ಇದೇ ಫೆಬ್ರವರಿ 21ರ ರಾತ್ರಿ 2 ಗಂಟೆ 19 ನಿಮಿಷಕ್ಕೆ ಕುಂಭ ರಾಶಿಯನ್ನು ಶುಕ್ರ ಗ್ರಹವು ಪ್ರವೇಶಿಸಲಿದೆ. ಇದರ ಪರಿಣಾಮವು ಎಲ್ಲ ರಾಶಿ ಚಕ್ರಗಳ ಮೇಲಾಗಲಿದೆ. ತುಲಾ ಮತ್ತು ವೃಷಭ ರಾಶಿಯ ಅಧಿಪತಿಯಾದ ಶುಕ್ರಗ್ರಹವು ಕನ್ಯಾ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿಯೂ, ಮೀನರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿಯೂ ಸ್ಥಿತವಾಗಿರುತ್ತದೆ.

ಹಾಗಾಗಿ ಈ ಗೋಚಾರವು ಕುಂಭ ರಾಶಿಯವರಿಗೆ ಅತ್ಯಂತ ಒಳಿತನ್ನು ಮಾಡುತ್ತದೆಂದು ಹೇಳಲಾಗುತ್ತದೆ. ಶುಕ್ರಗ್ರಹದ ಈ ರಾಶಿ ಪರಿವರ್ತನೆಯು ಹನ್ನೆರಡು ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯೋಣ...

ಮೇಷ ರಾಶಿ
ಈ ರಾಶಿಯವರಿಗೆ ಶುಕ್ರಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಉತ್ತಮ ಪರಿಣಾಮಗಳು ಆಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉನ್ನತಿಯನ್ನು ಕಾಣಬಹುದಾಗಿದೆ. ಕೊಟ್ಟ ಹಣ ವಾಪಸ್ ಸಿಗುವ ಸಂಭವವಿದೆ. ಮದುವೆ ಮತ್ತು ಶುಭ ಕಾರ್ಯಗಳಿಗೆ ಸಂಬಂಧಿಸಿದಂತೆ ಉತ್ತಮ ಬೆಳವಣಿಗೆಯಾಗಲಿದೆ. ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ಕಾಣಬಹುದಾಗಿದೆ.

ವೃಷಭ ರಾಶಿ
ಈ ರಾಶಿಯವರಿಗೆ ಶುಕ್ರಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಉತ್ತಮ ಪರಿಣಾಮಗಳು ಆಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉನ್ನತಿಯನ್ನು ಕಾಣಬಹುದಾಗಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚುತ್ತದೆ. ಕಲಾ ವಿಷಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಅರ್ಧಕ್ಕೆ ನಿಂತಿರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿದೆ.

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

ಮಿಥುನ ರಾಶಿ
ಈ ಗೋಚಾರವಾಗಿ ಮಿಥುನ ರಾಶಿಯವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕ ಅಭಿರುಚಿ ಹೆಚ್ಚುತ್ತದೆ. ಅದೃಷ್ಟದ ಜೊತೆಗೆ ಉದ್ಯೋಗದಲ್ಲಿಯೂ ಬಡ್ತಿ ಸಿಗಲಿದೆ. ಕರ್ಕಾಟಕ ರಾಶಿ
ಈ ರಾಶಿಯವರು ಶುಕ್ರಗ್ರಹದ ರಾಶಿ ಪರಿವರ್ತನೆಯ ಅವಧಿಯಲ್ಲಿ ಅನೇಕ ಏರುಪೇರುಗಳನ್ನು ಕಾಣಬೇಕಾಗುತ್ತದೆ. ಹಿತಶತ್ರುಗಳಿಂದ ಕಾರ್ಯಕ್ಷೇತ್ರದಲ್ಲಿ ತೊಂದರೆಯಾಗಲಿದೆ. ಪ್ರಯಾಣದ ವೇಳೆ ಜಾಗೃತರಾಗಿರುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.  

ಸಿಂಹ ರಾಶಿ 
ಶುಕ್ರಗ್ರಹದ ಈ ಗೋಚಾರವು ಸಿಂಹ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡಲಿದೆ. ಧರ್ಮ ಮತ್ತು ಆಧ್ಯಾತ್ಮಿಕ ವಿಚಾರಗಳಲ್ಲಿ  ಆಸಕ್ತಿ ಹೆಚ್ಚಲಿದೆ. ವಿದೇಶಿ ಕಂಪೆನಿಗಳಿಂದ ಆಹ್ವಾನ ಬರುವ ಸಾಧ್ಯತೆಯಿದೆ. ಸರ್ಕಾರಿ ಕೆಲಸಗಳು ಪೂರ್ಣಗೊಳ್ಳಲಿವೆ. 

ಇದನ್ನು ಓದಿ: ಶನಿ ಉದಯದಿಂದ ಶುಭ ಫಲಗಳನ್ನು ಪಡೆಯುವ ರಾಶಿಗಳಿವು..

ಕನ್ಯಾ ರಾಶಿ
ಈ ಅವಧಿಯಲ್ಲಿ ಕನ್ಯಾ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಶುಕ್ರಗ್ರಹದ ಈ ರಾಶಿ ಪರಿವರ್ತನೆಯು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಲಿದೆ. ಭೌತಿಕ ಸುಖಕ್ಕೆ ಧಕ್ಕೆಯುಂಟಾಗಲಿದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಗುಪ್ತ ಶತ್ರುಗಳು ಹೆಚ್ಚುವ ಸಂಭವ ಇದೆ.

ತುಲಾ ರಾಶಿ
ಶುಕ್ರ ಗ್ರಹದ ಗೋಚಾರದಿಂದ ಉನ್ನತ ಶಿಕ್ಷಣ ಪಡೆಯುತ್ತಿರುವ ತುಲಾ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ. ಸರ್ಕಾರಿ ಉದ್ಯೋಗಾವಕಾಶ ಬರುವ ಸಾಧ್ಯತೆ ಇದೆ. ಸಂತಾನಕ್ಕೆ ಸಂಬಂಧಿಸಿದ ಚಿಂತೆಗಳು ದೂರಾಗುತ್ತವೆ. ವ್ಯಾಪಾರ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.

ವೃಶ್ಚಿಕ ರಾಶಿ 
ಶುಕ್ರಗ್ರಹದ ಈ ಗೋಚಾರದಿಂದ ಈ ರಾಶಿಯವರ ಭೌತಿಕ ಸುಖ ವೃದ್ಧಿಯಾಗಲಿದೆ. ಮನೆ ಅಥವಾ ವಾಹನವನ್ನು ಬಾಡಿಗೆಗೆ ಪಡೆದುಕೊಳ್ಳಲು ಈ ಅವಧಿ ಅನುಕೂಲಕರವಾಗಿದೆ. ಮಿತ್ರರಿಂದ ಅಥವಾ ಸಂಬಂಧಿಕರಿಂದ ಶುಭ ವಾರ್ತೆಯನ್ನು ಕೇಳುವಿರಿ. ವ್ಯಾಪಾರದಲ್ಲಿ ಉತ್ತಮವಾಗಲಿದೆ.

ಧನು ರಾಶಿ 
ಶುಕ್ರಗ್ರಹದ ಈ ರಾಶಿ ಪರಿವರ್ತನೆಯನ್ನು ಧನು ರಾಶಿಯವರಿಗೆ ಮಿಶ್ರ ಫಲವನ್ನು ನೀಡಲಿದೆ. ಬುದ್ಧಿವಂತಿಕೆಯಿಂದ ಕಠಿಣ ಪರಿಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಪಡೆಯುವಿರಿ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುತ್ತವೆ. 

ಮಕರ ರಾಶಿ 
ಶುಕ್ರಗ್ರಹದ ಈ ಗೋಚಾರವು ಈ ರಾಶಿಯವರಿಗೆ ಶುಭ ಫಲವನ್ನು ನೀಡಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಅದನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದುತ್ತಾರೆ.

ಇದನ್ನು ಓದಿ: ವಾಸ್ತು ಪ್ರಕಾರ ಮನೆಗೆ ಅಡಿಪಾಯ ಹಾಕಿ, ಇಲ್ಲದಿದ್ರೆ ಕೇಡಾಗಬಹುದು..! 

ಕುಂಭ ರಾಶಿ 
ಶುಕ್ರಗ್ರಹದ ಈ ವಿಚಾರವು ಕುಂಭ ರಾಶಿಯವರಿಗೆ ಉತ್ತಮ ಬೆಂಬಲವನ್ನು ನೀಡಲಿದೆ. ಭೌತಿಕ ಸುಖ ವೃದ್ಧಿಸಲಿದೆ ಮತ್ತು ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಮನೆ ಅಥವಾ ವಾಹನವನ್ನು ಖರೀದಿಸುವ ಯೋಗವಿದೆ. ಸರ್ಕಾರಿ ವಿಭಾಗಗಳ ಸೇವೆಗೆ ಆಹ್ವಾನ ಬರಲಿದೆ. ಮದುವೆ ಕಾರ್ಯಗಳು ಯಶಸ್ಸನ್ನು ಕಾಣಲಿವೆ.

ಮೀನ ರಾಶಿ
ಶುಕ್ರಗ್ರಹದ ಗೋಚಾರವು ಮೀನ ರಾಶಿಯವರಿಗೆ ಮಿಶ್ರಫಲ ಅನ್ನು ನೀಡಲಿದೆ. ಐಷಾರಾಮಿ ವಸ್ತುಗಳಿಗೆ ಪ್ರವಾಸಕ್ಕೆ ಅಧಿಕ ಹಣ ವ್ಯಯವಾಗಲಿದೆ. ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರಲಿದೆ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ.