸರ್ಪ- ಎಲ್ಲ ದೋಷಕ್ಕೂ ರಾಮಬಾಣ ಈ ಕಾಳು!

ಅತಿಯಾದ ಸಂತೋಷ ಅಥವಾ ಅತ್ಯುತ್ಸಾಹ(Over Enthusiasm) : ಅತಿಯಾದ ಸಂತೋಷ ಅಥವಾ ಉತ್ಸಾಹವು ವ್ಯಕ್ತಿಗೆ ತುಂಬಾ ಹಾನಿಕಾರಕವಾಗಿದೆ. ವಿಪರೀತ ಸಂತೋಷದ ಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಮಾನಸಿಕ ಸ್ಥಿತಿಯನ್ನು ಕಳೆದುಕೊಳ್ಳುತ್ತಾನೆ. ಭಾವನೆಗಳಿಂದ ದೂರ ಸರಿದು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ, ಇದು ಮನುಷ್ಯನ ಬುದ್ಧಿಯನ್ನು ಕೆಡಿಸುವುದಕ್ಕೆ ಕಾರಣವಾಗಿದೆ.

ಹ್ರೀ : ವಿದುರ ನೀತಿಯಲ್ಲಿ ಹ್ರೀ ಎಂದರೆ ಮುಖಸ್ತುತಿ. ಬುದ್ಧಿವಂತ ಜನರು ತಮ್ಮ ಕೆಲಸವನ್ನು ಅವರ ಪಾಡಿಗೆ ಅವರು ಮಾಡಬೇಕು. ಅವರಿಗೆ ಇನ್ಯಾರೋ ಮುಖಸ್ತುತಿ ಮಾಡಿದ್ದನ್ನು ನಂಬಿ ಬೇಕಾಬಿಟ್ಟಿ ವರ್ತಿಸಬಾರದು.  ಮುಖಸ್ತುತಿಗೆ ಮಣಿದ ಮನುಷ್ಯ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾನೆ. ಹಾಗೆಯೇ ಮತ್ತೊಬ್ಬರಿ ಮೇಲೆ ಆರಾಧನಾ ಭಾವ ಇರುವ ಮಾತ್ರಕ್ಕೆ ಅವರನ್ನು ಅತಿಯಾಗಿ ಹೊಗಳಿ ಹೊನ್ನಶೂಲಕ್ಕೇರಿಸಬಾರದು. 

ಆತ್ಮಾರಾಧನೆ: ಆತ್ಮಾರಾಧನೆಯ ಭಾವನೆಯು ವ್ಯಕ್ತಿಯ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಮಹಾತ್ಮ ವಿದುರ ಹೇಳುತ್ತಾರೆ. ಅವನು ತನ್ನ ಅತಿಯಾದ ಆತ್ಮಗೌರವದ ಕಾರಣದಿಂದಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಹಾಗಾಗಿ ಅದರಿಂದ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ಅಭಿವ್ಯಕ್ತಿಗಳೂ ಮಿತಿಯಲ್ಲಿರಬೇಕು.

ವೃಷಭ ರಾಶಿಯ ಪುರುಷ ಮತ್ತು ಮಹಿಳೆ ನಡುವಿನ Compatibility ಹೇಗಿದೆ ನೋಡಿ!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios