Tulsi Vivah 2022: ವಿಷ್ಣು ತುಳಸಿ ವಿವಾಹಕ್ಕೆ ದಿನ ಸನ್ನಿಹಿತ, ಹೇಗೆ ನಡೆಸೋದು ಪೂಜೆ?

ತುಳಸಿ ವಿವಾಹಕ್ಕೆ ದಿನ ಸನ್ನಿಹಿತವಾಗಿದೆ. ಯಾವಾಗ ತುಳಸಿ ವಿವಾಹ? ಪೂಜೆಯ ವಿಧಿವಿಧಾನಗಳೇನು ಎಲ್ಲ ವಿವರಗಳೂ ಇಲ್ಲಿವೆ..

Tulsi Vivah 2022 Celebrating Lord Vishnu's Marriage to Tulsi skr

ಹಿಂದೂ ಕ್ಯಾಲೆಂಡರ್ ಪ್ರಕಾರ, ತುಳಸಿ ವಿವಾಹವನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ನಡೆಸಲಾಗುತ್ತದೆ. ಈ ಏಕಾದಶಿಯನ್ನು 'ದೇವುತನಿ ಏಕಾದಶಿ' ಅಥವಾ 'ಪ್ರಬೋಧಿನಿ ಏಕಾದಶಿ' ಎಂದೂ ಕರೆಯುತ್ತಾರೆ. ಈ ಬಾರಿ ತುಳಸಿ ವಿವಾಹ ನವೆಂಬರ್ 5ರ ಶನಿವಾರದಂದು ಬರುತ್ತಿದೆ. ಸನಾತನ ಧರ್ಮದಲ್ಲಿ ತುಳಸಿ ವಿವಾಹಕ್ಕೆ ಹೆಚ್ಚಿನ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ವಿವಾಹದ ದಿನದಂದು ಮಾತಾ ತುಳಸಿ ಮತ್ತು ಶಾಲಿಗ್ರಾಮವನ್ನು ಪೂಜಿಸುವುದು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತದೆ ಮತ್ತು ಅವರ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದರೊಂದಿಗೆ ಪತಿ-ಪತ್ನಿಯರ ನಡುವೆ ಉದ್ಭವಿಸುವ ಸಮಸ್ಯೆಗಳೂ ದೂರವಾಗುತ್ತವೆ.

ತುಳಸಿ ವಿವಾಹದ ಈ ದಿನದ ಪ್ರಾಮುಖ್ಯತೆ ಹೆಚ್ಚಾಗಲು ಮತ್ತೊಂದು ಕಾರಣವೆಂದರೆ, ಚಾತುರ್ಮಾಸದ ಹಿನ್ನೆಲೆಯಲ್ಲಿ ಇದುವರೆಗೂ ಧೀರ್ಘ ನಿದ್ರೆಯಲ್ಲಿದ್ದ ವಿಷ್ಣುವು ಈ ದಿನ ನಾಲ್ಕು ತಿಂಗಳ ದೀರ್ಘ ನಿದ್ರೆಯಿಂದ ಎಚ್ಚರಗೊಂಡು ಭಕ್ತರ ಪ್ರಾರ್ಥನೆಯನ್ನು ಆಲಿಸುತ್ತಾನೆ. ಇದರೊಂದಿಗೆ ಮದುವೆ, ಗೃಹಪ್ರವೇಶ, ಉಪನಯನ ಸಂಸ್ಕಾರಗಳ ಎಲ್ಲಾ ಮುಹೂರ್ತಗಳು ಇಂದಿನಿಂದ ಪ್ರಾರಂಭವಾಗುತ್ತವೆ. ಈ ವಿಶೇಷ ಸಂದರ್ಭದಲ್ಲಿ ಶಾಲಿಗ್ರಾಮನು ತುಳಸಿ ಮಾತೆಯನ್ನು ಮದುವೆಯಾಗುವ ಸಂಪ್ರದಾಯವಿದೆ. ಕೆಲವು ಸ್ಥಳಗಳಲ್ಲಿ ತುಳಸಿ ವಿವಾಹವನ್ನು  ಐದು ದಿನಗಳ ಕಾಲ ಆಚರಿಸಲಾಗುತ್ತದೆ, ಇದು ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು ಕೊನೆಗೊಳ್ಳುತ್ತದೆ. ತುಳಸಿ ವಿವಾಹವು ಮಾನ್ಸೂನ್ ಋತುವಿನ ಅಂತ್ಯ ಮತ್ತು ಹಿಂದೂ ಮದುವೆಯ ಋತುವಿನ ಆರಂಭವನ್ನು ಸೂಚಿಸುತ್ತದೆ. 

ಕೈ ತುಂಬಾ ದುಡ್ಡಿರಬೇಕು ಅನ್ನೋ ಕನಸು ಯಾರಿಗಿಲ್ಲ ಹೇಳಿ? ಆಫೀಸಲ್ಲಿರಲಿ ಈ ಮೂರ್ತಿ

ತಿಥಿ
ತುಳಸಿ ವಿವಾಹವನ್ನು ಈ ಬಾರಿ ನವೆಂಬರ್ 5ರಂದು ಶನಿವಾರ ಆಚರಿಸಲಾಗುತ್ತದೆ. 
ದ್ವಾದಶಿ ತಿಥಿ ಸಮಯ: ನವೆಂಬರ್ 04, 6:08 pm - ನವೆಂಬರ್ 05, 5:07 pm

ಕೌಟುಂಬಿಕ ಸಂತೋಷಕ್ಕಾಗಿ
ತುಳಸಿ ವಿವಾಹ ಪೂಜೆಯನ್ನು ಭಾರತದಾದ್ಯಂತ ವಿವಾಹಿತ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ. ತುಳಸಿ ಗಿಡವನ್ನು ಹಿಂದೂಗಳು ಸ್ವತಃ ಮಹಾಲಕ್ಷ್ಮಿ ದೇವಿಯ ಅವತಾರವೆಂದು ನಂಬುತ್ತಾರೆ. ತುಳಸಿ ವಿವಾಹ ಆಚರಣೆಗಳನ್ನು ಯುವ, ಅವಿವಾಹಿತ ಮಹಿಳೆಯರು ಸಹ ಉತ್ತಮ ಪತಿ ಪಡೆಯಲು ಆಚರಿಸುತ್ತಾರೆ.

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಬೆಳಿಗ್ಗೆ ಎದ್ದೊಡನೆ ಈ ಒಂದು ಕೆಲಸ ಮಾಡಿ

ತುಳಸಿ ವಿವಾಹದ ಆಚರಣೆಗಳು
ತುಳಸಿಯೊಂದಿಗೆ ಶ್ರೀಕೃಷ್ಣನ ವಿವಾಹ ಸಮಾರಂಭವು ಯಾವುದೇ ಸಾಂಪ್ರದಾಯಿಕ ಹಿಂದೂ ವಿವಾಹವನ್ನು ಹೋಲುತ್ತದೆ. ವಿವಿಧ ದೇವಾಲಯಗಳಲ್ಲಿ ಈ ಆಚರಣೆಗಳನ್ನು ಆಚರಿಸಲಾಗುತ್ತದೆ; ಮನೆ ಮನೆಗಳಲ್ ಕೂಡಾಲಿ ತುಳಸಿ ವಿವಾಹವನ್ನು ಸುಲಭವಾಗಿ ಮಾಡಬಹುದು.
ತುಳಸಿ ವಿವಾಹದ ದಿನ ಪೂಜೆ ಕೈಗೊಳ್ಳುವವರು ಪೂಜೆ ಪ್ರಾರಂಭವಾಗುವ ಸಂಜೆಯವರೆಗೆ ಉಪವಾಸವನ್ನು ಮಾಡಬೇಕು. 
ತುಳಸಿ ಗಿಡದ ಸುತ್ತಲೂ ಕಬ್ಬು, ಬಾಳೆಯ ಮಂಟಪ ನಿರ್ಮಿಸಬೇಕು. ಬಣ್ಣಬಣ್ಣದ ರಂಗೋಲಿಯಿಂದ ಅಲಂಕರಿಸಬೇಕು. ತುಳಸಿ ಸಸ್ಯವನ್ನು ನಂತರ ಭಾರತೀಯ ವಧುವಿನಂತೆಯೇ ಪ್ರಕಾಶಮಾನವಾದ ಸೀರೆ, ಕಿವಿಯೋಲೆಗಳು ಮತ್ತು ಇತರ ಆಭರಣಗಳಿಂದ ಸುಂದರವಾಗಿ ಅಲಂಕರಿಸಬೇಕು. ತುಳಸಿ ಗಿಡಕ್ಕೆ ಕುಂಕುಮ ಮತ್ತು ಅರಿಶಿನವನ್ನು ಏರಿಸಬೇಕು. ತುಳಸಿ ಗಿಡದ ಮೇಲೆ ಕಾಗದದ ಮೇಲೆ ಚಿತ್ರಿಸಿದ ಮುಖವನ್ನು ಹಾಕಲಾಗುತ್ತದೆ, ಅದಕ್ಕೆ ಮೂಗುತಿ ಮತ್ತು ಬಿಂದಿಯನ್ನು ಸಹ ಜೋಡಿಸಬೇಕು.
ವರನನ್ನು ಹಿತ್ತಾಳೆಯ ವಿಗ್ರಹ ಅಥವಾ ವಿಷ್ಣುವಿನ ಚಿತ್ರವಾಗಿ ಚಿತ್ರಿಸಲಾಗುತ್ತದೆ. ಕೆಲವೊಮ್ಮೆ ಭಗವಾನ್ ವಿಷ್ಣುವಿನ ಸಾಂಕೇತಿಕವಾದ ಸಾಲಿಗ್ರಾಮ ಕಲ್ಲನ್ನು ಪೂಜೆಗೆ ಬಳಸಲಾಗುತ್ತದೆ. ನಂತರ ಶ್ರೀಕೃಷ್ಣ/ವಿಷ್ಣುವಿನ ಚಿತ್ರವನ್ನು ಧೋತಿಯಲ್ಲಿ ಮುಚ್ಚಬೇಕು.
ಈ ವೈಭವದ ಸಂದರ್ಭದಲ್ಲಿ ವಿಶೇಷ ಸಸ್ಯಾಹಾರಿ ಊಟವನ್ನು ತಯಾರಿಸಲಾಗುತ್ತದೆ. ಅನ್ನ ಮತ್ತು ದಾಲ್, ರುಚಿಕರವಾದ ಸಿಹಿ ಗೆಣಸು ಖೀರ್ ತಯಾರಿಸಲಾಗುತ್ತದೆ. ಮದುವೆಯ ವಿಧಿವಿಧಾನಗಳು ಮುಗಿದ ನಂತರ ಸಿದ್ಧಪಡಿಸಿದ ಆಹಾರವನ್ನು 'ಭೋಗ್'ಗಾಗಿ ಪಕ್ಕಕ್ಕೆ ಇಡಲಾಗುತ್ತದೆ.
ನಿಜವಾದ ಸಮಾರಂಭವು ಸಂಜೆ ಪ್ರಾರಂಭವಾಗುತ್ತದೆ. ವಿವಾಹ ಸಮಾರಂಭದ ಅಂಗವಾಗಿ, ಮದುವೆಯ ಮೊದಲು ವಿಷ್ಣು ಮತ್ತು ತುಳಸಿ ಇಬ್ಬರಿಗೂ ಸ್ನಾನ ಮಾಡಿಸಲಾಗುತ್ತದೆ ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಸಮಾರಂಭದಲ್ಲಿ ದಂಪತಿಗಳನ್ನು ಒಟ್ಟಿಗೆ ಜೋಡಿಸಲು ಹಳದಿ ದಾರವನ್ನು ಬಳಸಲಾಗುತ್ತದೆ.
ತುಳಸಿ ವಿವಾಹ ಸಮಾರಂಭವನ್ನು ಪುರೋಹಿತರು ನಡೆಸಬಹುದು ಅಥವಾ ಮನೆಯಲ್ಲಿನ ಮಹಿಳೆಯರು ಸಾಮೂಹಿಕವಾಗಿ ಪೂಜೆಯನ್ನು ಮಾಡಬಹುದು. ಈ ಆಚರಣೆಯನ್ನು ಎಲ್ಲಾ ವಯೋಮಾನದ ಮಹಿಳೆಯರು ನಡೆಸಬಹುದು. ಮದುವೆ ಸಮಾರಂಭದುದ್ದಕ್ಕೂ ಮಂತ್ರಗಳನ್ನು ಹೇಳಬೇಕು. ಮದುವೆಯ ವಿಧಿವಿಧಾನಗಳು ಮುಗಿದ ನಂತರ, ಭಕ್ತರು ನವದಂಪತಿಗಳ ಮೇಲೆ ಸಿರಿಧಾನ್ಯ ಮಿಶ್ರಿತ ಅನ್ನವನ್ನು ಸುರಿಯುತ್ತಾರೆ.
ಪೂಜೆಯ ನಂತರ ತುಳಸಿ ಆರತಿಯನ್ನು ಹಾಡಲಾಗುತ್ತದೆ. ಆರತಿ ಮುಗಿದ ನಂತರ, ಬೇಯಿಸಿದ ಆಹಾರವನ್ನು ಹಣ್ಣುಗಳೊಂದಿಗೆ ನೈವೇದ್ಯ ಎಂದು ನೀಡಲಾಗುತ್ತದೆ. ನಂತರ ಕುಟುಂಬ ಸದಸ್ಯರು ಮತ್ತು ಇತರ ಅತಿಥಿಗಳೊಂದಿಗೆ ಪ್ರಸಾದವನ್ನು ಸೇವಿಸಲಾಗುತ್ತದೆ.
ತುಳಸಿ ವಿವಾಹವನ್ನು ಆಚರಿಸುವ ವ್ಯಕ್ತಿಯು ತುಳಸಿ ದೇವಿಯು ಭಕ್ತನ ದೇಹವನ್ನು ಪ್ರವೇಶಿಸುವ ಸಂಕೇತವಾಗಿ ತುಳಸಿ ಎಲೆಯನ್ನು ಸಹ ತಿನ್ನಬೇಕು. ನಂತರ ಎಲ್ಲರಿಗೂ ಸಿಹಿತಿಂಡಿಗಳ ರೂಪದಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ.

Latest Videos
Follow Us:
Download App:
  • android
  • ios