ಶುಕ್ರನು ಮಕರ ರಾಶಿಯಲ್ಲಿ ದಿನಾಂಕ 9-1-2020ರಿಂದ 3-2-2020ರವರೆಗೆ ಸಂಚಾರ ಮಾಡುತ್ತಾನೆ. ಗುರುವಿನ ನಂತರ ಅದೃಷ್ಟ ಕೊಡುವ ಗ್ರಹ ಶುಕ್ರ. ಶುಕ್ರನು ಕಳತ್ರಕಾರಕ, ವಾಹನಕಾರಕ, ವ್ಯಭಿಚಾರ ಭಾವನೆಗಳಿಗೆ ಶುಕ್ರ ಕಾರಣ. ಮುಂದಿನ 9-1-2020ರಿಂದ 3-2-2020ರ ವರೆಗೆ ಹನ್ನೆರಡು ರಾಶಿಗಳಿಗೆ ಶುಕ್ರನ ಫಲ-

ಮೇಷ: ಈ ರಾಶಿಯವರಿಗೆ ಹನ್ನೊಂದನೆ ಶುಕ್ರ. ಸಂತತಿ ಆಗುವುದಕ್ಕೆ ಪೂಜೆ ಪುರಸ್ಕಾರ ಮಾಡಿದರೆ ಸಂತತಿ ಆಗುತ್ತದೆ. ಚಂದ್ರನಿಂದ 3,6,10,11ರಲ್ಲಿ ಶುಕ್ರನಿದ್ದರೆ ವಸುಮತಿ ಯೋಗ, ಧನಲಾಭವು ಆಗುತ್ತದೆ. ಒಳ್ಳೆಯ ಆಹಾರವು ಸಿಗುತ್ತದೆ. ಸುಗಂಧ ದ್ರವ್ಯಗಳನ್ನು ಹೊಂದುವಿರಿ.

ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!

ವೃಷಭ: ಈ ರಾಶಿಯವರಿಗೆ ಹತ್ತನೆಯ ಶುಕ್ರ. ಹತ್ತನೆಯ ಶುಕ್ರನಿಗೆ ಶನಿಯ ದೃಷ್ಟಿ ಇರುವುದರಿಂದ ವೈವಾಹಿಕ ಸಂಬಂಧಗಳಿಗೆ ತಡೆಯಾಗುತ್ತದೆ. ಗಂಡ ಹೆಂಡತಿಯರಲ್ಲಿಯು ವೈಮನಸ್ಸು ಇರುತ್ತದೆ. ಅವಮಾನ ಕಲಹಗಳು ಉಂಟಾಗುತ್ತದೆ.

ಮಿಥುನ: ಈ ರಾಶಿಯವರಿಗೆ ನವಮದ ಶುಕ್ರ. ಧಾರ್ಮಿಕ ಕಾರ್ಯಗಳನ್ನು ನಡೆಸುತ್ತೀರಿ. ಸ್ತ್ರೀ ಸುಖಭಾಗ್ಯ, ಹಣಕಾಸಿನ ಲಾಭ, ವೈವಾಹಿಕ ಸಂಬಂಧವು ಕೂಡಿ ಬರುತ್ತದೆ. ಶುಕ್ರನಿಗೆ ಶನಿಯ ದೃಷ್ಟಿ ಇರುತ್ತದೆ. ಆದುದರಿಂದ ನಟನೆಯ ಪ್ರೇಮ ಮಾಡಿ ಕೈಕೊಡುತ್ತಾರೆ.

ಕರ್ಕಾಟಕ: ಈ ರಾಶಿಯವರಿಗೆ ಅಷ್ಟಮದ ಶುಕ್ರ. ಒಳ್ಳೆಯ ಆಭರಣಗಳನ್ನು ಖರೀದಿಸುತ್ತೀರಿ. ಒಳ್ಳೆಯ ಬಟ್ಟೆ-ಬರೆಗಳು, ಸೇವಕರು, ಸುಖ ಸಾಧನಗಳು ಬರುತ್ತದೆ. ಬೇರೆ ಸುಖಗಳನ್ನು ಪಡೆಯುತ್ತೀರಿ. ಯುವತಿಯರಿಗೆ ವೈವಾಹಿಕ ಸಂಬಂಧ ಕೂಡಿ ಬರುತ್ತದೆ.

ಅಪರೂಪಕ್ಕೆ ಸಂಭವಿಸಲಿದೆ ಕಂಕಣ ಗ್ರಹಣ; ಯಾರಿಗೆ ಕೆಡುಕು, ಯಾರಿಗೆ ಒಳಿತು?

ಸಿಂಹ: ಈ ರಾಶಿಯವರಿಗೆ ಸಪ್ತಮದ ಶುಕ್ರ. ಇವರಿಗೆ ಚುರುಕಿನ ಹೆಂಡತಿ ಸಿಗುತ್ತಾಳೆ. ಆದರೆ ಶನಿಯ ದೃಷ್ಟಿಯಿಂದ ಗಂಡ-ಹೆಂಡತಿಯರಿಗೆ ಆಗಾಗ ಜಗಳ ಆಗುತ್ತದೆ. ಸ್ತ್ರೀಯರಿಂದ ತೊಂದರೆಯು ಬರುತ್ತದೆ. ಹೆಣ್ಣಿನ ಸಂಪರ್ಕದಲ್ಲಿರುವವರಿಗೆ ಗುಹ್ಯರೋಗ ಬರುತ್ತದೆ.

ಕನ್ಯಾ: ಈ ರಾಶಿಯವರಿಗೆ ಆರನೇಯ ಶುಕ್ರ. ಬಂಧುಗಳಿಗೆ ತೊಂದರೆ ಬರುತ್ತದೆ. ಶುಕ್ರದೆಶೆಯಲ್ಲಿ ಮರಣವು ಬರುತ್ತದೆ. ಕೆಲಸಗಳಲ್ಲಿ ಸೋಲು, ಕಾಯಿಲೆ ಬರುತ್ತದೆ. ದುಃಖ ಉಂಟಾಗುತ್ತದೆ. ಶುಕ್ರನಿಗೆ ಶನಿ ದೃಷ್ಟಿ ಇರುವುದರಿಂದ ವೈವಾಹಿಕ ಸಂಬಂಧಕ್ಕೆ ತಡೆ ಬರುತ್ತದೆ.

ತುಲಾ: ಈ ರಾಶಿಯವರಿಗೆ ಪಂಚಮದ ಶುಕ್ರ. ಗುರುಹಿರಿಯರ ಆಶೀರ್ವಾದಗಳು ಇರುತ್ತದೆ. ಕುಟುಂಬದವರು, ಹಿತ ಜನರು ಮನೆಗೆ ಬರುತ್ತಾರೆ. ಶನಿಯ ದೃಷ್ಟಿ ಶುಕ್ರನಿಗೆ ಇರುವುದರಿಂದ ನೀವು ನೆನೆಸಿದ ಕೆಲಸ ನಡೆಯುವುದಿಲ್ಲ. ಸ್ತ್ರೀಯರಿಗೆ ಸ್ಥಾನಮಾನ ಸಿಗುತ್ತದೆ.

ಈ ರಾಶಿಯವರೊಡನೆ ಡೇಟ್ ಹೋಗುವ ಮುನ್ನ ಎರಡು ಬಾರಿ ಯೋಚಿಸಿ!

ವೃಶ್ಚಿಕ : ಈ ರಾಶಿಯವರಿಗೆ ನಾಲ್ಕನೆಯ ಶುಕ್ರ. ಮನೆ ವಾಹನ ಖರೀದಿಸುತ್ತಾರೆ. ಮಿತ್ರರೊಂದಿಗೆ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸುಖ ಸಿಗುತ್ತದೆ. ಶನಿಯ ದೃಷ್ಟಿ ಶುಕ್ರನಿಗೆ ಇರುವುದರಿಂದ ವಾಹನ ಅಪಘಾತಗಳಾಗುತ್ತದೆ.

ಧನು: ಈ ರಾಶಿಯವರಿಗೆ ತೃತೀಯದ ಶುಕ್ರ. ಕೆಲಸ ಕಾರ್ಯದಲ್ಲಿ ಪ್ರಗತಿಯಾಗುತ್ತದೆ. ಸ್ಥಾನಮಾನ ಗೌರವ ಸಿಗುತ್ತದೆ.ವಿವಿಧ ಮೂಲಗಳಿಂದ ಧನಲಾಭವಾಗುತ್ತದೆ. ಬೇರೆ ಬೇರೆ ಸಂಸ್ಥೆಗಳಿಂದ ಗೌರವ ಸಿಗುತ್ತದೆ. ಅದರಂತೆ ಅಧಿಕಾರದ ಸ್ಥಾನಮಾನ ಸಿಗುತ್ತದೆ. ಕುಟುಂಭಿಕರ ಕೋಪಕ್ಕೆ ಒಳಗಾಗುವಿರಿ.

ಮಕರ: ಈ ರಾಶಿಯವರಿಗೆ ಎರಡನೇಯ ಶುಕ್ರ. ಗಂಡ ಹೆಂಡತಿಗೆ ಸುಖ ಸಿಗುತ್ತದೆ. ಸಂತತಿ ಸಂಪತ್ತು ಸಿಗುತ್ತದೆ. ಸರಕಾರದಿಂದ ಮಾನ್ಯತೆ, ಕುಟುಂಬದ ಹಿತಸಾದನೆ, ಹಣಕಾಸು-ಬರುವುದಕ್ಕೆ ದಾರಿ ಇರುತ್ತದೆ. ಶತ್ರು ದೂರ ಆಗುತ್ತಾರೆ. ಬಂಧು ಬಳಗದವರಿಂದ ಲಾಭ ಇದೆ.

ಕುಂಭ: ಜನ್ಮ ರಾಶಿಯಲ್ಲಿ ಶುಕ್ರನಿದ್ದರೆ ಹೆಣ್ಣು ಗಂಡು ಪ್ರೀತಿ ಇರುತ್ತದೆ. ಸುಖ ಸಾಧನಗಳು, ಪರಿಮಳ ದ್ರವ್ಯಗಳು, ಆಭರಣ ಖರೀದಿ, ಮನೆ, ಭಕ್ಷ್ಯಗಳು ಸಿಗುತ್ತದೆ. ಶರೀರ ಸುಖ, ಆರೋಗ್ಯ ಒಳ್ಳೆಯದಿರುತ್ತದೆ. ಸ್ತ್ರೀಯರಲ್ಲಿ ಅನುಕಂಪ ಇರುತ್ತದೆ.

ಮೀನ: ವ್ಯಯದ ಶುಕ್ರ-ಸಮಾಜದಲ್ಲಿ ಸ್ತ್ರೀಯರಿಂದ ಮಾನ ಹಾನಿಯಾಗುತ್ತದೆ. ಬೇರೆ ಕೆಲಸಗಳಿಗೆ ಅಧಿಕ ಖರ್ಚಾಗುತ್ತದೆ. ನಷ್ಟಗಳು ಉಂಟಾಗುತ್ತದೆ. ಇವರು ಗುಪ್ತವಾಗಿ ಸ್ತ್ರೀಯರ ಸಂಪರ್ಕದಲ್ಲಿ ಇರುತ್ತಾರೆ. ಜನರ ವಿರೋಧ ಇರುತ್ತದೆ.

-ಡಾ| ಹರಿಶ್ಚಂದ್ರ ಪಿ.ಸಾಲಿಯಾನ್, ಮೂಲ್ಕಿ
ಮೊಬೈಲ್: 9448490860