Asianet Suvarna News Asianet Suvarna News

Vastu Tips: ರೋಗ ಬಿಡ್ತಿಲ್ಲವೆಂದ್ರೆ ಅಡುಗೆ ಮನೆ ವಾಸ್ತು ಚೆಕ್ ಮಾಡಿ

ನಮ್ಮ ಜೀವನದ ಪ್ರತಿಯೊಂದು ಬದಲಾವಣೆಗೂ ವಾಸ್ತು ಕಾರಣವಾಗಿರುತ್ತದೆ. ಮೇಲ್ನೋಟಕ್ಕೆ ಎಲ್ಲ ಸರಿಯಿದೆ ಎನ್ನಿಸಿದ್ರೂ ನಾವು ಮಾಡುವ ಸಣ್ಣ ತಪ್ಪುಗಳು ನಮ್ಮ ಆರೋಗ್ಯ, ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ವಾಸ್ತು ಬಗ್ಗೆ ತಿಳಿದಿರೋದು ಒಳ್ಳೆಯದು.
 

Vastu Tips For Kitchen
Author
First Published Oct 28, 2022, 12:59 PM IST | Last Updated Oct 28, 2022, 12:59 PM IST

ಮನೆಯ ಪ್ರಮುಖ ಜಾಗಗಳಲ್ಲಿ ಅಡಿಗೆ ಮನೆ ಕೂಡ ಒಂದು. ಅಡುಗೆ ಮನೆಯಲ್ಲಿ ತಾಯಿ ಅನ್ನಪೂರ್ಣೆ ನೆಲೆಸಿದ್ದಾಳೆ ಎಂದು ನಂಬಲಾಗುತ್ತದೆ. ತಾಯಿಯ ಕೃಪೆಯಿಂದಾಗಿ ನಮ್ಮ ಮನೆಯಲ್ಲಿ ಯಾವುದೇ ಆಹಾರ ಸಮಸ್ಯೆ ಕಾಡುವುದಿಲ್ಲ. ಅಡುಗೆ ಮನೆ ಹಾಗೂ ಆರೋಗ್ಯದ ಮಧ್ಯೆ ಬಿಡಿಸಲಾಗದ ನಂಟಿದೆ. ಹಾಗಾಗಿಯೇ ಅಡುಗೆ ಮನೆಯ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕಿಚನ್ ಕೊಳಕಾಗಿದ್ದರೆ ನಮ್ಮ ಆರೋಗ್ಯ ಹದಹೆಡುತ್ತದೆ.  ತಾಯಿ ಅನ್ನಪೂರ್ಣೇಶ್ವರಿ ಪ್ರಸನ್ನಳಾಗ್ಬೇಕು ಹಾಗೆ ನಮ್ಮ ಆರೋಗ್ಯದಲ್ಲಿ ವೃದ್ಧಿಯಾಗ್ಬೇಕು ಅಂದ್ರೆ ನಾವು ಅಡುಗೆ ಮನೆಯ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಸ್ವಚ್ಛವಾಗಿರುವ ಜಾಗದಲ್ಲಿಯೇ ತಾಯಿ ಲಕ್ಷ್ಮಿ ಕೂಡ ನೆಲೆ ನಿಲ್ಲುತ್ತಾಳೆ. ವಾಸ್ತು ಶಾಸ್ತ್ರದಲ್ಲೂ ಅಡುಗೆ ಮನೆಯ ಬಗ್ಗೆ ಹೇಳಲಾಗಿದೆ. ಅನೇಕ ಮಹಿಳೆಯರು ಅಡುಗೆ ಮನೆಯ ವಾಸ್ತುವನ್ನು ನಿರ್ಲಕ್ಷ್ಯ ಮಾಡ್ತಾರೆ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸ್ತಾರೆ. ವಾಸ್ತು ಪ್ರಕಾರ, ಅಡುಗೆ ಮನೆಯಲ್ಲಿ ಕೆಲ ವಸ್ತುಗಳನ್ನು ಇಡಬಾರದು. ಅದ್ರಿಂದ ಅನಾರೋಗ್ಯ ಸೇರಿದಂತೆ ಅನೇಕ ಸಮಸ್ಯೆ ಶುರುವಾಗುತ್ತದೆ. ನಾವಿಂದು ಅಡುಗೆ ಮನೆಯಲ್ಲಿ ಯಾವ ವಸ್ತು ಇಡಬಾರದು ಎಂಬುದನ್ನು ನಿಮಗೆ ಹೇಳ್ತೇವೆ.

ಅಡುಗೆ ಮನೆ (Kitchen) ಯಲ್ಲಿ ಈ ವಸ್ತುಗಳನ್ನು ಇಡಬೇಡಿ :

ಅಡುಗೆ ಮನೆಯಲ್ಲಿ ಪೊರಕೆ (Broom) ಇಡಬೇಡಿ : ಅಡುಗೆ ಮನೆ ಸದಾ ಸ್ವಚ್ಛವಾಗಿರಬೇಕು. ಆದ್ರೆ ಸ್ವಚ್ಛ (Clean) ಗೊಳಿಸುವ ಪೊರಕೆ ಅಡುಗೆ ಮನೆಯಲ್ಲಿ ಇರಬಾರದು. ಅಡುಗೆ ಮನೆಯಲ್ಲಿ ಪೊರಕೆ ಇಡುವುದರಿಂದ ಮನೆಯಲ್ಲಿ ಆಹಾರ (Food) ದ ಕೊರತೆ ಉಂಟಾಗುತ್ತದೆ.ಇದು ಮನೆಯ ಸದಸ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡಬಾರದು. ಯಾರ ಕಣ್ಣಿಗೂ ಕಾಣದ ಸ್ಥಳದಲ್ಲಿ ಪೊರಕೆ ಇಡಬೇಕು. 

ಅಡುಗೆ ಮನೆಯಲ್ಲಿ ಬೇಡ ಕನ್ನಡಿ : ವಾಸ್ತು ಶಾಸ್ತ್ರದ ಪ್ರಕಾರ,   ಅಡುಗೆ ಮನೆಯಲ್ಲಿ ಕನ್ನಡಿಯನ್ನು ಎಂದೂ ಅಳವಡಿಸಬಾರದು. ಇದ್ರಿಂದ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಡುಗೆ ಮನೆಯ ಅಗ್ನಿಯ ಪ್ರತಿಬಿಂದ ಕನ್ನಡಿಯಲ್ಲಿ ಕಾಣಿಸಿಕೊಂಡಾಗ ಶಕ್ತಿಯ ಹರಿವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದ್ರಿಂದ ಸಮಸ್ಯೆ ಶುರುವಾಗುತ್ತದೆ. 

Tulsi Vivah 2022: ವಿಷ್ಣು ತುಳಸಿ ವಿವಾಹಕ್ಕೆ ದಿನ ಸನ್ನಿಹಿತ, ಹೇಗೆ ನಡೆಸೋದು ಪೂಜೆ?

ಅಡುಗೆ ಮನೆಯಲ್ಲಿ ಔಷಧ ಇಟ್ಟರೆ ಒಳ್ಳೆಯದಲ್ಲ : ಸಾಮಾನ್ಯವಾಗಿ ಮಾತ್ರೆ ಸೇವನೆ ಮಾಡೋದು ಅಡುಗೆ ಮನೆಯಲ್ಲಿ. ಕೈಗೆ ಸಿಗಲಿ ಎನ್ನುವ ಕಾರಣಕ್ಕೆ ಬಹುತೇಕರು ಅಡುಗೆ ಮನೆಯಲ್ಲಿಯೇ ಮಾತ್ರೆ, ಔಷಧಿಗಳನ್ನು ಇಟ್ಟುಕೊಳ್ತಾರೆ. ವಾಸ್ತು ಪ್ರಕಾರ, ಔಷಧಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು. ಇದರಿಂದ ಮನೆಯ ಸದಸ್ಯರ ಆರೋಗ್ಯ ಹದಗೆಡುತ್ತದೆ. ಮನೆಯಲ್ಲಿ ರೋಗಿಗಳು ಹೆಚ್ಚಾಗ್ತಾರೆ. ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. 

ಅಡುಗೆ ಮನೆಯಲ್ಲಿ ಇಡಬೇಡಿ ಒಡೆದ ಪಾತ್ರೆ :  ಅಡುಗೆ ಮನೆ ಅಂದ್ಮೇಲೆ ಪಾತ್ರೆಗಳಿರುತ್ವೆ. ಕೆಲ ಮಹಿಳೆಯರು ಒಡೆದ ಪಾತ್ರೆಗಳನ್ನು ಕೂಡ ಉಪಯೋಗಕ್ಕೆ ಬರುತ್ತೆ ಎಂಬ ಕಾರಣ ಹೇಳಿ ಇಟ್ಟುಕೊಂಡಿರ್ತಾರೆ. ವಾಸ್ತು ಪ್ರಕಾರ ಇದು ತಪ್ಪು. ಒಡೆದ, ಹಾಳಾದ ಪಾತ್ರೆಗಳು ನಕಾರಾತ್ಮಕ ಪ್ರಭಾವ ಬೀರುತ್ತವೆ. ತುಕ್ಕು ಹಿಡಿದ ಪಾತ್ರೆಗಳನ್ನು ಕೂಡ ಅಡುಗೆ ಮನೆಯಲ್ಲಿ ಇಡಬಾರದು. ಇದ್ರಿಂದ ತಾಯಿ ಅನ್ನಪೂರ್ಣೆ ಮುನಿಸಿಕೊಳ್ತಾಳೆ.

ಹಳಸಿದ ಆಹಾರ ಇಡಬೇಡಿ : ಅಡುಗೆ ಮನೆ ಪವಿತ್ರವಾದ ಜಾಗ. ಅಲ್ಲಿ ಹಳಸಿದ ಆಹಾರವನ್ನು ಇಡಬಾರದು. ಇದರಿಂದ ಮನೆಗೆ ಬಡತನ ಆವರಿಸುತ್ತದೆ. ಕುಟುಂಬಸ್ಥರು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಬೆಳಿಗ್ಗೆ ಎದ್ದೊಡನೆ ಈ ಒಂದು ಕೆಲಸ ಮಾಡಿ

ಅಡುಗೆ ಮನೆಯನ್ನು ದೇವರ ಮನೆ ಮಾಡ್ಬೇಡಿ : ಜಾಗದ ಅಭಾವದಿಂದ ಅನೇಕರು ಅಡುಗೆ ಮನೆಯಲ್ಲಿಯೇ ಸಣ್ಣ ಜಾಗವನ್ನು ದೇವರ ಮನೆಯಾಗಿ ಮಾಡಿಕೊಳ್ತಾರೆ. ಇದು ಕೂಡ ವಾಸ್ತು ಪ್ರಕಾರ ಒಳ್ಳೆಯದಲ್ಲ. ಇದ್ರಿಂದ ದೇವಾನುದೇವತೆಗಳು ಕೋಪಗೊಳ್ಳುತ್ತವೆ. ಅನೇಕ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ.

Latest Videos
Follow Us:
Download App:
  • android
  • ios