ಶನಿ ಉದಯದಿಂದ ಶುಭ ಫಲಗಳನ್ನು ಪಡೆಯುವ ರಾಶಿಗಳಿವು..
ಶನಿ ಗ್ರಹವು ಒಂದು ತಿಂಗಳ ಹಿಂದೆ ಅಸ್ತವಾಗಿತ್ತು. ಇದೇ ಫೆಬ್ರವರಿ 9ರಂದು ಮತ್ತೆ ಉದಯವಾಗಲಿದೆ. ಹಾಗಾಗಿ ಶನಿಗ್ರಹವು ಉದಯಿಸುವುದರ ಪರಿಣಾಮ ಎಲ್ಲ ರಾಶಿಗಳ ಮೇಲಾಗಲಿದೆ. ಮಿಶ್ರಫಲವನ್ನು ಪಡೆಯುವ ರಾಶಿಗಳು ಕೆಲವಾದರೆ, ಇನ್ನು ಕೆಲ ರಾಶಿಗಳಿಗೆ ಶನಿಗ್ರಹದಿಂದ ಶುಭ ಪ್ರಭಾವವು ಉಂಟಾಗಲಿದೆ. ಹಾಗಾಗಿ ಶನಿಗ್ರಹವು ಉದಯಿಸುವುದರಿಂದ ಯಾವ್ಯಾವ ರಾಶಿಯ ವ್ಯಕ್ತಿಗಳಿಗೆ ಅದೃಷ್ಟ ಬರಲಿದೆ ಎಂಬುದನ್ನು ತಿಳಿಯೋಣ..
ಕರ್ಮ ಫಲದಾತ ಶನಿಗ್ರಹವು ಶುಭ ಮತ್ತು ಅಶುಭ ಫಲಗಳನ್ನು ಕರ್ಮಕ್ಕೆ ತಕ್ಕಂತೆ ನೀಡುವ ಗ್ರಹವಾಗಿದೆ. ಶನಿಗ್ರಹವು ಜನವರಿ 7ರಂದು ಅಸ್ತವಾಗಿತ್ತು. ಇದೇ ಫೆಬ್ರವರಿ 9ರಂದು ರಾತ್ರಿ 12:50ಕ್ಕೆ ಉದಯವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗ್ರಹವು ಉದಯವಾಗುವುದರಿಂದ ಕೆಲವು ರಾಶಿಯವರು ಮಿಶ್ರಫಲವನ್ನು ಪಡೆದರೆ, ಮೇಷ, ಕನ್ಯಾ ಮತ್ತು ಮಕರ ರಾಶಿಯವರಿಗೆ ಶುಭ ಸಮಾಚಾರ ಸಿಗಲಿದೆ.
ಗ್ರಹಗಳ ಉದಯ ಮತ್ತು ಅಸ್ತ ಎಂದರೇನು?
ಸೂರ್ಯದೇವನನ್ನು ಗ್ರಹಗಳ ರಾಜನೆಂದು ಕರೆಯಲಾಗುತ್ತದೆ. ಯಾವುದೇ ಒಂದು ಗ್ರಹವು ರಾಜನಾದ ಸೂರ್ಯನಿಂದ ನಿಶ್ಚಿತ ದೂರದಲ್ಲಿ ಅಥವಾ ಡಿಗ್ರಿಯಲ್ಲಿ ಬಂದಾಗ ಸೂರ್ಯನ ಪ್ರಚಂಡ ಶಕ್ತಿಯ ಕಿರಣಗಳಿಂದ ಅಥವಾ ಬೆಳಕಿನ ಕಾರಣದಿಂದ ಇತರ ಗ್ರಹಗಳ ಶಕ್ತಿಯು ಕುಂದುತ್ತದೆ. ಆಗ ಆ ಗ್ರಹವು ಕ್ಷಿತಿಜದಲ್ಲಿ ಕಾಣಿಸುವುದಿಲ್ಲ. ಅಷ್ಟೇ ಅಲ್ಲದೆ ಆ ಗ್ರಹವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತದೆ. ಈ ಸ್ಥಿತಿಗೆ ಗ್ರಹ ಅಸ್ತವಾಗುವುದು ಎಂದು ಕರೆಯುತ್ತಾರೆ. ಆ ಸಮಯದಲ್ಲಿ ಅಸ್ತವಾದ ಗ್ರಹವು ಅಶುಭ ಫಲಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಹಾಗಾಗಿ ಗ್ರಹವು ಎಲ್ಲಿಯವರೆಗೆ ಸೂರ್ಯನಿಂದ ನಿಶ್ಚಿತ ರೂಪದ ದೂರವನ್ನು ಸಾಗುವುದಿಲ್ಲವೊ ಅಲ್ಲಿಯವರೆಗೆ ಆ ಗ್ರಹವನ್ನು ಅಸ್ತವೆಂದೇ ಕರೆಯಲಾಗುತ್ತದೆ. ಅದೇ ರೀತಿ ಸೂರ್ಯನಿಂದ ನಿಶ್ಚಿತ ರೂಪದ ದೂರವನ್ನು ಕ್ರಮಿಸಿದಾಗ ಆ ಗ್ರಹವು ತನ್ನ ಶಕ್ತಿಯನ್ನು ಮತ್ತೆ ಪಡೆದುಕೊಳ್ಳುತ್ತದೆ. ಆಗ ಅದಕ್ಕೆ ಉದಯಿಸಿದ ಗ್ರಹವೆಂದು ಕರೆಯುತ್ತಾರೆ. ಆ ಗ್ರಹವು ಶುಭಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಹಾಗಾಗಿ ಶನಿಗ್ರಹವು ಉದಯವಾಗುವುದರಿಂದ ಯಾವ್ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ ಎಂಬುದನ್ನು ತಿಳಿಯೋಣ..
ಇದನ್ನು ಓದಿ: ಈ 6 ರಾಶಿಯವರಿಗೆ ಮದುವೆ ಬಗ್ಗೆ ಆಸಕ್ತಿಯೇ ಇರೋದಿಲ್ವಂತೆ..!
ಮೇಷ ರಾಶಿ
ಶನಿಗ್ರಹವು ಉದಯವಾಗುವುದರಿಂದ ಮೇಷ ರಾಶಿಯವರು ಶುಭ ಪರಿಣಾಮಗಳನ್ನು ಕಾಣಬಹುದಾಗಿದೆ. ಶನಿಯು ಈ ರಾಶಿಯವರ ಕರ್ಮ ಭಾವದಲ್ಲಿ ಉದಯಿಸುವುದರಿಂದ ಕೈಗೊಂಡ ಎಲ್ಲ ಕಾರ್ಯಗಳಲ್ಲು ಯಶಸ್ಸು ಲಭಿಸಲಿದೆ. ಹಲವಾರು ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಸ್ನೇಹಿತರ ಮತ್ತು ಕುಟುಂಬದವರ ಸಹಕಾರ ಲಭಿಸಲಿದೆ. ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.
ಕರ್ಕಾಟಕ ರಾಶಿ
ಈ ರಾಶಿಯವರಿಗೆ ಶನಿಯು ಉದಯಿಸುವ ಈ ಸಂದರ್ಭದಲ್ಲಿ ಹಲವಾರು ಅವಕಾಶಗಳು ತೆರೆದುಕೊಳ್ಳಲಿವೆ. ವೈವಾಹಿಕ ಜೀವನ ಖುಷಿಯಾಗಿರಲಿದೆ. ಶನಿಗ್ರಹದ ಈ ಪ್ರಭಾವದಿಂದ ಬುದ್ಧಿ ಮತ್ತು ಜ್ಞಾನದ ವಿಕಾಸವಾಗಲಿದೆ. ಒತ್ತಡದ ಜೀವನದಿಂದ ಸ್ವಲ್ಪ ಮಟ್ಟಿನ ವಿಶ್ರಾಂತಿ ದೊರೆಯಲಿದೆ. ಸಮಾಜದಲ್ಲಿ ಗೌರವಾದರಗಳು ಹೆಚ್ಚಲಿವೆ.
ಇದನ್ನು ಓದಿ: ಮೌನಿ ಅಮಾವಾಸ್ಯೆಯಂದು ರಾಶಿಯನುಸಾರ ಹೀಗೆ ಮಾಡಿ….
ಕನ್ಯಾ ರಾಶಿ
ಈ ರಾಶಿಯವರಿಗೆ ಶನಿಗ್ರಹವು ಉದಯಿಸುವುದರಿಂದ ಮಿಶ್ರಫಲವು ದೊರಯುತ್ತಾದರೂ, ಹೆಚ್ಚು ಶುಭಫಲವನ್ನು ಕನ್ಯಾ ರಾಶಿಯವರು ನಿರೀಕ್ಷಿಸಬಹುದಾಗಿದೆ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ನೆಮ್ಮದಿ ದೊರೆಯುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಆದಾಯವು ಹೆಚ್ಚಲಿದೆ. ಸಂಬಂಧಗಳಲಿದ್ದ ಭಿನ್ನಾಭಿಪ್ರಾಯ ದೂರಾಗಲಿದೆ.
ವೃಶ್ಚಿಕ ರಾಶಿ
ಈ ರಾಶಿಯವರ ಜೀವನದಲ್ಲಿ ಸುಖ ವೃದ್ದಿಸಲಿದೆ. ಸಾಲದಿಂದ ಮುಕ್ತಿ ದೊರೆಯಲಿದೆ. ವ್ಯಾಪಾರದಲ್ಲಿ ಲಾಭವುಂಟಾಗುತ್ತದೆ. ಸಂಗಾತಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವವಿದೆ. ಶನಿ ಗ್ರಹವು ಉದಯಿಸುವುದರಿಂದ ಶಿಕ್ಷಣದಲ್ಲಿ ಎದುರಾಗುತ್ತಿರುವ ಅಡಚಣೆಗಳು ದೂರಾಗುತ್ತವೆ. ಧನಾಗಮನದ ಯೋಗ ಸಹ ಉಂಟಾಗಲಿದೆ.
ಮಕರ ರಾಶಿ
ಶನಿಯು ಮಕರ ರಾಶಿಯಲ್ಲೆ ಉದಯವಾಗುವುದರಿಂದ ಈ ರಾಶಿಯವರಿಗೆ ಲಾಭವುಂಟಾಗಲಿದೆ. ಶನಿಯ ಪ್ರಭಾವದಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಕಾರ್ಯಕ್ಷೇತ್ರದಲ್ಲಿ ಸಫಲತೆ ದೊರೆಯಲಿದೆ. ಧನಲಾಭವಾಗುವ ಸಾಧ್ಯತೆ ಇದೆ. ಮದುವೆ ಕಾರ್ಯಗಳು ನಿಶ್ಚಯವಾಗುವ ಸಂಭವವಿದೆ. ಹೊಸ ಅವಕಾಶಗಳು ದೊರೆಯುವ ಯೋಗವು ಸಹ ಒದಗಿಬರುತ್ತದೆ.
ಇದನ್ನು ಓದಿ: ಬುಧಗ್ರಹದ ಈ ಗ್ರಹಚಾರದಿಂದ ಪಾರಾಗಲು ಇಲ್ಲಿವೆ ಪರಿಹಾರಗಳು...
ಕುಂಭ ರಾಶಿ
ಶನಿಗ್ರಹವು ಉದಯಿಸುವುದರಿಂದ ಕುಂಭ ರಾಶಿಯವರಿಗೆ ಶುಭ ಪರಿಣಾಮ ದೊರೆಯಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ. ಶನಿಯ ಪ್ರಭಾವದಿಂದ ಸಮಾಜದಲ್ಲಿ ಗೌರವಾದರಗಳು ಹೆಚ್ಚಲಿವೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಸಂಗಾತಿಯ ಸಹಯೋಗ ದೊರೆಯಲಿದೆ. ಕುಟುಂಬದಲ್ಲಿದ್ದ ಸಮಸ್ಯೆಗಳ ಅಂತ್ಯವಾಗಲಿದೆ.