Vastu Tips: ಸುಖ, ಸಮೃದ್ಧಿ ಬೇಕೆಂದ್ರೆ ಗಣೇಶ ಮೂರ್ತಿಯನ್ನು ಇಲ್ಲೆಲ್ಲಾ ಇಡ್ಬೇಡಿ
ಪ್ರತಿ ಮನೆಯಲ್ಲೂ ಗಣೇಶನ ಆರಾಧನೆ ನಡೆಯುತ್ತದೆ. ದೇವರ ಮನೆಯಲ್ಲಿ ಗಣೇಶ ಮೂರ್ತಿ,ಫೋಟೋಗಳಿರುತ್ತವೆ. ಆದ್ರೆ ಸರಿಯಾದ ದಿಕ್ಕಿನಲ್ಲಿ ಹಾಗೂ ಸರಿಯಾದ ಜಾಗದಲ್ಲಿ ವಿನಾಯಕನ ಮೂರ್ತಿ ಇಡದೆ ಹೋದ್ರೆ ಸಮಸ್ಯೆ ಎಲ್ಲರನ್ನು ಕಾಡುತ್ತದೆ.
ವಿಘ್ನವಿನಾಶಕ ಗಣೇಶ (Ganesh) ನಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಗಣೇಶನನ್ನು ಆದಿಯಲ್ಲಿ ಮೊದಲು ಪೂಜಿಸಲಾಗುತ್ತದೆ. ಯಾವುದೇ ಶುಭ ಕಾರ್ಯಗಳನ್ನು ಮಾಡುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನ ಆಶೀರ್ವಾದ ಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಮನೆಯಲ್ಲಿ ಗಣೇಶ ಮೂರ್ತಿಯನ್ನು ಇಡುವುದು ಮಾತ್ರ ಮುಖ್ಯವಲ್ಲ. ಗಣೇಶನನ್ನು ಸರಿಯಾದ ಸ್ಥಾನದಲ್ಲಿ ಇಡುವುದು ಕೂಡ ಮುಖ್ಯ. ಮನೆ (Home) ಯಲ್ಲಿ ಯಾವಾಗಲೂ ಸಂತೋಷ (Happiness) ಮತ್ತು ಸಮೃದ್ಧಿ ಇರಬೇಕೆಂದ್ರೆ ಗಣೇಶನನ್ನು ಸರಿಯಾದ ಸ್ಥಾನದಲ್ಲಿ ಸ್ಥಾಪನೆ ಮಾಡ್ಬೇಕು. ವಾಸ್ತು ಶಾಸ್ತ್ರದಲ್ಲಿ (Vastu Shastra ) ದೇವರ ವಿಗ್ರಹ (Idol), ದೇವರ ಮೂರ್ತಿ ಸ್ಥಾಪನೆ ಸೇರಿದಂತೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಗಣೇಶ ಮೂರ್ತಿಯನ್ನು ಮನೆಯಲ್ಲಿ ಇಡುವ ಬಗ್ಗೆಯೂ ಕೆಲವು ನಿಯಮಗಳನ್ನು ನೀಡಲಾಗಿದೆ. ಆ ನಿಯಮಗಳನ್ನು ಪಾಲನೆ ಮಾಡಿದ್ರೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಸದಾ ಮನೆಯಲ್ಲಿ ಸಂತೋಷ, ಆರ್ಥಿಕ ವೃದ್ಧಿ, ಆರೋಗ್ಯ ಪ್ರಾಪ್ತಿಯಾಗುತ್ತದೆ.
ಮನೆಯಲ್ಲಿ ಗಣೇಶ ಮೂರ್ತಿಯನ್ನು ಇಲ್ಲಿ ಸ್ಥಾಪಿಸಿ
ಗಣೇಶ ಮೂರ್ತಿ ಸ್ಥಾಪನೆಗೆ ಈ ದಿಕ್ಕು ಸೂಕ್ತ : ಮನೆಯಲ್ಲಿ ಗಣೇಶನ ವಿಗ್ರಹವನ್ನು ಇಡಲು ಈಶಾನ್ಯ ಮೂಲೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಇಡುವುದರಿಂದ ಮನೆಯಲ್ಲಿ ಸದಾ ಗಣೇಶನ ಆಶೀರ್ವಾದ ಇರುತ್ತದೆ.
ಸುಖ – ಸಂತೋಷಕ್ಕೆ ಗಣೇಶನ ಪೂಜೆ : ವಾಸ್ತು ಪ್ರಕಾರ, ಗಣೇಶನ ಮೂರ್ತಿಯನ್ನು ಪ್ರತಿಯೊಬ್ಬರ ಮನೆಯಲ್ಲೂ ಸ್ಥಾಪನೆ ಮಾಡ್ಬೇಕು. ಮನೆಯಲ್ಲಿ ಗಣೇಶ ಮೂರ್ತಿಯಿದ್ದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರುತ್ತದೆ. ಗಣೇಶ ಮೂರ್ತಿಯನ್ನು ದೇವರ ಮನೆಯಲ್ಲಿ ಸ್ಥಾಪನೆ ಮಾಡಬೇಕು. ಹಾಗೆ ಪ್ರತಿ ದಿನ ಪೂಜೆ ಮಾಡ್ಬೇಕು.
ಚಿನ್ನ ಧರಿಸೋದು ಓಕೆ, ಆದ್ರೆ ಇಲ್ಲೆಲ್ಲ ಧರಿಸಿದ್ರೆ ಅಪಾಯ ಜೋಕೆ!
ವಾಸ್ತು ದೋಷ ನಿವಾರಣೆ : ಸಿದ್ಧಿ ವಿನಾಯಕನ ಮೂರ್ತಿ ಶುಭ ಸಂಕೇತವಾಗಿದೆ. ಮನೆ ಮತ್ತು ಕಚೇರಿಯಲ್ಲಿ ಗಣೇಶನ ಪೂಜೆ ಮಾಡುವುದು ಒಳ್ಳೆಯದು. ಮನೆಯಲ್ಲಿ ಗಣೇಶನ ವಿಗ್ರಹವಿದ್ದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ವಾಸ್ತು ದೋಷವಿದ್ದರೆ ಗಣೇಶ ವಿಗ್ರಹವನ್ನು ತಂದಿಡುವುದು ಒಳ್ಳೆಯದು.
ಈ ಗಣೇಶನ ಫೋಟೋ ಮನೆಯಲ್ಲಿಡಿ : ಅನೇಕ ಮನೆಯಲ್ಲಿ ಅಲ್ಲಲ್ಲಿ ಗಣೇಶನ ಫೋಟೋಗಳನ್ನು ಇಟ್ಟಿರುತ್ತಾರೆ. ಬೆಡ್ ರೂಮು, ಬಾತ್ ರೂಮಿನಲ್ಲಿ ಗಣಪತಿಯ ಫೋಟೋವನ್ನು ಹಾಕಬಾರದು. ಹಾಗೆಯೇ ಗಣಪತಿ ಫೋಟೋ ಹಾಕುವವರು ಅದ್ರ ಬಗ್ಗೆ ಗಮನ ನೀಡಬೇಕು. ಗಣಪತಿ ಸೊಂಡಿಲು ಎಡ ಭಾಗಕ್ಕೆ ಬಾಗಿರಬೇಕು. ಮೋದಕ ಮತ್ತು ಲಡ್ಡು ಎರಡನ್ನೂ ಗಣೇಶ ಹಿಡಿದಿರುವ ಫೋಟೋ ಶುಭಕರ.
ಗಣೇಶ ಮೂರ್ತಿಯನ್ನು ಮುಖ್ಯ ಬಾಗಿಲಿನ ಮೇಲೆ ಇರಿಸಿ : ಮನೆಯ ಮುಖ್ಯದ್ವಾರದಲ್ಲಿ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ನಕಾರಾತ್ಮಕ ಶಕ್ತಿ ಮನೆಯಿಂದ ದೂರ ಹೋಗುತ್ತದೆ. ಮನೆ ಬಾಗಿಲಿಗೆ ಗಣೇಶನ ಫೋಟೋ ಹಾಕಬಹುದು. ಯಾವುದೇ ಕಾರಣಕ್ಕೂ ಗಣೇಶನ ಹಿಂಭಾಗ ಕಾಣುವಂತಿರಬಾರದು.
ಆಲದ ಎಲೆಯಲ್ಲಿದೆ ಶನಿಯನ್ನು ಶಾಂತಗೊಳಿಸೋ ಪರಿಹಾರ!
ಒಂದೇ ಸ್ಥಳದಲ್ಲಿ 3 ವಿಗ್ರಹಗಳನ್ನು ಇಡಬೇಡಿ : ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳನ್ನು ಇಡಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ 3 ವಿಗ್ರಹಗಳನ್ನು ಒಂದೇ ಸ್ಥಳದಲ್ಲಿ ಇಡಬಾರದು. ದೇವರ ಮನೆಯಲ್ಲಿ ಒಂದು ಗಣೇಶ ಮೂರ್ತಿಯನ್ನು ಮಾತ್ರ ಪೂಜೆ ಮಾಡ್ಬೇಕು.
ಇಂಥಹ ಜಾಗದಲ್ಲಿ ಮೂರ್ತಿ ಇಡಬೇಡಿ : ಮೊದಲೇ ಹೇಳಿದಂತೆ ಬಾತ್ ರೂಮಿನಲ್ಲಿ ಗಣೇಶನ ಮೂರ್ತಿಯನ್ನು ಇಡಬಾರದು. ಹಾಗೆಯೇ ಕಸವಿರುವ ಜಾಗದಲ್ಲಿ ಅಥವಾ ಶೌಚಾಲಯ ಇರುವಂತಹ ಜಾಗದಲ್ಲಿ ಗಣೇಶನ ವಿಗ್ರಹವನ್ನು ಇಡಬೇಡಿ. ಇದರ ಜೊತೆ ಎಂದೂ ಗಣಪತಿ ವಿಗ್ರಹವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು.