Asianet Suvarna News Asianet Suvarna News

ಆಲದ ಎಲೆಯಲ್ಲಿದೆ ಶನಿಯನ್ನು ಶಾಂತಗೊಳಿಸೋ ಪರಿಹಾರ!

ಶನಿ ಕಾಟ ಕೊಡಲು ಆರಂಭಿಸಿದರೆ ತಡೆದುಕೊಳ್ಳುವುದು ಬಹಳ ಕಷ್ಟ. ಜೀವನ ಎಂದರೆ ಕೇವಲ ಸಮಸ್ಯೆಗಳ ಸುಳಿಯೇ ಎನಿಸುವುದು. ಆದರೆ, ಶನಿಯನ್ನು ಶಾಂತಗೊಳಿಸಲು ಸುಲಭ ಉಪಾಯಗಳಿವೆ. ಆ ಪರಿಹಾರಗಳನ್ನು ಮಾಡಿದರೆ ಶನಿಕೃಪೆಯ ಅದೃಷ್ಟ ನಿಮ್ಮದಾಗುವುದು. 

A banyan leaf can make all your work do this remedy on Saturday evening skr
Author
Bangalore, First Published May 18, 2022, 12:17 PM IST

ಶನಿವಾರ(Saturday)ವನ್ನು ಶನಿ ದೇವ(Shani Dev)ನಿಗೆ ಸಮರ್ಪಿಸಲಾಗಿದೆ. ಶನಿ ದೇವನನ್ನು ಅತ್ಯಂತ ಶಕ್ತಿಶಾಲಿ ಗ್ರಹ(planet)ವೆಂದು ಪರಿಗಣಿಸಲಾಗಿದೆ. ಒಮ್ಮೆ ಶನಿದೇವನು ಯಾರೊಂದಿಗಾದರೂ ಕೋಪಗೊಂಡರೆ, ಒಬ್ಬ ವ್ಯಕ್ತಿಯ ಇಡೀ ಜೀವನವು ನಾಶವಾಗುತ್ತದೆ ಮತ್ತು ಶನಿದೇವನ ಕೃಪೆಯು ಯಾರಿಗಾದರೂ ಆಗಿದ್ದರೆ, ಆ ವ್ಯಕ್ತಿಯ ಭವಿಷ್ಯವು ವ್ಯತಿರಿಕ್ತವಾಗಿದೆ ಮತ್ತು ಅವನು ಇರುವುದಕ್ಕಿಂತ ನಾಲ್ಕು ಪಟ್ಟು ಪ್ರಗತಿ ಹೊಂದುತ್ತಾನೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಶನಿದೇವನ ಆಶೀರ್ವಾದವನ್ನು ಪಡೆಯಲು ಬಯಸುತ್ತಾರೆ ಮತ್ತು ಇದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಜೀವನದಲ್ಲಿ ಶನಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಅಥವಾ ಕಠಿಣ ಪರಿಶ್ರಮದ ಹೊರತಾಗಿಯೂ ನೀವು ಯಶಸ್ವಿಯಾಗದಿದ್ದರೆ, ಚಿಂತಿಸಬೇಕಾಗಿಲ್ಲ. ಇಲ್ಲಿ ನಿಮಗೆ ಅಂಥ ಕ್ರಮಗಳನ್ನು ತಿಳಿಸುತ್ತೇವೆ. ಅದು ಶನಿದೇವನ ಅಸಮಾಧಾನವನ್ನು ಕಡಿಮೆ ಮಾಡುತ್ತದೆ ಮತ್ತು ಅವನ ಅನುಗ್ರಹಕ್ಕೆ ನಿಮ್ಮನ್ನು ಅರ್ಹರನ್ನಾಗಿ ಮಾಡುತ್ತದೆ.

ಶನಿಯನ್ನು ಮೆಚ್ಚಿಸುವ ಪರಿಹಾರ ಕಾರ್ಯ(remedies)ಗಳು ಇಲ್ಲಿವೆ. 

1. ವಿಧಿಯು ಆಟ ಶುರು ಹಚ್ಚಿಕೊಂಡರೆ, ಅದು ನಿಮ್ಮ ಕೆಲಸಕಾರ್ಯಗಳಲ್ಲಿ ಗೆಲುವು ಸಿಗದಂತೆ ನೋಡಿಕೊಳ್ಳುವುದು. ನಿಮ್ಮನ್ನು ಸೋಮಾರಿಯಾಗಿಸುವುದು. ಅಂಥ ಸಂದರ್ಭದಲ್ಲಿ ಒಂದು ಶನಿವಾರ ಸಂಜೆ ಉದ್ದದ ಗಾತ್ರದ ರೇಷ್ಮೆ ನೂಲನ್ನು ಮತ್ತು ಆಲದ ಎಲೆಯನ್ನು ತೆಗೆದುಕೊಳ್ಳಿ. ಆಲದ ಎಲೆಗಳನ್ನು ತೊಳೆದು ಒರೆಸಿ. ನಂತರ, ಬಲಗೈಯಲ್ಲಿ ರೇಷ್ಮೆ ನೂಲನ್ನು ಮುಚ್ಚಿ ಮತ್ತು ನಿಮ್ಮ ಮನಸ್ಸಿನಲ್ಲಿರುವ ನಿಮ್ಮ ಆಸೆಯನ್ನು ಹೇಳಿ, ಕೆಲಸದಲ್ಲಿ ಪ್ರಗತಿಗಾಗಿ ಬೇಡಿ. ಈ ರೇಷ್ಮೆ ನೂಲನ್ನು ಎಲೆಯ ಮೇಲೆ ಸುತ್ತಿಕೊಳ್ಳಿ. ನಂತರ, ಎಲೆಗಳನ್ನು ಹರಿಯುವ ನೀರಿನಲ್ಲಿ ತೇಲಿಬಿಡಿ. ಈ ಪ್ರಯೋಗವು ನಿಮ್ಮ ಅದೃಷ್ಟವನ್ನು ನಿಮ್ಮ ಪರವಾಗಿ ತರುತ್ತದೆ ಮತ್ತು ನಿಮಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸುತ್ತದೆ.

2. ಶನಿವಾರದಂದು ಕಪ್ಪು ನಾಯಿ, ಹಸುಗಳು, ಇರುವೆಗಳು ಮತ್ತು ಇತರ ಪಕ್ಷಿಗಳಿಗೆ ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ತಿನ್ನಿಸಿ. ಇದರಿಂದ ಶನಿದೇವನು ಪ್ರಸನ್ನನಾಗುತ್ತಾನೆ, ಈ ರೀತಿಯಾಗಿ ಎಲ್ಲ ಕೆಲಸಗಳ ನಡುವೆ ಬರುವ ಅಡೆತಡೆಗಳು ದೂರವಾಗುತ್ತವೆ.

 ಯುವಕರನ್ನು ಆಯಸ್ಕಾಂತದಂತೆ ಸೆಳೆವ ಆಕರ್ಷಣೆ ಈ ರಾಶಿಯ ಹುಡುಗಿಯರಲ್ಲಿ!

3. ನಿಮ್ಮ ವೃತ್ತಿಯಲ್ಲಿ ನೀವು ಪ್ರಗತಿ ಹೊಂದಲು ಬಯಸಿದರೆ, ಯಾವುದೇ ಶುಕ್ಲ ಪಕ್ಷದ ಶನಿವಾರದಿಂದ 7ನೇ ಶನಿವಾರದವರೆಗೆ ಉಪವಾಸವನ್ನು ಇಟ್ಟುಕೊಳ್ಳಿ. ಈ ಸಮಯದಲ್ಲಿ, ಬೆಳಿಗ್ಗೆ ಶನಿ ದೇವನನ್ನು ಪೂಜಿಸಿದ ನಂತರ, ಸಾಸಿವೆ ಎಣ್ಣೆಯ ಬಟ್ಟಲಿನಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ. ನಂತರ ಈ ಎಣ್ಣೆಯನ್ನು ದಾನ ಮಾಡಿ. ಅಂದು ಸಂಜೆ ಅಶ್ವತ್ಥ ಮರವನ್ನು ಪೂಜಿಸಿ. ಅಶ್ವತ್ಥ ಮರದ ಕೆಳಗೆ ಸಾಸಿವೆ ದೀಪವನ್ನು ಇರಿಸಿ. ಇದು ನಿಮ್ಮ ಪ್ರಗತಿಯು ವೇಗ ಪಡೆಯುವಂತೆ ಮಾಡುತ್ತದೆ.

4. ನಿಮ್ಮ ಯಾವುದೇ ವಿಶೇಷ ಆಸೆಗಳನ್ನು ಪೂರೈಸಲು ನೀವು ಬಯಸಿದರೆ, ಗೋಧಿ ಹಿಟ್ಟಿನಿಂದ ತಾಜಾ ರೊಟ್ಟಿ ಮಾಡಿ ಮತ್ತು ಅದನ್ನು ನಿಮ್ಮ ಮುಂದೆ ಇರಿಸಿಕೊಳ್ಳಿ. ನಂತರ, 'ಓಂ ಶನಿದೇವಾಯ ನಮಃ' ಎಂದು ಹೇಳುತ್ತಾ 11 ಬಾರಿ ನಿಮ್ಮ ಇಚ್ಛೆಯನ್ನು ಹೇಳಿ. ನಂತರ, ಆ ರೊಟ್ಟಿಯನ್ನು ಕಪ್ಪು ನಾಯಿಗೆ ತಿನ್ನಿಸಿ. ಇದರಿಂದ ಶನಿದೇವ ಸಂತಸಗೊಳ್ಳುತ್ತಾನೆ ಮತ್ತು ಖಂಡಿತವಾಗಿಯೂ ನಿಮ್ಮ ಆ ಆಸೆಯನ್ನು ಈಡೇರಿಸುತ್ತಾನೆ.

ಜಾಬ್ ಪ್ರಾಬ್ಲಂ ಆಗ್ತಿದ್ರೆ ಅದಕ್ಕೆ ಈ ಗ್ರಹಗಳೇ ಕಾರಣ..

5. ಶನಿ ದೇವನನ್ನು ಮೆಚ್ಚಿಸಲು ಶಿವ ಮತ್ತು ಆಂಜನೇಯನನ್ನು ಸರಿಯಾಗಿ ಪೂಜಿಸಬೇಕು. ಶನಿಯು ಶಿವ ಭಕ್ತರಿಗೆ ಮತ್ತು ಹನುಮಾನ್ ಭಕ್ತರಿಗೆ ತೊಂದರೆ ಕೊಡುವುದಿಲ್ಲ ಎಂದು ಹೇಳಲಾಗುತ್ತದೆ. ಶನಿವಾರದಂದು ಶನಿ ಚಾಲೀಸಾದೊಂದಿಗೆ ಹನುಮಾನ್ ಚಾಲೀಸಾವನ್ನು ಸಹ ಪಠಿಸಬೇಕು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios